ವಿಮುಕ್ತಿಯ ಮಾರ್ಗ
ಒಂದು ಮಾರ್ಗ
ಲೌಕಿಕತೆಯ ಲಾಭದ್ದು, ಅನ್ಯ ಅನನ್ಯ ಮಾರ್ಗ
ನಿಬ್ಬಾಣಗಾಮಿಯದು. ಇವನ್ನು ಸ್ಪಷ್ಟವಾಗಿ ಅರಿತಿರುವ ಬುದ್ಧರ ಶ್ರಾವಕ ಭಿಕ್ಷುವು ಸತ್ಕಾರಗಳಿಗೆ,
ಇತ್ಯಾದಿಗಳಿಗೆ ಆನಂದಿತನಾಗದೆ
ಏಕಾಂತದಲ್ಲಿ ಅನುರಕ್ತನಾಗಿರುತ್ತಾನೆ. (75)
ಗಾಥ ಪ್ರಸಂಗ 5:15
ಯೋಗ್ಯ ಭಿಕ್ಷು ಎಲ್ಲರ ಮನ ಗೆಲ್ಲುತ್ತಾನೆ
ತಿಸ್ಸಾ ಶ್ರಾವಸ್ತಿಯ ಶ್ರೀಮಂತನ ಮಗನಾಗಿದ್ದನು. ತಿಸ್ಸಾ
ಇನ್ನೂ ಬಾಲಕನಾಗಿದ್ದಾಗಲೇ ಅವರ ತಂದೆಯ ಅಗ್ರಶ್ರಾವಕ ಸಾರಿಪುತ್ತರನ್ನು ಅನೇಕಬಾರಿ ಆಹಾರಕ್ಕೆ
ಆಹ್ವಾನಿಸಿ ಸತ್ಕರಿಸಿದ್ದರು. ತಿಸ್ಸಾ ತನ್ನ ಏಳನೆಯ ಎಳೆ ವಯಸ್ಸಿನಲ್ಲಿಯೇ ಪಬ್ಬಜ್ಜ (ದೀಕ್ಷೆ)
ಪಡೆದನು. ಆತನು ಜೇತವನದ ವಿಹಾರದಲ್ಲಿ ಇರುವಾಗ ಆತನ ಬಂಧು-ಮಿತ್ರರು ಆತನಿಗೆ ಕಂಡು ಮಾತನಾಡಿಸಿ,
ಆತನಿಗೆ ನಾನಾ ವಿಧವಾದ ಉಡುಗೊರೆಗಳನ್ನು
ನೀಡುತ್ತಿದ್ದರು. ಬಾಲಕ ತಿಸ್ಸನಿಗೆ ಇದರಿಂದ ಬೇಸರವಾಗಿ ಬುದ್ಧರಿಂದ ಸಮಾಧಿಯ ವಿಷಯ ಪಡೆದುಕೊಂಡು
ಅದನ್ನು ಸಿದ್ಧಿಸಲು ಕಾಡಿಗೆ ಹೊರಟನು. ಆತನಿಗೆ ಎದುರಾಗಿ ಯಾರಾದರು ಹಳ್ಳಿಯವರು ಸಿಕ್ಕಿದರೆ
ಸುಖಿಯಾಗಿರಿ, ದುಃಖದಿಂದ
ಮುಕ್ತರಾಗಿ ಎಂದು ಹಾರೈಸಿ ತನ್ನ ಹಾದಿಯನ್ನು ಹಿಡಿಯುತ್ತಿದ್ದನು. ಅಷ್ಟೇ ಅಲ್ಲ, ಆತನು ಸಾಧನೆಯಲ್ಲಿ ಅತಿ ಪರಾಕ್ರಮ ಮೆರೆದು ಮೂರು
ತಿಂಗಳಲ್ಲೇ ಅರಹಂತನಾದನು.
