ಸದಾ
ಆನಂದವಾಗಿರೋಣ
ಸುಖವಾಗಿ ನಿಜಕ್ಕೂ
ಜೀವಿಸೋಣ
ಯಾವುದನ್ನು
ಹೊಂದಿಲ್ಲದವರಂತೆ,
ಆನಂದವನ್ನೇ
ಭಕ್ಷಿಸುತ್ತ ಇರೋಣ
ಅಭಸ್ಸರ ದೇವತೆಗಳಂತೆ. (200)
ಗಾಥ ಪ್ರಸಂಗ 15:2
ಪಂಚಸಾಲ ಹಳ್ಳಿಯವರ
ಮೇಲೆ ಮಾರನ ಪ್ರಭಾವ
ಒಮ್ಮೆ ಭಗವಾನರು ತಮ್ಮ ಮಹಾಕರುಣಾ ಸಮಾಪತ್ತಿಯಲ್ಲಿ ಪಂಚಸಾಲ
ಹಳ್ಳಿಯ ಕುಮಾರಿಯರು ಸೋತಪತ್ತಿ ಫಲ ಹೊಂದುವರೆಂದು ತಿಳಿದು, ಅವರಿಗಾಗಿ ಹಳ್ಳಿಗೆ ಹೋದರು. ಇತ್ತ ಆ ಪಂಚಸಾಲ ಹಳ್ಳಿಯ ಆ ಕನ್ಯೆಯರು
ನದಿಯಲ್ಲಿ ಸ್ನಾನ ಮಾಡಿದರು. ನಂತರ ಪೂರ್ಣವಾಗಿ ವಸ್ತ್ರಧರಿಸಿ ಹಳ್ಳಿಗೆ ಹಿಂತಿರುಗುತ್ತಿದ್ದರು.
ಅಂದು ಹಬ್ಬದ ದಿನವಾಗಿತ್ತು. ಆಗ ಭಗವಾನರು ಪಂಚಸಾಲ ಹಳ್ಳಿಗೆ ಆಹಾರಕ್ಕಾಗಿ ಹೊರಟರು. ಆದರೆ
ಅವರಿಗೆ ಅಂದು ಯಾರೂ ಸಹಾ ಆಹಾರ ನೀಡಲಿಲ್ಲ. ಎಲ್ಲರಿಗೂ ಮಾರನು ಬುದ್ಧರಿಗೆ ಆಹಾರ ನೀಡದಂತೆ
ಸಮ್ಮೋಹನ ಮಾಡಿದ್ದನು.
ಹೀಗಾಗಿ ಭಗವಾನರು ಹಿಂತಿರುಗಿ ಬರುವಾಗ, ಮಾರನು ಅವರಿಗೆ ಭಂತೆ, ಆಹಾರ ಸಿಕ್ಕತೆ? ಎಂದು ಕೇಳಿದನು. ಆಗ ಭಗವಾನರು ಮಾರನಿಗೆ ಪಾಪಿ ಮಾರ, ಹಳ್ಳಿಯವರಿಗೆ ನನಗೆ ವಿರುದ್ಧವಾಗಿ ವತರ್ಿಸುವಂತೆ ಮಾಡಿದ್ದೀಯೆ,
ಆದ್ದರಿಂದಲೇ ಅವರು ಇಂದು ಯಾವ ಅಹಾರವನ್ನೂ ನೀಡಿಲ್ಲ. ಆಗ
ಮಾರನಿಗೆ ಮತ್ತೆ ರೇಗಿಸಬೇಕು ಎಂದುಕೊಂಡು ಓ ಭಗವಾನ್, ತಾವು ಮತ್ತೊಮ್ಮೆ ಹಳ್ಳಿಗೆ ಹಿಂತಿರುಗಿದರೆ ಈ ಭಾರಿ ಖಂಡಿತವಾಗಿ ಆಹಾರ
ಸಿಗಬಹುದು ಎಂದು ಹೇಳಿದನು.
ಆಗ 500 ಕನ್ಯೆಯರು ಭಗವಾನರಿಗೆ ವಂದಿಸಲು ಪಂಚಸಾಲ ಗ್ರಾಮದಿಂದ ಬಂದಿದ್ದರು. ಆಗ ಮಾರನು ಮತ್ತೆ ಹೀಗೆ
ಕೇಳಿದನು: ಭಗವಾನ್, ನಿಮಗೆ ಇಂದು
ಆಹಾರವಿಲ್ಲದಿರುವುದರಿಂದಾಗಿ, ನಿಮಗೆ ಹಸಿವು ಬಾಧಿಸುತ್ತಿರಬಹುದು ಅಲ್ಲವೇ?
ಆಗ ಭಗವಾನರು ಮಾರನಿಗೆ ಹೀಗೆ ಉತ್ತರಿಸಿದರು: ಓ ಪಾಪಿ ಮಾರ,
ಯಾವುದೇ ಆಹಾರ ದೊರೆಯದಿದ್ದರೂ ಸಹಾ ಅಭಸ್ಸರ ಬ್ರಹ್ಮರಂತೆ
ಆನಂದವನ್ನು, ಸುಖವನ್ನು ಸೇವಿಸುತ್ತಾ
ಜೀವಿಸುವೆವು, ನಾವು ಯಾವುದಕ್ಕೂ
ಅಂಟದವರು, ಯಾವುದು ಇಲ್ಲದವರಂತೆ, ಬಂಧನಗಳಿಲ್ಲದಂತೆ ಸಂತೃಪ್ತರಾಗಿ, ಧಮ್ಮಾನಂದದಲ್ಲಿಯೇ ಇರುವೆವು ಎಂದು ಹೇಳಿ ಈ ಮೇಲಿನ ಗಾಥೆಯನ್ನು
ನುಡಿದರು.
No comments:
Post a Comment