Wednesday, 15 January 2020

ಧಮ್ಮಪದ. ೧೪. ಬುದ್ಧವಗ್ಗೋ


ಧಮ್ಮಪದ. ೧೪. ಬುದ್ಧವಗ್ಗೋ


೧೭೯.

ಯಸ್ಸ ಜಿತಂ ನಾವಜೀಯತಿ, ಜಿತಂ ಯಸ್ಸ [ಜಿತಮಸ್ಸ (ಸೀ ಸ್ಯಾ ಪೀ), ಜಿತಂ ಮಸ್ಸ ()] ನೋ ಯಾತಿ ಕೋಚಿ ಲೋಕೇ
 ತಂ ಬುದ್ಧಮನನ್ತಗೋಚರಂ, ಅಪದಂ ಕೇನ ಪದೇನ ನೇಸ್ಸಥ

ಯಾರ ಜಯವು ಯಾರಿಂದಲೂ, ಯಾವುದರಿಂದಲೂ ಅಪಜಯವಾಗದೇ, ಜಯಿಸಿದ ಲೋಕಗಳ ಕಲ್ಮಶಗಳು ಯಾರನ್ನು ಹಿಂಬಾಲಿಸುವುದಿಲ್ಲವೋ ಅಂತಹ ಬುದ್ಧರು ಅನಂತ ವ್ಯಾಪ್ತಿವುಳ್ಳವರು, ಅಂತಹವರನ್ನು ಯಾವ ಹಾದಿಯಿಂದ ನೀನು ಶೋಧಿಸುವೆ?”            (179)

೧೮೦.

ಯಸ್ಸ ಜಾಲಿನೀ ವಿಸತ್ತಿಕಾ, ತಣ್ಹಾ ನತ್ಥಿ ಕುಹಿಞ್ಚಿ ನೇತವೇ
 ತಂ ಬುದ್ಧಮನನ್ತಗೋಚರಂ, ಅಪದಂ ಕೇನ ಪದೇನ ನೇಸ್ಸಥ

ಯಾರಲ್ಲಿ ಜಾಲದಲ್ಲಿ ಸಿಕ್ಕಿಸಿಕೊಳ್ಳುವ, ಗೊಂದಲದಲ್ಲಿ ಸಿಲುಕುವ, ವಿಷಯವಾದ ತನ್ಹಾ ಇಲ್ಲವಾಗಿದೆಯೋ ಅಂತಹ ಅನಂತ ವ್ಯಾಪ್ತಿವುಳ್ಳವರಿಗೆ ಹಾದಿಯೇ ಇಲ್ಲ. ಅಂತಹವರನ್ನು ಯಾವ ಹಾದಿಯಿಂದ ನೀನು ಶೋಧಿಸುವೆ.”       (180)

೧೮೧.

ಯೇ ಝಾನಪಸುತಾ ಧೀರಾ, ನೇಕ್ಖಮ್ಮೂಪಸಮೇ ರತಾ
 ದೇವಾಪಿ ತೇಸಂ ಪಿಹಯನ್ತಿ, ಸಮ್ಬುದ್ಧಾನಂ ಸತೀಮತಂ

ಯಾವ ಧೀಮಂತರು ಧ್ಯಾನದಲ್ಲೇ ನಿರತರೋ, ಯಾರು ತ್ಯಾಗದ ಶಾಂತತೆಯಲ್ಲಿ ರತರಾಗಿರುವರೋ ಅಂತಹ ಸ್ಮೃತಿವಂತರು, ಸಮ್ಮಾಸಂಬುದ್ಧರನ್ನು ದೇವತೆಗಳು ಸಹಾ ಪ್ರಿಯರಾಗಿ ಕಾಣುವರು.”     (181)

೧೮೨.

ಕಿಚ್ಛೋ ಮನುಸ್ಸಪಟಿಲಾಭೋ, ಕಿಚ್ಛಂ ಮಚ್ಚಾನ ಜೀವಿತಂ
 ಕಿಚ್ಛಂ ಸದ್ಧಮ್ಮಸ್ಸವನಂ, ಕಿಚ್ಛೋ ಬುದ್ಧಾನಮುಪ್ಪಾದೋ

ಮಾನವ ಜನ್ ದುರ್ಲಭ,
  ಮರ್ತ್ಯದ (ಮರಣಿಸುವವರ) ಜೀವನ ದುರ್ಲಭ (ಕಷ್ಟಕರ)
  ಸದ್ಧಮ್ಮ ಶ್ರವಣ ದುರ್ಲಭ
    ಬುದ್ಧರ ಉದಯ ದುರ್ಲಭ.”                (182)

೧೮೩.

ಸಬ್ಬಪಾಪಸ್ಸ ಅಕರಣಂ, ಕುಸಲಸ್ಸ ಉಪಸಮ್ಪದಾ [ಕುಸಲಸ್ಸೂಪಸಮ್ಪದಾ (ಸ್ಯಾ)]
 ಸಚಿತ್ತಪರಿಯೋದಪನಂ [ಸಚಿತ್ತಪರಿಯೋದಾಪನಂ (?)], ಏತಂ ಬುದ್ಧಾನ ಸಾಸನಂ

ಸರ್ವರೀತಿಯ ಪಾಪವನ್ನು ಮಾಡದಿರುವಿಕೆ
ಒಳ್ಳೆಯತನವನ್ನೇ (ಕುಶಲವನ್ನೇ) ಮಾಡುವಿಕೆ (ಸಂಪಾದಿಸುವಿಕೆ, ವೃದ್ಧಿಸುವಿಕೆ)
  ತನ್ನ ಚಿತ್ತವನ್ನು (ಸ್ವಚಿತ್ತವನ್ನು) ಪರಿಶುದ್ಧಗೊಳಿಸುವಿಕೆ                  - ಇದೇ ಬುದ್ಧರ ಶಾಸನವಾಗಿದೆ.”               (183)

೧೮೪.

ಖನ್ತೀ ಪರಮಂ ತಪೋ ತಿತಿಕ್ಖಾ, ನಿಬ್ಬಾನಂ [ನಿಬ್ಬಾಣಂ ( ಸೀ ಪೀ)] ಪರಮಂ ವದನ್ತಿ ಬುದ್ಧಾ
  ಹಿ ಪಬ್ಬಜಿತೋ ಪರೂಪಘಾತೀ, [ಅಯಂ ನಕಾರೋ ಸೀ ಸ್ಯಾ ಪೀ ಪಾತ್ಥಕೇಸು ದಿಸ್ಸತಿ] ಸಮಣೋ ಹೋತಿ ಪರಂ ವಿಹೇಠಯನ್ತೋ

ಕ್ಷಾಂತಿಯೇ (ಸಹನೆಯೆ) ಪರಮ ತಪಸ್ಸಾಗಿದೆ (ತಪಸ್ಸುಗಳಲ್ಲಿ ಉತ್ತಮ),
  ನಿಬ್ಬಾಣವೇ ಪರಮಶ್ರೇಷ್ಠಕರಎಂದು ಬುದ್ಧರು ಹೇಳುತ್ತಾರೆ
ಪರರನ್ನು ಹಿಂಸಿಸುವವನು ಪಬ್ಬಜಿತನಲ್ಲ, ಪರರನ್ನು ಹಾನಿಗೊಳಿಸುವವನು ಸಮಣನಲ್ಲ.”     (184)


೧೮೫.

