ಪುಣ್ಯಕಾರ್ಯಗಳ
ಪ್ರತಿಫಲ ಮಹತ್ತರವಾದುದು
"ಚಿರಕಾಲ
ಮನೆಯಿಂದ ದೂರವಿದ್ದ ಪುರುಷನು
ದೂರದಿಂದ ಕ್ಷೇಮವಾಗಿ
ಹಿಂತಿರುಗಿದಾಗ
ಆತನ ಮಿತ್ರರು
ಶ್ರೇಯೋಭಿಲಾಷಿಗಳು, ಬಂಧುಗಳು
ಆತನ ಬರುವಿಕೆಗಾಗಿ
ಅಭಿನಂದಿಸುತ್ತಾರೆ." (219)
"ಹಾಗೆಯೇ ಪುಣ್ಯ
ಮಾಡಿದವನಿಗೆ,
ಈ ಲೋಕ ತೊರೆದು
ಪರಗತಿಗೆ ಹೊರಟಾಗ
ಪುಣ್ಯ ಕಾರ್ಯಗಳು
ಬಂಧುಗಳಂತೆ ಪ್ರಿಯಬಾಂಧವರಂತೆ ಸ್ವಾಗತಿಸುತ್ತವೆ." (220)
ಗಾಥ ಪ್ರಸಂಗ 16:9
ನಂದಿಯನ ದಾನ ವೃತ್ತಾಂತ
ನಂದಿಯನು ಬನಾರಸ್ನ ಶ್ರೀಮಂತ
ಪುತ್ರನಾಗಿದ್ದನು. ಆತನ ತಂದೆ-ತಾಯಿಗಳು ಸಹಾ ನಂದಿಯನ ತರಹ ಧಾಮರ್ಿಕರಾಗಿದ್ದರು. ಅವರು ತಮ್ಮ
ಪುತ್ರನು ಸಹಾ ಅವರಂತೆ ಬುದ್ಧ, ಸಂಘಕ್ಕೆ ಸೇವಕನಾಗಿ, ಸಹಾಯಕನಾಗಿ, ಧಾಮರ್ಿಕನಾಗಿ ಜೀವಿಸಲಿ ಎಂದು ಬಯಸುತ್ತಿದ್ದರು. ಆತನ
ತಂದೆ-ತಾಯಿಗಳು ಆತನಿಗಾಗಿ ತಮ್ಮ ಬಂಧುವೋರ್ವನ ಪುತ್ರಿ ರೇವತಿ ಎಂಬುವವಳ ಸಂಗಡ ವಿವಾಹ ಮಾಡಲು
ಸಿದ್ಧರಾದಾಗ ನಂದಿಯ ಈ ವಿವಾಹಕ್ಕೆ ಒಪ್ಪಲಿಲ್ಲ. ಕಾರಣ ಆಕೆ ತ್ರಿರತ್ನದಲ್ಲಿ
ನಂಬಿಕೆವುಳ್ಳವರಾಗಿರಲಿಲ್ಲ ಮತ್ತು ದಾನಾದಿ ಪುಣ್ಯಕಾರ್ಯಗಳನ್ನು ಮಾಡುತ್ತಿರಲಿಲ್ಲ. ಆಗ ನಂದಿಯನ
ತಾಯಿಯು ರೇವತಿಗೆ "ಮಗಳೇ, ಮನೆಯನ್ನು ಶುಭ್ರವಾಗಿಡು, ಭಿಕ್ಷುಗಳ ಸೇವೆ ಮಾಡು, ಸತ್ಕರಿಸು. ತ್ರಿಶರಣು, ದಾನ, ಶೀಲದಲ್ಲಿ ತಲ್ಲೀನಳಾಗು,
ಆಗ ಮಾತ್ರ ನೀನು ನನ್ನ ಮಗನಿಗೆ ಒಪ್ಪಿಗೆಯಾಗುವೆ."
