Saturday, 6 June 2015

dhammapada/buddhavagga/14.7/whoisgreat

ಬುದ್ಧರ ಉದಯ ದುರ್ಲಭ
ಪುರುಷ ಶ್ರೇಷ್ಠರನ್ನು ಕಾಣುವುದು ದುರ್ಲಭ, ಅಂತಹವರು ಎಲ್ಲಾಕಡೆ ಹುಟ್ಟಲಾರರು. ಅಂತಹ ಧೀಮಂತ ಹುಟ್ಟಿದ ಕುಲವು ಸುಖವಾಗಿರುತ್ತದೆ.              (193)
ಗಾಥ ಪ್ರಸಂಗ 14:7
ಮಾನವರಲ್ಲಿ ಶ್ರೇಷ್ಠರ್ಯಾರು


                ಒಮ್ಮೆ ಭಗವಾನರು ಶ್ರಾವಸ್ತಿಯ ಜೇತವನದಲ್ಲಿದ್ದರು. ಆ ಸಮಯದಲ್ಲಿ ಪೂಜ್ಯ ಆನಂದರಲ್ಲಿ ಒಂದು ಪ್ರಶ್ನೆ ಉಂಟಾಯಿತು. ಅದೇನೆಂದರೆ: ಭಗವಾನರು ಆನೆಗಳ ತಳಿಗಳಲ್ಲಿ ಛದ್ದಂತ ಮತ್ತು ಉಪೋಸಥ ಶ್ರೇಷ್ಠವೆಂದು ಹೇಳಿದ್ದಾರೆ. ಹಾಗೆಯೇ ಕುದುರೆಗಳ ತಳಿಗಳಲ್ಲಿ ಸಿಂಧ ಕುದುರೆಯು ಶ್ರೇಷ್ಠವೆಂದು ಹೇಳಿದ್ದಾರೆ. ಹಸುಗಳಲ್ಲಿಯೂ ಸಹಾ ಉಸಭ ತಳಿಯ ಹಸು ಶ್ರೇಷ್ಠವೆಂದು ಹೇಳಿದ್ದಾರೆ. ಆದರೆ ಪುರುಷರಲ್ಲಿ ಶ್ರೇಷ್ಠರ್ಯಾರು ಎಂದು ತಿಳಿಸಿಲ್ಲವಲ್ಲ (ಪುರಿಸಜನ್ಯೊ). ಕೊನೆಗೆ ಅವರಲ್ಲಿಯೇ ಅದಕ್ಕೆ ಉತ್ತರ ಕಂಡುಹಿಡಿಯಲಾರದೆ, ಭಗವಾನರಲ್ಲಿಗೆ ಬಂದು ಈ ಪ್ರಶ್ನೆಯನ್ನು ಕೇಳಿಯೇಬಿಟ್ಟರು. ಆಗ ಭಗವಾನರು ಹೀಗೆ ಉತ್ತರಿಸಿದರು: ಆನಂದ, ಮಾನವರಲ್ಲಿ ಶ್ರೇಷ್ಠರು ಎಲ್ಲಾಕಡೆ ಹುಟ್ಟಲಾರರು, ಅವರು ಶ್ರೀಮಂತ ಕ್ಷತ್ರಿಯ ವಂಶದಲ್ಲಿ ಅಥವಾ ಶ್ರೀಮಂತ ಬ್ರಾಹ್ಮಣ ವಂಶದಲ್ಲಿ (ಖತ್ತಿಯ ಮಹಾಸಾಲ / ಬ್ರಾಹ್ಮಣ ಮಹಾಸಾಲಾ) ಹುಟ್ಟುವರು ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment