Friday, 10 January 2020

ಧಮ್ಮಪದ ೫. ಬಾಲವಗ್ಗೋ


. ಬಾಲವಗ್ಗೋ


೬೦.

ದೀಘಾ ಜಾಗರತೋ ರತ್ತಿ, ದೀಘಂ ಸನ್ತಸ್ಸ ಯೋಜನಂ
ದೀಘೋ ಬಾಲಾನಂ ಸಂಸಾರೋ, ಸದ್ಧಮ್ಮಂ ಅವಿಜಾನತಂ

ನಿದ್ರೆ ಬಾರದೆ ಜಾಗೃತನಾಗಿರುವವನಿಗೆ ರಾತ್ರಿಯು ದೀರ್ಘವಾಗಿರುತ್ತದೆ, ದಣಿದವನಿಗೆ ಯೋಜನ ದೂರವು ದೀರ್ಘವಾಗಿರುತ್ತದೆ. ಸದ್ಧಮ್ಮವನ್ನು ಅರಿಯದ ಮೂರ್ಖರಿಗೆ ಸಂಸಾರದಲ್ಲಿ ಇರುವಿಕೆ ದೀರ್ಘವಾಗಿರುತ್ತದೆ.              (60)


೬೧.

ಚರಞ್ಚೇ ನಾಧಿಗಚ್ಛೇಯ್ಯ, ಸೇಯ್ಯಂ ಸದಿಸಮತ್ತನೋ
ಏಕಚರಿಯಂ [ಏಕಚರಿಯಂ ()] ದಳ್ಹಂ ಕಯಿರಾ, ನತ್ಥಿ ಬಾಲೇ ಸಹಾಯತಾ


ಸಾಧನೆಯ ಹಾದಿಯಲ್ಲಿರುವವನಿಗೆ ತನಗಿಂತ ಉತ್ತಮ ಅಥವಾ ಸಮನಾದವನು ಸಿಗದಿದ್ದರೆ ಒಂಟಿಯಾಗಿಯೇ ದೃಢತೆಯಿಂದ ಜೀವಿಸಲಿ, ಆದರೆ ಮೂರ್ಖರ ಒಡನಾಟವಂತು ಕೂಡದು.              (61)

೬೨.

ಪುತ್ತಾ ಮತ್ಥಿ ಧನಮ್ಮತ್ಥಿ [ಪುತ್ತಮತ್ಥಿ ಧನಮತ್ಥಿ ()], ಇತಿ ಬಾಲೋ ವಿಹಞ್ಞತಿ
ಅತ್ತಾ ಹಿ [ಅತ್ತಾಪಿ (?)] ಅತ್ತನೋ ನತ್ಥಿ, ಕುತೋ ಪುತ್ತಾ ಕುತೋ ಧನಂ

“’ನನಗೆ ಪುತ್ರರಿರುವರು, ನನ್ನಲ್ಲಿ ಧನವು ಇರುವುದುಎಂದು ಮೂರ್ಖರು ಚಿಂತೆಪಡುವರು.
ತಾನೇ ತನ್ನವಲ್ಲ ಎಂದಮೇಲೆ ಎಲ್ಲಿಯ ಪುತ್ರರು, ಎಲ್ಲಿಯ ಧನ.         (62)

೬೩.

ಯೋ ಬಾಲೋ ಮಞ್ಞತಿ ಬಾಲ್ಯಂ, ಪಣ್ಡಿತೋ ವಾಪಿ ತೇನ ಸೋ
ಬಾಲೋ ಪಣ್ಡಿತಮಾನೀ, ವೇ ‘‘ಬಾಲೋ’’ತಿ ವುಚ್ಚತಿ

ಯಾವ ಮೂರ್ಖನು ತನ್ನ ಮೂರ್ಖತ್ವವನ್ನು ಸ್ವೀಕರಿಸುವನೋ (ತಿಳಿದಿರುವನೋ) ಅಷ್ಟರಮಟ್ಟಿಗೆ ಆತ ಪಂಡಿತನೇ (ಜ್ಞಾನಿ) ಸರಿ. ಮೂರ್ಖನು ಒಂದುವೇಳೆ ತನ್ನನ್ನು ಜ್ಞಾನಿಯೇ ಎಂದು ಭಾವಿಸಿದರೆ ಆತನು ಖಂಡಿತವಾಗಿ ಮೂರ್ಖನೇ ಆಗಿರುತ್ತಾನೆ.         (63)

೬೪.