ಇದನ್ನು ಆಲಿಸಿದ ರೇವತಿ ಹಾಗೆಯೇ
ನಡೆದುಕೊಂಡಳು. ಇದರಿಂದ ಸಂತುಷ್ಟನಾದ ನಂದಿಯ ಆಕೆಯೊಂದಿಗೆ ವಿವಾಹ ಆದನು. ಕಾಲನಂತರ ಆತನ
ತಂದೆ-ತಾಯಿಗಳು ಸ್ವರ್ಗಸ್ಥರಾದರು. ನಂದಿಯ ಮತ್ತು ರೇವತಿ ತಮ್ಮ ಎರಡು ಮಕ್ಕಳೊಂದಿಗೆ
ಸುಖವಾಗಿದ್ದರು. ಮುಂದೆ ನಂದಿಯನು ಭಿಕ್ಷುಗಳಿಗೆ ದಾನ ಮಾಡುತ್ತಲೇ ಇದ್ದನು. ಆತನು ಧಮರ್ೊಪದೇಶ
ಆಲಿಸಿ ಭಿಕ್ಷುಗಳಿಗಾಗಿ ದೊಡ್ಡ ವಿಹಾರವನ್ನು ಕಟ್ಟಿಸಿದನು. ಅದರಲ್ಲಿ ನೆಲೆಸಲು ಸ್ಥಳ, ಧ್ಯಾನಮಂದಿರ, ಸಭಾಂಗಣ ಎಲ್ಲವೂ ಇದ್ದವು. ಅಷ್ಟೇ ಅಲ್ಲದೆ ಭಿಕ್ಷುಗಳಿಗಾಗಿ ಸರ್ವ
ಸೌಕರ್ಯದಿಂದ ಕೂಡಿತ್ತು. ಇವೆಲ್ಲಾ ನಿಮರ್ಾಣವಾದ ಮೇಲೆ ಆತನು ಬುದ್ಧರ ಬಳಿಗೆ ಬಂದು ಅವರಿಗೆ
ಇಸಿಪಟ್ಟಣದ ಈ ವಿಹಾರ ದಾನಗೈಯ್ಯಲು ನಿರ್ಧರಿಸಿ ಕುಳಿತನು. ನಂತರ ಬುದ್ಧರ ಕೈಯಲ್ಲಿ
ಸಾಂಕೇತಿಕವಾಗಿ ನೀರನ್ನು ಸುರಿದು ದಾನ ಮಾಡಿದನು. ಆ ನೀರು ಬುದ್ಧರ ಬಲಗೈಗೆ ಸೋಕಿದ ಕೂಡಲೇ
ತಾವತಿಂಸ ಸುಗತಿ ಲೋಕದಲ್ಲಿ 12 ಯೋಜನ ಉದ್ದಗಲದ ಭವ್ಯ ಭವನವು ಸೃಷ್ಟಿಯಾಯಿತು. ಅದು ಹಲವು ನೂರು
ಯೋಜನಗಳಷ್ಟು ಎತ್ತರವಾಗಿತ್ತು. ಏಳು ರೀತಿಯ ರತ್ನಗಳಿಂದ ಹಾಗು ಸತ್ಕರಿಸಲು ಅಪ್ಸರೆಯರಿಂದ ಕೂಡಿತ್ತು.
ಅಲೌಕಿಕ ಸಿದ್ಧಿಗಳಲ್ಲಿ ಬುದ್ಧರ ನಂತರ
ಎರಡನೆಯವರಾಗಿ ಅದ್ವಿತೀಯ ಸಾಮಥ್ರ್ಯ ಹೊಂದಿದ್ದ ಮೊಗ್ಗಲ್ಲಾನರು ಆಗಾಗ ಸುಗತಿ ಲೋಕಗಳಿಗೆ ಪ್ರಯಾಣ
ಮಾಡುತ್ತಿದ್ದರು. ಈ ಭವ್ಯ ಭವನವನ್ನು ಕಂಡು ಮೊಗ್ಗಲ್ಲಾನರು ದೇವತೆಗಳಲ್ಲಿ "ಈ ಭವನವು
ಯಾರಿಗಾಗಿ?" ಎಂದು ವಿಚಾರಿಸಿದಾಗ
ಇದು ನಂದಿಯನು ಬುದ್ಧರಿಗೆ ಮತ್ತು ಸಂಘಕ್ಕೆ ದಾನಗೈದ ಫಲದ ಪ್ರತಿಫಲ ಎಂದು ತಿಳಿಯಿತು.
ಮೊಗ್ಗಲ್ಲಾನರಿಗೆ ದಾನಾದಿ ಪುಣ್ಯಕರ್ಮಗಳ ಫಲಗಳು ಸತ್ತಮೇಲೆ ಸಿಗುವುದು ತಿಳಿದಿತ್ತು. ಆದರೆ ಆತ
ಬದುಕಿರುವಂತೆಯೇ ಆತನಿಗಾಗಿ ಭವ್ಯ ಭವನ ನಿಮರ್ಾಣವಾಗುವುದು ಅವರಿಗೆ ಆಶ್ಚರ್ಯವಾಯಿತು. ಸಂದೇಹ
ಪರಿಹರಿಸಿಕೊಳ್ಳಲು ಬುದ್ಧರಲ್ಲಿಗೆ ಬಂದರು ಮತ್ತು ಪ್ರಶ್ನಿಸಿದರು.
ಅದಕ್ಕೆ ಉತ್ತರವಾಗಿ ಭಗವಾನರು ಈ ರೀತಿ
ಹೇಳಿದರು: "ಓ ಮೊಗ್ಗಲ್ಲಾನ, ನಿನ್ನ ಕಣ್ಣಿಂದಲೇ ಸುಗತಿಯಲ್ಲೂ ಕಂಡು ಸಹಾ ನನಗೇಕೆ ಪ್ರಶ್ನಿಸುವೆ?" ಚಿರಕಾಲ ಮನೆಯಿಂದ ದೂರವಿದ್ದು ಪುನಃ ಮನೆಗೆ ಹಿಂದಿರುಗಿ
ಬಂದಾಗ ಬಂಧು-ಮಿತ್ರರು ಸ್ವಾಗತಿಸುವುದಿಲ್ಲವೇ? ಹಾಗೆಯೇ ಪುಣ್ಯಶಾಲಿಗೆ ಪುಣ್ಯವು ಪರಲೋಕದಲ್ಲಿ ಸ್ವಾಗತಿಸುತ್ತದೆ" ಎಂದು ಹೇಳಿ ಮೇಲಿನ
ಈ ಎರಡು ಗಾಥೆಗಳು ಹೇಳಿದರು.
No comments:
Post a Comment