Saturday 18 January 2020

ಧಮ್ಮಪದ. ೨೧. ಪಕಿಣ್ಣಕವಗ್ಗೋ


ಧಮ್ಮಪದ
೨೧. ಪಕಿಣ್ಣಕವಗ್ಗೋ


೨೯೦.

ಮತ್ತಾಸುಖಪರಿಚ್ಚಾಗಾ , ಪಸ್ಸೇ ಚೇ ವಿಪುಲಂ ಸುಖಂ
 ಚಜೇ ಮತ್ತಾಸುಖಂ ಧೀರೋ, ಸಮ್ಪಸ್ಸಂ ವಿಪುಲಂ ಸುಖಂ

ಅಲ್ಪಮಾತ್ರ ಸುಖವನ್ನು ಪರಿತ್ಯಜಿಸಿದಾಗ
ವಿಪುಲವಾದ ಸುಖವು ಸಿಗುವುದಾದರೆ,
ಧೀಮಂತನು ವಿಪುಲವಾದ ಸುಖದೆಡೆ ಗಮನಕೊಟ್ಟು
ಅಲ್ಪಮಾತ್ರ ಸುಖವನ್ನು ತ್ಯಾಗಮಾಡಲಿ.”               (290)

೨೯೧.

ಪರದುಕ್ಖೂಪಧಾನೇನ, ಅತ್ತನೋ [ಯೋ ಅತ್ತನೋ (ಸ್ಯಾ ಪೀ )] ಸುಖಮಿಚ್ಛತಿ
 ವೇರಸಂಸಗ್ಗಸಂಸಟ್ಠೋ, ವೇರಾ ಸೋ ಪರಿಮುಚ್ಚತಿ

ಯಾರು ಪರರಿಗೆ ದುಃಖವನ್ನು ನೀಡಿ,
ತಾನು ಸುಖವನ್ನು ಇಚ್ಚಿಸುವನೋ,
ಆತನು ವೈರತ್ವದ ಜಾಲದಲ್ಲಿ
ಸಿಲುಕಿ ವೈರ್ಯದಿಂದ ಎಂದಿಗೂ ಮುಕ್ತನಾಗುವುದಿಲ್ಲ.”     (291)

೨೯೨.

ಯಞ್ಹಿ ಕಿಚ್ಚಂ ಅಪವಿದ್ಧಂ [ತದಪವಿದ್ಧಂ (ಸೀ ಸ್ಯಾ)], ಅಕಿಚ್ಚಂ ಪನ ಕಯಿರತಿ
 ಉನ್ನಳಾನಂ ಪಮತ್ತಾನಂ, ತೇಸಂ ವಡ್ಢನ್ತಿ ಆಸವಾ

ಯಾವುದನ್ನು ಮಾಡಬೇಕಾಗಿದೆಯೋ
ಅವೆಲ್ಲಾ ಮಾಡದೆ ಹಾಗೇ ಉಳಿದಿದೆ,
ಯಾವುದನ್ನು ಮಾಡಬಾರದೋ ಅವೆಲ್ಲಾ ಮಾಡಲಾಗುತ್ತಿದೆ,
ಅಂತಹ ಅಹಂಕಾರಿಯ, ಅಜಾಗರೂಕನ
ಆಸವಗಳು ವರ್ಧಿಸುತ್ತವೆ.”     (292)

೨೯೩.

ಯೇಸಞ್ಚ ಸುಸಮಾರದ್ಧಾ, ನಿಚ್ಚಂ ಕಾಯಗತಾ ಸತಿ
 ಅಕಿಚ್ಚಂ ತೇ ಸೇವನ್ತಿ, ಕಿಚ್ಚೇ ಸಾತಚ್ಚಕಾರಿನೋ
 ಸತಾನಂ ಸಮ್ಪಜಾನಾನಂ, ಅತ್ಥಂ ಗಚ್ಛನ್ತಿ ಆಸವಾ

ಯಾರು ಕಾಯಾಗತಾಸತಿ (ದೇಹದ ಮೇಲಿನ ಧ್ಯಾನ) ಯನ್ನು
ನಿಷ್ಠೆಯಿಂದ ಅಭ್ಯಾಸಿಸುತ್ತಿರುವರೋ,
ಯಾರು ಮಾಡಬಾರದ್ದನ್ನು ಮಾಡುವುದಿಲ್ಲವೋ ಮತ್ತು
ಮಾಡಬೇಕಾಗಿರುವುದನ್ನು ನಿರಂತರ ಮಾಡುತ್ತಿರುವರೋ,
ಅಂತಹ ಸ್ಮೃತಿವಂತರ, ಜಾಗರೂಕ ಪ್ರಾಜ್ಞರ ಆಸವಗಳು ಅಂತ್ಯವಾಗುತ್ತವೆ.”        (293)

೨೯೪.

