Saturday, 18 January 2020

ಧಮ್ಮಪದ. ೨೨. ನಿರಯವಗ್ಗೋ


ಧಮ್ಮಪದ. 
೨೨. ನಿರಯವಗ್ಗೋ


೩೦೬.

ಅಭೂತವಾದೀ ನಿರಯಂ ಉಪೇತಿ, ಯೋ ವಾಪಿ [ಯೋ ಚಾಪಿ (ಸೀ ಪೀ )] ಕತ್ವಾ ಕರೋಮಿ ಚಾಹ [ ಕರೋಮೀತಿ ಚಾಹ (ಸ್ಯಾ)]ಉಭೋಪಿ ತೇ ಪೇಚ್ಚ ಸಮಾ ಭವನ್ತಿ, ನಿಹೀನಕಮ್ಮಾ ಮನುಜಾ ಪರತ್ಥ

ಸುಳ್ಳು ಹೇಳುವವನು ನಿರಯದಲ್ಲಿ ಉದಯಿಸುವನು,
ಹಾಗೆಯೇ ಮಾಡಿದ್ದನ್ನುತಾನು ಮಾಡಿಲ್ಲಎಂದು ಹೇಳುವವನು ಸಹಾ
ಹೀನ ಕರ್ಮ ಮಾಡಿದ ಎರಡು ಬಗೆಯವರು ಸಹಾ ಪರಲೋಕದಲ್ಲಿ
ಸಮಾನ ಗತಿಯನ್ನೇ ಪಡೆಯುತ್ತಾರೆ.”   (306)

೩೦೭.

ಕಾಸಾವಕಣ್ಠಾ ಬಹವೋ, ಪಾಪಧಮ್ಮಾ ಅಸಞ್ಞತಾ
 ಪಾಪಾ ಪಾಪೇಹಿ ಕಮ್ಮೇಹಿ, ನಿರಯಂ ತೇ ಉಪಪಜ್ಜರೇ

ಬಹಳಷ್ಟು ಜನರು ಕಾಷಾಯವಸ್ತ್ರ ಧರಿಸಿಯು ಸಹಾ
ಪಾಪಧಮ್ಮದಲ್ಲಿ ತೊಡಗುತ್ತಾ ಅನಿಯಂತ್ರಿತರಾಗಿದ್ದಾರೆ,
ಪಾಪಕರ್ಮದಿಂದಾಗಿ ಪಾಪಿಗಳು
ನಿರಯದಲ್ಲಿ ಹುಟ್ಟುವರು.”       (307)

೩೦೮.

ಸೇಯ್ಯೋ ಅಯೋಗುಳೋ ಭುತ್ತೋ, ತತ್ತೋ ಅಗ್ಗಿಸಿಖೂಪಮೋ
 ಯಞ್ಚೇ ಭುಞ್ಜೇಯ್ಯ ದುಸ್ಸೀಲೋ, ರಟ್ಠಪಿಣ್ಡಮಸಞ್ಞತೋ

ದುಶ್ಶೀಲನಾಗಿ, ಅನಿಯಂತ್ರಿತನಾಗಿ
ರಾಷ್ಟ್ರದ (ಜನರು ಶ್ರದ್ಧೆಯಿಂದ ನೀಡುವ) ಪಿಂಡವನ್ನು (ಆಹಾರವನ್ನು)
ಸೇವಿಸುವ ಬದಲು ಜ್ವಾಲೆಗಳಿಂದ ಆವೃತವಾಗಿರುವ
ಕಬ್ಬಿಣದ ಬಿಸಿ ಚೆಂಡನ್ನು ತಿನ್ನುವುದು ಮೇಲು.”       (308)

೩೦೯.