ಯಾವಜೀವಮ್ಪಿ ಚೇ ಬಾಲೋ, ಪಣ್ಡಿತಂ ಪಯಿರುಪಾಸತಿ
ಸೋ ಧಮ್ಮಂ ವಿಜಾನಾತಿ, ದಬ್ಬೀ ಸೂಪರಸಂ ಯಥಾ

ಮೂರ್ಖನು ಪಂಡಿತ (ಜ್ಞಾನಿ)ಯೊಡನೆ ಜೀವನಪೂರ್ತಿ ಅನ್ಯೋನ್ಯವಾಗಿದ್ದರೂ ಸಹ
ಸೂಪರಸದ ರುಚಿಯನ್ನು ಅದರಲ್ಲಿರುವ ಚಮಚೆಯು ಅರಿಯದ ಹಾಗೆ ಆತನು ಧಮ್ಮವನ್ನು ಅರಿಯಲಾರ.         (64)

೬೫.

ಮುಹುತ್ತಮಪಿ ಚೇ ವಿಞ್ಞೂ, ಪಣ್ಡಿತಂ ಪಯಿರುಪಾಸತಿ
ಖಿಪ್ಪಂ ಧಮ್ಮಂ ವಿಜಾನಾತಿ, ಜಿವ್ಹಾ ಸೂಪರಸಂ ಯಥಾ

ಪ್ರಜ್ಞಾವಂತರು ಪಂಡಿತರೊಡನೆ ಕ್ಷಣ ಮುಹೂರ್ತದಷ್ಟು ಕಾಲ ಇದ್ದರೂ ಸಹ
 ಸೂಪರಸದ ರುಚಿಯನ್ನು ನಾಲಿಗೆಯು ಅರಿಯುವ ಹಾಗೆ ಕ್ಷಿಪ್ರವಾಗಿ ಧಮ್ಮವನ್ನು ಅರಿಯುವರು.       (65)


೬೬.

ಚರನ್ತಿ ಬಾಲಾ ದುಮ್ಮೇಧಾ, ಅಮಿತ್ತೇನೇವ ಅತ್ತನಾ
ಕರೋನ್ತಾ ಪಾಪಕಂ ಕಮ್ಮಂ, ಯಂ ಹೋತಿ ಕಟುಕಪ್ಫಲಂ

ತನಗೆ ತಾನೇ ಅಮಿತ್ರನಾಗಿ ಮೂರ್ಖರು ತಮ್ಮ ದುರ್ಮೇಧಾಮಿ (ಅಲ್ಪ ಜ್ಞಾನದಿಂದ) ತನದಿಂದ
 ಕಹಿ ಫಲಗಳನ್ನು ನೀಡುವ ಪಾಪಕರ್ಮಗಳನ್ನು ಮಾಡುತ್ತಾ ಜೀವಿಸುತ್ತಾರೆ. (66)

೬೭.

ತಂ ಕಮ್ಮಂ ಕತಂ ಸಾಧು, ಯಂ ಕತ್ವಾ ಅನುತಪ್ಪತಿ
ಯಸ್ಸ ಅಸ್ಸುಮುಖೋ ರೋದಂ, ವಿಪಾಕಂ ಪಟಿಸೇವತಿ

ಅಂತಹ ಕಮ್ಮವನ್ನು ಮಾಡುವುದು ಸಾಧುವಲ್ಲ, ಏಕೆಂದರೆ ಅದರಿಂದಾಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ.
ಯಾವುದರಿಂದ ಅಶ್ರುಮುಖನಾಗಿ ರೋಧಿಸಬೇಕಾಗುತ್ತದೋ
 ಅಂತಹ ವಿಪಾಕದ ಕಮ್ಮವನ್ನು ಮಾಡುವುದು ಒಳ್ಳೆಯದಲ್ಲ.             (67)


೬೮.

ತಞ್ಚ ಕಮ್ಮಂ ಕತಂ ಸಾಧು, ಯಂ ಕತ್ವಾ ನಾನುತಪ್ಪತಿ
ಯಸ್ಸ ಪತೀತೋ ಸುಮನೋ, ವಿಪಾಕಂ ಪಟಿಸೇವತಿ

ಅಂತಹ ಕಮ್ಮವನ್ನು ಮಾಡುವುದು ಸಾಧುಕರ, ಯಾವುದೆಂದರೆ ಪಶ್ಚಾತ್ತಾಪ ತರದಂತಹುದು.
 ಅಂತಹ ಕರ್ಮದಿಂದ ಪ್ರಪುಲ್ಲತೆ ಹಾಗೂ ಸುಮನದಂತಹ ಫಲ (ವಿಪಾಕ) ಅನುಭವಿಸುತ್ತಾರೆ.          (68)

೬೯.

ಮಧುವಾ [ಮಧುಂ ವಾ (ದೀ ನಿ ಟೀಕಾ )] ಮಞ್ಞತಿ ಬಾಲೋ, ಯಾವ ಪಾಪಂ ಪಚ್ಚತಿ
ಯದಾ ಪಚ್ಚತಿ ಪಾಪಂ, ಬಾಲೋ [ಅಥ ಬಾಲೋ (ಸೀ ಸ್ಯಾ) ಅಥ (?)] ದುಕ್ಖಂ ನಿಗಚ್ಛತಿ

ಮಧುವಿನಂತೆ ಸಿಹಿಯೆಂದು ಪಾಪವನ್ನು ಮೂರ್ಖನು ಮಾನ್ಯತೆ ಮಾಡಿಕೊಳ್ಳುವನು,
ಯಾವಾಗ ಪಾಪಕರ್ಮವು ಫಲವನ್ನು ನೀಡುವುದೋ ಆಗ ಮೂರ್ಖನು ದುಃಖವಶನಾಗುತ್ತಾನೆ.         (69)

೭೦.

ಮಾಸೇ ಮಾಸೇ ಕುಸಗ್ಗೇನ, ಬಾಲೋ ಭುಞ್ಜೇಯ್ಯ ಭೋಜನಂ
ಸೋ ಸಙ್ಖಾತಧಮ್ಮಾನಂ [ಸಙ್ಖತಧಮ್ಮಾನಂ (ಸೀ ಪೀ )], ಕಲಂ ಅಗ್ಘತಿ ಸೋಳಸಿಂ

ಮಾಸ ಮಾಸದಲ್ಲೂ ಕುಶಾಗ್ರದಷ್ಟು ಭೋಜನವನ್ನು ಮೂರ್ಖನು ಸೇವಿಸಬಹುದು. ಆದರೆ, ಆತನು ಸಂಖತ ಧಮ್ಮ
 (ಆರ್ಯಸತ್ಯಸಾಕ್ಷಾತ್ಕಾರ) ಅರಿತವರ ಹದಿನಾರರ ಒಂದು ಭಾಗದಷ್ಟು ಅರ್ಹತೆಗಳಿಸಲಾರ.     (70)

೭೧.

ಹಿ ಪಾಪಂ ಕತಂ ಕಮ್ಮಂ, ಸಜ್ಜು ಖೀರಂವ ಮುಚ್ಚತಿ
ಡಹನ್ತಂ ಬಾಲಮನ್ವೇತಿ, ಭಸ್ಮಚ್ಛನ್ನೋವ [ಭಸ್ಮಾಛನ್ನೋವ (ಸೀ ಪೀ )] ಪಾವಕೋ

ಪಾಪಕರ್ಮವು ತಕ್ಷಣ ಫಲ ನೀಡಲಾರದು, ಹಾಲು ತಕ್ಷಣ ಹುಳಿಯಾಗದಂತೆ,
ಮೂರ್ಖನಿಗೆ ಬೂದಿಮರೆಯ ಕೆಂಡದಂತೆ, ಮೆಲ್ಲನೆ ಉರಿಯುತ್ತಾ ಸುಡುವುದು  (71)

೭೨.

ಯಾವದೇವ ಅನತ್ಥಾಯ, ಞತ್ತಂ [ಞಾತಂ (?)] ಬಾಲಸ್ಸ ಜಾಯತಿ
ಹನ್ತಿ ಬಾಲಸ್ಸ ಸುಕ್ಕಂಸಂ, ಮುದ್ಧಮಸ್ಸ ವಿಪಾತಯಂ

ಏನೆಲ್ಲ ಜ್ಞಾನವನ್ನು ಮೂರ್ಖನು ಗಳಿಸಿರುವನೋ, ಅದೆಲ್ಲಾ ಆತನ ಅನರ್ಥಕ್ಕಾಗಿಯೇ.
 ಅದು ಮೂರ್ಖನ ಪುಣ್ಯವನ್ನು, ತಲೆಯನ್ನು ಕತ್ತರಿಸಿ ಹಾಕುತ್ತದೆ.        (72)

೭೩.

ಅಸನ್ತಂ ಭಾವನಮಿಚ್ಛೇಯ್ಯ [ಅಸನ್ತಂ ಭಾವಮಿಚ್ಛೇಯ್ಯ (ಸ್ಯಾ), ಅಸನ್ತಭಾವನಮಿಚ್ಛೇಯ್ಯ ()], ಪುರೇಕ್ಖಾರಞ್ಚ ಭಿಕ್ಖುಸು

ಆವಾಸೇಸು ಇಸ್ಸರಿಯಂ, ಪೂಜಾ ಪರಕುಲೇಸು

ಮೂರ್ಖನು ಮಾತ್ರ ಅಧಿಕಾರ ಬಯಸುತ್ತಾನೆ, ಭಿಕ್ಷುಗಳಲ್ಲಿ, ವಿಹಾರಗಳ ಮೇಲೆ ಪ್ರಾಬಲ್ಯ
ಹಾಗು ಕುಟುಂಬಗಳಲ್ಲಿ ಗೌರವಕ್ಕೆ ಹಾತೊರೆಯುತ್ತಾನೆ.    (73)

೭೪.

ಮಮೇವ ಕತ ಮಞ್ಞನ್ತು, ಗಿಹೀಪಬ್ಬಜಿತಾ ಉಭೋ
ಮಮೇವಾತಿವಸಾ ಅಸ್ಸು, ಕಿಚ್ಚಾಕಿಚ್ಚೇಸು ಕಿಸ್ಮಿಚಿ
ಇತಿ ಬಾಲಸ್ಸ ಸಙ್ಕಪ್ಪೋ, ಇಚ್ಛಾ ಮಾನೋ ವಡ್ಢತಿ

ನನ್ನ ಬಗ್ಗೆ ರೀತಿ ಭಾವಿಸಲಿ, ಗೃಹಸ್ಥ ಮತ್ತು ಪಬ್ಬಜಿತರು ಸಹಾ ಯಾವುದೆಲ್ಲಾ ಕಾರ್ಯವಾಗಲಿ ಅದು ನನ್ನಿಂದಲೆ ಆಯಿತು, ಅದು ದೊಡ್ಡದಿರಲಿ ಅಥವಾ ಸಣ್ಣದಿರಲಿ ಅವರೆಲ್ಲರೂ ನನ್ನನ್ನೇ ಅವಲಂಬಿಸಲಿ ಬಗೆಯ ಲೋಭದಿಂದ ಮೂರ್ಖನ ಸ್ವಾರ್ಥಮತ್ತು ಅಹಂಕಾರಗಳು ಉಬ್ಬುತ್ತದೆ.                (74)

೭೫.

ಅಞ್ಞಾ ಹಿ ಲಾಭೂಪನಿಸಾ, ಅಞ್ಞಾ ನಿಬ್ಬಾನಗಾಮಿನೀ
ಏವಮೇತಂ ಅಭಿಞ್ಞಾಯ, ಭಿಕ್ಖು ಬುದ್ಧಸ್ಸ ಸಾವಕೋ
ಸಕ್ಕಾರಂ ನಾಭಿನನ್ದೇಯ್ಯ, ವಿವೇಕಮನುಬ್ರೂಹಯೇ


ಒಂದು ಮಾರ್ಗ ಲೌಕಿಕತೆಯ ಲಾಭದ್ದು, ಅನ್ಯ ಅನನ್ಯ ಮಾರ್ಗ ನಿಬ್ಬಾಣಗಾಮಿಯದು. ಇವನ್ನು ಸ್ಪಷ್ಟವಾಗಿ ಅರಿತಿರುವ ಬುದ್ಧರ ಶ್ರಾವಕ ಭಿಕ್ಷುವು ಸತ್ಕಾರಗಳಿಗೆ, ಇತ್ಯಾದಿಗಳಿಗೆ ಆನಂದಿತನಾಗದೆ ಏಕಾಂತದಲ್ಲಿ ಅನುರಕ್ತನಾಗಿರುತ್ತಾನೆ. (75)


ಬಾಲವಗ್ಗೋ ಪಞ್ಚಮೋ ನಿಟ್ಠಿತೋ
ಇಲ್ಲಿಗೆ ಬಾಲವಗ್ಗವು ಮುಗಿಯಿತು


No comments:

Post a Comment