Wednesday 15 January 2020

ಧಮ್ಮಪದ ೯. ಪಾಪವಗ್ಗೋ


ಧಮ್ಮಪದ . ಪಾಪವಗ್ಗೋ


೧೧೬.

ಅಭಿತ್ಥರೇಥ ಕಲ್ಯಾಣೇ, ಪಾಪಾ ಚಿತ್ತಂ ನಿವಾರಯೇ
 ದನ್ಧಞ್ಹಿ ಕರೋತೋ ಪುಞ್ಞಂ, ಪಾಪಸ್ಮಿಂ ರಮತೀ ಮನೋ

ಒಳ್ಳೆಯದನ್ನು ಮಾಡಲು ಆತುರನಾಗು, ಆದರೆ ಪಾಪಚಿತ್ತವನ್ನು ಗಮನಿಸುತ್ತ ತಡೆ
ಯಾರು ಪುಣ್ಯ ಮಾಡಲು ಆಲಸಿಯಾಗುವನೋ, ಆತನ ಮನಸ್ಸು ಪಾಪದಲ್ಲಿ ರಮಿಸುವುದು.”      (116)

೧೧೭.

ಪಾಪಞ್ಚೇ ಪುರಿಸೋ ಕಯಿರಾ, ನಂ [ ತಂ (ಸೀ ಪೀ)] ಕಯಿರಾ ಪುನಪ್ಪುನಂ
  ತಮ್ಹಿ ಛನ್ದಂ ಕಯಿರಾಥ, ದುಕ್ಖೋ ಪಾಪಸ್ಸ ಉಚ್ಚಯೋ

ಒಬ್ಬನು (ಆಕಸ್ಮಿಕವಾಗಿ) ಪಾಪ ಮಾಡಿರಬಹುದು, ಆದರೆ ಅಂತಹ ಕಾರ್ಯವನ್ನೇ ಪುನಃ ಪುನಃ ಮಾಡದಿರಲಿ,
  ಅಂತಹ ಪಾಪದಲ್ಲೇ ಆನಂದಿಸದಿರಲಿ; ಏಕೆಂದರೆ ಪಾಪ ಸಂಗ್ರಹಣೆಯಿಂದಾಗಿ ದುಃಖವು ಲಭಿಸುವುದು.”                (117)

೧೧೮.

ಪುಞ್ಞಞ್ಚೇ ಪುರಿಸೋ ಕಯಿರಾ, ಕಯಿರಾ ನಂ [ಕಯಿರಾಥೇತಂ (ಸೀ ಸ್ಯಾ), ಕಯಿರಾಥೇನಂ (ಪೀ)] ಪುನಪ್ಪುನಂ
 ತಮ್ಹಿ ಛನ್ದಂ ಕಯಿರಾಥ, ಸುಖೋ ಪುಞ್ಞಸ್ಸ ಉಚ್ಚಯೋ

ಪುರುಷನು (ವ್ಯಕ್ತಿಯು) ಪುಣ್ಯವನ್ನು ಆಚರಿಸಬಹುದು, ಆತನು ಪುಣ್ಯವನ್ನು ಪುನಃ ಪುನಃ ಪುನರಾವರ್ತಿಸಲಿ
ಅಂತಹ ಪುಣ್ಯಾಚರಣೆಯಲ್ಲೇ ಆನಂದಿಸಲಿ, ಪುಣ್ಯದ ಸಂಚಯ ಸುಖಕಾರಿಯಾಗಿದೆ.             (118)

೧೧೯.

ಪಾಪೋಪಿ ಪಸ್ಸತಿ ಭದ್ರಂ, ಯಾವ ಪಾಪಂ ಪಚ್ಚತಿ
 ಯದಾ ಪಚ್ಚತಿ ಪಾಪಂ, ಅಥ ಪಾಪೋ ಪಾಪಾನಿ [ಅಥ ಪಾಪಾನಿ (?)] ಪಸ್ಸತಿ

ಎಲ್ಲಿಯವರೆಗೆ ಪಾಪಕರ್ಮವು ಫಲವನ್ನು ನೀಡುವುದಿಲ್ಲವೋ, ಪಾಪಿಯು ಅಲ್ಲಿಯವರೆಗೆ ಸುಖವಾಗಿಯೇ ಇರುವನು.
  ಆದರೆ ಯಾವಾಗ ಪಾಪಕೃತ್ಯವು ಫಲನೀಡುವುದೋ ಆಗ ಪಾಪಿಯು ಪಾಪದ ಕುಪರಿಣಾಮಗಳನ್ನು ಪಡೆಯುತ್ತಾನೆ.”         (119)

೧೨೦.

ಭದ್ರೋಪಿ ಪಸ್ಸತಿ ಪಾಪಂ, ಯಾವ ಭದ್ರಂ ಪಚ್ಚತಿ
 ಯದಾ ಪಚ್ಚತಿ ಭದ್ರಂ, ಅಥ ಭದ್ರೋ ಭದ್ರಾನಿ [ಅಥ ಭದ್ರಾನಿ (?)] ಪಸ್ಸತಿ


ಎಲ್ಲಿಯವರೆಗೆ ಪುಣ್ಯಕರ್ಮವು ಫಲ ನೀಡುವುದಿಲ್ಲವೋ ಅಲ್ಲಿಯವರೆಗೆ ಪುಣ್ಯವಂತನು ದುಃಖವನ್ನು ಅಲ್ಪಸ್ವಲ್ಪ ಪಡೆಯಬಹುದು. ಆದರೆ ಯಾವಾಗ ಪುಣ್ಯಫಲವು ಫಲ ನೀಡುವುದೋ ಆಗ ಪುಣ್ಯಶಾಲಿಯು ಪುಣ್ಯಗಳ ಸುಪರಿಣಾಮಗಳನ್ನು ಪಡೆಯುತ್ತಾನೆ.”             (120)

೧೨೧.

ಮಾವಮಞ್ಞೇಥ [ಮಾಪ್ಪಮಞ್ಞೇಥ (ಸೀ ಸ್ಯಾ ಪೀ)] ಪಾಪಸ್ಸ, ಮನ್ತಂ [ ಮಂ ತಂ (ಸೀ ಪೀ), ಮತ್ತಂ (ಸ್ಯಾ)] ಆಗಮಿಸ್ಸತಿ ಉದಬಿನ್ದುನಿಪಾತೇನ, ಉದಕುಮ್ಭೋಪಿ ಪೂರತಿ
 ಬಾಲೋ ಪೂರತಿ [ಪೂರತಿ ಬಾಲೋ (ಸೀ ), ಆಪೂರತಿ ಬಾಲೋ (ಸ್ಯಾ)] ಪಾಪಸ್ಸ, ಥೋಕಂ ಥೋಕಮ್ಪಿ [ಥೋಕ ಥೋಕಮ್ಪಿ (ಸೀ ಪೀ)] ಆಚಿನಂ

ಪಾಪವನ್ನು ರೀತಿ ಹಗುರವಾಗಿ ಪರಿಗಣಿಸದಿರಿ, ‘ಅದು ನನಗೆ ಬರಲಾರದುಎಂದು. ನೀರಿನ ಗಡಿಗೆಯು ಸಹಾ ಹನಿಗಳಿಂದ ಹೇಗೆ ತುಂಬುವುದೋ, ಹಾಗೆಯೇ ಮೂರ್ಖನು ಸಹಾ ಅಲ್ಪ ಅಲ್ಪವಾಗಿಯೇ ಪಾಪದಿಂದ ತನ್ನನ್ನು ತುಂಬಿಸಿಕೊಳ್ಳುತ್ತಾನೆ.”             (121)

೧೨೨.

