Friday, 19 June 2015

dhammapada/sukhavagga/15.8/sakka

ಶ್ರೇಷ್ಠರ ದರ್ಶನ ಶುಭಕರವಾದುದು
"ಆರ್ಯರ (ಅರಹಂತರ) ದರ್ಶನವು ಮಂಗಳಕರವಾದುದು,
ಅವರ ಸಾನಿಹ್ಯ ಸದಾ ಸುಖಕರ,
ಮೂರ್ಖರನ್ನು ದಶರ್ಿಸದಿರುವುದು
ನಿತ್ಯವೂ ಸುಖಕಾರಿಯಾದುದು."  (206)

"ಮೂರ್ಖ ಸಂಗದಲ್ಲಿರುವಿಕೆಯಿಂದ
ದೀರ್ಘಕಾಲದ ದುಃಖ ಒದಗುತ್ತದೆ.
ಮೂರ್ಖರ ಸಹವಾಸವು ಶತ್ರುವಿನಂತೆ ದುಃಖಕರ
ಆದರೆ ಧೀಮಂತರ ಸಹವಾಸ
ಬಂಧುಗಳ ಸಮಾಗಮದಂತೆಯೇ ಸುಖಕಾರಿಯಾಗಿದೆ." (207)

"ಆದ್ದರಿಂದ ಧೀಮಂತನು ಮತ್ತು ಪ್ರಜ್ಞಾವಂತನು
ಬಹುಶ್ರೂತರ (ಜ್ಞಾನಿಗಳ) ಧಮ್ಮ ಪಾಲಿಸುವಂತ ಸುಶೀಲರ,
ಧಮ್ಮಪಾಲನೆಯಲ್ಲಿ ಕರ್ತವ್ಯನಿಷ್ಠನು ಮತ್ತು ಆರ್ಯರ
(ಲೋಕೋತ್ತರ ದಾರಿಯಲ್ಲಿ ಹೋಗುವವನು)
ಹಾಗು ಅಂತಹ ಸತ್ಪುರುಷರ, ಸುಮೇಧಾವಿಗಳ ಜೊತೆಯಲ್ಲಿಯೇ
ನಕ್ಷತ್ರಗಳು ಚಂದಿರನನ್ನು ಹಿಂಬಾಲಿಸುವವನಂತೆ ಬೆರೆಯಬೇಕು."    (208)

ಗಾಥ ಪ್ರಸಂಗ 15:8
ದೇವೇಂದ್ರ ಸಕ್ಕನ ಶುಶ್ರೂಷೆ

            ಭಗವಾನರ ಪರಿನಿಬ್ಬಾಣದ ಕಾಲವು ಹತ್ತಿರ ಬರುತ್ತಿದ್ದಂತೆಯೇ ಮತ್ತು ಅವರ ದೇಹವು ಆಮಶಂಕೆ ರೋಗಕ್ಕೆ ಗುರಿಯಾಯಿತು. ಇದು ತಕ್ಷಣ ಸಕ್ಕನಿಗೂ ಗೊತ್ತಾಯಿತು. ಆಗ ಆತನು ಹೀಗೆ ಚಿಂತಿಸಿದನು: "ಭಗವಾನರಿಗೆ ಈ ಸ್ಥಿತಿಯಲ್ಲಿ ಶುಶ್ರೂಷೆ ಮಾಡುವುದು ನನ್ನ ಆದ್ಯಕರ್ತವ್ಯವಾಗಿದೆ" ಎಂದು ಯೋಚಿಸಿ ತನ್ನ ಮುಕ್ಕಾಲು ಯೋಜನ ಉದ್ದದ ಶರೀರವನ್ನು ಅಲ್ಲೇ ಬಿಟ್ಟು ಭಗವಾನರ ಬಳಿಗೆ ಮಾನವರಂತೆ ಬಂದು ವಂದಿಸಿದನು. ಮತ್ತು ಭಗವಾನರ ಕಾಲುಗಳನ್ನು ಒತ್ತತೊಡಗಿದನು.
            ಆಗ ಭಗವಾನರು "ಯಾರಿದು ?"

            "ಭಂತೆ, ನಾನು ಸಕ್ಕ."
            "ಇಲ್ಲಿಗೇಕೆ ಬಂದಿರುವೆ ಸಕ್ಕ."
            "ತಮ್ಮ ರೋಗ ಹೋಗಲಾಡಿಸಲು ಶುಶ್ರೂಷೆ ಮಾಡಲು ಬಂದಿರುವೆ ಭಂತೆ."
            "ಸಕ್ಕ ದೇವತೆಗಳು ಮಾನವರ ವಾಸನೆಯನ್ನು 100 ಯೋಜನ ದೂರದಲ್ಲಿದ್ದರೂ, ಕೊಳೆತ ಮಾಂಸಕ್ಕೆ ಅಸಹ್ಯಿಸುವ ರೀತಿ ದೂರ ಸರಿಯುವರು. ಆದ್ದರಿಂದ ಸಕ್ಕ ಹಿಂತಿರುಗು, ನನಗೆ ಶುಶ್ರೂಷೆ ಮಾಡುವಂತಹ ಭಿಕ್ಷುಗಳಿರುವರು."
            "ಭಗವಾನ್, ನಾನು 84000 ಯೋಜನೆಗಳಷ್ಟು ದೂರದಲ್ಲಿದ್ದರೂ ಸಹಾ ಶೀಲದ ಸುಗಂಧವನ್ನು ಆಘ್ರಾಣಿಸಬಲ್ಲೆನು, ಆದ್ದರಿಂದಲೇ ನಾನು ಇಲ್ಲಿಗೆ ಬಂದಿಹೆನು, ಕೇವಲ ನಾನೇ ತಮಗೆ ಶುಶ್ರೂಷೆ ಮಾಡುವೆನು" ಎಂದು ಹೇಳಿ ಭಗವಾನರ ಅಪ್ಪಣೆ ಪಡೆದು ಕೊಂಡನು. ಹಾಗು ಅವರ ಶೌಚಪಾತ್ರೆಯನ್ನು ಸಹಾ, ಸೌಗಂಧದ್ರವ್ಯಗಳ ಪಾತ್ರೆಯ ರೀತಿ ಭಕ್ತಿಯಿಂದ, ಗೌರವದಿಂದ, ಅಣುಮಾತ್ರವೂ ಅಸಹ್ಯಿಸದೆ ಭಗವಾನರನ್ನು ಶುಶ್ರೂಷೆ ಮಾಡಿದನು. ಹಾಗು ಭಗವಾನರು ಗುಣಮುಖವಾದ ನಂತರವೇ ಆತನು ಹಿಂತಿರುಗಿದನು.