ಮಾತರಂ ಪಿತರಂ ಹನ್ತ್ವಾ, ರಾಜಾನೋ ದ್ವೇ ಖತ್ತಿಯೇ
 ರಟ್ಠಂ ಸಾನುಚರಂ ಹನ್ತ್ವಾ, ಅನೀಘೋ ಯಾತಿ ಬ್ರಾಹ್ಮಣೋ

ಮಾತೆಯನ್ನು (ತೃಷ್ಣೆ), ತಂದೆಯನ್ನು (ಅಹಂಕಾರ)
ಕೊಂದು, ಬಳಿಕ ದ್ವಿ-ಕ್ಷತ್ರಿಯ ರಾಜರನ್ನು (ಶಾಶ್ವತವಾದ, ಭೌತಿಕವಾದ)
ಹಾಗು ಅವರ ರಾಷ್ಟ್ರವನ್ನು (ಇಂದ್ರಿಯ ಮತ್ತು ಇಂದ್ರಿಯ ವಿಷಯಗಳನ್ನು) ಅವರ
ಅಧೀನರಾಗಿರುವವರನ್ನು (ರಾಗಾದಿಗಳು) ಕೊಂದವನೇ ನಿಜ ಬ್ರಾಹ್ಮಣನು
ಹಾಗು ಆತನು ಅಭಾದಿತನಾಗುತ್ತಾನೆ.”  (294)

೨೯೫.

ಮಾತರಂ ಪಿತರಂ ಹನ್ತ್ವಾ, ರಾಜಾನೋ ದ್ವೇ ಸೋತ್ಥಿಯೇ
 ವೇಯಗ್ಘಪಞ್ಚಮಂ ಹನ್ತ್ವಾ, ಅನೀಘೋ ಯಾತಿ ಬ್ರಾಹ್ಮಣೋ

ಮಾತೆಯನ್ನು (ತೃಷ್ಣೆ), ತಂದೆಯನ್ನು (ಅಹಂಕಾರ)
ಕೊಂದು, ಬಳಿಕ ದ್ವಿ-ಕ್ಷತ್ರಿಯ ರಾಜರನ್ನು (ಶಾಶ್ವತವಾದ, ಭೌತಿಕವಾದ)
ಹಾಗೆಯೇ ಪಂಚಮ ವ್ಯಾಘ್ರವನ್ನು (ಪಂಚನಿವರಣ) ಕೊಂದವನೇ
ನಿಜ ಬ್ರಾಹ್ಮಣನು ಹಾಗು ಆತನು ಅಭಾದಿತನಾಗುತ್ತಾನೆ.”      (295)

೨೯೬.

ಸುಪ್ಪಬುದ್ಧಂ ಪಬುಜ್ಝನ್ತಿ, ಸದಾ ಗೋತಮಸಾವಕಾ
 ಯೇಸಂ ದಿವಾ ರತ್ತೋ , ನಿಚ್ಚಂ ಬುದ್ಧಗತಾ ಸತಿ

ಯಾರು ನಿತ್ಯವೂ ದಿನ-ರಾತ್ರಿ
ಬುದ್ದಾನುಸತಿಯಲ್ಲಿ (ಬುದ್ಧರ ಮೇಲೆ ಧ್ಯಾನ)
ತಲ್ಲೀನರೋ ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರು ಆಗಿರುತ್ತಾರೆ.”            (296)

೨೯೭.

ಸುಪ್ಪಬುದ್ಧಂ ಪಬುಜ್ಝನ್ತಿ, ಸದಾ ಗೋತಮಸಾವಕಾ
 ಯೇಸಂ ದಿವಾ ರತ್ತೋ , ನಿಚ್ಚಂ ಧಮ್ಮಗತಾ ಸತಿ

ಯಾರು ನಿತ್ಯವೂ ದಿನ-ರಾತ್ರಿ
ಧಮ್ಮಾಗತಾಸತಿಯಲ್ಲಿ (ಧಮ್ಮದ ಅನುಸ್ಮರಣೆ)
ತಲ್ಲೀನರೋ ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರೂ ಆಗಿರುತ್ತಾರೆ.”          (297)

೨೯೮.

