ಕಾಮದಿಂದ
ಶೋಕ ಉಂಟಾಗುತ್ತದೆ
"ಕಾಮದಿಂದ ಶೋಕ
ಉಂಟಾಗುತ್ತದೆ,
ಕಾಮದಿಂದ ಭಯವು
ಉಂಟಾಗುತ್ತದೆ.
ಯಾರು ಕಾಮದಿಂದ
ಪೂರ್ಣವಾಗಿ ಮುಕ್ತರೋ
ಅವರಿಗೆ ಶೋಕವೇ ಇಲ್ಲ,
ಭಯ ಹೇಗೆ ತಾನೇ ಇರಬಲ್ಲದು?" (215)
ಗಾಥ ಪ್ರಸಂಗ 16:5
ಅನಿತ್ಥಿಗಂಧ ಕುಮಾರನ
ಪ್ರೇಮ
ಅನಿತ್ಥಿಗಂಧ ಕುಮಾರನು ಶ್ರಾವಸ್ಥಿಯ ಮಹಾ
ಶ್ರೀಮಂತ ಕುಟುಂಬದಲ್ಲಿ ಹುಟ್ಟಿದನು. ಆತನು ಇಲ್ಲಿ ಹುಟ್ಟುವ ಮುನ್ನ ಬ್ರಹ್ಮಲೋಕದಲ್ಲಿದ್ದನು. ಈ
ಕಾರಣದಿಂದಾಗಿ ಆತನಿಗೆ ಬ್ರಹ್ಮಚಾರ್ಯ ಇಷ್ಟವಾಗಿ ಬಾಲ್ಯದಿಂದಲೂ ಸ್ತ್ರೀಯರ ಹತ್ತಿರವೇ
ಹೋಗುತ್ತಿರಲಿಲ್ಲ. ಆತನು ಯುವಕನಾದಾಗ ತಂದೆ-ತಾಯಿಗಳು ಆತನಿಗೆ ಹೀಗೆ ಹೇಳಿದರು: "ಮಗು,
ನಾವು ನಿನಗೆ ವಿವಾಹ ಮಾಡಬೇಕೆಂದಿದ್ದೇವೆ."
"ನನಗೆ ಸ್ತ್ರೀಯರೇ ಬೇಕಿಲ್ಲ" ಎಂದುಬಿಟ್ಟನು. ಪ್ರತಿಬಾರಿ ಕೇಳಿದಾಗಲೂ ಆತನು ಹಾಗೆಯೇ
ಉತ್ತರಿಸಿದನು. ಕೊನೆಗೆ ಆತನು ತಂದೆ-ತಾಯಿಗಳ ಒತ್ತಾಯಕ್ಕೆ ಮಣಿದು 500 ಅಕ್ಕಸಾಲಿಗರ ಸಹಾಯದಿಂದ
ಈತನ ನಿದರ್ೆಶನದಂತೆಯೇ ಅಪೂರ್ವ ಸ್ತ್ರೀ ಆಕೃತಿಯೊಂದನ್ನು ನಿಮರ್ಿಸಿದನು. ನಂತರ ಹೀಗೆ ಹೇಳಿದನು,
"ನೀವೊಂದು ವೇಳೆ ಈ ರೀತಿಯ ಅಪೂರ್ವ
ಸುಂದರ ಕನ್ಯೆಯನ್ನು ಹುಡುಕಿ ತಂದರೆ ನಾನು ನೀವು ಹೇಳಿದಂತೆಯೇ ವಿವಾಹವಾಗುವೆ. ಆಗ ಆತನ
ತಂದೆ-ತಾಯಿಗಳು ಕೆಲವು ಬ್ರಾಹ್ಮಣರನ್ನು ನೇಮಕ ಮಾಡಿ ಹೀಗೆ ಹೇಳಿದರು. "ನಮ್ಮ ಪುತ್ರನು
ಅಪಾರ ಪುಣ್ಯಶಾಲಿಯಾಗಿದ್ದಾನೆ. ಖಂಡಿತವಾಗಿ ಆತನು ನಿಮರ್ಿಸಿರುವಂತಹ ಸ್ತ್ರೀಯು ಇದ್ದೇ ಇರಬೇಕು,
ಹೋಗಿ ದೇಶ-ವಿದೇಶಗಳಲ್ಲಿ ಹುಡುಕಿ ಮತ್ತು ಅಂತಹ ಅನುರೂಪ
