Saturday 18 January 2020

ಧಮ್ಮಪದ ೧೯. ಧಮ್ಮಟ್ಠವಗ್ಗೋ


ಧಮ್ಮಪದ.

 ೧೯. ಧಮ್ಮಟ್ಠವಗ್ಗೋ


೨೫೬.

ತೇನ ಹೋತಿ ಧಮ್ಮಟ್ಠೋ, ಯೇನತ್ಥಂ ಸಾಹಸಾ [ಸಹಸಾ (ಸೀ ಸ್ಯಾ )] ನಯೇ
 ಯೋ ಅತ್ಥಂ ಅನತ್ಥಞ್ಚ, ಉಭೋ ನಿಚ್ಛೇಯ್ಯ ಪಣ್ಡಿತೋ

ಯಾರು ಇಚ್ಛಾನುಸಾರಿಯಾಗಿ (ನಿರಂಕುಶತ್ವದಿಂದ)
ನಿರ್ಣಯಗಳನ್ನು ನೀಡುವನೋ ಆತನು ಧರ್ಮಿಷ್ಠನಲ್ಲ,
ಯಾರು ಅರ್ಥ ಮತ್ತು ಅನರ್ಥಗಳನ್ನು (ಒಳಿತು-ಕೆಡುಕು / ಸರಿ-ತಪ್ಪು)
ಪರೀಕ್ಷಿಸಿ ಧರ್ಮಾನುಸಾರವಾಗಿ ತೀರ್ಮಾನಿಸುವನೋ
ಆತನೇ ಪಂಡಿತನಾಗಿದ್ದಾನೆ.” (256)

೨೫೭.

ಅಸಾಹಸೇನ ಧಮ್ಮೇನ, ಸಮೇನ ನಯತೀ ಪರೇ
 ಧಮ್ಮಸ್ಸ ಗುತ್ತೋ ಮೇಧಾವೀ, ‘‘ಧಮ್ಮಟ್ಠೋ’’ತಿ ಪವುಚ್ಚತಿ

ಯಾರು ನಿರಂಕುಶತ್ವದಿಂದ, ಪಕ್ಷಪಾತದಿಂದ
ನಿರ್ಣಯ ನೀಡದೆ, ಧರ್ಮಾನುಸಾರವಾಗಿ
ನ್ಯಾಯಾನುಸಾರವಾಗಿ ನಿರ್ಣಯಗಳನ್ನು
ನೀಡುವನೋ ಅಂತಹವನೇ ಧರ್ಮರಕ್ಷಕ
ಧರ್ಮಾರ್ಥಿಧರ್ಮಿಷ್ಠಎನಿಸಿಕೊಳ್ಳುತ್ತಾನೆ.”          (257)

೨೫೮.

ತೇನ ಪಣ್ಡಿತೋ ಹೋತಿ, ಯಾವತಾ ಬಹು ಭಾಸತಿ
 ಖೇಮೀ ಅವೇರೀ ಅಭಯೋ, ‘‘ಪಣ್ಡಿತೋ’’ತಿ ಪವುಚ್ಚತಿ

ಬಹುವಾಗಿ ಮಾತನಾಡಿದ ಮಾತ್ರಕ್ಕೆ ಪಂಡಿತನಾಗುವುದಿಲ್ಲ,
ಕ್ಷೇಮಿಯು (ಮನಸ್ಸಿನ ಶಾಂತತೆಯ ರಕ್ಷಿಸಿದವನು)
ವೈರರಹಿತನೂ, ಭಯರಹಿತನೂ (ಅಭಯನು)
ಪಂಡಿತನೆಂದು ಕರೆಯಲ್ಪಡುತ್ತಾನೆ.”      (258)

೨೫೯.

ತಾವತಾ ಧಮ್ಮಧರೋ, ಯಾವತಾ ಬಹು ಭಾಸತಿ
 ಯೋ ಅಪ್ಪಮ್ಪಿ ಸುತ್ವಾನ, ಧಮ್ಮಂ ಕಾಯೇನ ಪಸ್ಸತಿ
ವೇ ಧಮ್ಮಧರೋ ಹೋತಿ, ಯೋ ಧಮ್ಮಂ ನಪ್ಪಮಜ್ಜತಿ

ಒಬ್ಬನು ಬಹುವಾಗಿ ಭಾಷ್ಯಕಾರನಾದ ಮಾತ್ರಕ್ಕೆ
ಧಮ್ಮಧರನಾಗುವುದಿಲ್ಲ (ಧರ್ಮಜ್ಞ),
ಯಾರು ಧಮ್ಮವನ್ನು ಅಲ್ಪವಾಗಿಯೇ
ಶ್ರೋತಿಸಿದ್ದರೂ (ಕೇಳಿದ್ದರು) ಧಮ್ಮವನ್ನು
ಕಾಯದಲ್ಲಿ ಪಾಲಿಸುವಾತನೇ ಅಂತಹ
ಸಂಶಯದಾಟಿದವನು ಧಮ್ಮಧರನಾಗುತ್ತಾನೆ,
ಧಮ್ಮ ಜಾಗೃತನಾಗುತ್ತಾನೆ.” (259)

೨೬೦.

