Saturday, 18 January 2020

ಧಮ್ಮಪದ.೨೫. ಭಿಕ್ಖುವಗ್ಗೋ


ಧಮ್ಮಪದ

೨೫. ಭಿಕ್ಖುವಗ್ಗೋ


೩೬೦.

ಚಕ್ಖುನಾ ಸಂವರೋ ಸಾಧು, ಸಾಧು ಸೋತೇನ ಸಂವರೋ
 ಘಾನೇನ ಸಂವರೋ ಸಾಧು, ಸಾಧು ಜಿವ್ಹಾಯ ಸಂವರೋ

ಚಕ್ಷುವನ್ನು ಸಂಯಮದಿಂದಿರಿಸುವುದು ಒಳ್ಳೆಯದು,
ಕಿವಿಯನ್ನು ಸಂಯಮದಿಂದಿರಿಸುವುದು ಒಳ್ಳೆಯದು,
ಮೂಗನ್ನು ಸಂಯಮದಿಂದಿರಿಸುವುದು ಒಳ್ಳೆಯದು,
ನಾಲಿಗೆಯನ್ನು ಸಂಯಮದಿಂದಿರಿಸುವುದು ಒಳ್ಳೆಯದು.”       (360)

೩೬೧.

ಕಾಯೇನ ಸಂವರೋ ಸಾಧು, ಸಾಧು ವಾಚಾಯ ಸಂವರೋ
 ಮನಸಾ ಸಂವರೋ ಸಾಧು, ಸಾಧು ಸಬ್ಬತ್ಥ ಸಂವರೋ
 ಸಬ್ಬತ್ಥ ಸಂವುತೋ ಭಿಕ್ಖು, ಸಬ್ಬದುಕ್ಖಾ ಪಮುಚ್ಚತಿ

ಕಾಯವನ್ನು ಸಂಯಮದಿಂದಿರಿಸುವುದು ಒಳ್ಳೆಯದು,
ಮಾತಿನಲ್ಲಿ ಸಂಯಮದಿಂದಿರುವುದು ಒಳ್ಳೆಯದು,
ಮನಸ್ಸನ್ನು ಸಂಯಮದಿಂದಿರಿಸುವುದು ಒಳ್ಳೆಯದು,
ಎಲ್ಲದರ ಸಂಯಮ ಒಳ್ಳೆಯದು,
ಸರ್ವವನ್ನು ಸಂಯಮಗೊಳಿಸಿದಂತಹ ಭಿಕ್ಷು
ಸರ್ವ ದುಃಖಗಳಿಂದ ಪಾರಾಗುತ್ತಾನೆ.”   (361)

೩೬೨.

ಹತ್ಥಸಂಯತೋ ಪಾದಸಂಯತೋ, ವಾಚಾಸಂಯತೋ ಸಂಯತುತ್ತಮೋ
 ಅಜ್ಝತ್ತರತೋ ಸಮಾಹಿತೋ, ಏಕೋ ಸನ್ತುಸಿತೋ ತಮಾಹು ಭಿಕ್ಖುಂ

ಹಸ್ತಗಳಿಂದ ಸಂಯಮದಿಂದಿರುವವನು,
ಪಾದಗಳಿಂದ ಸಂಯಮದಿಂದಿರುವವನು,
ಮಾತಿನಲ್ಲಿ ಸಂಯಮದಿಂದಿರುವವನು,
ಎಲ್ಲದರಲ್ಲೂ ಸಂಯಮದಿಂದಿರುವವನು,
ಧ್ಯಾನದಲ್ಲಿ ರತನಾಗಿರುವವನು, ಪ್ರಶಾಂತನು,
ಏಕಾಂಗಿಯು ಮತ್ತು ಸಂತೃಪ್ತನಾಗಿರುವವನನ್ನು ಭಿಕ್ಷು ಎನ್ನುವರು.”        (362)

೩೬೩.

ಯೋ ಮುಖಸಂಯತೋ ಭಿಕ್ಖು, ಮನ್ತಭಾಣೀ ಅನುದ್ಧತೋ
 ಅತ್ಥಂ ಧಮ್ಮಞ್ಚ ದೀಪೇತಿ, ಮಧುರಂ ತಸ್ಸ ಭಾಸಿತಂ

ಯಾವ ಭಿಕ್ಷುವು ನಾಲಿಗೆಯಲ್ಲಿ ಸಂಯಮದಿಂದಿರುವನೋ,
ಪ್ರಾಜ್ಞನಂತೆ ಮಾತನಾಡಬಲ್ಲನೋ, ಯಾರು ಅಹಂಕಾರಿಯಲ್ಲದೆ
ನಮ್ರನೋ, ಯಾರು ಧಮ್ಮವನ್ನು ಅಕ್ಷರ ಹಾಗು ಅರ್ಥವೊಂದರಲ್ಲಿಯೇ
ವಿವರಿಸಬಲ್ಲನೋ, ಅಂತಹವನ ನುಡಿಗಳು ಅತ್ಯಂತ ಮಧುರವಾಗಿರುತ್ತದೆ.”         (363)

೩೬೪.

ಧಮ್ಮಾರಾಮೋ ಧಮ್ಮರತೋ, ಧಮ್ಮಂ ಅನುವಿಚಿನ್ತಯಂ
 ಧಮ್ಮಂ ಅನುಸ್ಸರಂ ಭಿಕ್ಖು, ಸದ್ಧಮ್ಮಾ ಪರಿಹಾಯತಿ

ಯಾವ ಭಿಕ್ಷುವು ಧಮ್ಮದಲ್ಲಿ ವಿಹರಿಸುತ್ತಾನೋ,
ಧಮ್ಮದಲ್ಲೇ ಆನಂದಿಸುತ್ತಾನೋ, ಧಮ್ಮದ
ಚಿಂತನೆಯಲ್ಲೇ ಇರುವನೋ, ಧಮ್ಮವನ್ನೇ
ಸ್ಮರಿಸುತ್ತಿರುವನೋ, ಅಂತಹವನು ಸಧಮ್ಮದಿಂದ ಎಂದಿಗೂ ಬೀಳುವುದಿಲ್ಲ.”       (364)

೩೬೫.

ಸಲಾಭಂ ನಾತಿಮಞ್ಞೇಯ್ಯ, ನಾಞ್ಞೇಸಂ ಪಿಹಯಂ ಚರೇ
 ಅಞ್ಞೇಸಂ ಪಿಹಯಂ ಭಿಕ್ಖು, ಸಮಾಧಿಂ ನಾಧಿಗಚ್ಛತಿ

ಒಬ್ಬನು ತನಗೆ ಸಿಕ್ಕ ಲಾಭವನ್ನು ಅಲ್ಪವೆಂದೆಣಿಸಬಾರದು,
ಅನ್ಯರಿಗೆ ಸಿಗುವುದರಲ್ಲಿ ಅಸೂಯೆ ಪಡಬಾರದು,
ಅನ್ಯರ ಲಾಭಸತ್ಕಾರದಲ್ಲಿ ಅಸೂಯೆಪಡುವ ಭಿಕ್ಷುವು
ಸಮಾಧಿಯನ್ನು ಗಳಿಸಲಾರನು.”            (365)

೩೬೬.

ಅಪ್ಪಲಾಭೋಪಿ ಚೇ ಭಿಕ್ಖು, ಸಲಾಭಂ ನಾತಿಮಞ್ಞತಿ
 ತಂ ವೇ ದೇವಾ ಪಸಂಸನ್ತಿ, ಸುದ್ಧಾಜೀವಿಂ ಅತನ್ದಿತಂ

ಯಾರಿಗೆ ಅತ್ಯಲ್ಪವು ಸಿಕ್ಕರೂ ಸಹಾ ಸಂತೃಪ್ತನಾಗಿರುವನೋ
ತನ್ನ ಲಾಭವನ್ನು ಅಲ್ಪವೆಂದೆಣಿಸನೋ,
ಅಂತಹವನ ಶುದ್ಧ ಜೀವನ ಹಾಗು ದೃಢಶೀಲತೆಯನ್ನು
ದೇವತೆಗಳು ಸಹಾ ಪ್ರಶಂಸಿಸುವರು.”    (366)



೩೬೭.

ಸಬ್ಬಸೋ ನಾಮರೂಪಸ್ಮಿಂ, ಯಸ್ಸ ನತ್ಥಿ ಮಮಾಯಿತಂ
 ಅಸತಾ ಸೋಚತಿ, ವೇ ‘‘ಭಿಕ್ಖೂ’’ತಿ ವುಚ್ಚತಿ

ಯಾರು ಸರ್ವರೀತಿಯ ನಾಮರೂಪಗಳಿಗೆ (ದೇಹ ಮನಸ್ಸಿಗೆ)
ನಾನು ಎಂದಾಗಲಿ, ನನ್ನದು ಎಂದಾಗಲಿ, ಭಾವಿಸುವುದಿಲ್ಲವೋ,
ತನ್ನದಲ್ಲದ್ದಕ್ಕೆ (ಶರೀರವು ಮುಪ್ಪಿಗೀಡಾದರೂ) ಚಿಂತಿಸುವುದಿಲ್ಲವೋ
ಆತನನ್ನೇಭಿಕ್ಷುಎನ್ನುತ್ತಾರೆ.”          (367)

೩೬೮.

ಮೇತ್ತಾವಿಹಾರೀ ಯೋ ಭಿಕ್ಖು, ಪಸನ್ನೋ ಬುದ್ಧಸಾಸನೇ
 ಅಧಿಗಚ್ಛೇ ಪದಂ ಸನ್ತಂ, ಸಙ್ಖಾರೂಪಸಮಂ ಸುಖಂ

ಯಾವ ಭಿಕ್ಷುವು ಮೆತ್ತಾ ಧ್ಯಾನದಲ್ಲಿ ವಿಹರಿಸುವನೋ,
ಬುದ್ಧ ಶಾಸನದಲ್ಲಿ ಪ್ರಸನ್ನನಾಗಿರುವನೋ, ಅಂತಹವನು
ಸಂಖಾರಗಳ ಉಪಶಮನದ (ಸಂಖಾರಗಳ ಉದಯವನ್ನು ತಡೆದು)
ಸುಖ ಮತ್ತು ಶಾಂತಿ ಸ್ಥಿತಿಯನ್ನು (ನಿಬ್ಬಾಣ) ಪ್ರಾಪ್ತಿಮಾಡುವನು.”          (368)

೩೬೯.

ಸಿಞ್ಚ ಭಿಕ್ಖು ಇಮಂ ನಾವಂ, ಸಿತ್ತಾ ತೇ ಲಹುಮೇಸ್ಸತಿ
 ಛೇತ್ವಾ ರಾಗಞ್ಚ ದೋಸಞ್ಚ, ತತೋ ನಿಬ್ಬಾನಮೇಹಿಸಿ

ಭಿಕ್ಷುವೇ, ನಿನ್ನ ದೋಣಿಯನ್ನು (ಚಿತ್ತವನ್ನ) ಬರಿದಾಗಿಸು,
ಬರಿದಾಗಿರುವುದೇ ವೇಗವಾಗಿ ಚಲಿಸುವುದು,
ಕತ್ತರಿಸು ರಾಗವ ಮತ್ತು ದ್ವೇಷವ ಹಾಗಾದಾಗಲೇ
ನಿಬ್ಬಾಣಕ್ಕೆ ಹೋಗಬಹುದು.”  (369)

೩೭೦.