ಅನೂಪವಾದೋ ಅನೂಪಘಾತೋ [ಅನುಪವಾದೋ ಅನುಪಘಾತೋ (ಸ್ಯಾ )], ಪಾತಿಮೋಕ್ಖೇ ಸಂವರೋ
 ಮತ್ತಞ್ಞುತಾ ಭತ್ತಸ್ಮಿಂ, ಪನ್ತಞ್ಚ ಸಯನಾಸನಂ
 ಅಧಿಚಿತ್ತೇ ಆಯೋಗೋ, ಏತಂ ಬುದ್ಧಾನ ಸಾಸನಂ

ನಿಂದಿಸದಿರುವುದು, ಹಿಂಸಿಸದಿರುವುದು, ಪಾತಿಮೋಕ್ಖದಂತೆ ಸಂಯಮ ದಿಂದಿರುವುದು
ಆಹಾರದಲ್ಲಿ ಮಿತಿಯಿರುವುದು, ಏಕಾಂತವಾಸಿಯಾಗಿರುವುದು
ಧ್ಯಾನದಂತಹ ಉನ್ನತ ಚಿತ್ತಾವಸ್ಥೆಯಲ್ಲಿ ಸ್ಥಿರವಾಗಿರುವುದು - ಇವೇ ಬುದ್ಧರ ಶಾಸನವಾಗಿದೆ.”      185


೧೮೬.

ಕಹಾಪಣವಸ್ಸೇನ, ತಿತ್ತಿ ಕಾಮೇಸು ವಿಜ್ಜತಿ
 ಅಪ್ಪಸ್ಸಾದಾ ದುಖಾ ಕಾಮಾ, ಇತಿ ವಿಞ್ಞಾಯ ಪಣ್ಡಿತೋ

ಕಹಾಪಣಗಳ (ಚಿನ್ನದ ನಾಣ್ಯಗಳ) ವರ್ಷವಾದರೂ (ಮಳೆಯದರೂ) ಸಹಾ ಇಂದ್ರೀಯ ಕಾಮನೆಗಳಿಗೆ ತೃಪ್ತಿಯೇ ಆಗುವುದಿಲ್ಲ, ಇಂದ್ರೀಯ ಸುಖಗಳು ಅಲ್ಪ ಸ್ವಾದದಿಂದ ಕೂಡಿವೆ. ಆದರೆ ಅಪಾರ ದುಃಖ ತರುತ್ತವೆ. ಇದನ್ನು ಪಂಡಿತರು ಹೀಗೆಯೇ ಅರ್ಥಮಾಡಿಕೊಂಡಿರುತ್ತಾರೆ.”               (186)

೧೮೭.

ಅಪಿ ದಿಬ್ಬೇಸು ಕಾಮೇಸು, ರತಿಂ ಸೋ ನಾಧಿಗಚ್ಛತಿ
 ತಣ್ಹಕ್ಖಯರತೋ ಹೋತಿ, ಸಮ್ಮಾಸಮ್ಬುದ್ಧಸಾವಕೋ

ಆದ್ದರಿಂದ ಅವರು ದಿವ್ಯವಾದ ಕಾಮಗಳಲ್ಲಿಯೂ ಆನಂದಿಸುವುದಿಲ್ಲ.
  ಸಮ್ಮಾಸಂಬುದ್ಧರ ಶ್ರಾವಕರಾದ ಅವರು ಸದಾ ತೃಷ್ಣೆಯ ಕ್ಷಯದಲ್ಲೇ ಆನಂದಿಸುತ್ತಾರೆ.”  (187)

೧೮೮.

ಬಹುಂ ವೇ ಸರಣಂ ಯನ್ತಿ, ಪಬ್ಬತಾನಿ ವನಾನಿ
 ಆರಾಮರುಕ್ಖಚೇತ್ಯಾನಿ, ಮನುಸ್ಸಾ ಭಯತಜ್ಜಿತಾ

ಯಾವಾಗ ಭಯವು ಪೀಡಿಸುವುದೋ ಆಗ ಬಹಳಷ್ಟು ಮಾನವನು ಬೆಟ್ಟಗಳಿಗೆ
ಕಾಡುಗಳಿಗೆ, ಮರಗಳಿಗೆ, ಮಂದಿರಗಳಿಗೆ, (ಪೂಜಾ ಸ್ಥಳಗಳಿಗೆ) ಶರಣು ಹೋಗುತ್ತಾರೆ.”           (188)


೧೮೯.