ಮಾವಮಞ್ಞೇಥ ಪುಞ್ಞಸ್ಸ, ಮನ್ತಂ ಆಗಮಿಸ್ಸತಿ
 ಉದಬಿನ್ದುನಿಪಾತೇನ, ಉದಕುಮ್ಭೋಪಿ ಪೂರತಿ
 ಧೀರೋ ಪೂರತಿ ಪುಞ್ಞಸ್ಸ, ಥೋಕಂ ಥೋಕಮ್ಪಿ ಆಚಿನಂ

 ಪುಣ್ಯವನ್ನು ಕುರಿತು ಹಗುರವಾಗಿ ಎಣಿಸಬೇಡಿ, ‘ನನಗೆ ಸಿಗುವುದಿಲ್ಲಎಂದು ಯೋಚಿಸಬೇಡಿ. ಹೇಗೆ ಮಡಿಕೆಯು ಹನಿ ಹನಿ ನೀರಿನಿಂದ ತುಂಬುವುದೋ ಹಾಗೆಯೇ ಜ್ಞಾನಿಯು ಸಹಾ ಸ್ವಲ್ಪ ಸ್ವಲ್ಪವಾಗಿಯೇ ಪುಣ್ಯವನ್ನು ಸಂಗ್ರಹಿಸುತ್ತಾನೆ.”     (122)


೧೨೩.

ವಾಣಿಜೋವ ಭಯಂ ಮಗ್ಗಂ, ಅಪ್ಪಸತ್ಥೋ ಮಹದ್ಧನೋ
 ವಿಸಂ ಜೀವಿತುಕಾಮೋವ, ಪಾಪಾನಿ ಪರಿವಜ್ಜಯೇ

ಹೇಗೆ ಅಪಾರ ಶಸ್ತ್ರಾಸ್ತ್ರಧಾರಿಯಾಗಿಯು, ಧನವಂತನು ಆಗಿರುವ ವಾಣಿಜನು (ವ್ಯಾಪಾರಿಯು) ಭಯಪೂರಿತ ಮಾರ್ಗದಲ್ಲಿ ಹೋಗುವುದಿಲ್ಲವೋ ಮತ್ತು ಜೀವಿಸಲು ಇಚ್ಛಿಸುವವನು ಹೇಗೆ ವಿಷವನ್ನು ಬಳಸುವುದಿಲ್ಲವೋ ಹಾಗೆಯೇ ಪಾಪವನ್ನು ಪರಿವರ್ಜಿಸಿರಿ.”    (123)

೧೨೪.

ಪಾಣಿಮ್ಹಿ ಚೇ ವಣೋ ನಾಸ್ಸ, ಹರೇಯ್ಯ ಪಾಣಿನಾ ವಿಸಂ
 ನಾಬ್ಬಣಂ ವಿಸಮನ್ವೇತಿ, ನತ್ಥಿ ಪಾಪಂ ಅಕುಬ್ಬತೋ

ಹೇಗೆ ಅಂಗೈಯಲ್ಲಿ ಗಾಯವಿಲ್ಲದಿದ್ದರೆ ಒಬ್ಬನು ವಿಷವನ್ನು ತೆಗೆದುಕೊಂಡು ಹೋಗಬಹುದೋ,
  ಹಾಗೆಯೇ ಪಾಪ (ಪಾಪಿಚ್ಛೆ) ಇಲ್ಲದವನಿಗೆ ಕೇಡಿಲ್ಲ.”                (124)

೧೨೫.

ಯೋ ಅಪ್ಪದುಟ್ಠಸ್ಸ ನರಸ್ಸ ದುಸ್ಸತಿ, ಸುದ್ಧಸ್ಸ ಪೋಸಸ್ಸ ಅನಙ್ಗಣಸ್ಸ
 ತಮೇವ ಬಾಲಂ ಪಚ್ಚೇತಿ ಪಾಪಂ, ಸುಖುಮೋ ರಜೋ ಪಟಿವಾತಂವ ಖಿತ್ತೋ

ಹೇಗೆ ಎದುರು ಗಾಳಿಗೆ ಎಸೆದ ಕಸದ ಧೂಳು ತಿರುಗಿ ಬೀಳುವುದೋ ಹಾಗೆಯೇ ನಿರಪರಾಧಿಯಾದ, ಪರಿಶುದ್ಧನಾದ ಮತ್ತು ಕುಂದಿಲ್ಲದವನ ಮೇಲೆ ಮೂರ್ಖನು ಎಸಗಿದ ಪಾಪವು ಅವನ ಮೇಲೆಯೇ ಎರಗಿಬೀಳುತ್ತದೆ.”   (125)

೧೨೬.

