Saturday, 18 January 2020

ಧಮ್ಮಪದ. ೧೭. ಕೋಧವಗ್ಗೋ


 ಧಮ್ಮಪದ

೧೭. ಕೋಧವಗ್ಗೋ

೨೨೧.

ಕೋಧಂ ಜಹೇ ವಿಪ್ಪಜಹೇಯ್ಯ ಮಾನಂ, ಸಂಯೋಜನಂ ಸಬ್ಬಮತಿಕ್ಕಮೇಯ್ಯ
 ತಂ ನಾಮರೂಪಸ್ಮಿಮಸಜ್ಜಮಾನಂ, ಅಕಿಞ್ಚನಂ ನಾನುಪತನ್ತಿ ದುಕ್ಖಾ

ಕ್ರೋಧವನ್ನು ಹಾಗು ಅಹಂಕಾರವನ್ನು ಬಿಟ್ಟುಬಿಡಬೇಕು,
ಎಲ್ಲಾ ಸಂಯೋಜನೆಗಳನ್ನು (ಬಂಧನಗಳನ್ನು) ಪಕ್ಕಕ್ಕೆಸೆಯಬೇಕು,
ಯಾರು ದೇಹ ಮನಸ್ಸಿಗೆ ಅಂಟಿಲ್ಲವೋ
ಅಂತಹವರಿಗೆ ಯಾವ ದುಃಖವೂ ಇಲ್ಲ.”  (221)

೨೨೨.

ಯೋ ವೇ ಉಪ್ಪತಿತಂ ಕೋಧಂ, ರಥಂ ಭನ್ತಂವ ವಾರಯೇ [ಧಾರಯೇ (ಸೀ ಸ್ಯಾ ಪೀ)]
 ತಮಹಂ ಸಾರಥಿಂ ಬ್ರೂಮಿ, ರಸ್ಮಿಗ್ಗಾಹೋ ಇತರೋ ಜನೋ

ಉತ್ಪತ್ತಿಯಾಗಿ ಉಕ್ಕುತ್ತಿರುವ ಕ್ರೋಧವನ್ನು
ವೇಗವಾಗಿ ಓಡುತ್ತಿರುವ ರಥವನ್ನು ನಿಲ್ಲಿಸುವಂತೆ
ಪರೀಕ್ಷಿಸುತ್ತಾ ನಿಗ್ರಹಿಸುವವನ್ನೇ ಸಾರಥಿ ಎನ್ನುತ್ತೇನೆ
ಇತರ ಜನರು ಕೇವಲ ಕಡಿವಾಣ ಹಿಡಿದಿದ್ದಾರೆ.”      (222)

೨೨೩.

ಅಕ್ಕೋಧೇನ ಜಿನೇ ಕೋಧಂ, ಅಸಾಧುಂ ಸಾಧುನಾ ಜಿನೇ
 ಜಿನೇ ಕದರಿಯಂ ದಾನೇನ, ಸಚ್ಚೇನಾಲಿಕವಾದಿನಂ

ಅಕ್ರೋಧದಿಂದ ಕ್ರೋಧವನ್ನು ಜಯಿಸು,
ಅಸಾಧುವಾದುದನ್ನು (ಕೆಟ್ಟದ್ದನ್ನು) ಒಳ್ಳೆಯತನದಿಂದ ಜಯಿಸು,
ಜಯಿಸು, ಜಿಪುಣನನ್ನು ದಾನದಿಂದಲೇ
ಸತ್ಯದಿಂದಲೇ ಸುಳ್ಳುಗಾರರನ್ನು ಜಯಿಸು.”           (223)

೨೨೪.

