ಧಮ್ಮಪದ
೨. ಅಪ್ಪಮಾದವಗ್ಗೋ
೨೧.
ಅಪ್ಪಮಾದೋ ಅಮತಪದಂ [ಅಮತಂ ಪದಂ (ಕ॰)], ಪಮಾದೋ ಮಚ್ಚುನೋ ಪದಂ।
ಅಪ್ಪಮತ್ತಾ ನ ಮೀಯನ್ತಿ, ಯೇ ಪಮತ್ತಾ ಯಥಾ ಮತಾ॥
“ಎಚ್ಚರಿಕೆಯಿಂದಿರುವಿಕೆ ಅಮರತ್ವದ ಪಥ, ಎಚ್ಚರಿಕೆಯಿಲ್ಲದಿರುವಿಕೆ ಮೃತ್ಯುವಿನ ಪಥ,
ಎಚ್ಚರಿಕೆ ಇರುವವ ಸಾಯುವುದಿಲ್ಲ, ಎಚ್ಚರಿಕೆ ಇಲ್ಲದವರು ಮೃತ್ಯು ಹೊಂದಿದಂತೆ ಇರುತ್ತಾರೆ”. (21)
೨೨.
ಏವಂ [ಏತಂ (ಸೀ॰ ಸ್ಯಾ॰ ಕಂ॰ ಪೀ॰)] ವಿಸೇಸತೋ ಞತ್ವಾ, ಅಪ್ಪಮಾದಮ್ಹಿ ಪಣ್ಡಿತಾ।
ಅಪ್ಪಮಾದೇ ಪಮೋದನ್ತಿ, ಅರಿಯಾನಂ ಗೋಚರೇ ರತಾ॥
“ಈ
ವಿಶೇಷತೆ ಅರಿತ ಪಂಡಿತರು (ಜ್ಞಾನಿಗಳು) ಎಚ್ಚರಿಕೆಯಲ್ಲೇ ಆನಂದಿಸುತ್ತಾರೆ ಮತ್ತು
ಆರ್ಯರ (ಅರಹಂತರ) ಕ್ಷೇತ್ರದಲ್ಲೇ ರತರಾಗುತ್ತಾರೆ”. (22)
೨೩.
ತೇ ಝಾಯಿನೋ ಸಾತತಿಕಾ, ನಿಚ್ಚಂ ದಳ್ಹಪರಕ್ಕಮಾ।
ಫುಸನ್ತಿ ಧೀರಾ ನಿಬ್ಬಾನಂ, ಯೋಗಕ್ಖೇಮಂ ಅನುತ್ತರಂ॥
“ಸದಾ
ಧ್ಯಾನಶೀಲರಾಗಿ ಸತತ ಪ್ರಯತ್ನಶೀಲರಾದ ಧೀರರು ಮಾತ್ರ ನಿಬ್ಬಾಣದಂತಹ,
ಬಂಧವಿಮುಕ್ತ ಅನುತ್ತರವಾದ ಕ್ಷೇಮವನ್ನು ಅನುಭವಿಸುತ್ತಾರೆ”. (23)
೨೪.
ಉಟ್ಠಾನವತೋ ಸತೀಮತೋ [ಸತಿಮತೋ (ಸೀ॰ ಸ್ಯಾ॰ ಕ॰)], ಸುಚಿಕಮ್ಮಸ್ಸ ನಿಸಮ್ಮಕಾರಿನೋ।
ಸಞ್ಞತಸ್ಸ ಧಮ್ಮಜೀವಿನೋ, ಅಪ್ಪಮತ್ತಸ್ಸ [ಅಪಮತ್ತಸ್ಸ (?)] ಯಸೋಭಿವಡ್ಢತಿ॥
“ಪ್ರಯತ್ನಶೀಲನ, ಸ್ಮೃತಿವಂತನ, ಶುಚಿಕರ್ಮನ, ಸಂಯಮಶೀಲನ,
ವಿಚಾರವಂತನ ಮತ್ತು ಧಮ್ಮಜೀವಿಯ ಯಶಸ್ಸು ಸದಾ ಬೆಳೆಯುತ್ತಿರುತ್ತದೆ”. (24)
೨೫.
