Saturday, 6 June 2015

dhammapada/buddhavagga/14.2/abhidhammatogods

ಬುದ್ಧರನ್ನು ದೇವತೆಗಳು ಪೂಜಿಸುವರು
ಯಾವ ಧೀಮಂತರು ಧ್ಯಾನದಲ್ಲೇ ನಿರತರೋ, ಯಾರು ತ್ಯಾಗದ ಶಾಂತತೆಯಲ್ಲಿ ರತರಾಗಿರುವರೋ ಅಂತಹ ಸ್ಮೃತಿವಂತರು, ಸಮ್ಮಾಸಂಬುದ್ಧರನ್ನು ದೇವತೆಗಳು ಸಹಾ ಪ್ರಿಯರಾಗಿ ಕಾಣುವರು.      (181)
ಗಾಥ ಪ್ರಸಂಗ 14:2
ದೇವತೆಗಳಿಗೆ ಅಭಿಧಮ್ಮೋಪದೇಶ

                ಒಮ್ಮೆ ಶ್ರಾವಸ್ತಿಯಲ್ಲಿ ವಿವಿಧ ಧಾಮರ್ಿಕ ಪಂಗಡಗಳ ನಾಯಕರು, ನಾವು ಪವಾಡ ತೋರಿಸುತ್ತೇವೆ, ಬುದ್ಧರು ಪವಾಡ ಮಾಡಬಲ್ಲರೇ? ಎಂದು ಸವಾಲು ಹಾಕಿದರು. ಅಷ್ಟೇ ಅಲ್ಲದೆ ಅತೀಂದ್ರಿಯ ಶಕ್ತಿಯು ನಿಜವಾಗಿ ಇದ್ದುದೇ ಆದರೆ ಅದನ್ನು ಪ್ರದಶರ್ಿಸಿ ಎಂದು ಪಂದ್ಯ ಆಹ್ವಾನ ಮಾಡಿದರು. ಆಗ ಭಗವಾನರು ಶ್ರಾವಸ್ತಿಯ ಆ ಸ್ಥಳಕ್ಕೆ ಹೋದರು. ಪರಮತಾವಲಂಬಿಗಳು ಕೇವಲ ಬಡಾಯಿಕೋರರೇ ಹೊರತು ಯಾವ ಪವಾಡವೂ ಪ್ರದಶರ್ಿಸಲಿಲ್ಲ. ಆಗ ಭಗವಾನರು ಯಮಕಪತಿಹಾರಿಯ ಎಂಬ ಅವಳಿ ಪವಾಡ ತೋರಿಸಿದರು. ಆಗ ಒಂದುಕಡೆಯಿಂದ ನೀರು ಮತ್ತು ಇನ್ನೊಂದೆಡೆಯಿಂದ ಅಗ್ನಿಯನ್ನು ತಮ್ಮ ದೇಹದಿಂದ ಪ್ರಕಾಶಿಸಿದರು. ಇದನ್ನು ಕಂಡ ಸಮಸ್ತ ಜನರು ಆಶ್ಚರ್ಯದಿಂದ, ಅಪಾರ ಶ್ರದ್ಧೆಯಿಂದ ಕೂಡಿದವರಾದರು.
                ಇದಾದ ನಂತರ ಭಗವಾನರು ಅಲ್ಲಿಂದ ನೇರವಾಗಿ ತಾವತಿಂಸ ದೇವಲೋಕಕ್ಕೆ ಹೋದರು. ಅಲ್ಲಿ ಅವರ ಮಾತೆಯಾದ ಮಹಾಮಾಯಾದೇವಿಯವರು ಪುರುಷ ದೇವತೆಯಾಗಿ ಪುನರ್ಜನ್ಮಿಸಿದ್ದರು. ಅಲ್ಲಿ ಅವರ ಹೆಸರು ಸಂತುಸಿತಾದೇವ ಎಂದಾಗಿತ್ತು. ಅಲ್ಲಿ ಭಗವಾನರು ಇಡೀ ಮೂರು ತಿಂಗಳು ದೇವತೆಗಳಿಗೆ ಮತ್ತು ಬ್ರಹ್ಮರಿಗೆ ಅಭಿಧಮ್ಮೋಪದೇಶ ಮಾಡಿದರು. ಪರಿಣಾಮವಾಗಿ ಸಂತುಸಿತಾದೇವ ಮತ್ತು ಇತರ ಎಲ್ಲಾ ದೇವತೆಗಳು ಮತ್ತು ಬ್ರಹ್ಮರು ಸೋತಪತ್ತಿ ಫಲಪಡೆದರು.