ಸುಂದರಿಯನ್ನೇ ಕರೆತನ್ನಿ". ಅದಕ್ಕೆ ಒಪ್ಪಿದ ಬ್ರಾಹ್ಮಣರು ಹುಡುಕುತ್ತಾ ಹುಡುಕುತ್ತಾ
ಸಾಗಾಲ ನಗರಕ್ಕೆ ಬಂದರು. ಅದು ಮದ್ರಾ ರಾಜ್ಯದಲ್ಲಿತ್ತು. ಆ ನಗರದಲ್ಲಿ 16ರ ವಯಸ್ಸಿನ ಅತ್ಯಂತ
ಸುಂದರವಾದ ಕನ್ಯೆಯಿದ್ದಳು. ಅವಳ ತಾಯಿಯು ಒಮ್ಮೆ ನಗರದ ಸ್ನಾನಗೃಹದ ಸಮೀಪ ಹೋಗುತ್ತಿರುವಾಗ ಆಕೆಯ
ಮಗಳ ಆಕೃತಿಯಂತೆಯೇ ಇದ್ದಂತಹ ಸ್ವರ್ಣದ ಗೊಂಬೆ ನೋಡಿದಳು. ಆ ಬ್ರಾಹ್ಮಣರಿಗೆ ಹೀಗೆ ಕೇಳಿದಳು:
"ಓಹ್, ನಾನು ಇದನ್ನು ನನ್ನ
ಮಗಳೆಂದು ಭಾವಿಸಿದೆ, ದಯವಿಟ್ಟು ನೀವಿದನ್ನು
ಹೇಗೆ ನಿಮರ್ಿಸಿದಿರಿ ತಿಳಿಸುವಿರಾ?"
"ತಾಯಿ, ನಿಮ್ಮ ಮಗಳು ಈ ಸ್ತಂಭದ ಪ್ರತಿಮೆಯಂತೆಯೇ ಇದ್ದಾಳೆಯೇ?"
"ಓಹ್ ಇದಕ್ಕಿಂತಲೂ
ಚೆಂದಾಗಿದ್ದಾಳೆ."
"ಹಾಗಾದರೆ ದಯವಿಟ್ಟು ತೋರಿಸುವಿರಾ?"
ಎಂದು ಅನಿತ್ಥಿಕುಮಾರನ ನಿಧರ್ಾರವೆಲ್ಲಾ ತಿಳಿಸಿದರು. ನಂತರ
ಅವರು ಆ ಗೃಹಸ್ಥಳ ಮನೆಗೆ ಹೋದರು. ಅಲ್ಲಿ ಅವರು ಆ ಪ್ರತಿಮೆಯ ಪಕ್ಕ, ತಮ್ಮ ಮಗಳನ್ನು ನಿಲ್ಲಿಸಿದರು. ಆ ಕುಮಾರಿಯ ಸೌಂದರ್ಯಕ್ಕೆ ಆ
ಸ್ವರ್ಣಗೊಂಬೆಯೇ ಸಪ್ಪೆಯಾದಂತೆ ಕಂಡುಬಂದಿತು. ತಕ್ಷಣ ಅವರು ಸಂಬಂಧವನ್ನು ಕುದುರಿಸಿದರು. ನಂತರ ಈ
ವಿಷಯವನ್ನು ಅನಿತ್ಥಿಕುಮಾರನ ತಂದೆ ತಾಯಿಗಳಿಗೆ ತಿಳಿಸಿದರು. ಅವರ ಆನಂದಕ್ಕೆ ಪಾರವೇ ಇರಲಿಲ್ಲ.
ತಕ್ಷಣವೇ ಅವರು ಅತ್ಯಂತ ಬೆಲೆಬಾಳುವ ಉಡುಗೊರೆಗಳನ್ನು ನೀಡಿ ಆ ಸುಂದರ ಕನ್ಯೆಯನ್ನು ಇಲ್ಲಿಗೆ
ಶೀಘ್ರವೇ ಕರೆತರುವಂತೆ ಹೇಳಿ ಕಳುಹಿಸಿದರು. ಆ ಕುಮಾರನಿಗೂ ಆ ಯುವತಿಯ ಬಗ್ಗೆ ಕೇಳಿಯೇ
ಪ್ರೇಮವುಂಟಾಯಿತು. ಆತನು ಸಹಾ ಆಕೆಯನ್ನು ಅತಿ ಶೀಘ್ರದಲ್ಲಿ ಕರೆತರುವಂತೆ ಒತ್ತಾಯಿಸಿದನು.