ತೇನ ಥೇರೋ ಸೋ ಹೋತಿ [ಥೇರೋ ಹೋತಿ (ಸೀ ಸ್ಯಾ)], ಯೇನಸ್ಸ ಪಲಿತಂ ಸಿರೋ
 ಪರಿಪಕ್ಕೋ ವಯೋ ತಸ್ಸ, ‘‘ಮೋಘಜಿಣ್ಣೋ’’ತಿ ವುಚ್ಚತಿ

ಶಿರವು (ತಲೆಯು) ಬೆಳ್ಳಗಾದ ಮಾತ್ರಕ್ಕೆ
ಥೇರನಾಗುವುದಿಲ್ಲ (ಹಿರಿಯ)
ಆತನು ವಯಸ್ಸಿನಲ್ಲಿ ಪರಿಪಕ್ವನಷ್ಟೇ,
ಆತನು ವ್ಯರ್ಥವಾಗಿ ವೃದ್ಧಿ ಹೊಂದಿದ ವೃದ್ಧನಷ್ಟೇ.” (260)
೨೬೧.

ಯಮ್ಹಿ ಸಚ್ಚಞ್ಚ ಧಮ್ಮೋ , ಅಹಿಂಸಾ ಸಂಯಮೋ ದಮೋ
  ವೇ ವನ್ತಮಲೋ ಧೀರೋ, ‘‘ಥೇರೋ’’ ಇತಿ [ಸೋ ಥೇರೋತಿ (ಸ್ಯಾ )] ಪವುಚ್ಚತಿ

ಯಾರಲ್ಲಿ ಸತ್ಯಸಂಧತೆ, ಧಮ್ಮಸಂಪನ್ನತೆ
ಅಹಿಂಸೆ, ಸಂಯಮ ಇದೆಯೋ
ತಮ್ಮನ್ನು ಧಮಿಸಿಕೊಂಡಿರುವರೋ ಹಾಗು
ಮಲಗಳಿಂದ ಮುಕ್ತರೋ, ಧೀಮಂತರೋ,
ಅಂತಹವರನ್ನು ಥೇರರೆಂದು ಕರೆಯಬಹುದು.”       (261)

೨೬೨.

ವಾಕ್ಕರಣಮತ್ತೇನ, ವಣ್ಣಪೋಕ್ಖರತಾಯ ವಾ
 ಸಾಧುರೂಪೋ ನರೋ ಹೋತಿ, ಇಸ್ಸುಕೀ ಮಚ್ಛರೀ ಸಠೋ

ಚಾತುರ್ಯಯುತ ವ್ಯಾಕರಣಬದ್ಧ ಮಾತಿನಿಂದಾಗಲಿ,
ಸುವರ್ಣ ಸುಂದರಕಾಯದಿಂದಾಗಲಿ ಒಬ್ಬನನ್ನು
ಸಹೃದಯ ಸುರೂಪಿ ಎನ್ನಲಾಗದು, ಏಕೆಂದರೆ
ಆತನಲ್ಲಿ ಈರ್ಷೆ, ಸ್ವಾರ್ಥ ಹಾಗು ವಂಚಕತನವಿದ್ದರೆ
ಆತನನ್ನು ಸಾಧು ರೂಪ ಎನ್ನಲಾಗದು.”  (262)

೨೬೩.

ಯಸ್ಸ ಚೇತಂ ಸಮುಚ್ಛಿನ್ನಂ, ಮೂಲಘಚ್ಚಂ ಸಮೂಹತಂ
  ವನ್ತದೋಸೋ ಮೇಧಾವೀ, ‘‘ಸಾಧುರೂಪೋ’’ತಿ ವುಚ್ಚತಿ

ಆದರೆ ಯಾರಲ್ಲಿ ಇವೆಲ್ಲಾ ಕತ್ತರಿಸಲ್ಪಟ್ಟಿವೆಯೋ
ಬೇರುಸಹಿತ ಕೀಳಲ್ಪಟ್ಟಿವೆಯೋ, ಪೂರ್ಣ ನಾಶವಾಗಿವೆಯೋ
ಯಾರಲ್ಲಿ ದ್ವೇಷವೇ ಇಲ್ಲವೋ ಅಂತಹ ಮೇಧಾವಿಗೆ ಮಾತ್ರ
ಸಾಧು ರೂಪ (ಸುರೂಪಿ) ಎನ್ನಬಹುದು.” (263)

೨೬೪.