ಸುಪ್ಪಬುದ್ಧಂ ಪಬುಜ್ಝನ್ತಿ, ಸದಾ ಗೋತಮಸಾವಕಾ
 ಯೇಸಂ ದಿವಾ ರತ್ತೋ , ನಿಚ್ಚಂ ಸಙ್ಘಗತಾ ಸತಿ

ಯಾರು ನಿತ್ಯವೂ ದಿನ-ರಾತ್ರಿ
ಸಂಘಾನುಸತಿ (ಸಂಘದ ಶ್ರೇಷ್ಣ ಗುಣಗಳ ಮೇಲೆ ಧ್ಯಾನ)ಯಲ್ಲಿ
ತಲ್ಲೀನರೋ ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರೂ ಆಗಿರುತ್ತಾರೆ.”          (298)

೨೯೯.

ಸುಪ್ಪಬುದ್ಧಂ ಪಬುಜ್ಝನ್ತಿ, ಸದಾ ಗೋತಮಸಾವಕಾ
 ಯೇಸಂ ದಿವಾ ರತ್ತೋ , ನಿಚ್ಚಂ ಕಾಯಗತಾ ಸತಿ

ಯಾರು ನಿತ್ಯವೂ ದಿನ-ರಾತ್ರಿ
ಕಾಯಗತಾಸತಿ (ದೇಹದ ಕಲ್ಮಶಗಳ ಮೇಲೆ ಧ್ಯಾನ) ಯಲ್ಲಿ
ತಲ್ಲೀನರೋ ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರೂ ಆಗಿರುತ್ತಾರೆ.”          (299)

೩೦೦.

ಸುಪ್ಪಬುದ್ಧಂ ಪಬುಜ್ಝನ್ತಿ, ಸದಾ ಗೋತಮಸಾವಕಾ
 ಯೇಸಂ ದಿವಾ ರತ್ತೋ , ಅಹಿಂಸಾಯ ರತೋ ಮನೋ

ಯಾರು ನಿತ್ಯವೂ ದಿನ-ರಾತ್ರಿ
ಅಹಿಂಸೆಯಲ್ಲಿ ರತರಾಗಿರುವರೋ
ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರೂ ಆಗಿರುತ್ತಾರೆ.”          (300)

೩೦೧.

ಸುಪ್ಪಬುದ್ಧಂ ಪಬುಜ್ಝನ್ತಿ, ಸದಾ ಗೋತಮಸಾವಕಾ
 ಯೇಸಂ ದಿವಾ ರತ್ತೋ , ಭಾವನಾಯ ರತೋ ಮನೋ

ಯಾರು ನಿತ್ಯವೂ ದಿನ-ರಾತ್ರಿ
ಚಿತ್ತಾಭಿವೃದ್ಧಿಯಲ್ಲಿ (ಧ್ಯಾನದಲ್ಲಿ) ರತರಾಗಿರುವರೋ
ಅಂತಹ ಗೋತಮರ ಶ್ರಾವಕರು
ಸದಾ ಜಾಗೃತರೂ ಹಾಗು ಎಚ್ಚೆತ್ತವರೂ ಆಗಿರುತ್ತಾರೆ.”          (301)

೩೦೨.

ದುಪ್ಪಬ್ಬಜ್ಜಂ ದುರಭಿರಮಂ, ದುರಾವಾಸಾ ಘರಾ ದುಖಾ
 ದುಕ್ಖೋಸಮಾನಸಂವಾಸೋ, ದುಕ್ಖಾನುಪತಿತದ್ಧಗೂ
 ತಸ್ಮಾ ಚದ್ಧಗೂ ಸಿಯಾ, [ತಸ್ಮಾ ಚದ್ಧಗೂ ()] ದುಕ್ಖಾನುಪತಿತೋ ಸಿಯಾ [ದುಕ್ಖಾನುಪಾತಿತೋ (?)]

