Wednesday 15 January 2020

ಧಮ್ಮಪದ. ೧೦. ದಣ್ಡವಗ್ಗೋ



ಧಮ್ಮಪದ. ೧೦. ದಣ್ಡವಗ್ಗೋ

೧೨೯.

ಸಬ್ಬೇ ತಸನ್ತಿ ದಣ್ಡಸ್ಸ, ಸಬ್ಬೇ ಭಾಯನ್ತಿ ಮಚ್ಚುನೋ
 ಅತ್ತಾನಂ ಉಪಮಂ ಕತ್ವಾ, ಹನೇಯ್ಯ ಘಾತಯೇ

ದಂಡಕ್ಕೆ (ಶಿಕ್ಷಗೆ) ಸರ್ವರೂ ನಡುಗುವರು. ಸರ್ವರೂ ಮೃತ್ಯುವಿಗೆ ಭಯಪಡುವರು,
  ಪರರನ್ನು ತನಗೆ ಹೋಲಿಸಿಕೊಂಡು, ಒಬ್ಬನು ಹತ್ಯೆಗೈಯದಿರಲಿ ಅಥವಾ ಘಾತಗೊಳಿಸದಿರಲಿ.”                (129)

೧೩೦.

ಸಬ್ಬೇ ತಸನ್ತಿ ದಣ್ಡಸ್ಸ, ಸಬ್ಬೇಸಂ ಜೀವಿತಂ ಪಿಯಂ
 ಅತ್ತಾನಂ ಉಪಮಂ ಕತ್ವಾ, ಹನೇಯ್ಯ ಘಾತಯೇ

ಸರ್ವರೂ ದಂಡಕ್ಕೆ ನಡುಗುವರು,
ಸರ್ವರಿಗೂ ಜೀವಿತ ಪ್ರಿಯವಾಗಿದೆ,
ಪರರಲ್ಲಿ ತನ್ನನ್ನು ಹೋಲಿಸಿಕೊಂಡು,
ಒಬ್ಬನು ಕೊಲ್ಲದಿರಲಿ ಅಥವಾ ಹತ್ಯೆಗೆ ಕಾರಣವಾಗದಿರಲಿ.”    (130)

೧೩೧.

ಸುಖಕಾಮಾನಿ ಭೂತಾನಿ, ಯೋ ದಣ್ಡೇನ ವಿಹಿಂಸತಿ
 ಅತ್ತನೋ ಸುಖಮೇಸಾನೋ, ಪೇಚ್ಚ ಸೋ ಲಭತೇ ಸುಖಂ

ಸುಖ ಕಾಮನೆಗಳಿಂದ ಕೂಡಿರುವ ಜೀವಿಗಳನ್ನು  ಯಾರು ಸುಖ ಬಯಸುವವನಾಗಿಯೂ
ದಂಡಗಳಿಂದ ಹಿಂಸಿಸುವನೋ,  ಆತನು ಮುಂದೆ ಸುಖ ಪಡೆಯಲಾರನು.”   (131)

೧೩೨.

ಸುಖಕಾಮಾನಿ ಭೂತಾನಿ, ಯೋ ದಣ್ಡೇನ ಹಿಂಸತಿ
 ಅತ್ತನೋ ಸುಖಮೇಸಾನೋ, ಪೇಚ್ಚ ಸೋ ಲಭತೇ ಸುಖಂ

ಸುಖ ಕಾಮನೆಗಳಿಂದ ಕೂಡಿರುವ ಜೀವಿಗಳನ್ನು ಯಾರು ಹಿಂಸಿಸುವುದಿಲ್ಲವೋ,
  ಅಂತಹ ಸುಖಾಪೇಕ್ಷಿಗೆ ಮುಂದೆ ಸುಖವು ಲಭ್ಯವಾಗುವುದು.”                (132)

೧೩೩.