ಮುಣ್ಡಕೇನ ಸಮಣೋ, ಅಬ್ಬತೋ ಅಲಿಕಂ ಭಣಂ
 ಇಚ್ಛಾಲೋಭಸಮಾಪನ್ನೋ, ಸಮಣೋ ಕಿಂ ಭವಿಸ್ಸತಿ

ತಲೆ ಮುಂಡನವಾದ ಮಾತ್ರಕ್ಕೆ ಸಮಣನಾಗುವುದಿಲ್ಲ,
ಅಶಿಸ್ತಿನಿಂದ, ಸುಳ್ಳಿನಿಂದ ಕೂಡಿದವರೂ
ಲೋಭಗಳ ಇಚ್ಛೆಗಳಿಂದ ಕೂಡಿರುವವರೂ
ಹೇಗೆ ತಾನೇ ಸಮಣರಾಗುವರು.”         (264)

೨೬೫.

ಯೋ ಸಮೇತಿ ಪಾಪಾನಿ, ಅಣುಂ ಥೂಲಾನಿ ಸಬ್ಬಸೋ
 ಸಮಿತತ್ತಾ ಹಿ ಪಾಪಾನಂ, ‘‘ಸಮಣೋ’’ತಿ ಪವುಚ್ಚತಿ

ಯಾರು ಅಣುವಿನಷ್ಟು ಅಥವಾ ಸ್ಥೂಲವಾದ
ಸರ್ವರೀತಿಯ ಪಾಪಗಳನ್ನು ದಮಿಸಿರುವರೋ
ಪಾಪಗಳೆಲ್ಲದರಿಂದ ಜಯಶಾಲಿಯಾದ ಆತನೇ
ಸಮಣನೆಂದು ಕರೆಯಲ್ಪಡುವನು.”         (265)

೨೬೬.

ತೇನ ಭಿಕ್ಖು ಸೋ ಹೋತಿ, ಯಾವತಾ ಭಿಕ್ಖತೇ ಪರೇ
 ವಿಸ್ಸಂ ಧಮ್ಮಂ ಸಮಾದಾಯ, ಭಿಕ್ಖು ಹೋತಿ ತಾವತಾ

ಪರರು ನೀಡುವ ಆಹಾರದಿಂದ
ಜೀವಿಸಿದ ಮಾತ್ರಕ್ಕೆ ಭಿಕ್ಷುವಾಗುವುದಿಲ್ಲ,
ವಿಷಧಮ್ಮವನ್ನು (ದುರಾಚಾರದ ಧಮ್ಮವನ್ನು)
ಅಪ್ಪದವರು, ಇಡೀ ಭಿಕ್ಷು ಶೀಲವನ್ನು       
ಪಾಲಿಸುವವರೇ ಭಿಕ್ಷುಗಳಾಗುತ್ತಾರೆ.”    (266)

೨೬೭.

ಯೋಧ ಪುಞ್ಞಞ್ಚ ಪಾಪಞ್ಚ, ಬಾಹೇತ್ವಾ ಬ್ರಹ್ಮಚರಿಯವಾ [ಬ್ರಹ್ಮಚರಿಯಂ ()]
 ಸಙ್ಖಾಯ ಲೋಕೇ ಚರತಿ, ವೇ ‘‘ಭಿಕ್ಖೂ’’ತಿ ವುಚ್ಚತಿ

ಯಾರು ಪುಣ್ಯವನ್ನು ಹಾಗು ಪಾಪವನ್ನು
ಮೀರಿರುವರೋ, ಬ್ರಹ್ಮಚರ್ಯೆಯುತ ಶ್ರೇಷ್ಠ
ಜೀವನ ಪಾಲಿಸಿರುವರೋ, ಲೋಕದಲ್ಲಿ
ಪ್ರಾಜ್ಞಯುತವಾಗಿ ಚಿಂತಿಸಿ ಜೀವಿಸುವರೋ
ಅಂತಹವರನ್ನು ಭಿಕ್ಷು ಎನ್ನುವರು.”          (267)

೨೬೮.

ಮೋನೇನ ಮುನೀ ಹೋತಿ, ಮೂಳ್ಹರೂಪೋ ಅವಿದ್ದಸು
 ಯೋ ತುಲಂವ ಪಗ್ಗಯ್ಹ, ವರಮಾದಾಯ ಪಣ್ಡಿತೋ

ಕೇವಲ ಮೌನಿಯಾಗಿರುವುದರಿಂದಲೇ
ಮೂರ್ಖನು ಮತ್ತು ಗೊಂದಲದಲ್ಲಿರುವವನು ಮುನಿಯಾಗಿಬಿಡುವುದಿಲ್ಲ,
ಬದಲಾಗಿ, ತುಲವನ್ನು ಹಿಡಿದು ತೂಗಿ
ಶ್ರೇಷ್ಠತೆಯನ್ನು ಗ್ರಹಿಸಿ, ಸ್ವೀಕರಿಸಿ, ಪಾಪವನ್ನು
ವರ್ಜಿಸುವವನೇ ಪಂಡಿತನಾಗಿರುತ್ತಾನೆ.”               (268)

೨೬೯.