ಆದರೆ ಆಕೆಯನ್ನು ಹಾಗೆ ಸಾರೋಟು ರಥದಲ್ಲಿ
ಕರೆತರುವಾಗ ಬಂಡಿಯ ಅತಿಯಾದ ಕುಲುಕಾಟದಿಂದಾಗಿ, ಅತಿ ಸುಕುಮಾರಿಯಾದ, ಅತ್ಯಂತ ನಾಜೂಕು ಶರೀರ
ಪಡೆದಿದ್ದ ಆ ಸುಂದರ ಕನ್ಯೆಗೆ ಬೆನ್ನು ಮತ್ತು ಸೊಂಟವು ಉಳುಕಿ, ಅತಿಯಾದ ನೋವು ಉಂಟಾಗಿ ಆಕೆಯು ದಾರಿಯಲ್ಲೇ ಸತ್ತಳು. ಈ ವಿಷಯವನ್ನು ಆ
ಬ್ರಾಹ್ಮಣರು ಅನಿತ್ಥಿಕುಮಾರನಿಗೆ ತಿಳಿಸಿದರು. "ಓಹ್, ಕೊನೆಗೂ ನಾನು ಆಕೆಯನ್ನು ಭೇಟಿಯಾಗದೆ ಹೋದೆನಲ್ಲಾ" ಎಂದು
ಅತಿಯಾದ ದುಃಖವನ್ನು ತಂದುಕೊಂಡನು.
ಭಗವಾನರು ಮುಂಜಾನೆಯೇ ಈ ಯುವಕನ ಬಗ್ಗೆ
ಮಹಾಕರುಣಾ ಸಮಾಪತ್ತಿಯಲ್ಲಿ ತಿಳಿದುಕೊಂಡಿದ್ದರು. ಆತನು ಸೋತಾಪತ್ತಿ ಫಲ ಪಡೆಯುವ ಕಾಲ
ಸನಿಹವಾಗಿತ್ತು. ಭಗವಾನರು ಆಹಾರಕ್ಕಾಗಿ ಬಂದಿರುವಂತೆ ಆ ಯುವಕನ ಮನೆಯ ಬಾಗಿಲಲ್ಲಿ ನಿಂತರು. ಆಗ
ಕುಮಾರನ ತಂದೆ-ತಾಯಿಗಳು ಭಗವಾನರನ್ನು ಆಹಾರ ಸ್ವೀಕರಿಸಲು ಆಹ್ವಾನಿಸಿದರು. ಆಹಾರ ಸೇವನೆಯ ನಂತರ
ಭಗವಾನರು ಆ ಯುವಕನಿಗೆ ಹೀಗೆ ಪ್ರಶ್ನಿಸಿದರು. "ಓಹ್, ಯುವಕನೇ, ನೀನು ತುಂಬಾ ದುಃಖಿತನಂತೆ ಕಾಣುತ್ತಿರುವೆ."
"ಹೌದು ಪೂಜ್ಯರೇ, ನನಗಾಗಿಯೇ ಇದ್ದಂತಹ ವಧುವನ್ನು ಸಾರೋಟು ಬಂಡಿಯಲ್ಲಿ
ಕರೆತರುವಾಗ ದಾರಿಯಲ್ಲಿಯೇ ಆಕೆ ಸತ್ತಳು, ಆಕೆಯ ಸಾವಿನ ಸುದ್ದಿಯಿಂದ ನಾನು ದುಃಖಿತನಾಗಿರುವೆನು. ಹೀಗಾಗಿ ನನಗೆ ಊಟವೂ
ಸೇರುತ್ತಿಲ್ಲ."
"ಓಹ್ ಯುವಕನೇ, ನಿನ್ನ ಅತೀವ ದುಃಖಕ್ಕೆ ಕಾರಣ ತಿಳಿದಿದೆಯೇ?"
"ಇಲ್ಲ ಭಂತೆ."
"ಯುವಕನೇ, ಪ್ರೇಮವೊಂದರಿಂದಲೇ ನಿನಗೆ ಈ ದುಃಖ ಒದಗಿಬಂದಿದೆ. ಈ ಬಗೆಯ
ಅಂಟುವಿಕೆಯಿಂದಲೇ ಭಯ, ಶೋಕ ಉಂಟಾಗುತ್ತದೆ. ಈ
ಅಂಟುವಿಕೆಯಿಂದ ವಿಮುಕ್ತನಾದರೆ, ನಿನಗೆ ದುಃಖವೇ ಇರುವುದಿಲ್ಲ" ಎಂದು ಭಗವಾನರು ಈ ಮೇಲಿನ ಗಾಥೆಯನ್ನು ನುಡಿದರು.
No comments:
Post a Comment