Wednesday, 8 January 2020

ಧಮ್ಮಪದ ೪. ಪುಪ್ಫವಗ್ಗೋ



. ಪುಪ್ಫವಗ್ಗೋ

೪೪.

ಕೋ ಇಮಂ [ಕೋಮಂ ()] ಪಥವಿಂ ವಿಚೇಸ್ಸತಿ [ವಿಜೇಸ್ಸತಿ (ಸೀ ಸ್ಯಾ ಪೀ)], ಯಮಲೋಕಞ್ಚ ಇಮಂ ಸದೇವಕಂ
ಕೋ ಧಮ್ಮಪದಂ ಸುದೇಸಿತಂ, ಕುಸಲೋ ಪುಪ್ಫಮಿವ ಪಚೇಸ್ಸತಿ [ಪುಪ್ಫಮಿವಪ್ಪಚೇಸ್ಸತಿ ()]


ಯಾರು ತನ್ನಲ್ಲಿ ತಾನೇ ಪೃಥ್ವಿಯನ್ನು ಮತ್ತು ಯಮ (ಸುಗತಿ) ಲೋಕವನ್ನು ಮತ್ತು ಲೋಕವನ್ನು ಮತ್ತು ದೇವಲೋಕವನ್ನು ಅರಿಯುವವರಾರು? ಯಾರು ಸಂಬೋಧಿತಶೀಲರು ಫಥವನ್ನು ಅನ್ವೇಷಿಸುವವರು? ಹೇಗೆ ಪುಷ್ಪಗಳನ್ನು ಕಿತ್ತು, ಹೂಮಾಲೆಯ ಕೌಶಲ್ಯ ಅರಿಯುವ ಮಾಲೆಕಾರನಂತೆ ಅರಿಯುವವರಾರು?” (44)



೪೫.

ಸೇಖೋ ಪಥವಿಂ ವಿಚೇಸ್ಸತಿ, ಯಮಲೋಕಞ್ಚ ಇಮಂ ಸದೇವಕಂ
ಸೇಖೋ ಧಮ್ಮಪದಂ ಸುದೇಸಿತಂ, ಕುಸಲೋ ಪುಪ್ಫಮಿವ ಪಚೇಸ್ಸತಿ

ಸಾಧನೆಯ ಹಾದಿಯಲ್ಲಿರುವಂತಹ (ಸೇಖ)ನೇ ಪೃಥ್ವಿಯನ್ನು ಯಮಸಹಿತ ಎಲ್ಲಾ ದೇವಲೋಕಗಳನ್ನು ಅರಿಯುತ್ತಾನೆ. ಸೇಖನೇ ಸುಬೋಧಿತ ಶೀಲದ ಪಥ ಅನ್ವೇಷಿಸುತ್ತಾನೆ. ಮಾಲಕಾರನು ಹೂಗಳನ್ನು ಕಿತ್ತು ಕೌಶಲ್ಯ ಅರಿಯುವವನಂತೆ ಅರಿಯುತ್ತಾನೆ.           (45)



೪೬.

ಫೇಣೂಪಮಂ ಕಾಯಮಿಮಂ ವಿದಿತ್ವಾ, ಮರೀಚಿಧಮ್ಮಂ ಅಭಿಸಮ್ಬುಧಾನೋ
ಛೇತ್ವಾನ ಮಾರಸ್ಸ ಪಪುಪ್ಫಕಾನಿ [ಸಪುಪ್ಫಕಾನಿ (ಟೀಕಾ)], ಅದಸ್ಸನಂ ಮಚ್ಚುರಾಜಸ್ಸ ಗಚ್ಛೇ

ನೊರೆಯಂತೆಯೇ ಕಾಯವು ಇದೆ ಎಂದರಿತು, ಮರೀಚಿಕೆಯಂತಹ ಅದರ ಸ್ವಭಾವವನ್ನು ಗ್ರಹಿಸಿ, ಮಾರನ (ಇಂದ್ರೀಯಾಭಿಲಾಷೆಯ) ಪುಷ್ಪಬಾಣಗಳನ್ನು ಕತ್ತರಿಸಿ ಅದೃಷ್ಯನಾಗು, ನೀ ಮೃತ್ಯುರಾಜನ ಕಣ್ಣಿನಿಂದಾಗಿ. (46)



೪೭.

