Friday 10 January 2020

ಧಮ್ಮಪದ ೭. ಅರಹನ್ತವಗ್ಗೋ


. ಅರಹನ್ತವಗ್ಗೋ


೯೦.

ಗತದ್ಧಿನೋ ವಿಸೋಕಸ್ಸ, ವಿಪ್ಪಮುತ್ತಸ್ಸ ಸಬ್ಬಧಿ
ಸಬ್ಬಗನ್ಥಪ್ಪಹೀನಸ್ಸ, ಪರಿಳಾಹೋ ವಿಜ್ಜತಿ

ಯಾರ ಪ್ರಯಾಣವು ಪೂರ್ಣಗೊಂಡಿದೆಯೋ, ಯಾರು ಶೋಕರಹಿತರೊ, ಯಾರು ಸರ್ವದರಿಂದ ವಿಮುಕ್ತರಾಗಿರುವರೋ ಹಾಗು ಯಾರು ಬಂಧನಗಳ ಗಂಟುಗಳಿಂದ ಬಿಡುಗಡೆ ಹೊಂದಿರುವರೋ, ಅಂತಹವರಲ್ಲಿ ಭಾವೋದ್ರೇಕದ ಜ್ವರವು ಇರಲಾರದು.            (90)

೯೧.

ಉಯ್ಯುಞ್ಜನ್ತಿ ಸತೀಮನ್ತೋ, ನಿಕೇತೇ ರಮನ್ತಿ ತೇ
ಹಂಸಾವ ಪಲ್ಲಲಂ ಹಿತ್ವಾ, ಓಕಮೋಕಂ ಜಹನ್ತಿ ತೇ

ಸ್ಮೃತಿವಂತರು ಸದಾ ಯತ್ನಶೀಲರಾಗಿರುತ್ತಾರೆ. ಅವರು ನಿಕೇತನ(ಮನೆಗಳಲ್ಲಿ)ದಲ್ಲಿ ರಮಿಸುವುದಿಲ್ಲ. ಹೇಗೆ ಹಂಸಗಳು ಸರೋವರವನ್ನು ಬಿಟ್ಟು ನಡೆದಂತೆ ಅವರು ಸರ್ವರೀತಿಯ ಗೃಹಗಳನ್ನು ಬಿಟ್ಟು ನಡೆಯುತ್ತಾರೆ.              (91)


೯೨.

ಯೇಸಂ ಸನ್ನಿಚಯೋ ನತ್ಥಿ, ಯೇ ಪರಿಞ್ಞಾತಭೋಜನಾ
ಸುಞ್ಞತೋ ಅನಿಮಿತ್ತೋ , ವಿಮೋಕ್ಖೋ ಯೇಸಂ ಗೋಚರೋ
ಆಕಾಸೇ ಸಕುನ್ತಾನಂ [ಸಕುಣಾನಂ ()], ಗತಿ ತೇಸಂ ದುರನ್ನಯಾ

ಯಾರು ಏನನ್ನು ಸಂಗ್ರಹಣೆ ಮಾಡುವುದಿಲ್ಲವೋ, ಯಾರಿಗೆ ಆಹಾರದ ಪೂರ್ಣಸ್ವರೂಪ ತಿಳಿದು ಮಿತಿಯಿಂದಿರುವರೋ, ಯಾರ ಗುರಿಯು ಶೂನ್ಯವೂ, ಚಿಹ್ನೆರಹಿತವೂ ಆದ ವಿಮುಕ್ತಿಯು ಆಗಿದೆಯೋ ಅಂತಹವರ ಗಮ್ಯಸ್ಥಾನವನ್ನು ಆಕಾಶದಲ್ಲಿ ಹಾರಿಹೋಗುವ ಪಕ್ಷಿಗಳ ರೀತಿಯಲ್ಲಿ ಪತ್ತೆಹಚ್ಚಲಾಗುವುದಿಲ್ಲ.      (92)

೯೩.

