Wednesday 15 January 2020

ಧಮ್ಮಪದ. ೧೧. ಜರಾವಗ್ಗೋ


ಧಮ್ಮಪದ. ೧೧. ಜರಾವಗ್ಗೋ


೧೪೬.

ಕೋ ನು ಹಾಸೋ [ಕಿನ್ನು ಹಾಸೋ ()] ಕಿಮಾನನ್ದೋ, ನಿಚ್ಚಂ ಪಜ್ಜಲಿತೇ ಸತಿ
 ಅನ್ಧಕಾರೇನ ಓನದ್ಧಾ, ಪದೀಪಂ ಗವೇಸಥ

ನಗು ಏತರದು? ಆನಂದ ಯಾವ ತರಹದ್ದು? ನಿತ್ಯವು ಜಗ ಪ್ರಜ್ವಲಿಸುತ್ತಿರುವಾಗ 
ಅಂಧಕಾರದಲ್ಲಿ ಅಡಗಿಹೋಗಿರುವ ನೀನು ಹೊಂಬೆಳಕನ್ನು ಹುಡುಕುವುದಿಲ್ಲವೇ?”              (146)

೧೪೭.

ಪಸ್ಸ ಚಿತ್ತಕತಂ ಬಿಮ್ಬಂ, ಅರುಕಾಯಂ ಸಮುಸ್ಸಿತಂ
 ಆತುರಂ ಬಹುಸಙ್ಕಪ್ಪಂ, ಯಸ್ಸ ನತ್ಥಿ ಧುವಂ ಠಿತಿ

ಚಿತ್ತಾಕರ್ಷವಾದ ಸುಂದರ ಶರೀರವನ್ನು ನೋಡಿ, ನೋಡಿ ಹುಣ್ಣುಗಳ ರಾಶಿ
ಅಸಹ್ಯತೆಯ ಗುಡ್ಡೆ, ರೋಗಗ್ರಸ್ತವು, ದ್ರುವವಲ್ಲದ್ದು, ಸ್ಥಿರಬಲ್ಲದ ದೇಹವನ್ನು ಗಮನಿಸಿ.”           (147)

೧೪೮.

ಪರಿಜಿಣ್ಣಮಿದಂ ರೂಪಂ, ರೋಗನೀಳಂ [ರೋಗನಿಡ್ಢಂ (ಸೀ ಪೀ), ರೋಗನಿದ್ಧಂ (ಸ್ಯಾ)] ಪಭಙ್ಗುರಂ
 ಭಿಜ್ಜತಿ ಪೂತಿಸನ್ದೇಹೋ, ಮರಣನ್ತಞ್ಹಿ ಜೀವಿತಂ

ಶರೀರವು ಸಂಪೂರ್ಣವಾಗಿ ನಿತ್ರಾಣಗೊಂಡು ಸೊರಗಿಹೋಗುತ್ತದೆ. ಇದು ರೋಗಗಳ ಗೂಡಾಗಿದೆ, ನಾಶವಾಗುವಂತಹುದು. ಕಶ್ಮಲಗಳ ರಾಶಿಯು ಒಡೆದು ಹೋಗುತ್ತದೆ. ನಿಜಕ್ಕೂ ಮರಣದಲ್ಲೇ ಜೀವಿತದ ಅಂತ್ಯವಾಗುತ್ತದೆ.”         (148)

೧೪೯.

ಯಾನಿಮಾನಿ ಅಪತ್ಥಾನಿ [ಯಾನಿಮಾನಿ ಅಪತ್ಥಾನಿ (ಸೀ ಸ್ಯಾ ಪೀ), ಯಾನಿಮಾನಿಪವಿದ್ಧಾನಿ (?)], ಅಲಾಬೂನೇವ [ಅಲಾಪೂನೇವ (ಸೀ ಸ್ಯಾ ಪೀ)] ಸಾರದೇಕಾಪೋತಕಾನಿ ಅಟ್ಠೀನಿ, ತಾನಿ ದಿಸ್ವಾನ ಕಾ ರತಿ

ಪಾರಿವಾಳದ ವರ್ಣದ ಮೂಳೆಗಳು ಶರತ್ಕಾಲದಲ್ಲಿರುವಂತೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ, ಒಣಗಿದ ಸೋರೆ ಬುರುಡೆಗಳಂತಿರುವ ತಲೆಗಳು, ಇದನ್ನು ಸಾಕ್ಷಾತ್ ಗಮನಿಸಿಯು ಹೇಗೆತಾನೇ ಮುಖಗಳಲ್ಲಿ ಆನಂದಿಸಲು ಸಾಧ್ಯ?”           (149)

೧೫೦.