ಪಞ್ಚ ಛಿನ್ದೇ ಪಞ್ಚ ಜಹೇ, ಪಞ್ಚ ಚುತ್ತರಿ ಭಾವಯೇ
 ಪಞ್ಚ ಸಙ್ಗಾತಿಗೋ ಭಿಕ್ಖು, ‘‘ಓಘತಿಣ್ಣೋ’’ತಿ ವುಚ್ಚತಿ

ಐದನ್ನು ಕತ್ತರಿಸು (ಸಂಯೋಜನಗಳು),
ಐದನ್ನು (ಉಳಿದ ಸಂಯೋಜನ) ತ್ಯಾಗ ಮಾಡು,
ಇದಲ್ಲದೆ ಐದನ್ನು ಪಂಚಬಲಗಳನ್ನು ವೃದ್ಧಿಗೊಳಿಸು,
ಯಾವ ಭಿಕ್ಷುವು ಐದು ಸಂಕೋಲೆಗಳಿಂದ
ಬಿಡುಗಡೆ ಹೊಂದಿರುವನೋ ಆತನನ್ನು
ಪ್ರವಾಹ ದಾಟಿದವನು ಎನ್ನುತ್ತಾರೆ.”        (370)

೩೭೧.

ಝಾಯ ಭಿಕ್ಖು [ಝಾಯ ತುವಂ ಭಿಕ್ಖು (?)] ಮಾ ಪಮಾದೋ [ಮಾ ಪಮಾದೋ (ಸೀ ಸ್ಯಾ ಪೀ)], ಮಾ ತೇ ಕಾಮಗುಣೇ ರಮೇಸ್ಸು [ಭಮಸ್ಸು (ಸೀ ಪೀ), ಭವಸ್ಸು (ಸ್ಯಾ), ರಮಸ್ಸು ()] ಚಿತ್ತಂ
 ಮಾ ಲೋಹಗುಳಂ ಗಿಲೀ ಪಮತ್ತೋ, ಮಾ ಕನ್ದಿ ‘‘ದುಕ್ಖಮಿದ’’ನ್ತಿ ಡಯ್ಹಮಾನೋ


ಧ್ಯಾನಿಯಾಗು ಭಿಕ್ಷು, ಅಜಾಗರೂಕನಾಗಬೇಡ,
ನಿನ್ನ ಚಿತ್ತವು ಕಾಮಸುಖಗಳ ಹಿಂದೆ ಸುಳಿದಾಡದಿರಲಿ,
ಅಜಾಗರೂಕನಾಗಿ, ಕಾದು ಕೆಂಪಗಿರುವ ಕಬ್ಬಿಣದ ಗುಂಡು
ನುಂಗಬೇಡ, ಅದು ಸುಡುತ್ತಿರುವಾಗಇದು ದುಃಖ
ಎಂದು ಪ್ರಲಾಪಿಸಬೇಡ.”        (371)

೩೭೨.

ನತ್ಥಿ ಝಾನಂ ಅಪಞ್ಞಸ್ಸ, ಪಞ್ಞಾ ನತ್ಥಿ ಅಝಾಯತೋ [ಅಜ್ಝಾಯಿನೋ ()]
 ಯಮ್ಹಿ ಝಾನಞ್ಚ ಪಞ್ಞಾ , ವೇ ನಿಬ್ಬಾನಸನ್ತಿಕೇ

ಪ್ರಜ್ಞೆಯಿಲ್ಲದವನಿಗೆ ಧ್ಯಾನವಿಲ್ಲ,
ಧ್ಯಾನಿಯಲ್ಲದವನಿಗೆ ಪ್ರಜ್ಞಾವಿಲ್ಲ,
ಆದರೆ ಯಾರಲ್ಲಿ ಧ್ಯಾನ ಮತ್ತು ಪ್ರಜ್ಞೆಗಳೆರಡು ಇವೆಯೋ
ಆತನು ನಿಬ್ಬಾಣಕ್ಕೆ ಸನಿಹವಾಗಿದ್ದಾನೆ.”  (372)

೩೭೩.

ಸುಞ್ಞಾಗಾರಂ ಪವಿಟ್ಠಸ್ಸ, ಸನ್ತಚಿತ್ತಸ್ಸ ಭಿಕ್ಖುನೋ
 ಅಮಾನುಸೀ ರತಿ ಹೋತಿ, ಸಮ್ಮಾ ಧಮ್ಮಂ ವಿಪಸ್ಸತೋ

ಯಾವ ಭಿಕ್ಷುವು (ಜನಶಬ್ದಗಳಿಲ್ಲದ) ಶೂನ್ಯಗಾರ (ಏಕಾಂತ)
ಸ್ಥಳದಲ್ಲಿ ನೆಲಸಿಹನೋ, ಯಾರು ಚಿತ್ತವನ್ನು
ಶಾಂತಗೊಳಿಸಿಹನೋ, ಸಮ್ಮಾ (ಯೋಗ್ಯ)
ಧಮ್ಮವನ್ನು ಸ್ಪಷ್ಟವಾಗಿ ಕಾಣುತ್ತಿರುವನೋ
ಅಂತಹವನು ಮನುಷ್ಯಾತೀತ ಆನಂದ ಅನುಭವಿಸುತ್ತಾನೆ.”  (373)

೩೭೪.

ಯತೋ ಯತೋ ಸಮ್ಮಸತಿ, ಖನ್ಧಾನಂ ಉದಯಬ್ಬಯಂ
 ಲಭತೀ [ಲಭತಿ (ಪೀ), ಲಭತೇ ()] ಪೀತಿಪಾಮೋಜ್ಜಂ, ಅಮತಂ ತಂ ವಿಜಾನತಂ

ಎಲ್ಲೆಲ್ಲಿ ಒಬ್ಬನು ಸಮ್ಯಕ್ ಸ್ಮೃತಿಯಿಂದ
ಖಂಧಗಳ (ದೇಹ ಮತ್ತು ಮನಸ್ಸುಗಳ) ಉದಯ ಮತ್ತು
ಅಳಿಯುವಿಕೆಯನ್ನು ಪ್ರತಿಬಿಂಬಿಸುತ್ತಿರುವನೋ
ಆಗ ಆತನು ಆನಂದ ಮತ್ತು ಸುಖವನ್ನು
ಅನುಭವಿಸುತ್ತಾನೆ, ಜ್ಞಾನಿಗಳಿಗೆ
ಪ್ರತಿಬಿಂಬಿಸುವಿಕೆಯು ಅಮರತ್ವವಾಗಿದೆ.”            (374)

೩೭೫.

ತತ್ರಾಯಮಾದಿ ಭವತಿ, ಇಧ ಪಞ್ಞಸ್ಸ ಭಿಕ್ಖುನೋ
 ಇನ್ದ್ರಿಯಗುತ್ತಿ ಸನ್ತುಟ್ಠಿ, ಪಾತಿಮೋಕ್ಖೇ ಸಂವರೋ

ಪ್ರಾಜ್ಞನಾದ ಭಿಕ್ಷುವಿಗೆ ಇಲ್ಲಿ
ಉತ್ತಮವಾದ ಆರಂಭವಾಗಿದೆ, ಹೇಗೆಂದರೆ
ಇಂದ್ರಿಯ ಸಂಯಮ, ಸಂತೃಪ್ತಿ, ಪಾತಿಮೋಕ್ಖದಂತೆ
ಸಂಯಮಶೀಲತೆ, ಪರಿಶುದ್ಧ ಜೀವನ ಹೊಂದಿರುವ
ಕಲ್ಯಾಣ ಮಿತ್ರರೊಂದಿಗೆ ಸ್ನೇಹ ಇವೆಲ್ಲವೂ ಸಿಗುವುದು.”        (375)

೩೭೬.

ಮಿತ್ತೇ ಭಜಸ್ಸು ಕಲ್ಯಾಣೇ, ಸುದ್ಧಾಜೀವೇ ಅತನ್ದಿತೇ
 ಪಟಿಸನ್ಥಾರವುತ್ಯಸ್ಸ [ಪಟಿಸನ್ಧಾರವುತ್ಯಸ್ಸ ()], ಆಚಾರಕುಸಲೋ ಸಿಯಾ
 ತತೋ ಪಾಮೋಜ್ಜಬಹುಲೋ, ದುಕ್ಖಸ್ಸನ್ತಂ ಕರಿಸ್ಸತಿ

ಪರಿಶುದ್ಧ ಜೀವನ ಹಾಗು ಯತ್ನಶೀಲತೆ ಹೊಂದಿದಂತಹ
ಆತನು ಕಲ್ಯಾಣಕಾರಕವಾದ ಮಿತ್ರರೊಂದಿಗೆ ಬೆರೆಯಲಿ
ಆತನು ಸೌಜನ್ಯದಿಂದಿರಲಿ, ತನ್ನನ್ನು ಸದಾ ತಿದ್ದುವವನಾಗಲಿ,
ಆಗ ಲಭಿಸುವ ಮಹತ್ ಆನಂದದಿಂದ
ದುಃಖ ಅಂತ್ಯ ಮಾಡಲಿ.”        (376)

೩೭೭.

