ಸದ್ಧಮ್ಮ ಘೋಷಣೆ
ಸುಖಕಾರಿ
ಬುದ್ಧರ ಉದಯ ಸುಖ
ಸದ್ಧಮ್ಮ ಘೋಷಣೆ ಸುಖ
ಸಂಘದ ಸಮಗ್ರತೆ (ಐಕ್ಯತೆ)
ಸುಖ
ಹೀಗೆ ಸಮಗ್ರರಾಗಿರುವ ತಪವು
ಸುಖ. (194)
ಗಾಥ ಪ್ರಸಂಗ 14:8
ಸುಖ ಯಾವುದು ?
ಒಮ್ಮೆ ಶ್ರಾವಸ್ತಿಯ ಭಿಕ್ಷುಗಳಲ್ಲಿ ಚಚರ್ೆಯ ಆರಂಭವಾಯಿತು.
ಅದೇನೆಂದರೆ: ಸುಖದ ಸಾರವೇನು? ಸುಖದಲ್ಲಿ ಯಾವ
ಸಾರವಿರುತ್ತದೆ? ಆಗ ಸ್ಥೂಲವಾಗಿ ಭಿಕ್ಷುಗಳಿಗೆ
ಗೊತ್ತಾಗಿದ್ದು ಏನೆಂದರೆ ಹಲವು ಜನರಿಗೆ ಹಲವು ರೀತಿಯ ಅಥವಾ ಪ್ರತ್ಯೇಕವಾದ ಸುಖ ಇರುತ್ತದೆ.
ಅಂದರೆ ವ್ಯಕ್ತಿಯಿಂದ ವ್ಯಕ್ತಿಗೆ ಸುಖವು ವಿಭಿನ್ನವಾಗಿರುತ್ತದೆ. ಕೆಲವರಿಗೆ ರಾಜನ ರೀತಿ
ಶ್ರೀಮಂತಿಕೆ ಮತ್ತು ಐಶ್ವರ್ಯವೇ ಸುಖವಾಗಿದ್ದರೆ, ಮತ್ತೆ ಕೆಲವರಿಗೆ
ಇಂದ್ರೀಯಗಳ ಆನಂದಿಸುವಿಕೆಯ ಸುಖವಾಗಿತ್ತು. ಇನ್ನು ಕೆಲವರಿಗೆ ತಿಂಡಿತಿನಿಸುಗಳೇ ಸುಖವಾಗಿತ್ತು,
ಹೀಗೆ ಅವರು ಮಾತನಾಡುತ್ತ ಇರುವಾಗಲೇ ಭಗವಾನರು ಅಲ್ಲಿಗೆ ಬಂದರು. ಅವರ
ಚಚರ್ೆ ಕೇಳಿದ ಭಗವಾನರು ಹೀಗೆ ಹೇಳಿದರು: ಭಿಕ್ಷುಗಳೇ, ನೀವು ಹೇಳಿದ ಸುಖಗಳು ನಿಮಗೆ ಜನ್ಮಗಳಿಂದ ವಿಮುಕ್ತಿ ನೀಡಲಾರವು. ಆದ್ದರಿಂದ ಸತ್ಯದ ರೀತಿ
ಸುಖವೆಂದರೆ ಬುದ್ಧರ ಉದಯ, ಸದ್ಧಮ ಶ್ರವಣದ ಅವಕಾಶ,
ಸಂಘದ ಐಕ್ಯಮತ್ಯತೆ ಹಾಗು ಸಂಘದ ತಪೋಸಾಧನೆ ಎಂದು ಹೇಳಿ ಮೇಲಿನ
ಗಾಥೆಯನ್ನು ನುಡಿದರು. ಆ ಸುತ್ತದ ಅಂತ್ಯದಲ್ಲಿ ಅವರೆಲ್ಲಾ ಅರಹಂತರಾದರು.
No comments:
Post a Comment