ಚತ್ತಾರಿ ಠಾನಾನಿ ನರೋ ಪಮತ್ತೋ, ಆಪಜ್ಜತಿ ಪರದಾರೂಪಸೇವೀ
 ಅಪುಞ್ಞಲಾಭಂ ನಿಕಾಮಸೇಯ್ಯಂ, ನಿನ್ದಂ ತತೀಯಂ ನಿರಯಂ ಚತುತ್ಥಂ


ಎಚ್ಚರಿಕೆ ತಪ್ಪಿ ಪರನಾರಿಗಮನ
ಮಾಡುವವನಿಗೆ ನಾಲ್ಕು ಸ್ಥಾನಗಳು ಸಿಗುವುದು,
ಅಪುಣ್ಯ ಲಾಭ (ಪಾಪಗಳಿಕೆ), ನಿದ್ರಾಹೀನತೆ,
ಮೂರನೆಯದಾಗಿ ನಿಂದೆ, ನಿರಯವೇ ನಾಲ್ಕನೆಯದು.”        (309)
೩೧೦.

ಅಪುಞ್ಞಲಾಭೋ ಗತೀ ಪಾಪಿಕಾ, ಭೀತಸ್ಸ ಭೀತಾಯ ರತೀ ಥೋಕಿಕಾ
 ರಾಜಾ ದಣ್ಡಂ ಗರುಕಂ ಪಣೇತಿ, ತಸ್ಮಾ ನರೋ ಪರದಾರಂ ಸೇವೇ

ಅಂತಹವನಿಗೆ ಅಪುಣ್ಯ ಲಾಭ ಹಾಗು
ಪಾಪಿಯ ಗತಿ (ದುರ್ಗತಿ) ಸಿಗುವುದು
ಭೀತನಾದ ಪುರುಷ ಮತ್ತು ಭೀತಿಗೊಂಡು ಒಂದಾದ ಸ್ತ್ರೀಯ
ಆನಂದವೂ ಸಹಾ ಕ್ಷಣಿಕವಾಗಿರುತ್ತದೆ.
ರಾಜನಿಂದ ಕಠೋರ ಶಿಕ್ಷೆಯು ಆಗುವುದು
ಆದ್ದರಿಂದ ನರನು ಪರನಾರಿಯನ್ನು ಸೇವಿಸದಿರಲಿ.”               (310)

೩೧೧.

ಕುಸೋ ಯಥಾ ದುಗ್ಗಹಿತೋ, ಹತ್ಥಮೇವಾನುಕನ್ತತಿ
 ಸಾಮಞ್ಞಂ ದುಪ್ಪರಾಮಟ್ಠಂ, ನಿರಯಾಯುಪಕಡ್ಢತಿ

ಹೇಗೆ ಕುಶ ಹುಲ್ಲನ್ನು ತಪ್ಪಾಗಿ ಹಿಡಿದಾಗ
ಹಸ್ತವನ್ನೇ ಕತ್ತರಿಸುತ್ತದೆಯೋ ಹಾಗೆಯೇ
ಸಮಣ ಜೀವನವನ್ನು ವ್ಯತಿರಿಕ್ತವಾಗಿ ನಡೆಸಿದಾಗ
ಆತನು ನಿರಯಕ್ಕೆ ಎಳೆಯಲ್ಪಡುತ್ತಾನೆ.” (311)

೩೧೨.

ಯಂ ಕಿಞ್ಚಿ ಸಿಥಿಲಂ ಕಮ್ಮಂ, ಸಂಕಿಲಿಟ್ಠಞ್ಚ ಯಂ ವತಂ
 ಸಙ್ಕಸ್ಸರಂ ಬ್ರಹ್ಮಚರಿಯಂ, ತಂ ಹೋತಿ ಮಹಪ್ಫಲಂ

ಸಡಿಲವಾದ ಕಾರ್ಯಗಳು
ಭ್ರಷ್ಟತೆಯುತ ವ್ರತಗಳು (ಆಚರಣೆಗಳು)
ಸಂದೇಹಾಸ್ಪದ ಬ್ರಹ್ಮಚರಿಯ ಜೀವನ,
ಇವೆಲ್ಲಾ ಮಹತ್ಫಲವನ್ನು ನೀಡುವುದಿಲ್ಲ.” (312)

೩೧೩.

ಕಯಿರಾ ಚೇ ಕಯಿರಾಥೇನಂ [ಕಯಿರಾ ನಂ ()], ದಳ್ಹಮೇನಂ ಪರಕ್ಕಮೇ
 ಸಿಥಿಲೋ ಹಿ ಪರಿಬ್ಬಾಜೋ, ಭಿಯ್ಯೋ ಆಕಿರತೇ ರಜಂ

ಕಾರ್ಯವೇನಾದರೂ ಮಾಡುವುದಿದ್ದರೆ,
ದೃಢವಾಗಿ, ಪರಾಕ್ರಮಯುತವಾಗಿ, ಚೆನ್ನಾಗಿ ಮಾಡು,
ಶಿಥಿಲವಾದ ಪರಿವ್ರಾಜಕ ಜೀವನವು
(ಕಲುಶಿತ) ಧೂಳನ್ನು ಮತ್ತಷ್ಟು ಚದುರಿಸಿಬಿಡುತ್ತದೆ.”              (313)

೩೧೪.

ಅಕತಂ ದುಕ್ಕಟಂ ಸೇಯ್ಯೋ, ಪಚ್ಛಾ ತಪ್ಪತಿ ದುಕ್ಕಟಂ
 ಕತಞ್ಚ ಸುಕತಂ ಸೇಯ್ಯೋ, ಯಂ ಕತ್ವಾ ನಾನುತಪ್ಪತಿ

ದುಷ್ಕೃತ್ಯವನ್ನು ಮಾಡದಿರುವುದೇ ಒಳ್ಳೆಯದು.
ಏಕೆಂದರೆ ದುಷ್ಕೃತ್ಯದಿಂದಾಗಿ ನಂತರ ಯಾತನೆ ಪಡಬೇಕಾಗುತ್ತದೆ,
ಸುಕೃತ್ಯವನ್ನು ಮಾಡುವುದು ಶ್ರೇಯಸ್ಕರ,
ಏಕೆಂದರೆ ಸುಕೃತ್ಯದಿಂದಾಗಿ ನಂತರ ಕೊರಗಬೇಕಿಲ್ಲ.”          (314)

೩೧೫.

ನಗರಂ ಯಥಾ ಪಚ್ಚನ್ತಂ, ಗುತ್ತಂ ಸನ್ತರಬಾಹಿರಂ
 ಏವಂ ಗೋಪೇಥ ಅತ್ತಾನಂ, ಖಣೋ ವೋ [ಖಣೋ ವೇ (ಸೀ ಪೀ )] ಮಾ ಉಪಚ್ಚಗಾ
 ಖಣಾತೀತಾ ಹಿ ಸೋಚನ್ತಿ, ನಿರಯಮ್ಹಿ ಸಮಪ್ಪಿತಾ

ಹೇಗೆ ಗಡಿಯಲ್ಲಿರುವ ನಗರವನ್ನು
ಒಳಕ್ಕೂ ಹಾಗು ಹೊರಕ್ಕೂ ರಕ್ಷಿಸುವರೋ
ಹಾಗೆಯೇ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ,
ಕ್ಷಣ ಕಳೆದುಹೋಗದಿರಲಿ,
ಏಕೆಂದರೆ ಅಮೂಲ್ಯ ಕ್ಷಣಗಳ ಅವಕಾಶ
ಕಳೆದುಕೊಂಡಿರುವವರು ನಿರಯದಲ್ಲಿ ಜನಿಸಬೇಕಾಗುತ್ತದೆ.”  (315)

೩೧೬.

ಅಲಜ್ಜಿತಾಯೇ ಲಜ್ಜನ್ತಿ, ಲಜ್ಜಿತಾಯೇ ಲಜ್ಜರೇ
 ಮಿಚ್ಛಾದಿಟ್ಠಿಸಮಾದಾನಾ, ಸತ್ತಾ ಗಚ್ಛನ್ತಿ ದುಗ್ಗತಿಂ

ಲಜ್ಜೆ ಮಾಡಲಾಗದೆಡೆ, ಲಜ್ಜೆ ತಾಳುವರು;
ಪಾಪಲಜ್ಜೆ ತಾಳುವಲ್ಲಿ, ಲಜ್ಜೆತಾಳರು;
ರೀತಿಯ ಮಿಥ್ಯಾದೃಷ್ಟಿಯನ್ನು ಅಪ್ಪಿದ
ಜೀವಿಗಳು ದುರ್ಗತಿಗೆ ಹೋಗುವರು.”    (316)

೩೧೭.

ಅಭಯೇ ಭಯದಸ್ಸಿನೋ, ಭಯೇ ಚಾಭಯದಸ್ಸಿನೋ
 ಮಿಚ್ಛಾದಿಟ್ಠಿಸಮಾದಾನಾ, ಸತ್ತಾ ಗಚ್ಛನ್ತಿ ದುಗ್ಗತಿಂ

ಭಯ ದರ್ಶಿಸುವಂತಹ ಕಡೆ ಅಭಯದಿಂದಿರುವವರು;
ಅಭಯವಿರುವ ಕಡೆ ಭಯದಿಂದಿರುವರು;
ರೀತಿಯ ಮಿಥ್ಯಾದೃಷ್ಟಿಯನ್ನು ಅಪ್ಪಿದ
ಜೀವಿಗಳೂ ದುರ್ಗತಿಗೆ ಹೋಗುವರು.”   (317)

೩೧೮.

ಅವಜ್ಜೇ ವಜ್ಜಮತಿನೋ, ವಜ್ಜೇ ಚಾವಜ್ಜದಸ್ಸಿನೋ
 ಮಿಚ್ಛಾದಿಟ್ಠಿಸಮಾದಾನಾ, ಸತ್ತಾ ಗಚ್ಛನ್ತಿ ದುಗ್ಗತಿಂ

ದೋಷವಿಲ್ಲದೆಡೆ ದೋಷವ ಕಾಣುವರು,
ದೋಷವಿರುವಲ್ಲಿ ದೋಷವ ಕಾಣದೆ,
ಮಿಥ್ಯಾದೃಷ್ಟಿಗಳನ್ನು ಅಪ್ಪುವಂತಹ
ಜೀವಿಗಳು ದುರ್ಗತಿಗೆ ಹೋಗುವರು.”    (318)

೩೧೯.

ವಜ್ಜಞ್ಚ ವಜ್ಜತೋ ಞತ್ವಾ, ಅವಜ್ಜಞ್ಚ ಅವಜ್ಜತೋ
 ಸಮ್ಮಾದಿಟ್ಠಿಸಮಾದಾನಾ, ಸತ್ತಾ ಗಚ್ಛನ್ತಿ ಸುಗ್ಗತಿಂ

ದೋಷವನ್ನು (ಕೆಟ್ಟದ್ದನ್ನು) ದೋಷವೆಂದೇ ಕಾಣುವ,
ದೋಷವಲ್ಲದ್ದನ್ನು ದೋಷರಹಿತವೆಂದೇ ಕಾಣುವಂತಹ
ಸಮ್ಮಾದೃಷ್ಟಿ ಹೊಂದಿದಂತಹ (ಅಪ್ಪಿದಂತಹ)
ಜೀವಿಗಳೂ ಸುಗತಿಗೆ ಹೋಗುವರು.”     (319)

ನಿರಯವಗ್ಗೋ ದ್ವಾವೀಸತಿಮೋ ನಿಟ್ಠಿತೋ
 ಇಲ್ಲಿಗೆ ಇಪ್ಪತ್ತೆರಡನೇಯದಾದ ನಿರಯವಗ್ಗವು ಮುಗಿಯಿತು.

No comments:

Post a Comment