ಧಮ್ಮಪದ
ಕನ್ನಡ ಅನುವಾದ : ಅನೀಶ್ ಬೋಧ್
(ಇವರ ಧಮ್ಮಪದ ಗಾಥಾಪ್ರಸಂಗಗಳು ಗ್ರಂಥದಿಂದ
ಆರಿಸಲಾಗಿದೆ)
೧. ಯಮಕವಗ್ಗೋ
೧.
ಮನೋಪುಬ್ಬಙ್ಗಮಾ
ಧಮ್ಮಾ, ಮನೋಸೇಟ್ಠಾ ಮನೋಮಯಾ।
ಮನಸಾ ಚೇ ಪದುಟ್ಠೇನ,
ಭಾಸತಿ ವಾ ಕರೋತಿ
ವಾ।
ತತೋ ನಂ ದುಕ್ಖಮನ್ವೇತಿ,
ಚಕ್ಕಂವ ವಹತೋ ಪದಂ॥
“ಮನಸ್ಸು
ಎಲ್ಲಾ (ಅಕುಶಲ) ಸ್ಥಿತಿಗಳಿಗೆ ಮುಂದಾಳಾಗಿದೆ.
ಮನಸ್ಸೇ ನಾಯಕವಾಗಿದೆ.
ಮನಸ್ಸಿನಿಂದಲೇ ಅವೆಲ್ಲವೂ ನಿರ್ಮಿತವಾಗಿದೆ.
ಒಬ್ಬನು
ಪ್ರದುಷ್ಟ ಮನಸ್ಸಿನಿಂದ ಮಾತನಾಡಿದರೆ ಅಥವಾ ಕಾರ್ಯ
ಮಾಡಿದರೆ
ಆತನಿಗೆ ದುಃಖವು ಎತ್ತಿನ
ಬಂಡಿಯಲ್ಲಿ ಎತ್ತಿನ ಕಾಲನ್ನು ಹಿಂಬಾಲಿಸುವ
ಚಕ್ರದಂತೆ ಹಿಂಬಾಲಿಸುತ್ತದೆ”. (1)
೨.
ಮನೋಪುಬ್ಬಙ್ಗಮಾ
ಧಮ್ಮಾ, ಮನೋಸೇಟ್ಠಾ ಮನೋಮಯಾ।
ಮನಸಾ ಚೇ ಪಸನ್ನೇನ,
ಭಾಸತಿ ವಾ ಕರೋತಿ
ವಾ।
ತತೋ ನಂ ಸುಖಮನ್ವೇತಿ,
ಛಾಯಾವ ಅನಪಾಯಿನೀ [ಅನುಪಾಯಿನೀ (ಕ॰)]॥
“ಮನಸ್ಸು
ಎಲ್ಲಾ (ಕುಶಲ) ಸ್ಥಿತಿಗಳಿಗೆ ಮುಂದಾಳಾಗಿದೆ.
ಮನಸ್ಸೇ ನಾಯಕವಾಗಿದೆ.
ಮನಸ್ಸಿನಿಂದಲೇ ಅವೆಲ್ಲವೂ ನಿರ್ಮಿತವಾಗಿದೆ.
ಒಬ್ಬನು
ಪರಿಶುದ್ಧ ಮನಸ್ಸಿನಿಂದ ಮಾತನಾಡಿದರೆ ಅಥವಾ ಕಾರ್ಯ
ಮಾಡಿದರೆ
ಆತನಿಗೆ ಸುಖವು ಎಂದೆಂದಿಗೂ
ಹಿಂಬಾಲಿಸುವ ನೆರಳಿನಂತೆ ಹಿಂಬಾಲಿಸುತ್ತದೆ”. (2)
೩.
ಅಕ್ಕೋಚ್ಛಿ
ಮಂ ಅವಧಿ ಮಂ,
ಅಜಿನಿ [ಅಜಿನೀ (?)] ಮಂ ಅಹಾಸಿ
ಮೇ।
ಯೇ ಚ ತಂ
ಉಪನಯ್ಹನ್ತಿ, ವೇರಂ ತೇಸಂ ನ
ಸಮ್ಮತಿ॥
“ನನಗೆ
ಬೈದನು, ನನಗೆ ಹೊಡೆದನು, ನನಗೆ
ಸೋಲಿಸಿದನು,
ನನ್ನಿಂದ ಕಸಿದುಕೊಂಡನು” ಎಂದು ಇಂತಹ ಯೋಚನೆಗಳಿಂದ
ಕೂಡಿರುವವನ ವೈರವು ಶಮನವಾಗದು”. (3)
೪.
ಅಕ್ಕೋಚ್ಛಿ
ಮಂ ಅವಧಿ ಮಂ,
ಅಜಿನಿ ಮಂ ಅಹಾಸಿ
ಮೇ।
ಯೇ ಚ ತಂ
ನುಪನಯ್ಹನ್ತಿ, ವೇರಂ ತೇಸೂಪಸಮ್ಮತಿ॥
“ನನಗೆ
ಬೈದನು, ನನಗೆ ಹೊಡೆದನು, ನನಗೆ
ಸೋಲಿಸಿದನು,
ನನ್ನಿಂದ ಕಸಿದುಕೊಂಡನು” ಎಂದು ಯಾರು ಇಂತಹ
ಯೋಚನೆಗಳಿಂದ ಕೂಡಿರುವುದಿಲ್ಲವೋ
ಅಂತಹವರ ವೈರವು ಶಮನವಾಗುತ್ತದೆ”. (4)
೫.
ನ ಹಿ ವೇರೇನ
ವೇರಾನಿ, ಸಮ್ಮನ್ತೀಧ ಕುದಾಚನಂ।
ಅವೇರೇನ ಚ ಸಮ್ಮನ್ತಿ,
ಏಸ ಧಮ್ಮೋ ಸನನ್ತನೋ॥
“ವೈರದಿಂದ
ವೈರ‍್ಯವು ಈ
ಜಗತ್ತಿನಲ್ಲಿ ಎಂದೂ ಶಮನವಾಗುವುದಿಲ್ಲ
. ಅವೈರದಿಂದ
(ಪ್ರೀತಿಯಿಂದ) ಮಾತ್ರ ಶಮನವಾಗುತ್ತದೆ.
ಇದೇ
ಸನಾತನ ಧಮ್ಮವಾಗಿದೆ”
೬.
ಪರೇ ಚ ನ
ವಿಜಾನನ್ತಿ, ಮಯಮೇತ್ಥ ಯಮಾಮಸೇ।
ಯೇ ಚ ತತ್ಥ
ವಿಜಾನನ್ತಿ, ತತೋ ಸಮ್ಮನ್ತಿ ಮೇಧಗಾ॥
“ಪರರು
ತಾವು ಸಾವಿನ ವಶವಾಗುತ್ತೇವೆ ಎಂದು
ಅರಿತಿಲ್ಲ.
ಯಾರು ಇದನ್ನು ಅರಿತಿರುವರೋ
ಅವರ ಜಗಳಗಳು ಶಮನಗೊಳ್ಳುತ್ತವೆ” (6)
೭.
ಸುಭಾನುಪಸ್ಸಿಂ
ವಿಹರನ್ತಂ, ಇನ್ದ್ರಿಯೇಸು ಅಸಂವುತಂ।
ಭೋಜನಮ್ಹಿ
ಚಾಮತ್ತಞ್ಞುಂ, ಕುಸೀತಂ ಹೀನವೀರಿಯಂ।
ತಂ ವೇ ಪಸಹತಿ
ಮಾರೋ, ವಾತೋ ರುಕ್ಖಂವ ದುಬ್ಬಲಂ॥
“ಸುಂದರ
ಸುಖಕರ ಎಂದು ಚಿಂತಿಸುತ್ತ ಜೀವಿಸುವವನನ್ನು
ಇಂದ್ರೀಯಗಳಲ್ಲಿ ಸಂಯಮಿಯಲ್ಲದವನನ್ನು, ಭೋಜನದಲ್ಲಿ ಮಿತವಿಲ್ಲದವನನ್ನು,
ಆಲಸಿಯನ್ನು,
ಹೀನವೀರ್ಯನನ್ನು, ಮಾರನು ದುರ್ಬಲವಾದ
ಮರವನ್ನು
ವಾಯುವು ಉರುಳಿಸುವಂತೆ ವಶಪಡಿಸಿಕೊಳ್ಳುವನು”. (7)
೮.