ಗಬ್ಭಮೇಕೇ ಉಪ್ಪಜ್ಜನ್ತಿ, ನಿರಯಂ ಪಾಪಕಮ್ಮಿನೋ
 ಸಗ್ಗಂ ಸುಗತಿನೋ ಯನ್ತಿ, ಪರಿನಿಬ್ಬನ್ತಿ ಅನಾಸವಾ

ಕೆಲವರು ಗರ್ಭದಲ್ಲಿ ಜನಿಸುವರು, ಪಾಪಕರ್ಮಿಗಳು ನಿರಯದಲ್ಲಿ ಹೊರಟರೆ ಪುಣ್ಯಶಾಲಿಗಳು ಸುಗತಿ ಪಡೆಯುವರು,
  ಆದರೆ ಆಸವರಹಿತರು ಪರಿನಿಬ್ಬಾಣ ಸಾಧಿಸುವರು.”   (126)

೧೨೭.

ಅನ್ತಲಿಕ್ಖೇ ಸಮುದ್ದಮಜ್ಝೇ, ಪಬ್ಬತಾನಂ ವಿವರಂ ಪವಿಸ್ಸ [ಪವಿಸಂ (ಸ್ಯಾ)]
  ವಿಜ್ಜತೀ [ ವಿಜ್ಜತಿ ( ಸೀ ಪೀ )] ಸೋ ಜಗತಿಪ್ಪದೇಸೋ, ಯತ್ಥಟ್ಠಿತೋ [ಯತ್ರಟ್ಠಿತೋ (ಸ್ಯಾ)] ಮುಚ್ಚೇಯ್ಯ ಪಾಪಕಮ್ಮಾ

ಆಕಾಶದಲ್ಲಿಯಾಗಲಿ, ಸಮುದ್ರದಲ್ಲಾಗಲಿ, ಪರ್ವತದ ಗವಿಗಳಲ್ಲಾಗಲಿ,
  ಇಡೀ ಪೃಥ್ವಿಯಲ್ಲಿ ಎಲ್ಲಿಯೂ ಸಹಾ ಒಬ್ಬನು ಕರ್ಮಫಲದಿಂದ ತಪ್ಪಿಸಿ ಕೊಳ್ಳಲಾಗುವುದಿಲ್ಲ.”              (127)

೧೨೮.

ಅನ್ತಲಿಕ್ಖೇ ಸಮುದ್ದಮಜ್ಝೇ, ಪಬ್ಬತಾನಂ ವಿವರಂ ಪವಿಸ್ಸ
  ವಿಜ್ಜತೀ ಸೋ ಜಗತಿಪ್ಪದೇಸೋ, ಯತ್ಥಟ್ಠಿತಂ [ಯತ್ರಟ್ಠಿತಂ (ಸ್ಯಾ)] ನಪ್ಪಸಹೇಯ್ಯ ಮಚ್ಚು

ಅಂತರಿಕ್ಷದಲ್ಲಿಯಾಗಲಿ, ಸಮುದ್ರದ ಮಧ್ಯೆಯಾಗಲಿ ಪರ್ವತದ ಗವಿಗಳಲ್ಲಾಗಲಿ
ಭೂಮಿಯಲ್ಲಿ ಸಾವಿನಿಂದ ಪಾರಾಗಲು ಸ್ಥಳವೇ ಇಲ್ಲ.”   (128)

ಪಾಪವಗ್ಗೋ ನವಮೋ ನಿಟ್ಠಿತೋ
ಒಂಬತ್ತುನೆಯದಾದ ಪಾಪ ವರ್ಗವು ಇಲ್ಲಿಗೆ ಮುಗಿಯಿತು.

No comments:

Post a Comment