ಸಚ್ಚಂ ಭಣೇ ಕುಜ್ಝೇಯ್ಯ, ದಜ್ಜಾ ಅಪ್ಪಮ್ಪಿ [ದಜ್ಜಾಪ್ಪಸ್ಮಿಮ್ಪಿ (ಸೀ ಪೀ), ದಜ್ಜಾ ಅಪ್ಪಸ್ಮಿ (ಸ್ಯಾ )] ಯಾಚಿತೋ
 ಏತೇಹಿ ತೀಹಿ ಠಾನೇಹಿ, ಗಚ್ಛೇ ದೇವಾನ ಸನ್ತಿಕೇ

ಸತ್ಯವನ್ನೇ ನುಡಿ,
ಕೋಪಗೊಳ್ಳಬೇಡ ಮತ್ತು
ಯೋಚಿಸಿದವರಿಗೆ ಅಲ್ಪದಾನವನ್ನದರೂ ನೀಡು,
ಮೂರರಿಂದಲೇ ದೇವತೆಗಳ ಸಮೀಪ ಹೋಗಬಹುದು.” (224)

೨೨೫.

ಅಹಿಂಸಕಾ ಯೇ ಮುನಯೋ [ಅಹಿಂಸಕಾಯಾ ಮುನಯೋ ()], ನಿಚ್ಚಂ ಕಾಯೇನ ಸಂವುತಾ
 ತೇ ಯನ್ತಿ ಅಚ್ಚುತಂ ಠಾನಂ, ಯತ್ಥ ಗನ್ತ್ವಾ ಸೋಚರೇ

ಅಹಿಂಸೆಯನ್ನೇ ಯಾವ ಮುನಿಗಳು ಪಾಲಿಸುತ್ತ,
ನಿತ್ಯವೂ ಕಾಯದಿಂದ ಸಂಯಮಯುತರೋ,
ಅಂತಹವರು ಅಮರತ್ವದ ಸ್ಥಾನವನ್ನು ತಲುಪುವರು,
ಅಲ್ಲಿ ಅವರು ಶೋಕಿಸಬೇಕಿಲ್ಲ.”               (225)

೨೨೬.

ಸದಾ ಜಾಗರಮಾನಾನಂ, ಅಹೋರತ್ತಾನುಸಿಕ್ಖಿನಂ
 ನಿಬ್ಬಾನಂ ಅಧಿಮುತ್ತಾನಂ, ಅತ್ಥಂ ಗಚ್ಛನ್ತಿ ಆಸವಾ

ಸದಾ ಜಾಗರೂಕರಾಗಿರುವವರ,
ಹಗಲು ರಾತ್ರಿ ಶಿಕ್ಷಣದಲ್ಲೇ (ಶಿಸ್ತಿನಲ್ಲಿ) ತಲ್ಲೀನರಾಗಿರುವವರ
ನಿಬ್ಬಾಣದಲ್ಲಿ ಆಕಾಂಕ್ಷಿತರಾಗಿರುವವರ
ಆಸವಗಳು ನಾಶವಾಗುತ್ತವೆ.”                (226)

೨೨೭.

ಪೋರಾಣಮೇತಂ ಅತುಲ, ನೇತಂ ಅಜ್ಜತನಾಮಿವ
 ನಿನ್ದನ್ತಿ ತುಣ್ಹಿಮಾಸೀನಂ, ನಿನ್ದನ್ತಿ ಬಹುಭಾಣಿನಂ
 ಮಿತಭಾಣಿಮ್ಪಿ ನಿನ್ದನ್ತಿ, ನತ್ಥಿ ಲೋಕೇ ಅನಿನ್ದಿತೋ

ಇದು ಅತ್ಯಂತ ಪುರಾತನವಾದುದು, ಅತುಲ,
ಕೇವಲ ಇಂದಿನದಲ್ಲ,
ನಿಂದಿಸುವರು ಮೌನಿಯನ್ನು,
ನಿಂದಿಸುವರು ಅತಿ ವಾಚಾಳಿಯನ್ನು,
ಮಿತಭಾಷಿಯನ್ನು ಸಹಾ ನಿಂದಿಸುವರು,
ಲೋಕದಲ್ಲಿ ಅನಿಂದಿತರು ಯಾರೂ ಇಲ್ಲ.”               (227)

೨೨೮.