ಮಾವೋಚ ಫರುಸಂ ಕಞ್ಚಿ, ವುತ್ತಾ ಪಟಿವದೇಯ್ಯು ತಂ [ಪಟಿವದೇಯ್ಯುಂ ತಂ ()]
 ದುಕ್ಖಾ ಹಿ ಸಾರಮ್ಭಕಥಾ, ಪಟಿದಣ್ಡಾ ಫುಸೇಯ್ಯು ತಂ [ಫುಸೇಯ್ಯುಂ ತಂ ()]

ಯಾರಿಗೂ ಕಟು ನುಡಿಯಬೇಡ, ಆಲಿಸಿದವರು ಪ್ರತಿ ಕಟುನುಡಿಯುತ್ತಾರೆ
ಕಟುನುಡಿಯು ದುಃಖಕಾರಕ ಮತ್ತು ಪ್ರತಿಕಾರವನ್ನುಂಟುಮಾಡಿ ಹಾನಿ ತರುತ್ತದೆ.”              (133)

೧೩೪.

ಸಚೇ ನೇರೇಸಿ ಅತ್ತಾನಂ, ಕಂಸೋ ಉಪಹತೋ ಯಥಾ
 ಏಸ ಪತ್ತೋಸಿ ನಿಬ್ಬಾನಂ, ಸಾರಮ್ಭೋ ತೇ ವಿಜ್ಜತಿ

ಒಡೆದುಹೋದ ಗಂಟೆಯ ರೀತಿ ನಿನ್ನನ್ನು ನೀನು ನಿಶ್ಶಬ್ಧಗೊಳಿಸಿದ್ದೇ ಆದರೆ
ನೀನು ನಿಬ್ಬಾಣ ತಲುಪಿದವರಂತೆ ಕಾಣುತ್ತೀಯೆ, ಏಕೆಂದರೆ ನಿನ್ನಲ್ಲಿ ಹಗೆತನದ ಪ್ರತಿನುಡಿಗಳು ಕಾಣಲಾಗುವುದಿಲ್ಲ.”     (134)

೧೩೫.

ಯಥಾ ದಣ್ಡೇನ ಗೋಪಾಲೋ, ಗಾವೋ ಪಾಜೇತಿ ಗೋಚರಂ
 ಏವಂ ಜರಾ ಮಚ್ಚು , ಆಯುಂ ಪಾಜೇನ್ತಿ ಪಾಣಿನಂ

ಹೇಗೆ ಗೋಪಾಲನು (ಗೋವುಗಳನ್ನು ಕಾಯುವವನು) ಗೋವುಗಳನ್ನು ಗೋಮಾಳಕ್ಕೆ ಅಟ್ಟುವನೋ
ಹಾಗೇ ಜರಾ (ಮುಪ್ಪು) ಮತ್ತು ಮೃತ್ಯುಗಳು ಆಯು ಇರುವ ಜೀವಿಗಳನ್ನು ಜನ್ಮದಿಂದ ಜನ್ಮಕ್ಕೆ ಅಟ್ಟುತ್ತವೆ.”                (135)

೧೩೬.

ಅಥ ಪಾಪಾನಿ ಕಮ್ಮಾನಿ, ಕರಂ ಬಾಲೋ ಬುಜ್ಝತಿ
 ಸೇಹಿ ಕಮ್ಮೇಹಿ ದುಮ್ಮೇಧೋ, ಅಗ್ಗಿದಡ್ಢೋವ ತಪ್ಪತಿ

ಮೂರ್ಖನು ಪಾಪ ಮಾಡುವಾಗ, ಅವುಗಳ ಭೀಕರ ಪರಿಣಾಮ ಅರಿಯುವುದಿಲ್ಲ
ಅಂತಹ ದುರ್ಮೇಧನು (ದಡ್ಡನು) ಬೆಂಕಿಯಿಂದ ಆಹುತಿಯಾಗುವವನ ರೀತಿ ಯಾತನೆಗೆ ಗುರಿಯಾಗುತ್ತಾನೆ.” (136)

೧೩೭.