ಪಾಪಾನಿ ಪರಿವಜ್ಜೇತಿ, ಮುನೀ ತೇನ ಸೋ ಮುನಿ
 ಯೋ ಮುನಾತಿ ಉಭೋ ಲೋಕೇ, ‘‘ಮುನಿ’’ ತೇನ ಪವುಚ್ಚತಿ

ಪಾಪವನ್ನು ಪೂರ್ಣವಾಗಿ ಪರಿತ್ಯಜಿಸುವಂತಹ
ಮುನಿಯೇ ಮುನಿಯಾಗಿರುತ್ತಾನೆ.
ಯಾವ ಮುನಿಯು ಉಭಯ ಲೋಕಗಳನ್ನು
ಅರಿಯುತ್ತಾನೋ, ಅಂತಹವ ಮುನಿಯೆಂದು ಕರೆಯಲ್ಪಡುತ್ತಾನೆ.”        (269)

೨೭೦.

ತೇನ ಅರಿಯೋ ಹೋತಿ, ಯೇನ ಪಾಣಾನಿ ಹಿಂಸತಿ
 ಅಹಿಂಸಾ ಸಬ್ಬಪಾಣಾನಂ, ‘‘ಅರಿಯೋ’’ತಿ ಪವುಚ್ಚತಿ

ಪ್ರಾಣಿಗಳನ್ನು ಹಿಂಸಿಸುವವನು ಆರ್ಯನಲ್ಲ,
ಸರ್ವ ಪ್ರಾಣಿಗಳೊಂದಿಗೆ ಅಹಿಂಸೆಯಲ್ಲಿರುವವನೇ
ಶ್ರೇಷ್ಠನೆಂದು (ಆರ್ಯನೆಂದು) ಕರೆಯಲ್ಪಡುತ್ತಾನೆ.”         (270)

೨೭೧.

ಸೀಲಬ್ಬತಮತ್ತೇನ, ಬಾಹುಸಚ್ಚೇನ ವಾ ಪನ
 ಅಥ ವಾ ಸಮಾಧಿಲಾಭೇನ, ವಿವಿತ್ತಸಯನೇನ ವಾ

ಕೇವಲ ಶೀಲಾಚರಣೆಗಳಿಂದಾಗಲಿ ಅಥವಾ
ಅಪಾರ ಕಲಿಕೆಯಿಂದಾಗಲಿ ಅಥವಾ
ಸಮಾಧಿ ಲಾಭಗಳಿಂದಾಗಲಿ ಅಥವಾ     
ಏಕಾಂತ ಜೀವನದಿಂದಾಗಲಿ             (271)

೨೭೨.

ಫುಸಾಮಿ ನೇಕ್ಖಮ್ಮಸುಖಂ, ಅಪುಥುಜ್ಜನಸೇವಿತಂ
 ಭಿಕ್ಖು ವಿಸ್ಸಾಸಮಾಪಾದಿ, ಅಪ್ಪತ್ತೋ ಆಸವಕ್ಖಯಂ

ಅಥವಾ ಅಲೌಕಿಕರು ಅನುಭವಿಸುವ
ತ್ಯಾಗದ ಸುಖಗಳಿಂದ ನಾನು
ಆವೃತನಾಗಿರುವೆ ಎಂದಾಗಲಿ ನೀವು
ಭಿಕ್ಷುಗಳೇ ತೃಪ್ತರಾಗದಿರಿ. ಆಸವಕ್ಷಯದ
(ಕ್ಲೇಷಗಳ ಕ್ಷಯ/ನಿಬ್ಬಾಣ) ಪ್ರಾಪ್ತಿಯ ಹೊರತು ತೃಪ್ತರಾಗದಿರಿ.
(ಶ್ರದ್ಧೆ ಮತ್ತು ಶ್ರಮಗಳನ್ನು ನಿಲ್ಲಿಸದಿರಿ).” (272)

ಧಮ್ಮಟ್ಠವಗ್ಗೋ ಏಕೂನವೀಸತಿಮೋ ನಿಟ್ಠಿತೋ
ಇಲ್ಲಿಗೆ ಹತ್ತೊಂಬತ್ತುನೆಯದಾದ ಧಮ್ಮಟ್ಠವಗ್ಗವು ಮುಗಿಯಿತು


No comments:

Post a Comment