ವಸ್ಸಿಕಾ ವಿಯ ಪುಪ್ಫಾನಿ, ಮದ್ದವಾನಿ [ಮಜ್ಜವಾನಿ ( ಟೀಕಾ) ಪಚ್ಚವಾನಿ ( ಅಟ್ಠ)] ಪಮುಞ್ಚತಿ
 ಏವಂ ರಾಗಞ್ಚ ದೋಸಞ್ಚ, ವಿಪ್ಪಮುಞ್ಚೇಥ ಭಿಕ್ಖವೋ

ಹೇಗೆ ಮಲ್ಲಿಗೆಯ ಬಳ್ಳಿಯು ತನ್ನ ಬಾಡಿದ
ಪುಷ್ಪಗಳನ್ನು ಉದುರಿಸಿಬಿಡುವುದೋ
ಹಾಗೆಯೇ ರಾಗ ಮತ್ತು ದ್ವೇಷಗಳನ್ನು
ತೊರೆದುಬಿಡು ಭಿಕ್ಷು.”         (377)

೩೭೮.

ಸನ್ತಕಾಯೋ ಸನ್ತವಾಚೋ, ಸನ್ತವಾ ಸುಸಮಾಹಿತೋ [ಸನ್ತಮನೋ ಸುಸಮಾಹಿತೋ (ಸ್ಯಾ ಪೀ), ಸನ್ತಮನೋ ಸಮಾಹಿತೋ ()]ವನ್ತಲೋಕಾಮಿಸೋ ಭಿಕ್ಖು, ‘‘ಉಪಸನ್ತೋ’’ತಿ ವುಚ್ಚತಿ

ಯಾರು ಕಾಯದ ಚಟುವಟಿಕೆಗಳಲ್ಲಿ ಶಾಂತನು
ಯಾರು ವಾಚದ ಚಟುವಟಿಕೆಗಳಲ್ಲಿ ಶಾಂತನು
ಯಾರು ಮನದ ಚಟುವಟಿಕೆಗಳಲ್ಲಿ ಶಾಂತನಾಗಿ
ಸುಸಮಾಹಿತನಾಗಿರುವನೋ, ಲೋಕದ ಆಮಿಷಗಳನ್ನು
ವಾಂತಿ ಮಾಡಿರುವನೋ (ತ್ಯಜಿಸಿರುವನೋ) ಅಂತಹ
ಭಿಕ್ಷುವಿಗೆ ಮಾತ್ರ ಉಪಶಾಂತನೆಂದು ಕರೆಯುವರು.”            (378)

೩೭೯.

ಅತ್ತನಾ ಚೋದಯತ್ತಾನಂ, ಪಟಿಮಂಸೇಥ ಅತ್ತನಾ [ಪಟಿಮಾಸೇ ಅತ್ತಮತ್ತನಾ (ಸೀ ಪೀ), ಪಟಿಮಂಸೇ ತಮತ್ತನಾ (ಸ್ಯಾ)]ಸೋ ಅತ್ತಗುತ್ತೋ ಸತಿಮಾ, ಸುಖಂ ಭಿಕ್ಖು ವಿಹಾಹಿಸಿ

ನಿನ್ನಿಂದಲೇ ನಿನ್ನನ್ನು ಖಂಡಿಸಿಕೋ,
ನಿನ್ನಿಂದಲೇ ನಿನ್ನನ್ನು ಪರೀಕ್ಷಿಸಿಕೋ,
ಹೀಗೆ ಸ್ವ-ರಕ್ಷಿತನಾಗಿ, ಸ್ಮೃತಿಯಿಂದ (ಜಾಗರೂಕತೆಯಿಂದ)
ಭಿಕ್ಷು ಸುಖವಾಗಿ ಜೀವಿಸು.  (379)

೩೮೦.

