ರತಿವಿಲಾಸದಿಂದ
ಶೋಕ ಉಂಟಾಗುತ್ತದೆ
"ರತಿವಿಲಾಸದಿಂದ
ಶೋಕ ಉಂಟಾಗುತ್ತದೆ,
ರತಿವಿಲಾಸದಿಂದಲೇ ಭಯವು
ಉಂಟಾಗುತ್ತದೆ.
ಯಾರು ಪೂರ್ಣವಾಗಿ
ರತಿವಿಲಾಸದಿಂದ ವಿಮುಕ್ತರೋ
ಅವರಿಗೆ ಶೋಕವೇ ಇಲ್ಲ,
ಭಯ ಹೇಗೆ ತಾನೇ ಇರಬಲ್ಲದು?" (214)
ಗಾಥ ಪ್ರಸಂಗ 16:4
ಲಿಚ್ಚವಿ
ರಾಜಕುಮಾರರಲ್ಲಿ ಸ್ತ್ರೀಗಾಗಿ ರಕ್ತಪಾತ
ಒಮ್ಮೆ ಭಗವಾನರು ವೈಶಾಲಿಯ ಕೂಟಾಗಾರ
ವಿಹಾರದಲ್ಲಿ ನೆಲೆಸಿದ್ದರು. ಅಂದು ಲಿಚ್ಚವಿಗಳ ನಗರದಲ್ಲಿ ಹಬ್ಬವಿತ್ತು. ಆಗ ಲಿಚ್ಚವಿ
ರಾಜಕುಮಾರರು ಒಳ್ಳೆಯ ವಸ್ತ್ರಗಳಿಂದ ಮತ್ತು ಆಭರಣಗಳಿಂದ ಅತ್ಯಂತ ಸುಂದರವಾಗಿ ಕಾಣುತ್ತ, ನಗರದಿಂದ ಉದ್ಯಾನವನಕ್ಕೆ ತೆರಳಿದರು. ಆಗತಾನೇ ಭಗವಾನರು ಸಹಾ
ಆಹಾರಕ್ಕಾಗಿ ನಗರವನ್ನು ಪ್ರವೇಶಿಸಿದ್ದರು. ಅವರು ಲಿಚ್ಚವಿಗಳನ್ನು ನೋಡುತ್ತಾ ಭಿಕ್ಷುಗಳಿಗೆ
ಹೀಗೆಂದರು: "ಭಿಕ್ಷುಗಳೇ, ಈ ಲಿಚ್ಚವಿ ರಾಜಕುಮಾರರನ್ನು ನೋಡಿರಿ, ನೀವು ತಾವತಿಂಸ ದೇವತೆಗಳನ್ನು ಎಂದಿಗೂ ನೋಡಿಲ್ಲ. ಈ ರಾಜಕುಮಾರರನ್ನು ನೋಡಿದರೆ ಅವರಿಗೆ
ಸಾಮಿಪ್ಯವಾಗಿ ಕಾಣಿಸುವುದು."
* * *
ಲಿಚ್ಚವಿ ರಾಜಕುಮಾರರು ಉದ್ಯಾನವನದಲ್ಲಿ
ತಾವು ಹೊರಟ ದಾರಿಯಲ್ಲಿ ಓರ್ವ ಸುಂದರ ನರ್ತಕಿಯೊಬ್ಬಳನ್ನು ಕಂಡರು. ಆಕೆಯನ್ನು ಸಹಾ ಅವರು
ಉದ್ಯಾನವನಕ್ಕೆ ಕರೆದೊಯ್ದರು. ಆಕೆಯನ್ನು ಪಡೆಯಬೇಕೆಂಬ ಹಂಬಲ ಎಲ್ಲರಲ್ಲಿ ಜಾಗ್ರತವಾಯಿತು. ಈ
ಸ್ವಾರ್ಥದಿಂದಲೇ ಅವರಲ್ಲಿಯೇ ಹೊಡೆದಾಟ ಆರಂಭವಾಯಿತು. ಅವರು ತಮ್ಮ ತಮ್ಮಲ್ಲಿಯೇ ಶಸ್ತ್ರಾಯುದ್ದ
ನಡೆದು, ಕತ್ತರಿಸಿಕೊಂಡರು. ಆಗ ರಕ್ತದ ಹೊಳೆಯೇ
ಹರಿದಿತ್ತು. ಜನರು ಅವರ ಶರೀರಗಳನ್ನು ಗೌರವಯುತವಾಗಿ ಪಲ್ಲಕ್ಕಿಯಲ್ಲಿ ಎತ್ತಿಕೊಂಡು ಹೋದರು.
* * *
ಇತ್ತ ಭಗವಾನರು ಆಹಾರ ಮುಗಿಸಿಕೊಂಡು
ನಗರದಿಂದ ವಿಹಾರಕ್ಕೆ ಮರಳಿದರು. ಆಗ ಭಿಕ್ಷುಗಳು ಅಲ್ಲಿ ನಡೆದ ರಕ್ತಪಾತದ ಬಗ್ಗೆ ತಿಳಿಸಿದರು. ಆಗ
ಭಗವಾನರು ಈ ಗಾಥೆಯನ್ನು ನುಡಿದರು.
No comments:
Post a Comment