ಚಾಹು ಭವಿಸ್ಸತಿ, ಚೇತರಹಿ ವಿಜ್ಜತಿ
 ಏಕನ್ತಂ ನಿನ್ದಿತೋ ಪೋಸೋ, ಏಕನ್ತಂ ವಾ ಪಸಂಸಿತೋ

ಹಿಂದೆಯಾಗಲಿ ಅಥವಾ ಭವಿಷ್ಯದಲ್ಲಾಗಲೀ
ಅಥವಾ ವರ್ತಮಾನದಲ್ಲೇ ಆಗಲಿ
ಪ್ರತ್ಯೇಕವಾಗಿ (ಪೂರ್ಣವಾಗಿ) ನಿಂದಿತನೂ, ಹಾಗೆಯೇ
ಪ್ರತ್ಯೇಕವಾಗಿ (ಪೂರ್ಣವಾಗಿ) ಪ್ರಶಂಸಿತನು ಯಾರೂ ಇಲ್ಲ.” (228)

೨೨೯.

ಯಂ ಚೇ ವಿಞ್ಞೂ ಪಸಂಸನ್ತಿ, ಅನುವಿಚ್ಚ ಸುವೇ ಸುವೇ
 ಅಚ್ಛಿದ್ದವುತ್ತಿಂ [ಅಚ್ಛಿನ್ನವುತ್ತಿಂ ()] ಮೇಧಾವಿಂ, ಪಞ್ಞಾಸೀಲಸಮಾಹಿತಂ

ಆದರೆ ಜ್ಞಾನಿಗಳು ಪ್ರಶಂಸಿಸಿದರೆ
ಅವರು ಅನುದಿನವೂ ನಿಷ್ಕಳಂಕನೆಂದು
ಪರೀಕ್ಷಿಸಿಯೇ ಹೇಳಿರುತ್ತಾರೆ, ಅಂತಹ
ಮೇಧಾವಿಯನ್ನು, ಪ್ರಜ್ಞಾಶೀಲನನ್ನು ಸಮಾಹಿತ (ಸಮಾಧಿ)
ಚಿತ್ತ ಪಡೆದವನನ್ನು...”            (229)

೨೩೦.

ನಿಕ್ಖಂ [ನೇಕ್ಖಂ (ಸೀ ಸ್ಯಾ ಪೀ)] ಜಮ್ಬೋನದಸ್ಸೇವ, ಕೋ ತಂ ನಿನ್ದಿತುಮರಹತಿ
 ದೇವಾಪಿ ನಂ ಪಸಂಸನ್ತಿ, ಬ್ರಹ್ಮುನಾಪಿ ಪಸಂಸಿತೋ

ಪುಟವಿಟ್ಟ ಬಂಗಾರದ ನಾಣ್ಯದಂತಿರುವವನನ್ನು
ಯಾರು ತಾನೇ ನಿಂದಿಸುವರು ?
ದೇವತೆಗಳು ಪ್ರಶಂಸಿಸುವರು
ಬ್ರಹ್ಮರೂ ಸಹಾ ಆತನಿಗೆ ಪ್ರಶಂಸಿಸುವರು.”           (230)

೨೩೧.

ಕಾಯಪ್ಪಕೋಪಂ ರಕ್ಖೇಯ್ಯ, ಕಾಯೇನ ಸಂವುತೋ ಸಿಯಾ
 ಕಾಯದುಚ್ಚರಿತಂ ಹಿತ್ವಾ, ಕಾಯೇನ ಸುಚರಿತಂ ಚರೇ

ಕಾಯದಿಂದಾಗುವ ಉದ್ವೇಗಗಳಿಂದ ರಕ್ಷಿಸಿಕೊಳ್ಳಲಿ
ಕಾಯದಿಂದ ಸದಾ ಸಂಯಮದಿಂದಿರಲಿ
ಕಾಯದಿಂದ ದುಶ್ಚಾರಿತ್ರ್ಯತೆ ತೊಡೆದುಹಾಕಲಿ
ಕಾಯದಿಂದ ಸುಚಾರಿತ್ರ್ಯ ನೆಲೆಗೊಳ್ಳಲಿ.”               (231)

೨೩೨.