*   *   *
                ಭಗವಾನರು ಹೀಗೆ ದೇವಲೋಕಕ್ಕೆ  ಹೋಗಿರುವಾಗ ಜನರೆಲ್ಲಾ ಬಂದು ಭಗವಾನರೆಲ್ಲಿ? ಎಂದು ಮೊಗ್ಗಲ್ಲಾನ ರವರಲ್ಲಿ ಕೇಳತೊಡಗಿದರು. ಮೊಗ್ಗಲ್ಲಾನ ರವರಿಗೆ ಭಗವಾನರೆಲ್ಲಿದ್ದಾರೆ ಎಂದು ತಿಳಿದಿತ್ತು. ಆದರೂ ಅನುರುದ್ಧರವರ ದಿವ್ಯದೃಷ್ಟಿಯ ಬಗ್ಗೆ ಜನರಿಗೆ ತಿಳಿಯಲಿ ಎಂದು ಅನುರುದ್ಧರವರನ್ನು ಕೇಳಿ ಎಂದರು. ಅವರೆಲ್ಲಾ ಹೋಗಿ ಪೂಜ್ಯ ಅನುರುದ್ಧರವರಿಗೆ ಭೇಟಿಮಾಡಿ ಭಗವಾನರೆಲ್ಲಿ ಎಂದು ಕೇಳಿದರು. ಆಗ ಅನುರುದ್ಧರು ತಮ್ಮ ದಿವ್ಯಚಕ್ಷುವಿನಿಂದ ವೀಕ್ಷಿಸಿ ಹೀಗೆ ಹೇಳಿದರು: ಭಗವಾನರು ತಾವತಿಂಸ ಲೋಕದಲ್ಲಿದ್ದಾರೆ. ಅಲ್ಲಿಯ ಸಭಾಂಗಣದಲ್ಲಿ ಸುವರ್ಣವರ್ಣದ ಶಿಲಾ ಸಿಂಹಾಸನದಲ್ಲಿ ಆಸೀನರಾಗಿ ತಮ್ಮ ತಾಯಿಯ ಸಹಿತ ಸರ್ವ ದೇವತೆಗಳಿಗೆ ಅಭಿಧಮ್ಮ ಬೋಧಿಸುತ್ತಿರುವರು ಎಂದರು.