ನೇತಂ ಖೋ ಸರಣಂ ಖೇಮಂ, ನೇತಂ ಸರಣಮುತ್ತಮಂ
 ನೇತಂ ಸರಣಮಾಗಮ್ಮ, ಸಬ್ಬದುಕ್ಖಾ ಪಮುಚ್ಚತಿ

ಆದರೆ ಅಂತಹ ಯಾವ ಶರಣು ಕ್ಷೇಮಕರವಲ್ಲ ಮತ್ತು 
ಅಂತಹ ಯಾವುದೂ ಉತ್ತಮ ಶರಣು ಅಲ್ಲ
ಅಂತಹ ಶರಣುವಿನಿಂದ ಯಾರೊಬ್ಬರೂ ದುಃಖಗಳಿಂದ ಮುಕ್ತರಾಗಲು ಸಾಧ್ಯವಿಲ್ಲ.”             (189)


೧೯೦.

ಯೋ ಬುದ್ಧಞ್ಚ ಧಮ್ಮಞ್ಚ, ಸಙ್ಘಞ್ಚ ಸರಣಂ ಗತೋ
 ಚತ್ತಾರಿ ಅರಿಯಸಚ್ಚಾನಿ, ಸಮ್ಮಪ್ಪಞ್ಞಾಯ ಪಸ್ಸತಿ

ಆದರೆ ಯಾರು ಬುದ್ಧರಲ್ಲಿ, ಧಮ್ಮದಲ್ಲಿ ಮತ್ತು ಸಂಘದಲ್ಲಿ ಶರಣು ಹೋಗುವರೋ 
ಅಂತಹವರು ಮಾತ್ರ ಸಮ್ಮಾ ಪ್ರಜ್ಞಾದಿಂದಾಗಿ ನಾಲ್ಕು ಆರ್ಯಸತ್ಯಗಳನ್ನು ಅರಿಯುತ್ತಾರೆ.”   (190)

೧೯೧.

ದುಕ್ಖಂ ದುಕ್ಖಸಮುಪ್ಪಾದಂ, ದುಕ್ಖಸ್ಸ ಅತಿಕ್ಕಮಂ
 ಅರಿಯಂ ಚಟ್ಠಙ್ಗಿಕಂ ಮಗ್ಗಂ, ದುಕ್ಖೂಪಸಮಗಾಮಿನಂ


ಅದೆಂದರೆ ದುಃಖ ಸತ್ಯ, ದುಃಖ ಸಮುದಾಯ ಸತ್ಯ (ಕಾರಣ
ದುಃಖ ನಿರೋಧ ಸತ್ಯ ಮತ್ತು ಆರ್ಯ ಅಷ್ಠಾಂಗಿಕ ಮಾರ್ಗ ಸತ್ಯ, ಇವುಗಳನ್ನು ಅರಿಯುತ್ತಾರೆ.”      (191)

೧೯೨.

ಏತಂ ಖೋ ಸರಣಂ ಖೇಮಂ, ಏತಂ ಸರಣಮುತ್ತಮಂ
 ಏತಂ ಸರಣಮಾಗಮ್ಮ, ಸಬ್ಬದುಕ್ಖಾ ಪಮುಚ್ಚತಿ

ಇಂತಹ ಶರಣು ಕ್ಷೇಮಕರವಾಗಿದೆ, ಇಂತಹ ಶರಣು ಉತ್ತಮೋತ್ತಮವಾಗಿದೆ,
  ಇಂತಹ ಶರಣುವಿನಲ್ಲಿ ಶರಣು ಹೋದಾಗ ದುಃಖವೆಲ್ಲದರಿಂದ ಮುಕ್ತರಾಗಬಹುದು.”               (192)


೧೯೩.