ಅಸುಭಾನುಪಸ್ಸಿಂ
ವಿಹರನ್ತಂ, ಇನ್ದ್ರಿಯೇಸು ಸುಸಂವುತಂ।
ಭೋಜನಮ್ಹಿ
ಚ ಮತ್ತಞ್ಞುಂ, ಸದ್ಧಂ
ಆರದ್ಧವೀರಿಯಂ।
ತಂ ವೇ ನಪ್ಪಸಹತಿ
ಮಾರೋ, ವಾತೋ ಸೇಲಂವ ಪಬ್ಬತಂ॥
“ಅಶುಭ
ಧ್ಯಾನದಲ್ಲಿ ವಿಹರಿಸುವವನ್ನು, ಇಂದ್ರಯ ಸಂಯಮಿಯನ್ನು,
ಭೋಜನದಲ್ಲಿ
ಮಿತಿಯಿರುವವನನ್ನು, ಪೂರ್ಣ ಶ್ರದ್ಧೆಯಿರುವವನನ್ನು
ಅಪಾರ
ಯತ್ನಶೀಲನನ್ನು, ಅಂತಹವನನ್ನು ಪರ್ವತದಂತಹ ಹೆಬ್ಬಂಡೆಯನ್ನು ವಾಯುವು
ಏನೂ ಮಾಡಲಾರದಂತೆ ಮಾರನು
ವಶಪಡಿಸಿಕೊಳ್ಳಲಾರನು”. (8)
೯.
ಅನಿಕ್ಕಸಾವೋ
ಕಾಸಾವಂ, ಯೋ ವತ್ಥಂ
ಪರಿದಹಿಸ್ಸತಿ।
ಅಪೇತೋ ದಮಸಚ್ಚೇನ, ನ ಸೋ
ಕಾಸಾವಮರಹತಿ॥
“ಯಾರು
ಕಶ್ಮಲಗಳಿಂದ ಕೂಡಿರುವರೊ, ಧಮ್ಮ ಮತ್ತು ಸತ್ಯರಹಿತರೋ
ಅವರು ಕಾಷಾಯವಸ್ತ್ರ ಧರಿಸಿದರೂ ಅನರ್ಹರಾಗಿದ್ದಾರೆ” (9)
೧೦.
ಯೋ ಚ ವನ್ತಕಸಾವಸ್ಸ,
ಸೀಲೇಸು ಸುಸಮಾಹಿತೋ।
ಉಪೇತೋ ದಮಸಚ್ಚೇನ, ಸ ವೇ
ಕಾಸಾವಮರಹತಿ॥
“ಯಾರು
ಕಶ್ಮಲಗಳಿಂದ ಮುಕ್ತರೋ, ಶೀಲವಂತರೊ,
ಸುಸಮಾಹಿತತೆ
(ಪ್ರಶಾಂತತೆ) ಹೊಂದಿರುವರೋ,
ಧಮ್ಮ ಮತ್ತು ಸತ್ಯಗಳಿಂದ
ಕೂಡಿರುವರೋ ಅವರು ಕಾಷಾಯ ವಸ್ತ್ರಕ್ಕೆ
ಅರ್ಹರಾಗಿದ್ದಾರೆ.” (10)
೧೧.
ಅಸಾರೇ ಸಾರಮತಿನೋ, ಸಾರೇ ಚಾಸಾರದಸ್ಸಿನೋ।
ತೇ ಸಾರಂ ನಾಧಿಗಚ್ಛನ್ತಿ, ಮಿಚ್ಛಾಸಙ್ಕಪ್ಪಗೋಚರಾ॥
“ಅಸಾರವಾದುದರಲ್ಲಿ
ಅವರು ಸಾರವನ್ನು ಕಲ್ಪಿಸುವರು,
ಸಾರವಾದುದರಲ್ಲಿ
ಅವರು ಅಸಾರವನ್ನು ಕಾಣುವರು.
ಯಾರು
ಇಂತಹ ತಪ್ಪು ಯೋಚನೆಗಳಲ್ಲಿ ಆನಂದಿಸುವರೋ
ಅವರು ಎಂದಿಗೂ ಸಾರವನ್ನು ಸಾಕ್ಷಾತ್ಕರಿಸಲಾರರು” (11)
೧೨.
ಸಾರಞ್ಚ ಸಾರತೋ ಞತ್ವಾ, ಅಸಾರಞ್ಚ
ಅಸಾರತೋ।
ತೇ ಸಾರಂ ಅಧಿಗಚ್ಛನ್ತಿ, ಸಮ್ಮಾಸಙ್ಕಪ್ಪಗೋಚರಾ॥
“ಯಾವುದು
ಸಾರವೋ ಅದನ್ನು ಸಾರವಾಗಿಯೇ ಅವರು
ಪರಿಗಣಿಸುವರು,
ಯಾವುದು ಅಸಾರವೋ ಅವರು
ಅಸಾರವಾಗಿಯೇ ಪರಿಗಣಿಸುತ್ತಾರೆ.
ಯಾರು ಈ ರೀತಿಯಲ್ಲಿ
ಯೋಗ್ಯ ಚಿಂತನೆಯಿಂದಾಗಿ ಅವರ
ಸಾರದ ಸಾಕ್ಷಾತ್ಕಾರ
ಮಾಡಿಕೊಳ್ಳುತ್ತಾರೆ.” (12)
೧೩.
ಯಥಾ ಅಗಾರಂ ದುಚ್ಛನ್ನಂ, ವುಟ್ಠೀ
ಸಮತಿವಿಜ್ಝತಿ।
ಏವಂ ಅಭಾವಿತಂ ಚಿತ್ತಂ, ರಾಗೋ
ಸಮತಿವಿಜ್ಝತಿ॥
“ಕೆಟ್ಟ
ಛಾವಣಿಯ ಮನೆಯಲ್ಲಿ ಮಳೆಯು ನುಗ್ಗುವ
ಹಾಗೆ ಅಭಿವೃದ್ಧಿ ಹೊಂದದ ಮನಸ್ಸಿನಲ್ಲಿ
ರಾಗವು ನುಗ್ಗುತ್ತದೆ”. (13)
೧೪.
ಯಥಾ ಅಗಾರಂ ಸುಛನ್ನಂ, ವುಟ್ಠೀ
ನ ಸಮತಿವಿಜ್ಝತಿ।
ಏವಂ ಸುಭಾವಿತಂ ಚಿತ್ತಂ, ರಾಗೋ
ನ ಸಮತಿವಿಜ್ಝತಿ॥
“ಸುಭದ್ರವಾದ
ಛಾವಣಿಯ ಮನೆಯಲ್ಲಿ ಮಳೆಯು ನುಗ್ಗದ
ಹಾಗೆ ಅಭಿವೃದ್ಧಿ ಹೊಂದಿರುವ ಮನಸ್ಸಿನಲ್ಲಿ
ರಾಗವು ನುಗ್ಗುವುದಿಲ್ಲ”. (14)
೧೫.
ಇಧ ಸೋಚತಿ ಪೇಚ್ಚ ಸೋಚತಿ,
ಪಾಪಕಾರೀ ಉಭಯತ್ಥ ಸೋಚತಿ।
ಸೋ ಸೋಚತಿ ಸೋ ವಿಹಞ್ಞತಿ,
ದಿಸ್ವಾ ಕಮ್ಮಕಿಲಿಟ್ಠಮತ್ತನೋ॥
“ಇಲ್ಲಿಯೂ
ಶೋಕಿಸುತ್ತಾನೆ, ಮುಂದೆ ಪರಲೋಕದಲ್ಲಿಯೂ ಶೋಕಿಸುತ್ತಾನೆ.