ಉಟ್ಠಾನೇನಪ್ಪಮಾದೇನ , ಸಂಯಮೇನ ದಮೇನ ಚ।
ದೀಪಂ ಕಯಿರಾಥ ಮೇಧಾವೀ, ಯಂ ಓಘೋ ನಾಭಿಕೀರತಿ॥
“ತನ್ನ ಪ್ರಯತ್ನದಿಂದ, ಎಚ್ಚರಿಕೆಯಿಂದ ಸಂಯಮದಿಂದ ಮತ್ತು
ಧರ್ಮದಿಂದಾಗಿ ಮೇಧಾವಿಯು ಪ್ರವಾಹವು ಪೀಡಿಸದಂತಹ ದ್ವೀಪವನ್ನಾಗಿ ಮಾಡಿಕೊಳ್ಳಲಿ”. (25)
೨೬.
ಪಮಾದಮನುಯುಞ್ಜನ್ತಿ, ಬಾಲಾ ದುಮ್ಮೇಧಿನೋ ಜನಾ।
ಅಪ್ಪಮಾದಞ್ಚ ಮೇಧಾವೀ, ಧನಂ ಸೇಟ್ಠಂವ ರಕ್ಖತಿ॥
“ಮೂರ್ಖರು ಮತ್ತು ದುರ್ಮೇಧಾವಿಗಳು ಎಚ್ಚರಹೀನತೆಯಲ್ಲಿ ಆನಂದಿಸುತ್ತಾರೆ. ಆದರೆ ಮೇಧಾವಿಗಳು ಎಚ್ಚರಿಕೆಯನ್ನು ಶ್ರೇಷ್ಠ ಧನದಂತೆ (ಅಮೂಲ್ಯ ಐಶ್ವರದಂತೆ) ರಕ್ಷಿಸುತ್ತಾರೆ.”26
೨೭.
ಮಾ ಪಮಾದಮನುಯುಞ್ಜೇಥ, ಮಾ ಕಾಮರತಿಸನ್ಥವಂ [ಸನ್ಧವಂ (ಕ)]।
ಅಪ್ಪಮತ್ತೋ ಹಿ ಝಾಯನ್ತೋ, ಪಪ್ಪೋತಿ ವಿಪುಲಂ ಸುಖಂ॥
“ಆದ್ದರಿಂದ ಎಚ್ಚರಿಕೆ ಹೀನತೆಯಲ್ಲಿ ತೊಡಗಬೇಡ, ಇಂದ್ರೀಯ ಕಾಮಗಳಲ್ಲಿ ಅನುರಕ್ತನಾಗಬೇಡ, ಸದಾ ಎಚ್ಚರವುಳ್ಳವನು, ಧ್ಯಾನಿಯು ವಿಪುಲವಾದ ಸುಖವನ್ನು ಪಡೆಯುತ್ತಾನೆ.” (27)
೨೮.
ಪಮಾದಂ ಅಪ್ಪಮಾದೇನ, ಯದಾ ನುದತಿ ಪಣ್ಡಿತೋ।
ಪಞ್ಞಾಪಾಸಾದಮಾರುಯ್ಹ, ಅಸೋಕೋ ಸೋಕಿನಿಂ ಪಜಂ।
ಪಬ್ಬತಟ್ಠೋವ ಭೂಮಟ್ಠೇ [ಭುಮ್ಮಟ್ಠೇ (ಸೀ॰ ಸ್ಯಾ॰)], ಧೀರೋ ಬಾಲೇ ಅವೇಕ್ಖತಿ॥
“ಪಂಡಿತರು (ಜ್ಞಾನಿಗಳು) ಎಚ್ಚರಿಕೆಯಿಂದ ಅಲಕ್ಷವನ್ನು ದೂರೀಕರಿಸುತ್ತಾರೆ.
ಅವರು ಪ್ರಜ್ಞಾದ ಗೋಪುರವನ್ನೇರಿ ಶೋಕ ಶೂನ್ಯರಾಗಿ ಶೋಕದಿಂದಿರುವ ಪ್ರಜೆಗಳನ್ನು ಕಾಣುತ್ತಾರೆ.
ಹೇಗೆ ಪರ್ವತಶಿಖರದಿಂದ ಕೆಳಗಿನ ಭೂಮಿಯನ್ನು ಕಾಣುವರೋ
ಹಾಗೆ ಧೀರರು ಅಜ್ಞಾನಿಗಳನ್ನು ಕಾಣುತ್ತಾರೆ”. (28)
೨೯.
ಅಪ್ಪಮತ್ತೋ ಪಮತ್ತೇಸು, ಸುತ್ತೇಸು ಬಹುಜಾಗರೋ।
ಅಬಲಸ್ಸಂವ ಸೀಘಸ್ಸೋ, ಹಿತ್ವಾ ಯಾತಿ ಸುಮೇಧಸೋ॥
“ಅಲಕ್ಷವುಳ್ಳವರ ನಡುವೆ ಎಚ್ಚರಿಕೆವುಳ್ಳವನಾಗಿ, ನಿದ್ದೆ ಹೋಗುವವರ ನಡುವೆ ಬಹುಜಾಗಾರೂಕನಾಗಿ,
ಮೇಧಾವಿಯು ಮುದಿ ಕುದರೆಯನ್ನು ದಾಟಿ ಓಡುವ ಪಂದ್ಯಾಟದ ಕುದುರೆಯಂತೆ ಮೂರ್ಖನನ್ನು ದಾಟಿ ಹೋಗುವನು”. (29
೩೦.
ಅಪ್ಪಮಾದೇನ ಮಘವಾ, ದೇವಾನಂ ಸೇಟ್ಠತಂ ಗತೋ।
ಅಪ್ಪಮಾದಂ ಪಸಂಸನ್ತಿ, ಪಮಾದೋ ಗರಹಿತೋ ಸದಾ॥
“ಎಚ್ಚರಿಕೆಯಿಂದಲೇ ಮಾಘವನು (ಇಂದ್ರ) ದೇವತೆಗಳಲ್ಲಿ ಶ್ರೇಷ್ಠನಾದನು,
ಎಚ್ಚರಿಕೆಯು ಸದಾ ಪ್ರಶಂಸನೀಯ, ಎಚ್ಚರಿಕೆಹೀನತೆಯು ಸದಾ ನಿಂದನೀಯ”. (30)
೩೧.
ಅಪ್ಪಮಾದರತೋ ಭಿಕ್ಖು, ಪಮಾದೇ ಭಯದಸ್ಸಿ ವಾ।
ಸಂಯೋಜನಂ ಅಣುಂ ಥೂಲಂ, ಡಹಂ ಅಗ್ಗೀವ ಗಚ್ಛತಿ॥
“ಎಚ್ಚರಿಕೆಯಲ್ಲಿ ಆನಂದಿಸುವ ಭಿಕ್ಷುವು ಎಚ್ಚರಿಕೆಯಿಲ್ಲದಿರುವಿಕೆಯಲ್ಲಿ ಭಯಪಡುತ್ತಾನೆ.
ಆತನು ಅಗ್ನಿಯಂತೆ ಎಲ್ಲಾ ಸಣ್ಣ ದೊಡ್ಡ ಸಂಕೋಲೆಗಳನ್ನು ಸುಡುತ್ತಾ ಮುಂದುವರೆಯುತ್ತಾನೆ”. (31)
೩೨.
ಅಪ್ಪಮಾದರತೋ ಭಿಕ್ಖು, ಪಮಾದೇ ಭಯದಸ್ಸಿ ವಾ।
ಅಭಬ್ಬೋ ಪರಿಹಾನಾಯ, ನಿಬ್ಬಾನಸ್ಸೇವ ಸನ್ತಿಕೇ॥
“ಯಾವ
ಭಿಕ್ಷು ಎಚ್ಚರಿಕೆಯಲ್ಲಿ ಆನಂದಿಸುತ್ತಾನೋ ಮತ್ತು ಅಲಕ್ಷದಲ್ಲಿ ಭಯಪಡುತ್ತಾನೋ
ಆತನು ಕೆಳಗೆ ಬೀಳುವುದಿಲ್ಲ. ಆತನು ನಿಬ್ಬಾಣಕ್ಕೆ ಸಮೀಪವಾಗಿರುತ್ತಾನೆ”. (32)
ಅಪ್ಪಮಾದವಗ್ಗೋ ದುತಿಯೋ ನಿಟ್ಠಿತೋ।
No comments:
Post a Comment