ದುಲ್ಲಭೋ ಪುರಿಸಾಜಞ್ಞೋ, ಸೋ ಸಬ್ಬತ್ಥ ಜಾಯತಿ
 ಯತ್ಥ ಸೋ ಜಾಯತಿ ಧೀರೋ, ತಂ ಕುಲಂ ಸುಖಮೇಧತಿ

ಪುರುಷ ಶ್ರೇಷ್ಠರನ್ನು ಕಾಣುವುದು ದುರ್ಲಭ, ಅಂತಹವರು ಎಲ್ಲಾಕಡೆ ಹುಟ್ಟಲಾರರು
ಅಂತಹ ಧೀಮಂತ ಹುಟ್ಟಿದ ಕುಲವು ಸುಖವಾಗಿರುತ್ತದೆ.” (193)

೧೯೪.

ಸುಖೋ ಬುದ್ಧಾನಮುಪ್ಪಾದೋ, ಸುಖಾ ಸದ್ಧಮ್ಮದೇಸನಾ
 ಸುಖಾ ಸಙ್ಘಸ್ಸ ಸಾಮಗ್ಗೀ, ಸಮಗ್ಗಾನಂ ತಪೋ ಸುಖೋ

ಬುದ್ಧರ ಉದಯ ಸುಖ
ಸದ್ಧಮ್ಮ ಘೋಷಣೆ ಸುಖ
ಸಂಘದ ಸಮಗ್ರತೆ (ಐಕ್ಯತೆ) ಸುಖ
ಹೀಗೆ ಸಮಗ್ರರಾಗಿರುವ ತಪವು ಸುಖ.”  (194)

೧೯೫.

ಪೂಜಾರಹೇ ಪೂಜಯತೋ, ಬುದ್ಧೇ ಯದಿ ಸಾವಕೇ
 ಪಪಞ್ಚಸಮತಿಕ್ಕನ್ತೇ, ತಿಣ್ಣಸೋಕಪರಿದ್ದವೇ

ಯಾರು ಪೂಜ್ಯಾರ್ಹರಾದವರನ್ನು, ಬುದ್ಧರನ್ನು ಅವರ ಶ್ರಾವಕರನ್ನು ಪಾಪ ತಡೆಗಳನ್ನು 
ಮತ್ತು ಶೋಕ ಪ್ರಲಾಪಗಳೆಲ್ಲವನ್ನು ದಾಟಿದವರನ್ನು ಪೂಜಿಸುವರೋ (195)

೧೯೬.

ತೇ ತಾದಿಸೇ ಪೂಜಯತೋ, ನಿಬ್ಬುತೇ ಅಕುತೋಭಯೇ
  ಸಕ್ಕಾ ಪುಞ್ಞಂ ಸಙ್ಖಾತುಂ, ಇಮೇತ್ತಮಪಿ ಕೇನಚಿ

ಅಂತಹ ಪುಣ್ಯಶಾಲಿಯ ಪುಣ್ಯವನ್ನು ಅಂದರೆ ಯಾವ ಪರಮಶಾಂತರನ್ನು ಮತ್ತು ಅಭಯರನ್ನು ಪೂಜಿಸುವರೋ 
ಆತನ ಪುಣ್ಯವನ್ನು ಯಾವುದರಿಂದಲೂ ಯಾರಿಂದಲೂ ಅಳೆಯಲು ಸಾಧ್ಯವಿಲ್ಲ.” (196)

ಬುದ್ಧವಗ್ಗೋ ಚುದ್ದಸಮೋ ನಿಟ್ಠಿತೋ
ಇಲ್ಲಿಗೆ ಹದಿನಾಲ್ಕುನೆಯ ಬುದ್ಧವಗ್ಗವು ಮುಗಿಯಿತು. 

No comments:

Post a Comment