ಅಟ್ಠೀನಂ ನಗರಂ ಕತಂ, ಮಂಸಲೋಹಿತಲೇಪನಂ
 ಯತ್ಥ ಜರಾ ಮಚ್ಚು , ಮಾನೋ ಮಕ್ಖೋ ಓಹಿತೋ

ಅಸ್ಥಿಯಿಂದ ನಗರ ನಿರ್ಮಿತಿಯಾಗಿದೆ, ಮಾಂಸ ಲೋಹಿತದಿಂದ (ರಕ್ತ) ಲೇಪನಗೊಂಡಿದೆ
ಇದರಲ್ಲಿ ಜರಾ, ಮೃತ್ಯುವೂ ಹಾಗೆಯೇ ಅಹಂಕಾರ, ಮಾಯಾವಿತನವೂ ಸಂಗ್ರಹವಾಗಿದೆ.”   (150)

೧೫೧.

ಜೀರನ್ತಿ ವೇ ರಾಜರಥಾ ಸುಚಿತ್ತಾ, ಅಥೋ ಸರೀರಮ್ಪಿ ಜರಂ ಉಪೇತಿ
 ಸತಞ್ಚ ಧಮ್ಮೋ ಜರಂ ಉಪೇತಿ, ಸನ್ತೋ ಹವೇ ಸಬ್ಭಿ ಪವೇದಯನ್ತಿ

ವೈಭವಯುತ ರಾಜ ರಥಗಳು ಶಿಥಿಲವಾಗುತ್ತವೆ, ಹಾಗೆಯೇ ಶರೀರಕ್ಕೂ ಸಹಾ ಜರೆ ತಪ್ಪಿದ್ದಲ್ಲ
ಆದರೆ ಸಂತರ ಧಮ್ಮಕ್ಕೆ ಜರೆಯಿಲ್ಲ. ಸಂತರು ಸಜ್ಜನರಿಗೆಲ್ಲಾ ಧಮ್ಮವನ್ನು ಪ್ರಕಟಿಸುತ್ತ ಹೋಗುವರು.”          (151)

೧೫೨.

ಅಪ್ಪಸ್ಸುತಾಯಂ ಪುರಿಸೋ, ಬಲಿಬದ್ಧೋವ [ಬಲಿವದ್ದೋವ (ಸೀ ಸ್ಯಾ ಪೀ)] ಜೀರತಿ
 ಮಂಸಾನಿ ತಸ್ಸ ವಡ್ಢನ್ತಿ, ಪಞ್ಞಾ ತಸ್ಸ ವಡ್ಢತಿ

ಅಲ್ಪಜ್ಞನಾದ ಪುರುಷನಿಗೆ ಎತ್ತಿನಂತೆ ವಯಸ್ಸಾಗಿರುತ್ತದೆ
ಆತನ ಮಾಂಸಯುತ ಶರೀರವು ವರ್ಧಿಸಿರುತ್ತದೆ ಹೊರತು ಪ್ರಜ್ಞಾವು ವರ್ಧಿಸಿರುವುದಿಲ್ಲ.”                (152)

೧೫೩.

ಅನೇಕಜಾತಿಸಂಸಾರಂ , ಸನ್ಧಾವಿಸ್ಸಂ ಅನಿಬ್ಬಿಸಂ
 ಗಹಕಾರಂ [ಗಹಕಾರಕಂ (ಸೀ ಸ್ಯಾ ಪೀ)] ಗವೇಸನ್ತೋ, ದುಕ್ಖಾ ಜಾತಿ ಪುನಪ್ಪುನಂ

ಅನೇಕ ಜನ್ಮಗಳನ್ನು ಸಂಸಾರದಲ್ಲಿ ಪಡೆದಿದ್ದೇನೆ. ಅನ್ವೇಷಿಸಿದೆ ಆಪಾರ
ಆದರೆ ಪಡೆಯಲಿಲ್ಲ ಗೃಹ ನಿರ್ಮಾತನನು; ಪುನಃ ಪುನಃ ಜನ್ಮವೆತ್ತುವುದು ನಿಜಕ್ಕೂ ದುಃಖಕರ.”    (153)

೧೫೪.