ಪಬ್ಬಜ್ಜನಾಗುವಿಕೆ ಕಷ್ಟಕರ,
ಅದರಲ್ಲಿಯೇ ಆನಂದಿಸುವುದು ಕಷ್ಟಕರ,
ಗೃಹಸ್ಥರ ಜೀವನ ಕಷ್ಟಕರ ಹಾಗು ದುಃಖಕರ,
ಅಸಮಾನ ದೃಷ್ಟಿಕೋನ ಹೊಂದಿರುವವರೊಂದಿಗೆ ವಾಸಿಸುವಿಕೆ ದುಃಖಕರ,
ಸಂಸಾರದಲ್ಲಿ ಸುತ್ತಾಡುವಿಕೆ ದುಃಖಕರ,
ಆದ್ದರಿಂದ ಸಂಸಾರದ, ಸಂಚಾರಿಯಾಗದಿರು, ದುಃಖಕ್ಕೆ ಗುರಿಯಾಗದರು.”           (302)

೩೦೩.

ಸದ್ಧೋ ಸೀಲೇನ ಸಮ್ಪನ್ನೋ, ಯಸೋಭೋಗಸಮಪ್ಪಿತೋ
 ಯಂ ಯಂ ಪದೇಸಂ ಭಜತಿ, ತತ್ಥ ತತ್ಥೇವ ಪೂಜಿತೋ

ಯಾರು ಶ್ರದ್ಧಾ (ಪ್ರಜ್ಞಾಯುತ ಭಕ್ತಿ) ಹಾಗು ಶೀಲಸಂಪನ್ನನೋ
ಯಶಸ್ಸು ಮತ್ತು ಐಶ್ವರ್ಯಗಳಿಂದ ಕೂಡಿರುತ್ತಾನೋ,
ಆತನು ಯಾವ ಯಾವ ಪ್ರದೇಶದಲ್ಲಿ ಹೋಗುತ್ತಾನೋ
ಅಲ್ಲೆಲ್ಲಾ ಪೂಜಿತನಾಗುತ್ತಾನೆ.”               (303)

೩೦೪.

ದೂರೇ ಸನ್ತೋ ಪಕಾಸೇನ್ತಿ, ಹಿಮವನ್ತೋವ ಪಬ್ಬತೋ
 ಅಸನ್ತೇತ್ಥ ದಿಸ್ಸನ್ತಿ, ರತ್ತಿಂ ಖಿತ್ತಾ ಯಥಾ ಸರಾ

ದೂರದಲ್ಲಿದ್ದರೂ ಸಂತರು ಪ್ರಕಾಶಿಸುವರು (ಕಾಣಿಸಿಕೊಳ್ಳುವರು)
ಹಿಮವಂತ (ಹಿಮಾಲಯ) ಪರ್ವತದ ರೀತಿ,
ಆದರೆ ಅಸಂತರು (ಪಾಪಿಗಳು) ಹತ್ತಿರದಲ್ಲಿದ್ದರೂ
ರಾತ್ರಿಯ ವೇಳೆ ಬಿಟ್ಟ ಶರದಂತೆ ಕಾಣಿಸಲಾರರು.” (304)

೩೦೫.

ಏಕಾಸನಂ ಏಕಸೇಯ್ಯಂ, ಏಕೋ ಚರಮತನ್ದಿತೋ
 ಏಕೋ ದಮಯಮತ್ತಾನಂ, ವನನ್ತೇ ರಮಿತೋ ಸಿಯಾ

ಏಕಾಂಗಿಯಾಗಿ ಆಸನಬದ್ಧನಾಗಿ, ಏಕಾಂಗಿಯಾಗಿ
ಶಯನ (ಮಲಗಿ) ಮಾಡಿ, ಏಕಾಂಗಿಯಾಗಿಯೇ ಚಲಿಸುತ್ತಾ
ಏಕಾಂತದಲ್ಲಿಯೇ ತನ್ನನ್ನು ದಮಿಸುತ್ತಾ,
ವನದಲ್ಲಿನ ಏಕಾಂತದಲ್ಲೇ ಸಾಧಕನು ರಮಿಸುವನು.”             (305)


ಪಕಿಣ್ಣಕವಗ್ಗೋ ಏಕವೀಸತಿಮೋ ನಿಟ್ಠಿತೋ
ಇಲ್ಲಿಗೆ ಇಪ್ಪತ್ತೊಂದುನೆಯದಾದ  ಪಕಿಣ್ಣಕವಗ್ಗವು ಮುಗಿಯಿತು.

No comments:

Post a Comment