ಯಸ್ಸಾಸವಾ ಪರಿಕ್ಖೀಣಾ, ಆಹಾರೇ ಅನಿಸ್ಸಿತೋ
ಸುಞ್ಞತೋ ಅನಿಮಿತ್ತೋ , ವಿಮೋಕ್ಖೋ ಯಸ್ಸ ಗೋಚರೋ
ಆಕಾಸೇ ಸಕುನ್ತಾನಂ, ಪದಂ ತಸ್ಸ ದುರನ್ನಯಂ

ಯಾರ ಅಸ್ರವಗಳು ನಾಶವಾಗಿದೆಯೋ, ಯಾರು ಆಹಾರದಲ್ಲಿಅಂಟದೆ ಇರುವರೋ, ಯಾರ ಗಮ್ಯಸ್ಥಾನವು ಶೂನ್ಯವೂ, ಚಿಹ್ನೆರಹಿತವೂ ಆದ ವಿಮುಕ್ತಿಯಾಗಿದೆಯೋ ಅಂತಹವರನ್ನು ಆಕಾಶದಲ್ಲಿರುವ ಪಕ್ಷಿಗಳ ರೀತಿ ನೋಡಲಾಗುವುದಿಲ್ಲ         (93)

೯೪.

ಯಸ್ಸಿನ್ದ್ರಿಯಾನಿ ಸಮಥಙ್ಗತಾನಿ [ಸಮಥಂ ಗತಾನಿ (ಸೀ ಪೀ)], ಅಸ್ಸಾ ಯಥಾ ಸಾರಥಿನಾ ಸುದನ್ತಾ
ಪಹೀನಮಾನಸ್ಸ ಅನಾಸವಸ್ಸ, ದೇವಾಪಿ ತಸ್ಸ ಪಿಹಯನ್ತಿ ತಾದಿನೋ

ಹೇಗೆ ಸಾರಥಿಯಿಂದ ಕುದುರೆಗಳು ಪಳಗಿಸಲ್ಪಟ್ಟಿರುವವೋ ಅದೇ ರೀತಿಯಲ್ಲಿ ಯಾರ ಇಂದ್ರೀಯಗಳು ಶಾಂತವಾಗಿದೆಯೋ, ಅಹಂಕಾರವು ವರ್ಜಿಸಲ್ಪಟ್ಟಿದೆಯೋ, ಅಸವರಹಿತರಾಗಿರುವರೋ ಅಂತಹವರನ್ನು ದೇವತೆಗಳು ಸಹಾ ಪ್ರಿಯರೆಂದು ಭಾವಿಸುತ್ತಾರೆ.   (94)

೯೫.

ಪಥವಿಸಮೋ ನೋ ವಿರುಜ್ಝತಿ, ಇನ್ದಖಿಲುಪಮೋ [ಇನ್ದಖೀಲೂಪಮೋ (ಸೀ ಸ್ಯಾ )] ತಾದಿ ಸುಬ್ಬತೋ
ರಹದೋವ ಅಪೇತಕದ್ದಮೋ, ಸಂಸಾರಾ ಭವನ್ತಿ ತಾದಿನೋ

ಪೃಥ್ವಿಯಂತೆ ಯಾರು ವಿರೋಧವಿಲ್ಲದವನೋ, ಇಂದ್ರಕೀಲದಂತೆ ಯಾರು ಸ್ಥಿರ, ಸುಚಾರಿತ್ರ್ಯನೋ, ಕೆಸರು ಮುಕ್ತ ಸರೋವರದಂತೆ ಪರಿಶುದ್ಧನೋ, ಅಂತಹ ಅಚಲನಿಗೆ ಸಂಸಾರದಲ್ಲಿ ಮುಂದಿನ ಭವವಿಲ್ಲ.     (95)

೯೬.

