Saturday, 18 January 2020

ಧಮ್ಮಪದ ೧೬. ಪಿಯವಗ್ಗೋ


 ಧಮ್ಮಪದ
೧೬. ಪಿಯವಗ್ಗೋ

೨೦೯.

ಅಯೋಗೇ ಯುಞ್ಜಮತ್ತಾನಂ, ಯೋಗಸ್ಮಿಞ್ಚ ಅಯೋಜಯಂ
 ಅತ್ಥಂ ಹಿತ್ವಾ ಪಿಯಗ್ಗಾಹೀ, ಪಿಹೇತತ್ತಾನುಯೋಗಿನಂ

ಯಾವುದನ್ನು ತಡೆಗಟ್ಟಬೇಕಾಗಿದೆಯೋ
ಅದರಲ್ಲಿ ತನ್ನನ್ನು ತೊಡಗಿಸಿಕೊಳ್ಳುವಿಕೆ ಹಾಗೂ
ಯಾವುದನ್ನು ಅನುಸರಿಸಬೇಕೋ ಅದರಲ್ಲಿ
ತೊಡಗಿಸಿಕೊಳ್ಳದಿರುವಿಕೆ ಹೀಗೆ ತನ್ನ ಹಿತದ
ಮಹತ್ ಅನ್ವೇಷಣೆಯನ್ನು ಬಿಟ್ಟಿರುವವನು
ಉನ್ನತಿಗಾಗಿ ಪರಿಶ್ರಮಿಸುತ್ತಿರುವವನನ್ನು ಕಂಡು ಅಸೂಯೆಪಡುತ್ತಾನೆ.”               (209)

೨೧೦.

ಮಾ ಪಿಯೇಹಿ ಸಮಾಗಞ್ಛಿ, ಅಪ್ಪಿಯೇಹಿ ಕುದಾಚನಂ
 ಪಿಯಾನಂ ಅದಸ್ಸನಂ ದುಕ್ಖಂ, ಅಪ್ಪಿಯಾನಞ್ಚ ದಸ್ಸನಂ

ಪ್ರಿಯವೆಂದು ಯಾವುದಕ್ಕೂ ಅಂಟಿಕೊಳ್ಳಬೇಡ,
ಹಾಗೆಯೇ ಅಪ್ರಿಯವೆಂದು ಯಾವುದಕ್ಕೂ ಅಂಟಿಕೊಳ್ಳಬೇಡ,
ಪ್ರಿಯರ ದರ್ಶನವಾಗದಿರುವಿಕೆ
ಅಪ್ರಿಯರ ದರ್ಶನವಾಗುವಿಕೆ ಎರಡೂ ದುಃಖಕರ.” (210)

೨೧೧.

ತಸ್ಮಾ ಪಿಯಂ ಕಯಿರಾಥ, ಪಿಯಾಪಾಯೋ ಹಿ ಪಾಪಕೋ
 ಗನ್ಥಾ ತೇಸಂ ವಿಜ್ಜನ್ತಿ, ಯೇಸಂ ನತ್ಥಿ ಪಿಯಾಪ್ಪಿಯಂ

ಆದ್ದರಿಂದ ಪ್ರಿಯವೆಂದು ಯಾವುದಕ್ಕೂ ಅಂಟಿಕೊಳ್ಳಬೇಡ,
ಏಕೆಂದರೆ ಪ್ರಿಯರ (ಪ್ರಿಯವಾದುದರ) ಅಗಲಿಕೆ
ನೋವನ್ನು ತರುತ್ತದೆ. ಯಾರಿಗೆ ಯಾವುದು (ಯಾರು)
ಪ್ರಿಯ ಅಪ್ರಿಯವಲ್ಲವೋ ಆತನಿಗೆ ಯಾವ ಬಂಧನವೂ ಇಲ್ಲ.”                (211)

೨೧೨.

ಪಿಯತೋ ಜಾಯತೀ ಸೋಕೋ, ಪಿಯತೋ ಜಾಯತೀ [ಜಾಯತೇ ()] ಭಯಂ
 ಪಿಯತೋ ವಿಪ್ಪಮುತ್ತಸ್ಸ, ನತ್ಥಿ ಸೋಕೋ ಕುತೋ ಭಯಂ

ಪ್ರಿಯವಾದುದರಿಂದಲೇ ಶೋಕವು ಹುಟ್ಟುವುದು
ಪ್ರಿಯವಾದುದರಿಂದಲೇ ಭಯವು ಹುಟ್ಟುವುದು
ಯಾರು ಪ್ರಿಯವಾದುದರಿಂದ ಪೂರ್ಣವಾಗಿ ಮುಕ್ತರೋ
ಅವರಿಗೆ ಶೋಕವೇ ಇಲ್ಲ, ಭಯವು ಹೇಗೆ ತಾನೇ ಇರುವುದು?”             (212)

೨೧೩.