ಯೋ ದಣ್ಡೇನ ಅದಣ್ಡೇಸು, ಅಪ್ಪದುಟ್ಠೇಸು ದುಸ್ಸತಿ
 ದಸನ್ನಮಞ್ಞತರಂ ಠಾನಂ, ಖಿಪ್ಪಮೇವ ನಿಗಚ್ಛತಿ

ಯಾರು ಮುಗ್ಧರಾದ, ದಂಡಿಸಬಾರದವರನ್ನು ದಂಡಶಸ್ತ್ರಗಳಿಂದ ಹಿಂಸಿಸುವನೋ, ತಪ್ಪು ಮಾಡದವರನ್ನು ನೋಯಿಸುವನೋ, ಅಂತಹವನು ಶೀಘ್ರದಲ್ಲೇ ಹತ್ತು ಸ್ಥಿತಿಗಳಲ್ಲಿ ಒಂದನ್ನು ಪಡೆಯುತ್ತಾನೆ.”  (137)

೧೩೮.

ವೇದನಂ ಫರುಸಂ ಜಾನಿಂ, ಸರೀರಸ್ಸ ಭೇದನಂ [ಸರೀರಸ್ಸ ಪಭೇದನಂ (ಸ್ಯಾ)]
 ಗರುಕಂ ವಾಪಿ ಆಬಾಧಂ, ಚಿತ್ತಕ್ಖೇಪಞ್ಚ [ಚಿತ್ತಕ್ಖೇಪಂ (ಸೀ ಸ್ಯಾ ಪೀ)] ಪಾಪುಣೇ


೧೩೯.

ರಾಜತೋ ವಾ ಉಪಸಗ್ಗಂ [ಉಪಸ್ಸಗ್ಗಂ (ಸೀ ಪೀ)], ಅಬ್ಭಕ್ಖಾನಞ್ಚ [ಅಬ್ಭಕ್ಖಾನಂ (ಸೀ ಪೀ)] ದಾರುಣಂ
 ಪರಿಕ್ಖಯಞ್ಚ [ಪರಿಕ್ಖಯಂ (ಸೀ ಸ್ಯಾ ಪೀ)] ಞಾತೀನಂ, ಭೋಗಾನಞ್ಚ [ಭೋಗಾನಂ (ಸೀ ಸ್ಯಾ ಪೀ)] ಪಭಙ್ಗುರಂ [ಪಭಙ್ಗುನಂ ()]

೧೪೦.

ಅಥ ವಾಸ್ಸ ಅಗಾರಾನಿ, ಅಗ್ಗಿ ಡಹತಿ [ಡಯ್ಹತಿ ()] ಪಾವಕೋ
 ಕಾಯಸ್ಸ ಭೇದಾ ದುಪ್ಪಞ್ಞೋ, ನಿರಯಂ ಸೋಪಪಜ್ಜತಿ [ಸೋ ಉಪಪಜ್ಜತಿ (ಸೀ ಸ್ಯಾ)]

ಆತನು ತೀಕ್ಷ್ಣವಾದ ನೋವು, ಮಹಾದುರಂತ, ಶಾರೀರಿಕ ತೀವ್ರಗಾಯ ಅಥವಾ ಕಡುಕಾಯಿಲೆ ಅಥವಾ ಚಿತ್ತ ನಿಯಂತ್ರಣ ತಪ್ಪಿ ಹುಚ್ಚನಾಗುವಿಕೆ, ಅಥವಾ ಸರ್ಕಾರದಿಂದ ರಾಜನಿಂದ ದಂಡನೆ ಅಥವಾ ಘೋರ ಆಪಾದನೆ ಅಥವಾ ಬಂಧು ಬಳಗದವರ ಸಾವು, ಐಶ್ವರ್ಯವೆಲ್ಲಾ ನಾಶವಾಗುವಿಕೆ ಅಥವಾ ಮಹಾ ಅಗ್ನಿಯ ಆಹುತತೆ ಹಾಗು ಸಾವಿನ ನಂತರ ಅಂತಹ ದುಪ್ರಜ್ಞನು ನಿರಯದಲ್ಲಿ
ಹುಟ್ಟುತ್ತಾನೆ.”         (138, 139, 140)

೧೪೧.

ನಗ್ಗಚರಿಯಾ ಜಟಾ ಪಙ್ಕಾ, ನಾನಾಸಕಾ ಥಣ್ಡಿಲಸಾಯಿಕಾ ವಾ
 ರಜೋಜಲ್ಲಂ ಉಕ್ಕುಟಿಕಪ್ಪಧಾನಂ, ಸೋಧೇನ್ತಿ ಮಚ್ಚಂ ಅವಿತಿಣ್ಣಕಙ್ಖಂ

ನಗ್ನವಾಗಿ ಓಡಾಡುವುದರಿಂದಾಗಲಿ, ಜಟೆ ಬಿಡುವುದರಿಂದಾಗಲಿ, ಕೊಳಕಾಗಿರುವುದರಿಂದಾಗಲಿ, ಉಪವಾಸ ಮಾಡುವುದರಿಂದಾಗಲಿ, ಬರಿನೆಲದ ಮೇಲೆ ಮಲಗುವುದರಿಂದಾಗಲಿ, ಹಿಮ್ಮಡಿ ಮೇಲೆ ಕುಳಿತು ದೇಹದಂಡಿಸುವುದರಿಂದಾಗಲಿ, ಧೂಳು ಮತ್ತು ಭಸ್ಮಗಳನ್ನು ಬಳಿದುಕೊಳ್ಳುವುದರಿಂದಾಗಲಿ, ಸಂಶಯದಿಂದ ಮುಕ್ತನಾಗಲಾರ, ಮರ್ತನು ಶುದ್ಧನಾಗಲಾರ.”         (141)

೧೪೨.

ಅಲಙ್ಕತೋ ಚೇಪಿ ಸಮಂ ಚರೇಯ್ಯ, ಸನ್ತೋ ದನ್ತೋ ನಿಯತೋ ಬ್ರಹ್ಮಚಾರೀ
 ಸಬ್ಬೇಸು ಭೂತೇಸು ನಿಧಾಯ ದಣ್ಡಂ, ಸೋ ಬ್ರಾಹ್ಮಣೋ ಸೋ ಸಮಣೋ ಭಿಕ್ಖು

ಅಲಂಕೃತನಾಗಿದ್ದೂ ಆತನು ಪರಮಶಾಂತಿಯಿಂದ ಜೀವಿಸಿದಾಗ, ಅಂತಹ ಶಾಂತನು ದಮಿಸಲ್ಪಟ್ಟವನು, ಮಾರ್ಗಗಳಲ್ಲಿ ಬ್ರಹ್ಮಚಾರಿಯು, ಸರ್ವಜೀವಿಗಳ ಹಿತಕ್ಕಾಗಿ ದಂಡಶಾಸ್ತ್ರಗಳನ್ನು ಪಕ್ಕಕ್ಕೆ ಇಟ್ಟವನು, ಅಂತಹವನು ನಿಜಕ್ಕೂ ಬ್ರಾಹ್ಮಣ, ಸಮಣ ಮತ್ತು ಭಿಕ್ಷುವೂ ಹೌದು.”                (142)

೧೪೩.

ಹಿರೀನಿಸೇಧೋ ಪುರಿಸೋ, ಕೋಚಿ ಲೋಕಸ್ಮಿ ವಿಜ್ಜತಿಯೋ ನಿದ್ದಂ [ನಿನ್ದಂ (ಸೀ ಪೀ) ಸಂ ನಿ .೧೮] ಅಪಬೋಧೇತಿ [ಅಪಬೋಧತಿ (ಸೀ ಸ್ಯಾ ಪೀ)], ಅಸ್ಸೋ ಭದ್ರೋ ಕಸಾಮಿವ