ವಚೀಪಕೋಪಂ ರಕ್ಖೇಯ್ಯ, ವಾಚಾಯ ಸಂವುತೋ ಸಿಯಾ
 ವಚೀದುಚ್ಚರಿತಂ ಹಿತ್ವಾ, ವಾಚಾಯ ಸುಚರಿತಂ ಚರೇ

ಮಾತಿನಿಂದಾಗುವ ಉದ್ವೇಗಗಳಿಂದ ರಕ್ಷಿಸಿಕೊಳ್ಳಿ,
ಮಾತಿನಲ್ಲಿ ಸದಾ ಸಂಯಮದಿಂದಿರಲಿ
ಮಾತಿನಿಂದ ದುಶ್ಚಾರಿತ್ರ್ಯತೆ ತೊಡೆದುಹಾಕಲಿ
ಮಾತನಿಂದ ಸುಚಾರಿತ್ರತೆ ನೆಲೆಗೊಳ್ಳಲಿ.”             (232)

೨೩೩.

ಮನೋಪಕೋಪಂ ರಕ್ಖೇಯ್ಯ, ಮನಸಾ ಸಂವುತೋ ಸಿಯಾ
 ಮನೋದುಚ್ಚರಿತಂ ಹಿತ್ವಾ, ಮನಸಾ ಸುಚರಿತಂ ಚರೇ

ಮನಸ್ಸಿನಿಂದಾಗುವ ಉದ್ವೇಗಗಳಿಂದ ರಕ್ಷಿಸಿಕೊಳ್ಳಲಿ,
ಮನಸ್ಸಿನಲ್ಲಿ ಸದಾ ಸಂಯಮದಿಂದಿರಲಿ
ಮನಸ್ಸಿನಿಂದ ದುಶ್ಚಾರಿತ್ರ್ಯತೆ ತೊಡೆದುಹಾಕಲಿ
ಮನಸ್ಸಿನಲ್ಲಿ ಸುಚಾರಿತ್ರತೆ ನೆಲೆಗೊಳ್ಳಲಿ.”             (233)

೨೩೪.

ಕಾಯೇನ ಸಂವುತಾ ಧೀರಾ, ಅಥೋ ವಾಚಾಯ ಸಂವುತಾ
 ಮನಸಾ ಸಂವುತಾ ಧೀರಾ, ತೇ ವೇ ಸುಪರಿಸಂವುತಾ

ಕಾಯದಲ್ಲಿ ಧೀಮಂತರು ಸಂಯಮವುಳ್ಳವರಾಗುತ್ತಾರೆ,
ಹಾಗೆಯೇ ಮಾತಿನಲ್ಲೂ ಸಂಯಮದಿಂದಿರುತ್ತಾರೆ
ಮನಸ್ಸಿನಲ್ಲಿಯೂ ಧೀಮಂತರು ಸಂಯಮಿತರಾಗುತ್ತಾರೆ
ಹೀಗಾಗಿ ಅವರು ಸಂಪೂರ್ಣ ಸಂಯಮಶೀಲರಾಗಿರುತ್ತಾರೆ.” (234)

ಕೋಧವಗ್ಗೋ ಸತ್ತರಸಮೋ ನಿಟ್ಠಿತೋ
ಇಲ್ಲಿಗೆ ಹದಿನೇಳನೆಯದಾದ ಕೋಧವಗ್ಗವು ಮುಗಿಯಿತು


No comments:

Post a Comment