ನಂತರ ವಷರ್ಾವಾಸ ಮುಗಿದನಂತರ ಸಾರಿಪುತ್ತ ಮೊಗ್ಗಲಾನ
ಮುಂತಾದವರೊಡನೆ ಹಳ್ಳಿಗೆ ಬರುತ್ತಾರೆ. ಅಲ್ಲಿ ಸರ್ವರೂ ಅವರಿಗೆ ಸತ್ಕಾರ ನೀಡುತ್ತಾರೆ. ನಂತರ
ಸಾರಿಪುತ್ತರಿಗೆ ಬೋಧಿಸಲು ಕೇಳಿಕೊಳ್ಳುತ್ತಾರೆ. ಆದರೆ ಸಾರಿಪುತ್ತರು ಬೋಧನೆ ನೀಡಲು ಈ ಬಾಲಕನಿಗೆ
ಅವಕಾಶ ನೀಡಲು ಹೋದಾಗ ಹಳ್ಳಿಯವರು ಈ ಹುಡುಗ ಕೇವಲ ಸುಖಿಯಾಗಿರಿ, ದುಃಖಮುಕ್ತರಾಗಿ, ಎಂದಷ್ಟೇ ಹೇಳುವನು ಆದ್ದರಿಂದ ಈತನ ಬದಲು ಬೇರೆಯವರಿಗೆ ನೇಮಿಸಿ ಎಂದಾಗಲೂ ಸಾರಿಪುತ್ತರು
ತಿಸ್ಸನಿಗೆ ಅವಕಾಶ ನೀಡುತ್ತಾ ಹೀಗೆ ಆಜ್ಞಾಪಿಸುತ್ತಾರೆ. ತಿಸ್ಸಾ ಮಾನವ ಹೇಗೆ ಸುಖ
ಪ್ರಾಪ್ತಿಗಳಿಸುತ್ತಾನೆ ಮತ್ತು ಹೇಗೆ ಆತನು ದುಃಖಗಳೆಲ್ಲದವು ಗಳಿಂದ ಮುಕ್ತನಾಗುತ್ತಾನೆ ತಿಳಿಸು
ಎನ್ನುತ್ತಾರೆ.
ಆನಂತರ ವಿಧೇಯ ತಿಸ್ಸನು ಸಭಾಮಂಟಪದಲ್ಲಿ ಧಮ್ಮ ಬೋಧನೆ
ಪ್ರಾರಂಭಿಸುತ್ತಾನೆ. ದೇಹ ಮನಸ್ಸುಗಳ ಅರ್ಥವನ್ನು ಇಂದ್ರಿಯಗಳ, ಇಂದ್ರಿಯ ವಿಷಯಗಳ, ಬೋಧಿ ಪಕ್ಖೀಯಗಳ ವಿಷಯಗಳು, ಅರಹತ್ವದ ಹಾದಿ
ಮತ್ತು ನಿಬ್ಬಾಣ ಇತ್ಯಾದಿ ವಣರ್ಿಸಿ... ಹೀಗೆ ಅವರು ಅರಹಂತರಾಗಿ ದುಃಖಗಳಿಂದ ಮುಕ್ತರಾಗಿ,
ಪರಿಪೂರ್ಣ ಶಾಂತಿ ಪ್ರಾಪ್ತಿಗೊಳಿಸಿ ಜನ್ಮ ಚಕ್ರದಿಂದ
ಪಾರಾಗುತ್ತಾರೆ ಎಂದು ವಿವರಿಸುತ್ತಾರೆ.
ಇದರ ಪರಿಣಾಮವಾಗಿ ಹಳ್ಳಿಯವರು ಆನಂದಿತರಾಗಿ
ಪ್ರಭಾವಿತರಾಗುತ್ತಾರೆ, ಶ್ರದ್ಧಾವಂತರಾಗುತ್ತಾರೆ,
ಆಶ್ಚರ್ಯಚಕಿತರಾಗುತ್ತಾರೆ. ಇಷ್ಟು ಚಿಕ್ಕವನಾದರು
ಅದೆಷ್ಟು ಚೊಕ್ಕವ, ಆತನ
ಮಧ್ಯೆಯಲ್ಲಿರುವ ನಾವೇ ಅದೆಷ್ಟು ಧನ್ಯರು ಎಂದು ಭಾವಿಸಿದರು. ಖಂಡಿತವಾಗಿ ಈತನು ನಿಬ್ಬಾಣಗಾಮಿ,
ಪ್ರಾಪಂಚಿಕನಲ್ಲ ಎಂದು ಅರಿತರು.
ಜೇತವನದ ವಿಹಾರದಲ್ಲಿ ತಂಗಿದ್ದಾಗ, ತಿಸ್ಸನಿಗೆ ಸಂಬಂಧಿಸಿದಂತೆ ಈ ಗಾಥೆಯನ್ನು ಭಗವಾನರು
ನುಡಿದಿದ್ದರು.
No comments:
Post a Comment