Wednesday, 15 January 2020

ಧಮ್ಮಪದ. ೧೨. ಅತ್ತವಗ್ಗೋ


ಧಮ್ಮಪದ. ೧೨. ಅತ್ತವಗ್ಗೋ


೧೫೭.

ಅತ್ತಾನಞ್ಚೇ ಪಿಯಂ ಜಞ್ಞಾ, ರಕ್ಖೇಯ್ಯ ನಂ ಸುರಕ್ಖಿತಂ
 ತಿಣ್ಣಂ ಅಞ್ಞತರಂ ಯಾಮಂ, ಪಟಿಜಗ್ಗೇಯ್ಯ ಪಣ್ಡಿತೋ

ತನ್ನನ್ನೇ ಪ್ರಿಯನೆಂದು ತಿಳಿದಿರುವವನು, ತನ್ನನ್ನು ಸುರಕ್ಷಿತವಾಗಿ ರಕ್ಷಿಸಿಕೊಳ್ಳಬೇಕು, ಪಂಡಿತನಾಗಿರುವವನು ಜೀವನದ (ರಾತ್ರಿಯ) ಮೂರು ಯಾಮಗಳಲ್ಲಿ (ಹಂತಗಳಲ್ಲಿ) ಒಂದರಲ್ಲಿಯಾದರೂ ಜಾಗೃತಿ ಭಾವದಿಂದರಬೇಕು.”              (157)

೧೫೮.

ಅತ್ತಾನಮೇವ ಪಠಮಂ, ಪತಿರೂಪೇ ನಿವೇಸಯೇ
 ಅಥಞ್ಞಮನುಸಾಸೇಯ್ಯ, ಕಿಲಿಸ್ಸೇಯ್ಯ ಪಣ್ಡಿತೋ

ಪ್ರಪ್ರಥಮವಾಗಿ ತನ್ನನ್ನು ಯೋಗ್ಯವಾದುದರಲ್ಲಿ ಸ್ಥಾಪಿಸಿಕೊಂಡು, ನಂತರ ಇತರರಿಗೆ ಬೋಧಿಸಬೇಕು.
  ಅಂತಹ ಪಂಡಿತನು ಕ್ಲೇಶಕ್ಕೆ ಗುರಿಯಾಗುವುದಿಲ್ಲ.”              (158)

೧೫೯.

ಅತ್ತಾನಂ ಚೇ ತಥಾ ಕಯಿರಾ, ಯಥಾಞ್ಞಮನುಸಾಸತಿ
 ಸುದನ್ತೋ ವತ ದಮೇಥ, ಅತ್ತಾ ಹಿ ಕಿರ ದುದ್ದಮೋ

ಯಾವುದನ್ನು ಅನ್ಯರಿಗೆ ಬೋಧಿಸುವನೋ, ಸ್ವತಃ ಅದನ್ನು ತಾನೇ ಪಾಲಿಸಿರಬೇಕು. ತಾನು ಪೂರ್ಣವಾಗಿ ನಿಯಂತ್ರಿತನಾದರೆ, ಪರರನ್ನು ನಿಯಂತ್ರಿಸುತ್ತಾನೆ, ತನ್ನನ್ನು ದಮಿಸುವುದು ಕ್ಲಿಷ್ಟಕರವಾಗಿದೆ.”               (159)

೧೬೦.

ಅತ್ತಾ ಹಿ ಅತ್ತನೋ ನಾಥೋ, ಕೋ ಹಿ ನಾಥೋ ಪರೋ ಸಿಯಾ
 ಅತ್ತನಾ ಹಿ ಸುದನ್ತೇನ, ನಾಥಂ ಲಭತಿ ದುಲ್ಲಭಂ

ತನಗೆ ತಾನೇ ರಕ್ಷಕ, ಬೇರೆಯವರು ಹೇಗೆತಾನೇ ರಕ್ಷಿಸಬಲ್ಲರು?
  ತನ್ನನ್ನು ಪೂರ್ಣವಾಗಿ ಪಳಗಿಸಿಕೊಂಡಾಗ ದುರ್ಲಭವಾದ ರಕ್ಷಣೆ (ಒಡೆತನ) ದೊರೆಯುವುದು.”   (160)

೧೬೧.