ಪೇಮತೋ ಜಾಯತೀ ಸೋಕೋ, ಪೇಮತೋ ಜಾಯತೀ ಭಯಂ
 ಪೇಮತೋ ವಿಪ್ಪಮುತ್ತಸ್ಸ, ನತ್ಥಿ ಸೋಕೋ ಕುತೋ ಭಯಂ

ಪ್ರೇಮದಿಂದ ಶೋಕ ಹುಟ್ಟುವುದು
ಪ್ರೇಮದಿಂದಲೇ ಭಯವು ಹುಟ್ಟುವುದು
ಯಾರು ಪ್ರೇಮದಿಂದ ಪೂರ್ಣವಾಗಿ ಮುಕ್ತರೋ
ಅವರಿಗೆ ಶೋಕವೇ ಇಲ್ಲ, ಭಯ ಹೇಗೆ ತಾನೇ ಇರಬಲ್ಲದು?” (213)

೨೧೪.

ರತಿಯಾ ಜಾಯತೀ ಸೋಕೋ, ರತಿಯಾ ಜಾಯತೀ ಭಯಂ
 ರತಿಯಾ ವಿಪ್ಪಮುತ್ತಸ್ಸ, ನತ್ಥಿ ಸೋಕೋ ಕುತೋ ಭಯಂ

ರತಿವಿಲಾಸದಿಂದ ಶೋಕ ಉಂಟಾಗುತ್ತದೆ,
ರತಿವಿಲಾಸದಿಂದಲೇ ಭಯವು ಉಂಟಾಗುತ್ತದೆ.
ಯಾರು ಪೂರ್ಣವಾಗಿ ರತಿವಿಲಾಸದಿಂದ ವಿಮುಕ್ತರೋ
ಅವರಿಗೆ ಶೋಕವೇ ಇಲ್ಲ, ಭಯ ಹೇಗೆ ತಾನೇ ಇರಬಲ್ಲದು?” (214)

೨೧೫.

ಕಾಮತೋ ಜಾಯತೀ ಸೋಕೋ, ಕಾಮತೋ ಜಾಯತೀ ಭಯಂ
 ಕಾಮತೋ ವಿಪ್ಪಮುತ್ತಸ್ಸ, ನತ್ಥಿ ಸೋಕೋ ಕುತೋ ಭಯಂ

ಕಾಮದಿಂದ ಶೋಕ ಉಂಟಾಗುತ್ತದೆ,
ಕಾಮದಿಂದ ಭಯವು ಉಂಟಾಗುತ್ತದೆ.
ಯಾರು ಕಾಮದಿಂದ ಪೂರ್ಣವಾಗಿ ಮುಕ್ತರೋ
ಅವರಿಗೆ ಶೋಕವೇ ಇಲ್ಲ, ಭಯ ಹೇಗೆ ತಾನೇ ಇರಬಲ್ಲದು?” (215)

೨೧೬.

ತಣ್ಹಾಯ ಜಾಯತೀ [ಜಾಯತೇ ()] ಸೋಕೋ, ತಣ್ಹಾಯ ಜಾಯತೀ ಭಯಂ
 ತಣ್ಹಾಯ ವಿಪ್ಪಮುತ್ತಸ್ಸ, ನತ್ಥಿ ಸೋಕೋ ಕುತೋ ಭಯಂ

ತೃಷ್ಣೆಯಿಂದಲೇ ಶೋಕ ಉಂಟಾಗುತ್ತದೆ,
ತೃಷ್ಣೆಯಿಂದಲೇ ಭಯವು ಉಂಟಾಗುತ್ತದೆ.
ಯಾರು ತೃಷ್ಣೆಯಿಂದ ಪೂರ್ಣವಾಗಿ ಮುಕ್ತರೋ
ಅವರಿಗೆ ಶೋಕವೇ ಇಲ್ಲ, ಭಯ ಹೇಗೆ ತಾನೇ ಇರಬಲ್ಲದು?” (216)

೨೧೭.