ಪಾಪಿಯು ಉಭಯ ಸ್ಥಿತಿಗಳೆರಡರಲ್ಲೂ ಶೋಕಿಸುತ್ತಾನೆ.
ತನ್ನ ಪಾಪಕೃತ್ಯಗಳನ್ನು ನೆನೆಯುತ್ತ ಶೋಕಿಸುತ್ತಾನೆ ಮತ್ತು
ನರಳುತ್ತಾನೆ”. (15)
೧೬.
ಇಧ ಮೋದತಿ ಪೇಚ್ಚ ಮೋದತಿ,
ಕತಪುಞ್ಞೋ ಉಭಯತ್ಥ ಮೋದತಿ।
ಸೋ ಮೋದತಿ ಸೋ ಪಮೋದತಿ,
ದಿಸ್ವಾ ಕಮ್ಮವಿಸುದ್ಧಿಮತ್ತನೋ॥
“ಇಲ್ಲಿಯೂ
ಸಂತೋಷಿಸುತ್ತಾನೆ, ಮುಂದೆ ಪರಲೋಕದಲ್ಲಿಯೂ ಸಂತೋಷಿಸುತ್ತಾನೆ.
ಪುಣ್ಯಶಾಲಿಯು ಉಭಯ ಸ್ಥಿತಿಗಳೆರಡರಲ್ಲೂ ಸಂತೋಷಿಸುತ್ತಾನೆ
ತನ್ನ ಪುಣ್ಯ ಕಾರ್ಯಗಳನ್ನು
ನೆನೆಯುತ್ತ ಸಂತೋಷಿಸುತ್ತಾನೆ ಮತ್ತು ನಲಿಯುತ್ತಾನೆ”. (16)
೧೭.
ಇಧ ತಪ್ಪತಿ ಪೇಚ್ಚ ತಪ್ಪತಿ,
ಪಾಪಕಾರೀ [ಪಾಪಕಾರಿ (?)] ಉಭಯತ್ಥ ತಪ್ಪತಿ।
‘‘ಪಾಪಂ
ಮೇ ಕತ’’ನ್ತಿ ತಪ್ಪತಿ,
ಭಿಯ್ಯೋ [ಭೀಯೋ (ಸೀ॰)]
ತಪ್ಪತಿ ದುಗ್ಗತಿಂ ಗತೋ॥
“ಇಲ್ಲಿಯೂ
ದುಃಖಿಸುತ್ತಾನೆ, ಮುಂದೆ ಪರಲೋಕದಲ್ಲಿಯೂ ದುಃಖಿಸುತ್ತಾನೆ.
ಉಭಯ ಸ್ಥಿತಿಗಳೆರಡರಲ್ಲೂ ಪಾಪಿಯು
ದುಃಖಿಸುತ್ತಾನೆ.
‘ನಾನು ಪಾಪವನ್ನು ಮಾಡಿದೆನಲ್ಲ’ ಎಂದು ದುಃಖಿಸುತ್ತಾನೆ. ನಂತರದಲ್ಲಿ ದುರ್ಗತಿಗೆ ಹೋಗಿ
ಅಲ್ಲೂ ಸಹ ದುಃಖಿಸುತ್ತಾನೆ”. (17)
೧೮.
ಇಧ ನನ್ದತಿ ಪೇಚ್ಚ ನನ್ದತಿ,
ಕತಪುಞ್ಞೋ ಉಭಯತ್ಥ ನನ್ದತಿ।
‘‘ಪುಞ್ಞಂ
ಮೇ ಕತ’’ನ್ತಿ ನನ್ದತಿ,
ಭಿಯ್ಯೋ ನನ್ದತಿ ಸುಗ್ಗತಿಂ ಗತೋ॥
“ಇಲ್ಲಿ
ಆನಂದವಾಗಿರುತ್ತಾನೆ, ಮುಂದೆ ಪರಲೋಕದಲ್ಲೂ ಆನಂದವಾಗಿರುತ್ತಾನೆ,
ಪುಣ್ಯವಂತನು ಉಭಯಸ್ಥಿತಿಗಳೆರಡರಲ್ಲೂ ಆನಂದದಿಂದಿರುತ್ತಾನೆ.