ಸನ್ತಂ ತಸ್ಸ ಮನಂ ಹೋತಿ, ಸನ್ತಾ ವಾಚಾ ಕಮ್ಮ
ಸಮ್ಮದಞ್ಞಾ ವಿಮುತ್ತಸ್ಸ, ಉಪಸನ್ತಸ್ಸ ತಾದಿನೋ

ಶಾಂತವು ಆತನ ಮನಸ್ಸು, ಶಾಂತವು ಆತನ ಮಾತು ಮತ್ತು ಕರ್ಮಗಳು ಸಹಾ, ವಿಮುಕ್ತಿಯ ಜ್ಞಾನದಲ್ಲಿ ಪರಿಪೂರ್ಣನು ಆದ ಆತನು ಪ್ರಶಾಂತ ಆಂತರಿಕವುಳ್ಳವನು ಮತ್ತು ಏರಿಳಿತಗಳಲ್ಲಿ ಅಚಲನು ಆಗಿರುತ್ತಾರೆ.   (96)

೯೭.

ಅಸ್ಸದ್ಧೋ ಅಕತಞ್ಞೂ , ಸನ್ಧಿಚ್ಛೇದೋ ಯೋ ನರೋ
ಹತಾವಕಾಸೋ ವನ್ತಾಸೋ, ವೇ ಉತ್ತಮಪೋರಿಸೋ

ಯಾರು ಸುಲಭವಾಗಿ ನಂಬುವವನಲ್ಲವೋ, ಯಾರು ಅನಿರ್ಮಿತ (ಅಕತ) (ನಿಬ್ಬಾಣ)ವನ್ನು ಅರಿತಿರುವನೋ, ಯಾರು ಕೊಂಡಿಗಳನ್ನು ಕತ್ತರಿಸಿರುವನೋ, ಯಾರು ತನ್ನ ಪ್ರಯಾಣವನ್ನು ಅಂತ್ಯ ಮಾಡಿರುವನೋ ಮತ್ತು ಯಾರು ಎಲ್ಲಾ ಬಯಕೆಗಳನ್ನು ವಾಂತಿ ಮಾಡಿರುವನೋ, ಅಂತಹವನು ನಿಜಕ್ಕೂ ಉತ್ತಮ ಪುರುಷನಾಗಿದ್ದಾನೆ.         (97)

೯೮.

ಗಾಮೇ ವಾ ಯದಿ ವಾರಞ್ಞೇ, ನಿನ್ನೇ ವಾ ಯದಿ ವಾ ಥಲೇ
ಯತ್ಥ ಅರಹನ್ತೋ ವಿಹರನ್ತಿ, ತಂ ಭೂಮಿರಾಮಣೇಯ್ಯಕಂ

ಗ್ರಾಮದಲ್ಲೇ ಆಗಲಿ, ಅರಣ್ಯದಲ್ಲೇ ಆಗಲಿ, ಕಣಿವೆಯಲ್ಲೇ ಆಗಲಿ ಅಥವಾ ಬೆಟ್ಟದಲ್ಲೇ ಆಗಲಿ, ಎಲ್ಲೆಲ್ಲಿ ಅಹರಂತರು ವಿಹರಿಸುವರೋ ಭೂಮಿಯೆಲ್ಲಾ ಅತಿ ರಮಣೀಯವಾಗಿರುತ್ತದೆ.           (98)

೯೯.

ರಮಣೀಯಾನಿ ಅರಞ್ಞಾನಿ, ಯತ್ಥ ರಮತೀ ಜನೋ
ವೀತರಾಗಾ ರಮಿಸ್ಸನ್ತಿ, ತೇ ಕಾಮಗವೇಸಿನೋ

ಜನ ರಮಿಸಲಾಗದ ಅರಣ್ಯವು ರಮಣೀಯವಾದುದ್ದು,
ಅಲ್ಲಿ ಕೇವಲ ವೀತರಾಗ (ವೈರಾಗ್ಯ)ರು ಮಾತ್ರ ರಮಿಸುವರು, ಏಕೆಂದರೆ ಅವರು ಕಾಮಗಳನ್ನು ಹುಡುಕುವುದಿಲ್ಲ.            (99)

ಅರಹನ್ತವಗ್ಗೋ ಸತ್ತಮೋ ನಿಟ್ಠಿತೋ
ಇಲ್ಲಿಗೆ ಅರಹನ್ತವಗ್ಗವು ಮುಗಿಯಿತು

No comments:

Post a Comment