            ಇದೇ ವಿಷಯವನ್ನು ಭಿಕ್ಷುಗಳು ಚಚರ್ಿಸುತ್ತಾ ಸಕ್ಕನ ಸುಶೀಲತೆ, ಸೇವಾ ಮನೋಭಾವವೇ ಪ್ರಶಂಸಿಸುತ್ತಿರುವಾಗ ಭಗವಾನರು ಅಲ್ಲಿಗೆ ಬಂದರು. ನಂತರ ಭಗವಾನರು ಸಕ್ಕನ ಬಗ್ಗೆ ಪ್ರಶಂಸಿಸಿದರು. ನಂತರ ಸಕ್ಕನಿಗೆ ತಮ್ಮಿಂದಾದ ಉಪಕಾರವನ್ನು ಸಹಾ ಹೀಗೆ ಹೇಳಿದರು.

            "ಭಿಕ್ಷುಗಳೇ, ಸಕ್ಕನು ನನ್ನ ಮೇಲೆ ಇಂತಹ ಭಕ್ತಿ ಇಟ್ಟಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಭಿಕ್ಷುಗಳೇ ಒಮ್ಮೆ ಸಕ್ಕನು ತನ್ನ ಆಯು ಕ್ಷೀಣಿಸುತ್ತಿರುವುದು ಗಮನಿಸಿ, ಪ್ರಾಣ ಭಯದಿಂದ ನನ್ನಲ್ಲಿಗೆ ಬಂದಿದ್ದನು. ಆಗ ಗಂಧರ್ವ ಪಂಚಶಿಖನು ಸಹಾ ಬಂದಿದ್ದನು. ಆಗ ನಾನು ಇಂದಸಾಲ ಗುಹೆಯಲ್ಲಿದ್ದೆನು. ಆಗ ದೇವತೆಗಳ ಸಮೂಹವೇ ಬಂದಿತ್ತು. ಆಗ ನಾನು ಆತನಿಗೆ "ವಾಸವ, ನಿನ್ನಿಷ್ಟದ ಪ್ರಶ್ನೆಯನ್ನು ಕೇಳು, ನೀನು ಪ್ರಶ್ನಿಸುವ ಪ್ರಶ್ನೆಗಳಿಗೆಲ್ಲಾ ಉತ್ತರಿಸುವೆ" ಎಂದೆನು. ನಂತರ ಆತನ ಪ್ರಶ್ನೆಗಳಿಗೆ ಉತ್ತಿರಿಸಿ, ಆತನ ಭಯ ಶೋಕಗಳೆಲ್ಲಾ ದೂರೀಕರಿಸಿದೆನು. ಹೀಗೆ ಆತನೊಂದಿಗಿದ್ದ ಲಕ್ಷಾಂತರ ಜೀವಿಗಳಿಗೆ ಆ ಧಮ್ಮ ಬೋಧನೆಯ ಅಂತ್ಯದಲ್ಲಿ ಲಾಭವಾಯಿತು. ಸಕ್ಕನಿಗೂ ಸಹಾ ಸೋತಪತ್ತಿಫಲ ಸಿಕ್ಕಿತು. ಹಾಗು ಆಗ ಸಕ್ಕನು ಅಲ್ಲಿ ಕುಳಿತಿರುವಂತೆಯೇ ಮರುಜನ್ಮತಾಳಿ ಪುನಃ ಸಕ್ಕನಾದನು. ಪುನಃ ಆತನು ಯುವ ಸಕ್ಕನಾದನು. ಹೀಗೆಲ್ಲಾ ನಾನು ಆತನಿಗೆ ಸಹಾಯ ಮಾಡಿರುವೆ. ಹೀಗಾಗಿ ಆತನು ನನಗೆ ತೋರಿದ ಭಕ್ತಿ-ಶ್ರದ್ಧೆಗಳಿಗೆ ಆಶ್ಚರ್ಯವಿಲ್ಲ. ಏಕೆಂದರೆ ಭಿಕ್ಷುಗಳೇ ಆರ್ಯರ (ಅರಹಂತರ, ಬುದ್ಧರ) ದರ್ಶನವು ಸುಖಕಾರಿಯಾಗಿದೆ ಮತ್ತು ಹಾಗೆಯೇ ಅವರೊಂದಿಗೆ ವಾಸಿಸುವುದು ಸಹಾ ಸುಖಕರವೇ ಆಗಿದೆ. ಆದರೆ ಮೂರ್ಖರ ಒಡನಾಟ ದುಃಖಕರವಾಗಿದೆ" ಎಂದು ಹೇಳಿ ಈ ಮೇಲಿನ ಗಾಥೆಗಳನ್ನು ನುಡಿದರು. 

No comments:

Post a Comment