ಪುಪ್ಫಾನಿ ಹೇವ ಪಚಿನನ್ತಂ, ಬ್ಯಾಸತ್ತಮನಸಂ [ಬ್ಯಾಸತ್ತಮಾನಸಂ ()] ನರಂ
ಸುತ್ತಂ ಗಾಮಂ ಮಹೋಘೋವ, ಮಚ್ಚು ಆದಾಯ ಗಚ್ಛತಿ

ಇಂದ್ರೀಯ ಸುಖಗಳೆಂಬ ಹೂವುಗಳನ್ನು ಸಂಗ್ರಹಿಸುತ್ತಿರುವವನಿಗೆ ಪೇಚಾಟದ ಮನದವನಿಗೆ, ಮಲಗಿರುವ ಹಳ್ಳಿಯನ್ನು ಪ್ರವಾಹವು ಕೊಚ್ಚಿ ಹೋಗುವ ಹಾಗೆ ಮರಣವು ಹೊತ್ತಿಕೊಂಡು ಹೋಗುತ್ತದೆ  (47)



೪೮.

ಪುಪ್ಫಾನಿ ಹೇವ ಪಚಿನನ್ತಂ, ಬ್ಯಾಸತ್ತಮನಸಂ ನರಂ
ಅತಿತ್ತಞ್ಞೇವ ಕಾಮೇಸು, ಅನ್ತಕೋ ಕುರುತೇ ವಸಂ

ಇಂದ್ರೀಯ ಸುಖಗಳೆಂಬ ಪುಷ್ಪಗಳನ್ನು ಸಂಗ್ರಹಿಸುವವನಿಗೆ ಬಂಧಿತ ಮನಸ್ಸುಳ್ಳವಗೆ, ಇಂದ್ರೀಯ ಸುಖದಲ್ಲಿ ಅತೃಪ್ತನಾದವನನ್ನು ಹಂತಕನು ತನ್ನ ವಶ ಮಾಡಿಕೊಳ್ಳುವನು.    (48)



೪೯.

ಯಥಾಪಿ ಭಮರೋ ಪುಪ್ಫಂ, ವಣ್ಣಗನ್ಧಮಹೇಠಯಂ [ವಣ್ಣಗನ್ಧಮಪೋಠಯಂ ()]
ಪಲೇತಿ ರಸಮಾದಾಯ, ಏವಂ ಗಾಮೇ ಮುನೀ ಚರೇ

ಹೇಗೆ ಭ್ರಮರವು ಪುಷ್ಪಕ್ಕೆ ಅಥವಾ ಅದರ ವರ್ಣಕ್ಕೆ ಅಥವಾ ಗಂಧಕ್ಕೆ ಹಾನಿಮಾಡದೆ ಕೇವಲ ರಸವನ್ನು ತೆಗೆದುಕೊಳ್ಳವ ಹಾಗೆ ಮುನಿಗಳು ಗ್ರಾಮಗಳಲ್ಲಿ ಚಲಿಸುತ್ತಾರೆ.               (49)



೫೦.

ಪರೇಸಂ ವಿಲೋಮಾನಿ, ಪರೇಸಂ ಕತಾಕತಂ
ಅತ್ತನೋವ ಅವೇಕ್ಖೇಯ್ಯ, ಕತಾನಿ ಅಕತಾನಿ

ಪರರ ದೋಷಗಳನ್ನು ಹುಡುಕುವುದು ಬೇಡ, ಪರರ ಮಾಡಿರುವ ಮತ್ತು ಮಾಡಿಲ್ಲದ ಕುರಿತು ಯೋಚನೆ ಬೇಡ, ಬದಲಾಗಿ ಒಬ್ಬನು ತಾನು ಮಾಡಿದ ಮತ್ತು ಮಾಡಿಲ್ಲದ ಕುರಿತು ವಿಶ್ಲೇಷಿಸಲಿ.            (50)



೫೧.

ಯಥಾಪಿ ರುಚಿರಂ ಪುಪ್ಫಂ, ವಣ್ಣವನ್ತಂ ಅಗನ್ಧಕಂ
ಏವಂ ಸುಭಾಸಿತಾ ವಾಚಾ, ಅಫಲಾ ಹೋತಿ ಅಕುಬ್ಬತೋ

ಪುಷ್ಪವೊಂದು ಆಕರ್ಷಣೀಯವು, ಹೊಳಪುಳ್ಳ ವರ್ಣವುಳ್ಳದ್ದು ಆಗಿದ್ದರೂ ಸುಂಗಂಧ ವಿಲ್ಲದಿದ್ದರೆ ಹೇಗೊ, ಹಾಗೆಯೇ ಕಾರ್ಯಗತವಾಗದ ಸುಭಾಷಿತ ವಚನಗಳು ನಿಷ್ಫಲವಾಗುತ್ತದೆ.         (51)



೫೨.

ಯಥಾಪಿ ರುಚಿರಂ ಪುಪ್ಫಂ, ವಣ್ಣವನ್ತಂ ಸುಗನ್ಧಕಂ [ಸಗನ್ಧಕಂ (ಸೀ ಸ್ಯಾ ಕಂ ಪೀ)]
ಏವಂ ಸುಭಾಸಿತಾ ವಾಚಾ, ಸಫಲಾ ಹೋತಿ ಕುಬ್ಬತೋ [ಸಕುಬ್ಬತೋ (ಸೀ ಪೀ), ಪಕುಬ್ಬತೋ (ಸೀ ಅಟ್ಠ), ಸುಕುಬ್ಬತೋ (ಸ್ಯಾ ಕಂ)]

ಪುಷ್ಪವೊಂದು ಆಕರ್ಷಣೀಯವು, ಹೊಳಪುಳ್ಳ ವರ್ಣವುಳ್ಳದ್ದು ಆಗಿ ಸುಗಂಧಮಯವಾಗಿದ್ದರೆ ಹೇಗೋ, ಹಾಗೆಯೇ ಕಾರ್ಯಗತವಾಗಿರುವ ಸುಭಾಷಿತ ವಚನಗಳು ಸಫಲವಾಗುತ್ತದೆ.         (52)



೫೩.

ಯಥಾಪಿ ಪುಪ್ಫರಾಸಿಮ್ಹಾ, ಕಯಿರಾ ಮಾಲಾಗುಣೇ ಬಹೂ
ಏವಂ ಜಾತೇನ ಮಚ್ಚೇನ, ಕತ್ತಬ್ಬಂ ಕುಸಲಂ ಬಹುಂ

ಹೇಗೆ ಪುಷ್ಪರಾಶಿಯಿಂದ ಬಹು ಮಾಲೆಗಳನ್ನು ಮಾಡಬಹುದೋ, ಹಾಗೆಯೇ ಜನನ-ಮರಣ ಅನುಭವಿಸುವ ಮನುಷ್ಯ ಸಹಾ ಅನೇಕ ಕುಶಲ (ಪುಣ್ಯ) ಕಾರ್ಯಗಳನ್ನು ಮಾಡಬಹುದು.   (53)



೫೪.

ಪುಪ್ಫಗನ್ಧೋ ಪಟಿವಾತಮೇತಿ, ಚನ್ದನಂ ತಗರಮಲ್ಲಿಕಾ [ತಗರಮಲ್ಲಿಕಾ (ಸೀ ಸ್ಯಾ ಕಂ ಪೀ)]
ಸತಞ್ಚ ಗನ್ಧೋ ಪಟಿವಾತಮೇತಿ, ಸಬ್ಬಾ ದಿಸಾ ಸಪ್ಪುರಿಸೋ ಪವಾಯತಿ

ಪುಷ್ಪಗಳ ಗಂಧವು ವಾಯುವಿನ ಎದುರು ದಿಕ್ಕಿನಲ್ಲಿ ಹರಡಲಾರದು, ಹಾಗೆಯೇ ಚಂದನ (ಶ್ರೀಗಂಧ), ತಗರ, ಮಲ್ಲಿಗೆಯ ಪರಿಮಳವು ಸಹಾ. ಆದರೆ ಸಂತರ ಯಶೋಗಂಧವು ವಾಯುವಿಗೆ ಎದುರಾಗಿ ಹಬ್ಬುತ್ತದೆ. ಸತ್ಪುರುಷರ ಶೀಲ ಸುಗಂದವು ಸರ್ವದಿಕ್ಕುಗಳಿಗೂ ಪ್ರಸರಿಸುತ್ತದೆ.  (54)



೫೫.

ಚನ್ದನಂ ತಗರಂ ವಾಪಿ, ಉಪ್ಪಲಂ ಅಥ ವಸ್ಸಿಕೀ
ಏತೇಸಂ ಗನ್ಧಜಾತಾನಂ, ಸೀಲಗನ್ಧೋ ಅನುತ್ತರೋ

ಚಂದನದ (ಶ್ರೀಗಂಧ), ತಗರದ, ಉಪ್ಪಲದ (ನೀಲಿ ಕಮಲದ), ಮಲ್ಲಿಗೆಗಳ ಇವೆಲ್ಲಾ ಸುಗಂಧಗಳಿಗಿಂತ ಶೀಲ ಸುಗಂಧವು ಅನುತ್ತರವಾಗಿದೆ.                (55)



೫೬.

ಅಪ್ಪಮತ್ತೋ ಅಯಂ ಗನ್ಧೋ, ಯ್ವಾಯಂ ತಗರಚನ್ದನಂ [ಯಾಯಂ ತಗರಚನ್ದನೀ (ಸೀ ಸ್ಯಾ ಕಂ ಪೀ)]
ಯೋ ಸೀಲವತಂ ಗನ್ಧೋ, ವಾತಿ ದೇವೇಸು ಉತ್ತಮೋ

ತಿಳಿಯಾಗಿವೆ ಸುಗಂಧಗಳಾದ ತಗರ, ಚಂದನಗಳು. ಆದರೆ ಶೀಲವಂತನ ಸುಗಂಧವಂತು ಉತ್ತಮೋತ್ತಮತೆಯಿಂದ ಕೂಡಿ ದೇವತೆಗಳ ನಡುವೆ ಸಹಾ ಪ್ರಸರಿಸುತ್ತದೆ.             (56)



೫೭.

ತೇಸಂ ಸಮ್ಪನ್ನಸೀಲಾನಂ, ಅಪ್ಪಮಾದವಿಹಾರಿನಂ
ಸಮ್ಮದಞ್ಞಾ ವಿಮುತ್ತಾನಂ, ಮಾರೋ ಮಗ್ಗಂ ವಿನ್ದತಿ

ಯಾರು ಶೀಲಸಂಪನ್ನರೊ, ಎಚ್ಚರಿಕೆಯಲ್ಲೇ ವಿಹರಿಸುವರೋ, ಸಮ್ಮಾ ಪ್ರಜ್ಞೆಯಿಂದಾಗಿ ವಿಮುಕ್ತಿ ಹೊಂದಿರುವರೋ ಅಂತಹವರ ಮಾರ್ಗವನ್ನು ಮಾರನು ಹುಡುಕಲಾರ.     (57)



೫೮.

ಯಥಾ ಸಙ್ಕಾರಠಾನಸ್ಮಿಂ [ಸಙ್ಕಾರಧಾನಸ್ಮಿಂ (ಸೀ ಸ್ಯಾ ಕಂ ಪೀ)], ಉಜ್ಝಿತಸ್ಮಿಂ ಮಹಾಪಥೇ
ಪದುಮಂ ತತ್ಥ ಜಾಯೇಥ, ಸುಚಿಗನ್ಧಂ ಮನೋರಮಂ

ಹೇಗೆ ಹೆದ್ದಾರಿಯಲ್ಲಿ ಬಿಸಾಡಲ್ಪಟ್ಟ ಕಸದ ರಾಶಿಯಲ್ಲಿಯ ಪದ್ಮವು ಸುಪರಿಮಳ ಬೀರಿ ಮನೋಹರವಾಗಿ ಅರಳುವಂತೆ.             (58)



೫೯.

ಏವಂ ಸಙ್ಕಾರಭೂತೇಸು, ಅನ್ಧಭೂತೇ [ಅನ್ಧೀಭೂತೇ ()] ಪುಥುಜ್ಜನೇ
ಅತಿರೋಚತಿ ಪಞ್ಞಾಯ, ಸಮ್ಮಾಸಮ್ಬುದ್ಧಸಾವಕೋ

ಹಾಗೆಯೆ ಜೀವರಾಶಿಯ ನಡುವೆ ಅಂಥ ಜನಸಾಮಾನ್ಯರ ನಡುವೆಯಲ್ಲು ಸಮ್ಮಾಸಂಬುದ್ಧರ ಶ್ರಾವಕರು ತನ್ನ ಪ್ರಜ್ಞೆಯಿಂದಾಗಿ ಪ್ರಕಾಶಿಸುತ್ತಾರೆ.                (59)



ಪುಪ್ಫವಗ್ಗೋ ಚತುತ್ಥೋ ನಿಟ್ಠಿತೋ

No comments:

Post a Comment