ಲೋಕದಲ್ಲಿ ಪಾಪಲಜ್ಜೆಯಿಂದ ಕೂಡಿದಂತಹ ವಿನಯಸಂಪನ್ನನು ಅತಿವಿರಳ. ಅಂತಹವ ಉತ್ತಮ ಜಾತಿಯ ಕುದುರೆಯು ಚಾಟಿ ಏಟಿಗೆ ಅವಕಾಶ ನೀಡದೆ ಹೇಗೆ ಜೀವಿಸುವುದೋ ಹಾಗೇ ಪಾಪಲಜ್ಜೆಯಿಂದ ಕೂಡಿ ನಿಯಂತ್ರಿತನಾಗಿರುತ್ತಾನೆ ಹಾಗೂ ಆತನು ನಿಂದೆಗೆ ಅತೀತವಾಗಿರುತ್ತಾನೆ.”   (143)

೧೪೪.

ಅಸ್ಸೋ ಯಥಾ ಭದ್ರೋ ಕಸಾನಿವಿಟ್ಠೋ, ಆತಾಪಿನೋ ಸಂವೇಗಿನೋ ಭವಾಥ
 ಸದ್ಧಾಯ ಸೀಲೇನ ವೀರಿಯೇನ , ಸಮಾಧಿನಾ ಧಮ್ಮವಿನಿಚ್ಛಯೇನ
 ಸಮ್ಪನ್ನವಿಜ್ಜಾಚರಣಾ ಪತಿಸ್ಸತಾ, ಜಹಿಸ್ಸಥ [ಪಹಸ್ಸಥ (ಸೀ ಸ್ಯಾ ಪೀ)] ದುಕ್ಖಮಿದಂ ಅನಪ್ಪಕಂ

ಅಶ್ವವು ಹೇಗೆ ಚಾಟಿ ಸೋಕಿದ ಕೂಡಲೇ ಜಾಗೃತವಾಗುವುದೋ ಹಾಗೆಯೇ ನೀವು ಸಹಾ ಶ್ರದ್ಧೆಯಿಂದ, ಶೀಲದಿಂದ, ವೀರ್ಯದಿಂದ (ಪ್ರಯತ್ನ), ಸಮಾಧಿಯಿಂದ, ಧಮ್ಮ ಪರೀಕ್ಷೆಯಿಂದ, ವಿದ್ಯೆ ಮತ್ತು ಆಚರಣೆ ಸಂಪನ್ನತೆಯಿಂದ ಸದಾ ಸ್ಮೃತಿಯಿಂದ ಕೂಡಿ ಮಹಾ ದುಃಖದಿಂದ ಪಾರಾಗಿ.”                (144)

೧೪೫.

ಉದಕಞ್ಹಿ ನಯನ್ತಿ ನೇತ್ತಿಕಾ, ಉಸುಕಾರಾ ನಮಯನ್ತಿ ತೇಜನಂ
 ದಾರುಂ ನಮಯನ್ತಿ ತಚ್ಛಕಾ, ಅತ್ತಾನಂ ದಮಯನ್ತಿ ಸುಬ್ಬತಾ

ನೀರಗಂಟಿಯು ನೀರಿಗೆ ಮಾರ್ಗದರ್ಶನ ನೀಡುತ್ತಾರೆ. ಬಿಲ್ಲುಗಾರರು ಬಾಣಗಳಿಗೆ ನೇರಾಕಾರವನ್ನು ನೀಡುತ್ತಾರೆ
ಬಡಗಿಗಳು ಮರದ ತುಂಡಿಗೆ ರೂಪ ನೀಡುತ್ತಾರೆ ಹಾಗು ಸುಚಾರಿತ್ರವುಳ್ಳವರು ತಮ್ಮನ್ನು ದಮಿಸಿಕೊಳ್ಳುತ್ತಾರೆ.” (145)

ದಣ್ಡವಗ್ಗೋ ದಸಮೋ ನಿಟ್ಠಿತೋ
ಹತ್ತನೆಯದಾದ ದಣ್ಡವರ್ಗವು ಇಲ್ಲಿಗೆ ಮುಗಿಯಿತು.


No comments:

Post a Comment