ಗಹಕಾರಕ ದಿಟ್ಠೋಸಿ, ಪುನ ಗೇಹಂ ಕಾಹಸಿ
 ಸಬ್ಬಾ ತೇ ಫಾಸುಕಾ ಭಗ್ಗಾ, ಗಹಕೂಟಂ ವಿಸಙ್ಖತಂ
 ವಿಸಙ್ಖಾರಗತಂ ಚಿತ್ತಂ, ತಣ್ಹಾನಂ ಖಯಮಜ್ಝಗಾ

ಗೃಹ ನಿರ್ಮಾತನೇ ! ನಿನ್ನನ್ನು ನೋಡಿಯಾಯಿತು, ಹೀಗಾಗಿಯೇ ಮತ್ತೆ ನೀನು ಮನೆ ಕಟ್ಟಲಾರೆ, ನಿನ್ನೆಲ್ಲಾ ತೋಲೆ ನಿಲುವುಗಳೆಲ್ಲಾ ಚೂರಾಗಿದೆ. ಗೃಹದ ಆಧಾರ ಕಂಬವು ಮುರಿದಿದೆ, ಸ್ಥಿತಿಗೆ ಅತೀತವಾಗಿದೆ (ಸಂಖಾರತೀತವಾಗಿದೆ) ಚಿತ್ತವು, ತನ್ಹಾ ಕ್ಷಯವನ್ನು ಸಾಧಿಸಿದ್ದಾಗಿದೆ.”    (154)

೧೫೫.

ಅಚರಿತ್ವಾ ಬ್ರಹ್ಮಚರಿಯಂ, ಅಲದ್ಧಾ ಯೋಬ್ಬನೇ ಧನಂ
 ಜಿಣ್ಣಕೋಞ್ಚಾವ ಝಾಯನ್ತಿ, ಖೀಣಮಚ್ಛೇವ ಪಲ್ಲಲೇ


ಯೌವ್ವನದಲ್ಲಿ ಬ್ರಹ್ಮಚರ್ಯೆಯ ಜೀವನವನ್ನು ಆಚರಿಸದವರು ಹಾಗು ಯೌವ್ವನದಲ್ಲೇ ಧನವನ್ನು ಸಂಪಾದಿಸದವನು, ಮೀನುಗಳಿಲ್ಲದ ಕೊಳದಲ್ಲಿರುವ ಮುದಿ ಕೊಕ್ಕರೆಗಳಂತೆ ಕೊರಗುತ್ತಾನೆ.”        (155)

೧೫೬.

ಅಚರಿತ್ವಾ ಬ್ರಹ್ಮಚರಿಯಂ, ಅಲದ್ಧಾ ಯೋಬ್ಬನೇ ಧನಂ
 ಸೇನ್ತಿ ಚಾಪಾತಿಖೀಣಾವ, ಪುರಾಣಾನಿ ಅನುತ್ಥುನಂ

ಯೌವ್ವನದಲ್ಲಿ ಬ್ರಹ್ಮಚರ್ಯೆಯುತ ಜೀವನವನ್ನು ಆಚರಿಸದವನು ಹಾಗು ಯೌವ್ವನದಲ್ಲಿ ಧನವನ್ನು ಸಂಪಾದಿಸದವನು, ಗುರಿ ತಲುಪದ ಬಾಣಗಳಂತೆ, ಅಪ್ರಯೋಜಕರಾಗಿ ಹಿಂದಿನದನ್ನು ನೆನೆಯುತ್ತ ಪಶ್ಚಾತ್ತಾಪದಿಂದ ಕೊರಗುವರು.”          (156)

ಜರಾವಗ್ಗೋ ಏಕಾದಸಮೋ ನಿಟ್ಠಿತೋ
ಹನ್ನೊಂದುನೆಯದಾದ ಜರಾವಗ್ಗವು ಇಲ್ಲಿಗೆ ಮುಗಿಯಿತು.

No comments:

Post a Comment