Wednesday 8 January 2020

ಧಮ್ಮಪದ ೩. ಚಿತ್ತವಗ್ಗ


. ಚಿತ್ತವಗ್ಗ




೩೩.

ಫನ್ದನಂ ಚಪಲಂ ಚಿತ್ತಂ, ದೂರಕ್ಖಂ [ದುರಕ್ಖಂ (ಸಬ್ಬತ್ಥ)] ದುನ್ನಿವಾರಯಂ
ಉಜುಂ ಕರೋತಿ ಮೇಧಾವೀ, ಉಸುಕಾರೋವ ತೇಜನಂ

ಚಿತ್ತವು ಚಂಚಲವೂ, ಚಪಲವೂ ಆಗಿದೆ. ರಕ್ಷಿಸಲು ದುಷ್ಕರವು, ನಿಯಂತ್ರಿಸಲು ಕಷ್ಟಕರವೂ ಆಗಿದೆ. ಆದರೆ ಮೇಧಾವಿಗಳು ಬಿಲ್ಲುಗಾರನು ಬಾಣವನ್ನು ನೇರವಾಗಿಸುವಂತೆ ಚಿತ್ತವನ್ನು ನೇರವಾಗಿಟ್ಟುಕೊಳ್ಳುತ್ತಾನೆ.             (33)



೩೪.

ವಾರಿಜೋವ ಥಲೇ ಖಿತ್ತೋ, ಓಕಮೋಕತಉಬ್ಭತೋ
ಪರಿಫನ್ದತಿದಂ ಚಿತ್ತಂ, ಮಾರಧೇಯ್ಯಂ ಪಹಾತವೇ

ಹೇಗೆ ನೀರಿನಿಂದ ಮೀನನ್ನು ಎತ್ತಿ ನೆಲದಲ್ಲಿ ಬಿಟ್ಟಾಗ ಹೇಗೆ ಚಡಪಟಿಸುವುದೋ ಹಾಗೆಯೇ ಚಿತ್ತವೂ ತಲ್ಲಣಗೊಳ್ಳುತ್ತದೆ. ಆದ್ದರಿಂದ ಮಾರನ ಇಂದ್ರೀಯ ಕ್ಷೇತ್ರವನ್ನು ವರ್ಜಿಸಬೇಕು.              (34)



೩೫.

ದುನ್ನಿಗ್ಗಹಸ್ಸ ಲಹುನೋ, ಯತ್ಥಕಾಮನಿಪಾತಿನೋ
ಚಿತ್ತಸ್ಸ ದಮಥೋ ಸಾಧು, ಚಿತ್ತಂ ದನ್ತಂ ಸುಖಾವಹಂ

ಮನಸ್ಸನ್ನು ನಿಯಂತ್ರಿಸುವುದು ಕಷ್ಟಕರ, ವೇಗವಾಗಿ ಚಲಿಸುವಂತಹುದು, ಇಷ್ಟವಿರುವ ಕಡೆಗೆ ಚಲಿಸುವಂತಹುದು. ಅದನ್ನು ಪಳಗಿಸುವುದು ಒಳ್ಳೆಯದುಪಳಗಿಸಲ್ಪಟ್ಟ ಮನಸ್ಸು ಸುಖಕಾರಿ.  (35)




೩೬.

ಸುದುದ್ದಸಂ ಸುನಿಪುಣಂ, ಯತ್ಥಕಾಮನಿಪಾತಿನಂ
ಚಿತ್ತಂ ರಕ್ಖೇಥ ಮೇಧಾವೀ, ಚಿತ್ತಂ ಗುತ್ತಂ ಸುಖಾವಹಂ

ಮನಸ್ಸನ್ನು ಗ್ರಹಿಸುವುದು ಅತಿಕಷ್ಟಕರ. ಅದು ಅತ್ಯಂತ ಕೋಮಲವೂ ಮತ್ತು ಅತಿಸೂಕ್ಷ್ಮವೂ ಆಗಿದೆ. ಅದು ಇಷ್ಟವಾದುದೆಡೆ ಚಲಿಸುವುದು ಮತ್ತು ನೆಲೆಸುವುದು. ಆದರೆ ಮೇಧಾವಿಯು ಚಿತ್ತದ ರಕ್ಷಣೆ ಮಾಡುತ್ತಾನೆ. ರಕ್ಷಿತ ಚಿತ್ತವು ಸುಖಕಾರಿಯಾಗಿದೆ.             (36)



೩೭.

ದೂರಙ್ಗಮಂ ಏಕಚರಂ [ಏಕಚಾರಂ ()], ಅಸರೀರಂ ಗುಹಾಸಯಂ
ಯೇ ಚಿತ್ತಂ ಸಂಯಮೇಸ್ಸನ್ತಿ, ಮೋಕ್ಖನ್ತಿ ಮಾರಬನ್ಧನಾ

ದೂರದವರೆಗೂ ಏಕಾಂಗಿಯಾಗಿ ಚಲಿಸುವಂತಹುದು ಅಶರೀರಿಯು, ಗವಿಯಲ್ಲಿ ಮಲಗಿರುವಂತಹ ಚಿತ್ತವನ್ನು ದಮಿಸಿದವರು ಮಾರನ ಬಂಧನದಿಂದ ಮುಕ್ತರಾಗುತ್ತಾರೆ.              (37)



೩೮.