                ಆ ಸಮಯದಲ್ಲಿ ಪೂಜ್ಯ ಸಾರಿಪುತ್ರರು ಶ್ರಾವಸ್ಥಿಯಿಂದ ಮೂವತ್ತು ಯೋಜನಗಳಷ್ಟು ದೂರದಲ್ಲಿರುವ ಸಂಕಪ್ಪನಗರದಲ್ಲಿದ್ದರು. ಅಲ್ಲಿದ್ದು ಇಡೀ ವಷರ್ಾವಾಸದ ಕಾಲದಲ್ಲಿ ಭಗವಾನರು ಅಲ್ಲಿ ಬೋಧಿಸಿದ್ದನ್ನು ಇಲ್ಲಿ ಭಿಕ್ಷುಗಳಿಗೆ ಅಭಿಧಮ್ಮವನ್ನು ಪ್ರಕಟಪಡಿಸಿದರು.
                ವಷರ್ಾವಾಸದ ಅಂತ್ಯದಲ್ಲಿ ಪೂಜ್ಯ ಮೊಗ್ಗಲ್ಲಾನರವರು ತಾವತಿಂಸ ದೇವಲೋಕಕ್ಕೆ ಭಗವಾನರನ್ನು ಕಾಣಲು ಹೊರಟರು. ಅಲ್ಲಿಂದ ಭಗವಾನರು ಹಿಂದಿರುಗುವ ಕಾಲ ಮತ್ತು ಸ್ಥಳವನ್ನು ನಿಗಡಿಪಡಿಸಿಕೊಂಡು ಬಂದಿದ್ದರು. ಭಗವಾನರು ವಷರ್ಾವಾಸದ ಅಂತ್ಯದಲ್ಲಿ ಬರುವ ಹುಣ್ಣಿಮೆಯಂದು, ಸಂಕಸ್ಸನಗರದಲ್ಲಿ ಸಾರಿಪುತ್ರರು ಇರುವ ಕಡೆಯಲ್ಲಿ ಇಳಿಯುವರು ಎಂದು ತಿಳಿಯಪಡಿಸಿದರು
.
ವಾಗ್ದಾನದಂತೆಯೇ ಭಗವಾನರು ಸಂಕಸ್ಸ ನಗರದ ಮಹಾ ಹೆಬ್ಬಾಗಿಲಿನಲ್ಲಿ, ಅಶ್ವಯುಜ ತಿಂಗಳಿನ ಪೂರ್ಣಮಿಯಂದು ತಮ್ಮ ಶರೀರದಿಂದ ಆರು ವರ್ಣದ ಕಿರಣಗಳಿಂದ ಪ್ರಕಾಶಿಸುತ್ತಾ ಒಂದೆಡೆ ದೇವತೆಗಳು ಮತ್ತೊಂದೆಡೆ ಬ್ರಹ್ಮರೊಂದಿಗೆ ಜೊತೆಗೂಡಿ ಇಳಿದರು. ಆಗ ಇಡೀ ನಗರವೆಲ್ಲಾ ಇವರ ತೇಜಸ್ಸಿನಿಂದ ಪ್ರಕಾಶಮಯವಾಗಿತ್ತು. ಇನ್ನೊಂದೆಡೆ ಭಿಕ್ಷುಗಣದೊಂದಿಗೆ ಸಾರಿಪುತ್ರರು ಸ್ವಾಗತಿಸಿದರು. ಭಗವಾನರು ಹೀಗೆ ದೇವತೆಗಳೊಂದಿಗೆ ಮತ್ತು ಬ್ರಹ್ಮರೊಂದಿಗೆ ಅತ್ಯಂತ ಪ್ರಕಾಶಮಾನವಾಗಿ ಇಳಿಯುತ್ತಿದ್ದುದನ್ನು ಕಂಡು ಸಾರಿಪುತ್ರರು ಶ್ರದ್ಧಾಭಕ್ತಿಯಿಂದ ಕೂಡಿ ಭಗವಾನರ ಬಳಿಗೆ ಬಂದು ಹೀಗೆ ನುಡಿದರು: ಪರಮಪೂಜ್ಯ ಭಗವಾನ್, ನಾವು ಎಂದಿಗೂ ಈ ಬಗೆಯ ತಮ್ಮ ಭವ್ಯವೈಭೋಗದ ಲೀಲೆಯನ್ನು ಈ ಹಿಂದೆ ಕೇಳಿರಲಿಲ್ಲ, ಕಂಡಿರಲಿಲ್ಲ. ದೇವತೆಗಳಿಂದಲೂ ಮತ್ತು ಬ್ರಹ್ಮರಿಂದಲೂ ಹೀಗೆ ಪೂಜಿತರಾಗಿರುವುದನ್ನು ನೋಡೇ ಇರಲಿಲ್ಲ ಎಂದರು.

                ಆಗ ಭಗವಾನರು ಹೀಗೆ ನುಡಿದರು: ಮಗು ಸಾರಿಪುತ್ರ, ಯಾರಲ್ಲಿ ಅದ್ವಿತೀಯ ಸದ್ಗುಣಗಳಿರುವವೋ ಅವರು ಖಂಡಿತವಾಗಿ ದೇವಮನುಷ್ಯರಿಂದ ಪೂಜಿತರಾಗುತ್ತಾರೆ ಎಂದು ಹೇಳಿ ಹೀಗೆ ಈ ಮೇಲಿನ ಗಾಥೆಗಳನ್ನು ನುಡಿದರು. ಬೋಧನೆಯ ಅಂತ್ಯದಲ್ಲಿ ಬಹಳಷ್ಟು ಜನರು ಫಲಗಳನ್ನು ಪ್ರಾಪ್ತಿಮಾಡಿದರು. 

No comments:

Post a Comment