Friday, 10 January 2020

ಧಮ್ಮಪದ ೮. ಸಹಸ್ಸವಗ್ಗೋ


. ಸಹಸ್ಸವಗ್ಗೋ


೧೦೦.

ಸಹಸ್ಸಮಪಿ ಚೇ ವಾಚಾ, ಅನತ್ಥಪದಸಂಹಿತಾ
ಏಕಂ ಅತ್ಥಪದಂ ಸೇಯ್ಯೋ, ಯಂ ಸುತ್ವಾ ಉಪಸಮ್ಮತಿ

ಅನರ್ಥಕಾರಿ ಪದಗಳಿಂದ ಕೂಡಿರುವ ಸಾವಿರ ನುಡಿಗಳಿಗಿಂತ
ಶಾಂತಿ ನೀಡುವ ಒಂದೇ ಒಂದು ಅರ್ಥಪೂರ್ಣವಾದ ಪದವು ಶ್ರೇಷ್ಠವಾದುದು.   (100)

೧೦೧.

ಸಹಸ್ಸಮಪಿ ಚೇ ಗಾಥಾ, ಅನತ್ಥಪದಸಂಹಿತಾ
ಏಕಂ ಗಾಥಾಪದಂ ಸೇಯ್ಯೋ, ಯಂ ಸುತ್ವಾ ಉಪಸಮ್ಮತಿ

ಅನರ್ಥಕಾರಿ ಪದಗಳಿಂದ ಕೂಡಿರುವ ಸಹಸ್ರ ಗಾಥೆಗಳಿಗಿಂತ
ಕೇಳಿದಾಗ ಶಾಂತಿಯನ್ನುಂಟುಮಾಡುವ ಒಂದೇ ಒಂದು ಗಾಥೆಯು ಶ್ರೇಷ್ಠವಾದುದು        (101)
೧೦೨.

ಯೋ ಗಾಥಾ ಸತಂ ಭಾಸೇ, ಅನತ್ಥಪದಸಂಹಿತಾ [ಅನತ್ಥಪದಸಞ್ಹಿತಂ () ವಿಸೇಸನಂ ಹೇತಂ ಗಾಥಾತಿಪದಸ್ಸ]
ಏಕಂ ಧಮ್ಮಪದಂ ಸೇಯ್ಯೋ, ಯಂ ಸುತ್ವಾ ಉಪಸಮ್ಮತಿ

ಅನರ್ಥ ಪದ ಸಂಹಿತಗಳಿಂದ ಕೂಡಿರುವ ನೂರು ಗಾಥೆಗಳಿಗಿಂತ
ಕೇಳಿದಾಗ ಪರಮಶಾಂತಿ ತರುವ ಏಕ ಧಮ್ಮಭರಿತ ಪದವೇ ಶ್ರೇಷ್ಠಕರವಾದುದು.”               (102)

೧೦೩.

ಯೋ ಸಹಸ್ಸಂ ಸಹಸ್ಸೇನ, ಸಙ್ಗಾಮೇ ಮಾನುಸೇ ಜಿನೇ
ಏಕಞ್ಚ ಜೇಯ್ಯಮತ್ತಾನಂ [ಅತ್ತಾನಂ (ಸೀ ಪೀ)], ವೇ ಸಙ್ಗಾಮಜುತ್ತಮೋ
ಒಬ್ಬನು ಸಾವಿರ ಸಂಗ್ರಾಮಗಳಲ್ಲಿ ಸಹಸ್ರ ಸಹಸ್ರ ಮನುಷ್ಯರನ್ನು ಜಯಿಸಬಹುದು,
ಆದರೂ ಸಹ ಕೇವಲ ತನ್ನನ್ನು ಜಯಿಸಿದಂತಹವನು ಅತ್ಯುತ್ತಮ ಜಯಶಾಲಿಯಾಗಿರುತ್ತಾನೆ.”              (103)

೧೦೪.

ಅತ್ತಾ ಹವೇ ಜಿತಂ ಸೇಯ್ಯೋ, ಯಾ ಚಾಯಂ ಇತರಾ ಪಜಾ
ಅತ್ತದನ್ತಸ್ಸ ಪೋಸಸ್ಸ, ನಿಚ್ಚಂ ಸಞ್ಞತಚಾರಿನೋ

ಸ್ವಜಯ (ತನ್ನ ಮೇಲಿನ ವಿಜಯ)ವು ಪರರ ಮೇಲಿನ ಜಯಕ್ಕಿಂತ ಶ್ರೇಷ್ಠಕರ,
ಯಾರು ಸದಾ ಸ್ವ-ದಮನದಲ್ಲಿ ತಲ್ಲೀನನೋ, ಯಾರು ನಿತ್ಯ ಸಂಯಮಚಾರಿಯೋ               (104)

೧೦೫.

ನೇವ ದೇವೋ ಗನ್ಧಬ್ಬೋ, ಮಾರೋ ಸಹ ಬ್ರಹ್ಮುನಾ
ಜಿತಂ ಅಪಜಿತಂ ಕಯಿರಾ, ತಥಾರೂಪಸ್ಸ ಜನ್ತುನೋ

ಅಂತಹವನ ಜಯವನ್ನು, ಅಪರಾಜಿತವನ್ನಾಗಿಸಲು ದೇವನಿಂದಾಗಲಿ ಅಥವಾ
ಗಂಧರ್ವನಿಂದಾಗಲಿ ಅಥವಾ ಮಾರನಿಂದಾಗಲಿ ಅಥವಾ ಬ್ರಹ್ಮನಿಂದಾಗಲೀ ಸಾಧ್ಯವಿಲ್ಲ.      (105)


೧೦೬.

ಮಾಸೇ ಮಾಸೇ ಸಹಸ್ಸೇನ, ಯೋ ಯಜೇಥ ಸತಂ ಸಮಂ
ಏಕಞ್ಚ ಭಾವಿತತ್ತಾನಂ, ಮುಹುತ್ತಮಪಿ ಪೂಜಯೇ
ಸಾಯೇವ ಪೂಜನಾ ಸೇಯ್ಯೋ, ಯಞ್ಚೇ ವಸ್ಸಸತಂ ಹುತಂ
ಮಾಸ ಮಾಸಕ್ಕೂ, ಶತ ವರ್ಷಗಳ ಕಾಲ ಯಜ್ಞಯಾಗಗಳು ಮಾಡುವುದಕ್ಕಿಂತ ಚಿತ್ತಪೂರ್ಣತೆ ಹೊಂದಿದಂತಹ (ಅರಹಂತರ)ವರ ಕ್ಷಣ ಮುಹೂರ್ತದ ಪೂಜೆಯು ಶತ ವರ್ಷದ ಯಾಗಕ್ಕಿಂತ ಉತ್ತಮವಾದುದು.”             (106)

೧೦೭.

ಯೋ ವಸ್ಸಸತಂ ಜನ್ತು, ಅಗ್ಗಿಂ ಪರಿಚರೇ ವನೇ
ಏಕಞ್ಚ ಭಾವಿತತ್ತಾನಂ, ಮುಹುತ್ತಮಪಿ ಪೂಜಯೇ
ಸಾಯೇವ ಪೂಜನಾ ಸೇಯ್ಯೋ, ಯಞ್ಚೇ ವಸ್ಸಸತಂ ಹುತಂ

ಒಬ್ಬರು ಶತವರ್ಷಗಳ ಕಾಲ ವನದಲ್ಲಿ ಅಗ್ನಿ ಪೂಜಿಸುತ್ತ ಪರಿಚಾರಿಕೆ (ರಕ್ಷಿಸುತ್ತಿದ್ದರೂ) ಮಾಡುವುದಕ್ಕಿಂತ ಒಂದು ಕ್ಷಣ ಮುಹೂರ್ತಕಾಲ ಚಿತ್ತಾಭಿವೃದ್ಧಿ ಹೊಂದಿದವರನ್ನು ಪೂಜಿಸಿದರೆ ಅಂತಹ ಗೌರವವು ಶತಮಾನದ ಯಾಗಕ್ಕಿಂತ ಉತ್ತಮವಾದುದು.”     (107)

೧೦೮.

ಯಂ ಕಿಞ್ಚಿ ಯಿಟ್ಠಂ ಹುತಂ [ಯಿಟ್ಠಞ್ಚ ಹುತಞ್ಚ ()] ಲೋಕೇ, ಸಂವಚ್ಛರಂ ಯಜೇಥ ಪುಞ್ಞಪೇಕ್ಖೋ
ಸಬ್ಬಮ್ಪಿ ತಂ ಚತುಭಾಗಮೇತಿ, ಅಭಿವಾದನಾ ಉಜ್ಜುಗತೇಸು ಸೇಯ್ಯೋ

ಪುಣ್ಯವನ್ನು ಅಪೇಕ್ಷಿಸುತ್ತಾ ಯಾರು ಲೋಕದಲ್ಲಿ ಸಂವತ್ಸರಕ್ಕೊಮ್ಮೆ ಯಜ್ಞಗಳನ್ನು ಮಾಡಿದರೂ ಸಹಾ, ಅವ್ಯಾವುದೂ ಸಹಾ ಋಜಗತರನ್ನು ಅಭಿವಂದಿಸುವಂತ ಶ್ರೇಯಸ್ಕರದ ಲಾಭದ ಕಾಲುಭಾಗಕ್ಕೂ ಸಮವಾಗಲಾರದು.”                (108)

೧೦೯.

ಅಭಿವಾದನಸೀಲಿಸ್ಸ, ನಿಚ್ಚಂ ವುಡ್ಢಾಪಚಾಯಿನೋ [ವದ್ಧಾಪಚಾಯಿನೋ (ಸೀ ಪೀ)]
ಚತ್ತಾರೋ ಧಮ್ಮಾ ವಡ್ಢನ್ತಿ, ಆಯು ವಣ್ಣೋ ಸುಖಂ ಬಲಂ

ಶೀಲವಂತರಿಗೆ ಅಭಿವಂದಿಸುವ, ನಿತ್ಯವೂ ಅಂತಹ ವೃದ್ಧರಿಗೆ ಗೌರವಿಸುವುದರಿಂದಾಗಿ
ನಾಲ್ಕು ಧಮ್ಮಗಳು ವರ್ಧಿಸುತ್ತದೆ. ಅವೆಂದರೆ: ಆಯಸ್ಸು, ವರ್ಣ, ಸುಖ ಮತ್ತು ಬಲ.”             (109)

೧೧೦.

ಯೋ ವಸ್ಸಸತಂ ಜೀವೇ, ದುಸ್ಸೀಲೋ ಅಸಮಾಹಿತೋ
ಏಕಾಹಂ ಜೀವಿತಂ ಸೇಯ್ಯೋ, ಸೀಲವನ್ತಸ್ಸ ಝಾಯಿನೋ

ಒಬ್ಬನು ದುಶ್ಶೀಲನಾಗಿ, ಅಸಂಯಮಿಯಾಗಿ ಶತವರ್ಷ ಬಾಳಬಹುದು,
 ಆದರೂ ಅದಕ್ಕಿಂತ ಶೀಲವಂತನಾಗಿ, ಧ್ಯಾನಿಯಾಗಿ ಒಂದುದಿನ ಜೀವಿಸಿದರೂ ಅದು ಶ್ರೇಷ್ಠಕರವಾಗಿರುತ್ತದೆ.”    (110)

೧೧೧.

ಯೋ ವಸ್ಸಸತಂ ಜೀವೇ, ದುಪ್ಪಞ್ಞೋ ಅಸಮಾಹಿತೋ
ಏಕಾಹಂ ಜೀವಿತಂ ಸೇಯ್ಯೋ, ಪಞ್ಞವನ್ತಸ್ಸ ಝಾಯಿನೋ

ಒಬ್ಬನು ಶತವರ್ಷಗಳಷ್ಟು ಕಾಲ ದುಷ್ಪ್ರಜ್ಞನಾಗಿ (ಮೂರ್ಖನಾಗಿ) ಅಸಮಾಹಿತನಾಗಿ (ಅನಿಯಂತ್ರಿಯ ಚಂಚಲಿಗನಾಗಿ) ಜೀವಿಸುವುದಕ್ಕಿಂತ, ಪ್ರಜ್ಞಾವಂತನಾಗಿ, ಧ್ಯಾನಿಯಾಗಿ, ಜೀವಿಸುವ ಏಕದಿನದ ಜೀವಿತವು ಶ್ರೇಷ್ಠಕರವಾದುದು.”    (111)

೧೧೨.

ಯೋ ವಸ್ಸಸತಂ ಜೀವೇ, ಕುಸೀತೋ ಹೀನವೀರಿಯೋ
ಏಕಾಹಂ ಜೀವಿತಂ ಸೇಯ್ಯೋ, ವೀರಿಯಮಾರಭತೋ ದಳ್ಹಂ

ಒಬ್ಬನು ಶತವರ್ಷಗಳ ಕಾಲ ಸೋಮಾರಿಯಾಗಿ, ಹೀನವೀರ್ಯನಾಗಿ (ಅಲ್ಪಶ್ರಮಿಯಾಗಿ) ಜೀವಿಸಬಹುದು. ಆದರೂ ದೃಢತೆಯಿಂದ ಮತ್ತು ಅಪಾರ ಪ್ರಯತ್ನಶೀಲತೆಯಿಂದ ಕೂಡಿದ ಒಂದುದಿನದ ಜೀವಿತ ಉತ್ತಮವಾಗಿರುತ್ತದೆ.”       (112)

೧೧೩.

ಯೋ ವಸ್ಸಸತಂ ಜೀವೇ, ಅಪಸ್ಸಂ ಉದಯಬ್ಬಯಂ
ಏಕಾಹಂ ಜೀವಿತಂ ಸೇಯ್ಯೋ, ಪಸ್ಸತೋ ಉದಯಬ್ಬಯಂ

ಒಬ್ಬನು ಉದಯ ಮತ್ತು ಅಳಿವುಗಳನ್ನು ಅರಿಯದೆ ಶತವರ್ಷಗಳ ಕಾಲ ಜೀವಿಸಬಹುದು,
ಆದರೆ ಅಂತಹ ಜೀವನಕ್ಕಿಂತ ಉದಯ ಮತ್ತು ಅಳಿವುಗಳನ್ನು ಕಂಡಂತಹ ಒಂದು ದಿನದ ಜೀವನ ಉತ್ತಮವಾದುದು.”        (113

೧೧೪.

ಯೋ ವಸ್ಸಸತಂ ಜೀವೇ, ಅಪಸ್ಸಂ ಅಮತಂ ಪದಂ
ಏಕಾಹಂ ಜೀವಿತಂ ಸೇಯ್ಯೋ, ಪಸ್ಸತೋ ಅಮತಂ ಪದಂ

ಒಬ್ಬನು ಅಮರತ್ವದ ಸ್ಥಿತಿಯನ್ನು ಅರಿಯದೆ ಶತವರ್ಷಗಳನ್ನು ಜೀವಿಸಬಹುದು,
ಆದರೆ ಅಮರತ್ವವನ್ನು ಗ್ರಹಿಸಿದ ಒಂದು ದಿನದ ಜೀವಿತವು ಅದಕ್ಕಿಂತ ಶ್ರೇಷ್ಠಕರವಾಗಿರುತ್ತದೆ.”             (114)

೧೧೫.

ಯೋ ವಸ್ಸಸತಂ ಜೀವೇ, ಅಪಸ್ಸಂ ಧಮ್ಮಮುತ್ತಮಂ
ಏಕಾಹಂ ಜೀವಿತಂ ಸೇಯ್ಯೋ, ಪಸ್ಸತೋ ಧಮ್ಮಮುತ್ತಮಂ

ಒಬ್ಬನು ಶತ ವರ್ಷಗಳ ಕಾಲ ಉತ್ತಮ ಧಮ್ಮವನ್ನು ಅರಿಯದೆ ಜೀವಿಸಬಹುದು,
 ಆದರೆ ಉತ್ತಮ ಧಮ್ಮವನ್ನು ದರ್ಶಿಸಿದಂತಹವರ ಒಂದೇ ದಿನದ ಜೀವನವು ಶ್ರೇಷ್ಠಕರವಾಗಿರುತ್ತದೆ.”  (115)

ಸಹಸ್ಸವಗ್ಗೋ ಅಟ್ಠಮೋ ನಿಟ್ಠಿತೋ
ಇಲ್ಲಿಗೆ ಸಹಸ್ಸವಗ್ಗವು ಮುಗಿಯಿತು

No comments:

Post a Comment