ಅನವಟ್ಠಿತಚಿತ್ತಸ್ಸ, ಸದ್ಧಮ್ಮಂ ಅವಿಜಾನತೋ
ಪರಿಪ್ಲವಪಸಾದಸ್ಸ, ಪಞ್ಞಾ ಪರಿಪೂರತಿ

ಯಾರ ಚಿತ್ತವು ಸ್ಥಿರವಲ್ಲವೋ, ಯಾರು ಸದ್ಧಮ್ಮವನ್ನು ಅರಿಯದವನೊ ಮತ್ತು ಯಾರ ಶ್ರದ್ಧೆಯು ಅಲುಗಾಡುವುದೋ, ಅಂತಹವರ ಪ್ರಜ್ಞೆಯು ಪರಿಪೂರ್ಣ ವಾದುದಲ್ಲ.     (38)



೩೯.

ಅನವಸ್ಸುತಚಿತ್ತಸ್ಸ, ಅನನ್ವಾಹತಚೇತಸೋ
ಪುಞ್ಞಪಾಪಪಹೀನಸ್ಸ, ನತ್ಥಿ ಜಾಗರತೋ ಭಯಂ

ಯಾರ ಚಿತ್ತವು (ರಾಗದಿಂದ) ನೆನೆಯದೋ, ಯಾರು (ದ್ವೇಷದಿಂದ) ದುಃಖಿತವಾಗುವುದಿಲ್ಲವೋ, ಯಾರು ಪಾಪ ಪುಣ್ಯಗಳಿಂದ ದಾಟಿ ನಿಂತಿರುವವರೋ, ಅಂತಹ ಜಾಗೃತನಿಗೆ ಭಯವೆಂಬುದಿಲ್ಲ.             (39)



೪೦.

ಕುಮ್ಭೂಪಮಂ ಕಾಯಮಿಮಂ ವಿದಿತ್ವಾ, ನಗರೂಪಮಂ ಚಿತ್ತಮಿದಂ ಠಪೇತ್ವಾ
ಯೋಧೇಥ ಮಾರಂ ಪಞ್ಞಾವುಧೇನ, ಜಿತಞ್ಚ ರಕ್ಖೇ ಅನಿವೇಸನೋ ಸಿಯಾ

ಶರೀರವು ಒಡೆಯಲ್ಪಡುವ ಮಡಿಕೆ (ಕುಂಭ) ಎಂದು ಅರಿತು ನಗರಕ್ಕೆ ಕೋಟೆಯಿಂದ ರಕ್ಷಿಸುವಂತೆ ಚಿತ್ತವನ್ನು ಭದ್ರಪಡಿಸಿ, ಪ್ರಜ್ಞಾಯುಧದಿಂದ ಮಾರನನ್ನು ಎದುರಿಸಿ ಜಯಿಸು, ಜಯವನ್ನು ರಕ್ಷಿಸಿಕೋ ಆದರೆ ಅಂಟಿಕೊಳ್ಳಬೇಡ.          (40)



೪೧.

ಅಚಿರಂ ವತಯಂ ಕಾಯೋ, ಪಥವಿಂ ಅಧಿಸೇಸ್ಸತಿ
ಛುದ್ಧೋ ಅಪೇತವಿಞ್ಞಾಣೋ, ನಿರತ್ಥಂವ ಕಲಿಙ್ಗರಂ

ಬಹುಬೇಗನೆ ಶರೀರ ವಿಞ್ಞÁ (ಅರಿವು) ವಿಲ್ಲದೆ, ನೆಲದ ಮೇಲೆ ವ್ಯರ್ಥವಾದ ಒಣಗಿದ ಮರದಂತೆ ಬಿದ್ದಿರುತ್ತದೆ.              (41)



೪೨.

ದಿಸೋ ದಿಸಂ ಯಂ ತಂ ಕಯಿರಾ, ವೇರೀ ವಾ ಪನ ವೇರಿನಂ
ಮಿಚ್ಛಾಪಣಿಹಿತಂ ಚಿತ್ತಂ, ಪಾಪಿಯೋ [ಪಾಪಿಯಂ (?)] ನಂ ತತೋ ಕರೇ

ಯಾವರೀತಿಯ ಹಾನಿಯನ್ನು ವೈರಿಯು ವೈರಿಗೆ ಮಾಡಬಹುದೋ ಅಥವಾ ದ್ವೇಷಿಯು ದ್ವೇಷಿಗೆ ಮಾಡಬಹುದೋ, ಅದೆಲ್ಲಕ್ಕಿಂತ ಹೆಚ್ಚಿನ ಹಾನಿಯು ಒಬ್ಬನಿಗೆ ಮಿಥ್ಯಾಮಾರ್ಗದರ್ಶಿತ ಮನಸ್ಸಿನಿಂದ ಆಗುತ್ತದೆ.               (42)



೪೩.

ತಂ ಮಾತಾ ಪಿತಾ ಕಯಿರಾ, ಅಞ್ಞೇ ವಾಪಿ ಞಾತಕಾ
ಸಮ್ಮಾಪಣಿಹಿತಂ ಚಿತ್ತಂ, ಸೇಯ್ಯಸೋ ನಂ ತತೋ ಕರೇ

ಯಾವುದನ್ನು ಮಾತೆ ಆಗಲಿ ಅಥವಾ ಪಿತ ಆಗಲಿ ಅಥವಾ ಯಾವುದೇ ಬಂಧುವಾಗಲಿ (ಹಿತವನ್ನು) ಮಾಡಬಲ್ಲರೋ, ಅವೆಲ್ಲಕ್ಕಿಂತ ಹೆಚ್ಚಿನ ಶ್ರೇಯಸ್ಸನ್ನು ಯೋಗ್ಯ ಹಾದಿಯಲ್ಲಿ ಹೋಗುತ್ತಿರುವ ಚಿತ್ತವು ಮಾಡುತ್ತದೆ. ಅದನ್ನು ಪರರು ಮಾಡಲಾರರು.      (43)



ಚಿತ್ತವಗ್ಗೋ ತತಿಯೋ ನಿಟ್ಠಿತೋ


1 comment: