Saturday 18 January 2020

ಧಮ್ಮಪದ. ೨೦. ಮಗ್ಗವಗ್ಗೋ


ಧಮ್ಮಪದ. 

೨೦. ಮಗ್ಗವಗ್ಗೋ


೨೭೩.

ಮಗ್ಗಾನಟ್ಠಙ್ಗಿಕೋ ಸೇಟ್ಠೋ, ಸಚ್ಚಾನಂ ಚತುರೋ ಪದಾ
 ವಿರಾಗೋ ಸೇಟ್ಠೋ ಧಮ್ಮಾನಂ, ದ್ವಿಪದಾನಞ್ಚ ಚಕ್ಖುಮಾ

ಮಾರ್ಗಗಳಲ್ಲಿ ಅಷ್ಠಾಂಗಿಕ ಮಾರ್ಗವೇ ಶ್ರೇಷ್ಠ.
ಸತ್ಯಗಳಲ್ಲಿ ಚತುರಾರ್ಯಸತ್ಯಗಳೇ ಶ್ರೇಷ್ಠ
ಧಮ್ಮಗಳಲ್ಲಿ ವಿರಾಗವೇ ಶ್ರೇಷ್ಠ
ದ್ವಿಪಾದಿಗಳಲ್ಲಿ ಚಕ್ಷುವಂತನೆ (ಬುದ್ಧರೇ) ಶ್ರೇಷ್ಠ.”    (273)

೨೭೪.

ಏಸೇವ [ಏಸೋವ (ಸೀ ಪೀ)] ಮಗ್ಗೋ ನತ್ಥಞ್ಞೋ, ದಸ್ಸನಸ್ಸ ವಿಸುದ್ಧಿಯಾ
 ಏತಞ್ಹಿ ತುಮ್ಹೇ ಪಟಿಪಜ್ಜಥ, ಮಾರಸ್ಸೇತಂ ಪಮೋಹನಂ


ಇದೊಂದೇ ಮಾರ್ಗವಿರುವುದು, ಅನ್ಯ ಯಾವುದೂ ಇಲ್ಲ,
ದರ್ಶನ ನೀಡುವಂತಹುದು, ವಿಶುದ್ಧಿ ತರುವಂತಹ
ಮಾರ್ಗದಲ್ಲಿ ನಡೆಯುವಿರಾದರೆ
ಮಾರನನ್ನೇ ಮಂಕುಮಡಬಹುದು.”       (274
೨೭೫.

ಏತಞ್ಹಿ ತುಮ್ಹೇ ಪಟಿಪನ್ನಾ, ದುಕ್ಖಸ್ಸನ್ತಂ ಕರಿಸ್ಸಥ
 ಅಕ್ಖಾತೋ ವೋ [ಅಕ್ಖಾತೋ ವೇ (ಸೀ ಪೀ)] ಮಯಾ ಮಗ್ಗೋ, ಅಞ್ಞಾಯ ಸಲ್ಲಕನ್ತನಂ [ಸಲ್ಲಸನ್ಥನಂ (ಸೀ ಪೀ), ಸಲ್ಲಸತ್ಥನಂ (ಸ್ಯಾ)]

ಮಾರ್ಗದಲ್ಲಿ ಮುಂದುವರೆದೆಯಾದರೆ
ದುಃಖಗಳ ಅಂತ್ಯ ಮಾಡುವೆ,
ದುಃಖಗಳ ಮುಳ್ಳನ್ನು (ಬಾಣವನ್ನು) ಹೇಗೆ ತೆಗೆಯಬೇಕೆಂದು
ಸಾಕ್ಷಾತ್ಕಾರವಾದ ಮೇಲೆಯೇ ನನ್ನಿಂದ
ಮಾರ್ಗವು ತಿಳಿಸಲ್ಪಟ್ಟಿದೆ.”     (275)

೨೭೬.

ತುಮ್ಹೇಹಿ ಕಿಚ್ಚಮಾತಪ್ಪಂ, ಅಕ್ಖಾತಾರೋ ತಥಾಗತಾ
 ಪಟಿಪನ್ನಾ ಪಮೋಕ್ಖನ್ತಿ, ಝಾಯಿನೋ ಮಾರಬನ್ಧನಾ

ನೀವೇ ಸ್ವತಃ ಶ್ರಮಿಸಬೇಕಾಗಿದೆ,
ತಥಾಗತರು ಕೇವಲ ಮಾರ್ಗದರ್ಶಿಗಳಾಗಿರುತ್ತಾರೆ.
ಮಾರ್ಗದಲ್ಲಿ ಮುಂದುವರೆಯುವ ಧ್ಯಾನಿಗಳು   
ಮಾರಬಂಧನಗಳಿಂದ ಪೂರ್ಣ ಮುಕ್ತರಾಗುತ್ತಾರೆ.”                (276

೨೭೭.

‘‘ಸಬ್ಬೇ ಸಙ್ಖಾರಾ ಅನಿಚ್ಚಾ’’ತಿ, ಯದಾ ಪಞ್ಞಾಯ ಪಸ್ಸತಿ
 ಅಥ ನಿಬ್ಬಿನ್ದತಿ ದುಕ್ಖೇ, ಏಸ ಮಗ್ಗೋ ವಿಸುದ್ಧಿಯಾ

ಸರ್ವ ಸಂಖಾರಗಳು ಅನಿತ್ಯವಾಗಿವೆ,
ಹೀಗೆ ಪ್ರಜ್ಞೆಯಿಂದ ಒಬ್ಬನು ನೋಡಿದಾಗ
ಆತನು ದುಃಖವೆಲ್ಲದರಿಂದ ವಿಕರ್ಷಣೆಗೆ ಒಳಗಾಗುತ್ತಾನೆ,      
ಇದೇ ವಿಶುದ್ದಿಯ ಮಾರ್ಗವಾಗಿದೆ.”        (277)

೨೭೮.

‘‘ಸಬ್ಬೇ ಸಙ್ಖಾರಾ ದುಕ್ಖಾ’’ತಿ, ಯದಾ ಪಞ್ಞಾಯ ಪಸ್ಸತಿ
 ಅಥ ನಿಬ್ಬಿನ್ದತಿ ದುಕ್ಖೇ, ಏಸ ಮಗ್ಗೋ ವಿಸುದ್ಧಿಯಾ

ಸರ್ವ ಸಂಖಾರಗಳು ದುಃಖಕರವಾಗಿವೆ,
ಹೀಗೆ ಪ್ರಜ್ಞಾದಿಂದ ದರ್ಶಿಸಿದಾಗ, ಆತನು
ದುಃಖವೆಲ್ಲದರಿಂದಾಗಿ ವಿಕರ್ಷಣೆಗೆ ಒಳಗಾಗುತ್ತಾನೆ,             
ಇದೇ ವಿಶುದ್ದಿಯ ಮಾರ್ಗವಾಗಿದೆ.”        (278)
೨೭೯.

‘‘ಸಬ್ಬೇ ಧಮ್ಮಾ ಅನತ್ತಾ’’ತಿ, ಯದಾ ಪಞ್ಞಾಯ ಪಸ್ಸತಿ
 ಅಥ ನಿಬ್ಬಿನ್ದತಿ ದುಕ್ಖೇ, ಏಸ ಮಗ್ಗೋ ವಿಸುದ್ಧಿಯಾ

ಸರ್ವ ಧಮ್ಮಗಳು (ಸ್ಥಿತಿಗಳು) ಅನಾತ್ಮವಾಗಿವೆ (ನಾನುವಿನ ರಾಹಿತ್ಯದಿಂದ ಕೂಡಿದೆ)
ಹೀಗೆ ಒಬ್ಬನು ಪ್ರಜ್ಞಾದಿಂದ ದರ್ಶಿಸಿದಾಗ
ಆತನು ದುಃಖವೆಲ್ಲದರಿಂದ ವಿಕರ್ಷಣೆಗೆ ಒಳಗಾಗುತ್ತಾನೆ.      
ಇದೇ ವಿಶುದ್ದಿಯ ಮಾರ್ಗವಾಗಿದೆ.”        (279)

೨೮೦.

ಉಟ್ಠಾನಕಾಲಮ್ಹಿ ಅನುಟ್ಠಹಾನೋ, ಯುವಾ ಬಲೀ ಆಲಸಿಯಂ ಉಪೇತೋ
 ಸಂಸನ್ನಸಙ್ಕಪ್ಪಮನೋ [ಅಸಮ್ಪನ್ನಸಙ್ಕಪ್ಪಮನೋ ()] ಕುಸೀತೋ, ಪಞ್ಞಾಯ ಮಗ್ಗಂ ಅಲಸೋ ವಿನ್ದತಿ

ಪ್ರಯತ್ನಶಾಲಿಯಾಗಬೇಕಾದ ಕಾಲದಲ್ಲಿ ಪ್ರಯತ್ನಪಡದೆ,
ಯುವಕನಾಗಿಯು, ಬಲಶಾಲಿಯಾಗಿಯು, ಆಲಸಿಯಾದರೆ,
ಅಂತಹವನು ತನ್ನ ಸಂಕಲ್ಪಗಳಲ್ಲಿ ದುರ್ಬಲನಾದರೆ, ಸೋಮಾರಿಯಾದರೆ            
ಅಂತಹ ಆಲಸಿಯು ಪ್ರಜ್ಞಾದ ಮಾರ್ಗವನ್ನು ಅರಿಯಲಾರನು.”               (280)

೨೮೧.

ವಾಚಾನುರಕ್ಖೀ ಮನಸಾ ಸುಸಂವುತೋ, ಕಾಯೇನ ನಾಕುಸಲಂ ಕಯಿರಾ [ಅಕುಸಲಂ ಕಯಿರಾ (ಸೀ ಸ್ಯಾ ಕಂ ಪೀ)]ಏತೇ ತಯೋ ಕಮ್ಮಪಥೇ ವಿಸೋಧಯೇ, ಆರಾಧಯೇ ಮಗ್ಗಮಿಸಿಪ್ಪವೇದಿತಂ

ಮಾತಿನೆಡೆ ಸದಾ ರಕ್ಷಣೆಯಿರಲಿ, ಮನಸ್ಸಿನಲ್ಲೂ ಸುಸಂಯಮಿತನಾಗು,
ಕಾಯದಿಂದ ಯಾವುದೇ ಅಕುಶಲ ಕರ್ಮವನ್ನು ಮಾಡಿದಿರು,
ಮೂರು ರೀತಿಯ ಕಮ್ಮಗಳ ಮಾರ್ಗದಲ್ಲಿ ಪರಿಶುದ್ಧನಾಗು ಮತ್ತು     
ಋಷಿಯು ತೋರಿಸಿರುವ ಮಾರ್ಗವನ್ನು ಗಳಿಸುವಂತಾಗು.”   (281)

೨೮೨.

ಯೋಗಾ ವೇ ಜಾಯತೀ [ಜಾಯತೇ (ಕತ್ಥಚಿ)] ಭೂರಿ, ಅಯೋಗಾ ಭೂರಿಸಙ್ಖಯೋ
 ಏತಂ ದ್ವೇಧಾಪಥಂ ಞತ್ವಾ, ಭವಾಯ ವಿಭವಾಯ
 ತಥಾತ್ತಾನಂ ನಿವೇಸೇಯ್ಯ, ಯಥಾ ಭೂರಿ ಪವಡ್ಢತಿ

ಧ್ಯಾನದಿಂದಲೇ ಪ್ರಜ್ಞಾವು (ಪ್ರಜ್ಞೆ / ಪಞ್ಞÁ) ಉದಯಿಸುವುದು,
ಧ್ಯಾನವಿಲ್ಲದೆ ಪ್ರಜ್ಞಾವು ಕ್ಷೀಣಿಸುವುದು,
ಅಭಿವೃದ್ಧಿಯ ಮತ್ತು ಅವನತಿಯ ಎರಡು ವಿಧದ
ಪಥಗಳನ್ನು ಗಮನಿಸಿ, ಒಬ್ಬನು ತನ್ನನ್ನು ಪ್ರಜ್ಞಾ      
ಪ್ರವರ್ಧಿಸುವತ್ತ ಸಾಗಲಿ.”       (282)

೨೮೩.

ವನಂ ಛಿನ್ದಥ ಮಾ ರುಕ್ಖಂ, ವನತೋ ಜಾಯತೇ ಭಯಂ
 ಛೇತ್ವಾ ವನಞ್ಚ ವನಥಞ್ಚ, ನಿಬ್ಬನಾ ಹೋಥ ಭಿಕ್ಖವೋ

ಕ್ಲೇಷಗಳೆಂಬ ವನವನ್ನು ಕತ್ತರಿಸು,
ಆದರೆ (ನಿಜವಾದ) ವೃಕ್ಷವನ್ನಲ್ಲ,
ವನದಿಂದಲೇ ಭಯವು ಉದಯಿಸುವುದು,
ವನದೊಂದಿಗೆ ಪೆÇದರು-ಚಿಗುರುಗಳೆಲ್ಲಾ ಕತ್ತರಿಸಿಹಾಕು,       
ಹೀಗೆ ಮಾಡಿ ನಿರ್ವನ (ವನರಹಿತ/ನಿಬ್ಬಾಣ ಪ್ರಾಪ್ತಿ)ವಾಗಿ ಭಿಕ್ಷುಗಳೇ.”              (283)

೨೮೪.

ಯಾವ ಹಿ ವನಥೋ ಛಿಜ್ಜತಿ, ಅಣುಮತ್ತೋಪಿ ನರಸ್ಸ ನಾರಿಸು
 ಪಟಿಬದ್ಧಮನೋವ [ಪಟಿಬನ್ಧಮನೋವ ()] ತಾವ ಸೋ, ವಚ್ಛೋ ಖೀರಪಕೋವ [ಖೀರಪಾನೋವ (ಪೀ)] ಮಾತರಿ

ಎಲ್ಲಿಯವರೆಗೆ ನರನು, ನಾರಿಯಲ್ಲಿನ
ಆಕರ್ಷಣೆ, ಸಣ್ಣ ಪೆÇದರು ಚಿಗುರುಗಳನ್ನು ಕತ್ತರಿಸಿ ಸವರಿಹಾಕುವಂತೆ
ಮಾಡುವುದಿಲ್ಲವೋ, ಅಲ್ಲಿಯವರೆಗೆ ಆತನ ಮನವು
ಹಾಲು ಕುಡಿಯುವ ಕರುವು ಹಸುವಿಗೆ
ಅಂಟಿಕೊಂಡಿರುವ ಹಾಗೆ ಬಂಧನದಲ್ಲೇ ಇರುತ್ತದೆ.”               (284)

೨೮೫.

ಉಚ್ಛಿನ್ದ ಸಿನೇಹಮತ್ತನೋ ಕುಮುದಂ ಸಾರದಿಕಂವ [ಪಾಣಿನಾ]
 ಸನ್ತಿಮಗ್ಗಮೇವ ಬ್ರೂಹಯ, ನಿಬ್ಬಾನಂ ಸುಗತೇನ ದೇಸಿತಂ

ತನ್ನ ಬಗ್ಗೆ ಇರುವ ಸ್ನೇಹ (ಅಂಟುವಿಕೆ)ವನ್ನು ಕಿತ್ತುಹಾಕು.
ಹೇಗೆಂದರೆ ಶರದ್ ಋತುವಿನ ಕುಮುದವನ್ನು ಬೇರುಸಹಿತ ಕೀಳುವಂತೆ
ಸುಗತರಿಂದ ಉಪದೇಶಿಸಲ್ಪಟ್ಟ ನಿಬ್ಬಾಣದ  ಶಾಂತಿ ಮಾರ್ಗವನ್ನು
ಅಭಿವೃದ್ಧಿಗೊಳಿಸು.”               (285)

೨೮೬.

ಇಧ ವಸ್ಸಂ ವಸಿಸ್ಸಾಮಿ, ಇಧ ಹೇಮನ್ತಗಿಮ್ಹಿಸು
 ಇತಿ ಬಾಲೋ ವಿಚಿನ್ತೇತಿ, ಅನ್ತರಾಯಂ ಬುಜ್ಝತಿ

ಇಲ್ಲಿ ವರ್ಷಕಾಲ (ಮಳೆಗಾಲ) ದಲ್ಲಿ ವಾಸಿಸುತ್ತೇನೆ,
ಇಲ್ಲಿ ಹೇಮಂತ ಋತುವಿನಲ್ಲಿ, ಇಲ್ಲಿ ಗ್ರೀಷ್ಮ ಋತುವಿನಲ್ಲಿ
ವಾಸಿಸುವೆ ಎಂದು ಮೂರ್ಖನು ಚಿಂತಿಸುತ್ತಾನೆ.
ಆದರೆ ತನಗೆ ಮುಂಬರುವ ಅಪಾಯದಲ್ಲಿ ಅರಿಯಲಾರದೆ ಹೋಗುತ್ತಾನೆ.”            (286

೨೮೭.

ತಂ ಪುತ್ತಪಸುಸಮ್ಮತ್ತಂ, ಬ್ಯಾಸತ್ತಮನಸಂ ನರಂ
 ಸುತ್ತಂ ಗಾಮಂ ಮಹೋಘೋವ, ಮಚ್ಚು ಆದಾಯ ಗಚ್ಛತಿ

ತನ್ನ ಪುತ್ರ, ತನ್ನ ಪಶುಸಂಪತ್ತಿಯೆಂದು
ತೀವ್ರವಾಗಿ ಆಸಕ್ತರಾಗಿ ಮತ್ತರಾಗಿರುವ ನರನನ್ನು,
ನಿದ್ರಿಸುತ್ತಿರುವ ಗ್ರಾಮಕ್ಕೆ ಮಹಾ ಪ್ರವಾಹವು
ಕೊಚ್ಚಿಕೊಂಡು ಹೋಗುವ ಹಾಗೇ ಮೃತ್ಯುವು ತೆಗೆದುಕೊಂಡುಹೋಗುತ್ತದೆ.”        (287)


೨೮೮.

ಸನ್ತಿ ಪುತ್ತಾ ತಾಣಾಯ, ಪಿತಾ ನಾಪಿ ಬನ್ಧವಾ
 ಅನ್ತಕೇನಾಧಿಪನ್ನಸ್ಸ, ನತ್ಥಿ ಞಾತೀಸು ತಾಣತಾ

ತನ್ನ ರಕ್ಷಣೆಗೆ (ನೆಲೆಗೆ) ಪುತ್ರರಾಗಲಿ,
ಪಿತನಾಗಲಿ ಅಥವಾ ಬಾಂಧವರೂ ಇಲ್ಲ
ಯಾವಾಗ ಹಂತಕನು ಆಕ್ರಮಿಸಿ ಹಿಡಿತ
ಬಿಗಿಗೊಳಿಸುವನೋ ಆಗ ರಕ್ಷಿಸಲೂ ಯಾವ ಬಂಧುವಿಗೂ ಸಾಧ್ಯವಿಲ್ಲ.”                (288)

೨೮೯.

ಏತಮತ್ಥವಸಂ ಞತ್ವಾ, ಪಣ್ಡಿತೋ ಸೀಲಸಂವುತೋ
 ನಿಬ್ಬಾನಗಮನಂ ಮಗ್ಗಂ, ಖಿಪ್ಪಮೇವ ವಿಸೋಧಯೇ

ಸತ್ಯವನ್ನು ಸ್ಪಷ್ಟವಾಗಿ ಅರಿತುಕೊಂಡು
ಪಂಡಿತನು (ಜ್ಞಾನಿಯು) ಶೀಲ ಸಂಯಮಗಳಿಂದ
ಸಂಪನ್ನನಾಗಲಿ ಹಾಗು ನಿಬ್ಬಾಣಕ್ಕೆ ಕೊಂಡೊಯ್ಯುವ ಮಾರ್ಗವನ್ನು
ವೇಗವಾಗಿ, ಸ್ವಚ್ಛವಾಗಿ ಸ್ಪಷ್ಟಗೊಳಿಸಿಕೊಳ್ಳಲಿ.”     (289)

ಮಗ್ಗವಗ್ಗೋ ವೀಸತಿಮೋ ನಿಟ್ಠಿತೋ
 ಇಲ್ಲಿಗೆ ಇಪ್ಪತ್ತುನೆಯದಾದ ಮಗ್ಗವಗ್ಗವು ಮುಗಿಯಿತು.

No comments:

Post a Comment