ನಂತರ ಸುಗತಿಯಲ್ಲಿ ಸೇರಿ
ಅಲ್ಲಿ ಇನ್ನೂ ಹೆಚ್ಚು ಆನಂದದಿಂದಿರುತ್ತಾನೆ. (18)
೧೯.
ಬಹುಮ್ಪಿ ಚೇ ಸಂಹಿತ
[ಸಹಿತಂ (ಸೀ॰
ಸ್ಯಾ॰ ಕಂ॰ ಪೀ॰)] ಭಾಸಮಾನೋ,
ನ ತಕ್ಕರೋ ಹೋತಿ
ನರೋ ಪಮತ್ತೋ।
ಗೋಪೋವ ಗಾವೋ ಗಣಯಂ ಪರೇಸಂ,
ನ ಭಾಗವಾ ಸಾಮಞ್ಞಸ್ಸ
ಹೋತಿ॥
“ಒಬ್ಬನು
ಪವಿತ್ರಗ್ರಂಥಗಳನ್ನು ಎಷ್ಟೇ ಓದಿರಲಿ ಅಥವಾ
ಎಚ್ಚರಿಸಲಿ.
ಆದರೆ ಅದರಂತೆ ಆತನು
ಅನುಸರಿಸದಿದ್ದರೆ, ಆತನು ಪರರ ಗೋವುಗಳನ್ನು
ಎಣಿಸುವವನಂತೆ
ಪವಿತ್ರ ಜೀವನದ ಫಲದಲ್ಲಿ
ಭಾಗಿಯಾಗುವುದಿಲ್ಲ”. (19)
೨೦.
ಅಪ್ಪಮ್ಪಿ
ಚೇ ಸಂಹಿತ ಭಾಸಮಾನೋ,
ಧಮ್ಮಸ್ಸ ಹೋತಿ [ಹೋತೀ (ಸೀ॰ ಪೀ॰)] ಅನುಧಮ್ಮಚಾರೀ।
ರಾಗಞ್ಚ ದೋಸಞ್ಚ ಪಹಾಯ ಮೋಹಂ,
ಸಮ್ಮಪ್ಪಜಾನೋ ಸುವಿಮುತ್ತಚಿತ್ತೋ।
ಅನುಪಾದಿಯಾನೋ
ಇಧ ವಾ ಹುರಂ
ವಾ, ಸ ಭಾಗವಾ
ಸಾಮಞ್ಞಸ್ಸ ಹೋತಿ॥
“ಪವಿತ್ರ
ಗ್ರಂಥಗಳನ್ನು ಅಲ್ಪವಾಗಿ ಅರಿತಿದ್ದರೂ ಅದರಂತೆ
ಅನುಸರಿಸುವವರು
ಹಾಗು ರಾಗ, ದ್ವೇಷ
ಮತ್ತು ಮೋಹವನ್ನು ತ್ಯಜಿಸುವವನು,
ನಿಜವಾಗಿ
ಅರಿತವನು ಸುವಿಮುಕ್ತ ಚಿತ್ತವುಳ್ಳವನು ಆದ
ಆತನು ಇಲ್ಲಿಯಾಗಲಿ
ಅಥವಾ ನಂತರದ ಕಾಲದಲ್ಲಿಯಾಗಲಿ
ಪವಿತ್ರ ಜೀವನದ ಫಲದಲ್ಲಿ ಭಾಗಿಯಾಗುತ್ತಾನೆ”. (20)
ಯಮಕವಗ್ಗೋ
ಪಠಮೋ ನಿಟ್ಠಿತೋ।
No comments:
Post a Comment