ಸೀಲದಸ್ಸನಸಮ್ಪನ್ನಂ , ಧಮ್ಮಟ್ಠಂ ಸಚ್ಚವೇದಿನಂ
 ಅತ್ತನೋ ಕಮ್ಮ ಕುಬ್ಬಾನಂ, ತಂ ಜನೋ ಕುರುತೇ ಪಿಯಂ

ಶೀಲಸಂಪನ್ನನು, ದರ್ಶನ ಸಂಪನ್ನನು,
ಧಮ್ಮದಲ್ಲಿ ಸ್ಥಿರನು, ಸತ್ಯವನ್ನು ಅರಿತವನು
ಹಾಗು ಮಾಡಬೇಕಾದುದೆಲ್ಲವನ್ನು ಮಾಡಿರುವವನು ಆದ
ಆತನನ್ನು ಜನರು ಪ್ರಿಯರೆಂದು ಭಾವಿಸುವರು.”     (217)

೨೧೮.

ಛನ್ದಜಾತೋ ಅನಕ್ಖಾತೇ, ಮನಸಾ ಫುಟೋ ಸಿಯಾ
 ಕಾಮೇಸು ಅಪ್ಪಟಿಬದ್ಧಚಿತ್ತೋ [ಅಪ್ಪಟಿಬನ್ಧಚಿತ್ತೋ ()], ಉದ್ಧಂಸೋತೋತಿ ವುಚ್ಚತಿ

ಯಾರು ವಿವರಿಸಲಾಗದ್ದನ್ನು (ನಿಬ್ಬಾಣ) ಸಾಧಿಸಲು
ಪ್ರಬಲ ಆಕಾಂಕ್ಷಿಯೋ, ಮನಸ್ಸಿನಿಂದ
ಲೋಕೋತ್ತರ ಫಲಗಳನ್ನು ಅರಿತಿರುವವನೋ,
ಯಾರ ಚಿತ್ತವು ಕಾಯೋಪಭೋಗಗಳಲ್ಲಿ ಅಂಟುವುದಿಲ್ಲವೋ
ಅಂತಹವನ್ನು ಊರ್ಧ್ವ ಶ್ರೋತೃ (ಪ್ರವಾಹದ ಎದುರಾಗಿ ಸಾಗುವವ) ಎನ್ನುತ್ತೇನೆ.  (218)

೨೧೯.

ಚಿರಪ್ಪವಾಸಿಂ ಪುರಿಸಂ, ದೂರತೋ ಸೋತ್ಥಿಮಾಗತಂ
 ಞಾತಿಮಿತ್ತಾ ಸುಹಜ್ಜಾ , ಅಭಿನನ್ದನ್ತಿ ಆಗತಂ

ಚಿರಕಾಲ ಮನೆಯಿಂದ ದೂರವಿದ್ದ ಪುರುಷನು
ದೂರದಿಂದ ಕ್ಷೇಮವಾಗಿ ಹಿಂತಿರುಗಿದಾಗ
ಆತನ ಮಿತ್ರರು ಶ್ರೇಯೋಭಿಲಾಷಿಗಳು, ಬಂಧುಗಳು
ಆತನ ಬರುವಿಕೆಗಾಗಿ ಅಭಿನಂದಿಸುತ್ತಾರೆ.”            (219)

೨೨೦.

ತಥೇವ ಕತಪುಞ್ಞಮ್ಪಿ, ಅಸ್ಮಾ ಲೋಕಾ ಪರಂ ಗತಂ
 ಪುಞ್ಞಾನಿ ಪಟಿಗಣ್ಹನ್ತಿ, ಪಿಯಂ ಞಾತೀವ ಆಗತಂ

ಹಾಗೆಯೇ ಪುಣ್ಯ ಮಾಡಿದವನಿಗೆ,
ಲೋಕ ತೊರೆದು ಪರಗತಿಗೆ ಹೊರಟಾಗ
ಪುಣ್ಯ ಕಾರ್ಯಗಳು ಬಂಧುಗಳಂತೆ ಪ್ರಿಯಬಾಂಧವರಂತೆ ಸ್ವಾಗತಿಸುತ್ತವೆ.”   (220)


ಪಿಯವಗ್ಗೋ ಸೋಳಸಮೋ ನಿಟ್ಠಿತೋ
,

 ಇಲ್ಲಿಗೆ ಹದಿನಾರನೆಯದಾದ ಪಿಯವಗ್ಗ ಮುಗಿಯಿತು

No comments:

Post a Comment