ಅತ್ತನಾ ಹಿ ಕತಂ ಪಾಪಂ, ಅತ್ತಜಂ ಅತ್ತಸಮ್ಭವಂ
 ಅಭಿಮತ್ಥತಿ [ಅಭಿಮನ್ತತಿ (ಸೀ ಪೀ)] ದುಮ್ಮೇಧಂ, ವಜಿರಂ ವಸ್ಮಮಯಂ [ವಜಿರಂವಮ್ಹಮಯಂ (ಸ್ಯಾ )] ಮಣಿಂ

ತನ್ನಿಂದಲೇ ಪಾಪ ಕ್ರಿಯೆ ಆಗುತ್ತದೆ
ಪಾಪ ತನ್ನಿಂದಲೇ ಹುಟ್ಟುವುದು
ತನ್ನಿಂದಲೇ ಸಂಭವಿಸುವಂತಹುದು
ಹೇಗೆ ವಜ್ರವು ಕಠಿಣವಾದ ಮಣಿಯನ್ನು ಅರೆದುಬಿಡುವುದೋ ಹಾಗೇ 
ಪಾಪವು ದುರ್ಮೇಧನಿಗೆ (ಮೂರ್ಖನಿಗೆ) ಅರೆದುಬಿಡುತ್ತದೆ.”    (161)

೧೬೨.

ಯಸ್ಸ ಅಚ್ಚನ್ತದುಸ್ಸೀಲ್ಯಂ, ಮಾಲುವಾ ಸಾಲಮಿವೋತ್ಥತಂ
 ಕರೋತಿ ಸೋ ತಥತ್ತಾನಂ, ಯಥಾ ನಂ ಇಚ್ಛತೀ ದಿಸೋ

ಮಾಲುವ ಬಳ್ಳಯು ಶಾಲ ವೃಕ್ಷವನ್ನು ಸುತ್ತಿಕೊಂಡು ನಾಶಗೊಳಿಸುವಂತೆ, ದುಶ್ಶೀಲನು ತನ್ನಿಂದಲೇ ನಾಶಗೊಳ್ಳುತ್ತಾನೆ. ಹೇಗೆಂದರೆ ಶತ್ರು ದುಃಖ ಬಯಸಿದಂತಹ ರೀತಿಯಲ್ಲೇ ಆಗಿಬಿಡುತ್ತಾನೆ.”      (162)

೧೬೩.

ಸುಕರಾನಿ ಅಸಾಧೂನಿ, ಅತ್ತನೋ ಅಹಿತಾನಿ
 ಯಂ ವೇ ಹಿತಞ್ಚ ಸಾಧುಞ್ಚ, ತಂ ವೇ ಪರಮದುಕ್ಕರಂ

ಅಸಾಧುವು (ಕೆಟ್ಟದ್ದು) ಮತ್ತು ಅಹಿತವಾದುದನ್ನು ಮಾಡಿಕೊಳ್ಳುವುದು ಸುಲಭ
ಆದರೆ ಸಾಧುವು (ಒಳ್ಳೆಯದು) ಮತ್ತು ಹಿತವಾದುದನ್ನು ಮಾಡಿಕೊಳ್ಳುವುದು ಪರಮ ದುಷ್ಕರವಾದುದು.”     (163)

೧೬೪.

ಯೋ ಸಾಸನಂ ಅರಹತಂ, ಅರಿಯಾನಂ ಧಮ್ಮಜೀವಿನಂ
 ಪಟಿಕ್ಕೋಸತಿ ದುಮ್ಮೇಧೋ, ದಿಟ್ಠಿಂ ನಿಸ್ಸಾಯ ಪಾಪಿಕಂ
 ಫಲಾನಿ ಕಟ್ಠಕಸ್ಸೇವ, ಅತ್ತಘಾತಾಯ [ಅತ್ತಘಞ್ಞಾಯ (ಸೀ ಸ್ಯಾ ಪೀ)] ಫಲ್ಲತಿ

ಯಾವ ಅರಹಂತರ ಶಾಸನವನ್ನು, ಶ್ರೇಷ್ಠ ಆರ್ಯರನ್ನು, ಧಮ್ಮಜೀವನ ನಡೆಸುವವರನ್ನು ಮಿಥ್ಯಾದೃಷ್ಟಿಯಿಂದ ಕೂಡಿರುವ ದುರ್ಮೇಧ (ಮೂರ್ಖ) ಪಾಪಿಯು ಹಳಿಯುವನೋ ಆತನು ತನ್ನನ್ನೇ ನಾಶಮಾಡಲು ಹುಟ್ಟಿರುವ ಬಿದಿರಿನ ಬೀಜದಂತೆ ಸ್ವನಾಶವಾಗುತ್ತಾನೆ.”       (164)

೧೬೫.

ಅತ್ತನಾ ಹಿ [ಅತ್ತನಾವ (ಸೀ ಸ್ಯಾ ಪೀ)] ಕತಂ ಪಾಪಂ, ಅತ್ತನಾ ಸಂಕಿಲಿಸ್ಸತಿ
 ಅತ್ತನಾ ಅಕತಂ ಪಾಪಂ, ಅತ್ತನಾವ ವಿಸುಜ್ಝತಿ
 ಸುದ್ಧೀ ಅಸುದ್ಧಿ ಪಚ್ಚತ್ತಂ, ನಾಞ್ಞೋ ಅಞ್ಞಂ [ನಾಞ್ಞಮಞ್ಞೋ(ಸೀ)] ವಿಸೋಧಯೇ

ತನ್ನಿಂದಲೇ ಪಾಪವಾಗುತ್ತದೆ
ತನ್ನಿಂದಲೇ ಕಲುಷಿತನಾಗುತ್ತಾನೆ
ತನ್ನಿಂದಲೇ ಪಾಪ ತಡೆದಾಗ
ತಾನಾಗಿಯೇ ವಿಶುದ್ಧನಾಗುತ್ತಾನೆ
ಶುದ್ಧಿ,  ಅಶುದ್ಧಿಗಳು ತನ್ನನ್ನು ಅವಲಂಬಿಸಿವೆ
ಅನ್ಯರಾರೂ ತನ್ನನ್ನು ಶುದ್ಧಿಗೊಳಿಸಲಾರರು.”              (165)

೧೬೬.

ಅತ್ತದತ್ಥಂ ಪರತ್ಥೇನ, ಬಹುನಾಪಿ ಹಾಪಯೇ
 ಅತ್ತದತ್ಥಮಭಿಞ್ಞಾಯ, ಸದತ್ಥಪಸುತೋ ಸಿಯಾ

ಯಾರು ಸಹಾ ಸ್ವ-ಹಿತವನ್ನು, ಶ್ರೇಷ್ಠ ಪರರ ಹಿತಕ್ಕಾಗಿಯೇ ಆಗಲಿ ಅಲಕ್ಷಿಸಬಾರದು
ತನ್ನ ಹಿತವನ್ನು ಪೂರ್ಣವಾಗಿ ಅರಿತು, ಅದರಂತೆಯೇ ಒಳ್ಳೆಯತನದಿಂದ ನಡೆದುಕೊಳ್ಳಲಿ.”     (166)

ಅತ್ತವಗ್ಗೋ ದ್ವಾದಸಮೋ ನಿಟ್ಠಿತೋ
 ಹನ್ನೆರಡರ ಅತ್ತವಗ್ಗೋ ಇಲ್ಲಿಗೆ ಮುಗಿಯಿತು. 

No comments:

Post a Comment