ಅತ್ತಾ ಹಿ ಅತ್ತನೋ ನಾಥೋ, (ಕೋ ಹಿ ನಾಥೋ ಪರೋ ಸಿಯಾ) [( ) ವಿದೇಸಪೋತ್ಥಕೇಸು ನತ್ಥಿ]
 ಅತ್ತಾ ಹಿ ಅತ್ತನೋ ಗತಿತಸ್ಮಾ ಸಂಯಮಮತ್ತಾನಂ [ಸಂಯಮಯತ್ತಾನಂ (ಸೀ ಪೀ)], ಅಸ್ಸಂ ಭದ್ರಂವ ವಾಣಿಜೋ

ತನಗೆ ತಾನೇ ನಾಥ (ಒಡೆಯ/ಪ್ರಭು)
ತನಗೆ ತಾನೇ ಗತಿ (ಶರಣು / ರಕ್ಷಕ)
ಆದ್ದರಿಂದ ನಿನ್ನನ್ನು ಹೇಗೆ ವಾಣಿಜನು (ವ್ಯಾಪಾರಿ)
ಅಶ್ವವನ್ನು ನಿಯಂತ್ರಿಸುವನೋ ಹಾಗೇ
ನಿಯಂತ್ರಿಸಿಕೋ (ಸಂಯಮಿತನಾಗು).”               (380)

೩೮೧.

ಪಾಮೋಜ್ಜಬಹುಲೋ ಭಿಕ್ಖು, ಪಸನ್ನೋ ಬುದ್ಧಸಾಸನೇ
 ಅಧಿಗಚ್ಛೇ ಪದಂ ಸನ್ತಂ, ಸಙ್ಖಾರೂಪಸಮಂ ಸುಖಂ

ಬುದ್ಧರ ಶಾಸನದಲ್ಲಿ ಅಪಾರ ಶ್ರದ್ಧೆಯು
ಹಾಗು ಪರಮ ಪ್ರಸನ್ನತೆಯನ್ನು ಹೊಂದಿರುವ ಭಿಕ್ಷುವು
ಸಂಖಾರಗಳ ಉಪಶಮನದಿಂದ ಉಂಟಾಗುವ ಸುಖ ಮತ್ತು
ಪರಮ ಶಾಂತತೆ ಸ್ಥಿತಿಯನ್ನು ಪ್ರಾಪ್ತಿಮಾಡುವನು.”                (381)

೩೮೨.

ಯೋ ಹವೇ ದಹರೋ ಭಿಕ್ಖು, ಯುಞ್ಜತಿ ಬುದ್ಧಸಾಸನೇ
 ಸೋಮಂ [ಸೋ ಇಮಂ (ಸೀ ಸ್ಯಾ ಕಂ ಪೀ)] ಲೋಕಂ ಪಭಾಸೇತಿ, ಅಬ್ಭಾ ಮುತ್ತೋವ ಚನ್ದಿಮಾ

ಯಾವ ಭಿಕ್ಷುವು ಯುವಕನಾಗಿರುವಾಗಲೇ
ಬುದ್ಧ ಶಾಸನದಲ್ಲಿ ಶ್ರದ್ಧಾವಂತನಾಗಿ ಶ್ರಮಿಸುವನೋ
ಆತನು ಮೋಡ ಮುಕ್ತ ಚಂದಿರನಂತೆ
ಲೋಕವನ್ನು ಪ್ರಕಾಶಿಸುವನು.”         (382)

ಭಿಕ್ಖುವಗ್ಗೋ ಪಞ್ಚವೀಸತಿಮೋ  ನಿಟ್ಠಿತೋ

ಇಲ್ಲಿಗೆ ಇಪ್ಪತ್ತೈದನೆಯ ಭಿಕ್ಖುವಗ್ಗವು ಮುಗಿಯಿತು.

No comments:

Post a Comment