೬. ಪಣ್ಡಿತವಗ್ಗೋ
೭೬.
ನಿಧೀನಂವ ಪವತ್ತಾರಂ, ಯಂ ಪಸ್ಸೇ
ವಜ್ಜದಸ್ಸಿನಂ।
ನಿಗ್ಗಯ್ಹವಾದಿಂ
ಮೇಧಾವಿಂ, ತಾದಿಸಂ ಪಣ್ಡಿತಂ ಭಜೇ।
ತಾದಿಸಂ ಭಜಮಾನಸ್ಸ, ಸೇಯ್ಯೋ ಹೋತಿ
ನ ಪಾಪಿಯೋ॥
“ಅಡಗಿರುವ
ನಿಧಿಯನ್ನು ತೋರಿಸುವ ಮಾರ್ಗದರ್ಶಿಯನ್ನು ಹಿಂಬಾಲಿಸುವಂತೆ,
ತಪ್ಪುಗಳನ್ನು
ತಿದ್ದುವ ಪ್ರಾಜ್ಞನು ಸಿಕ್ಕರೆ ಹಿಂಬಾಲಿಸಿ.
ಅಂತಹ ಪಂಡಿತರೊಂದಿಗೆ ಸೇರುವುದರಿಂದ ಶ್ರೇಯಸ್ಸು ಆಗುವುದೇ ಹೊರತು
ಕೆಡಕಾಗದು”. (76)
೭೭.
ಓವದೇಯ್ಯಾನುಸಾಸೇಯ್ಯ,
ಅಸಬ್ಭಾ ಚ ನಿವಾರಯೇ।
ಸತಞ್ಹಿ ಸೋ ಪಿಯೋ
ಹೋತಿ, ಅಸತಂ ಹೋತಿ ಅಪ್ಪಿಯೋ॥
“ಬೋಧಿಸುವವನು
ಬುದ್ಧಿ ಹೇಳಿ ಎಚ್ಚರಿಸುವವನು, ಅಸಭ್ಯತೆಗಳ
ನಿವಾರಿಸುವವನು (ತಡೆಗಟ್ಟುವವನು)
ಸಾತ್ವಿಕರಿಗೆ
ಪ್ರಿಯನಾಗುವನು, ಅಸಾತ್ವಿಕರಿಗೆ ಅಪ್ರಿಯನಾಗುವನು” (77)
೭೮.
ನ ಭಜೇ ಪಾಪಕೇ ಮಿತ್ತೇ,
ನ ಭಜೇ ಪುರಿಸಾಧಮೇ।
ಭಜೇಥ ಮಿತ್ತೇ ಕಲ್ಯಾಣೇ, ಭಜೇಥ
ಪುರಿಸುತ್ತಮೇ॥
“ಪಾಪವುಳ್ಳ
ಮಿತ್ರರ ಜೊತೆ ಸೇರಬೇಡಿ. ಪುರುಷರಲ್ಲಿ
ಅಧಮರಾಗಿರುವವರ ಸಹವಾಸ ಬೇಡ,
ಕಲ್ಯಾಣ ಮಿತ್ರರ (ಒಳ್ಳೆಯ) ಜೊತೆ
ಸೇರು, ಪುರುಷರಲ್ಲಿ ಉತ್ತಮರಾದವರಲ್ಲಿ ಸ್ನೇಹ ಮಾಡು”. (78)
೭೯.
ಧಮ್ಮಪೀತಿ
ಸುಖಂ ಸೇತಿ, ವಿಪ್ಪಸನ್ನೇನ ಚೇತಸಾ।
ಅರಿಯಪ್ಪವೇದಿತೇ
ಧಮ್ಮೇ, ಸದಾ ರಮತಿ ಪಣ್ಡಿತೋ॥
“ಯಾರು
ಧಮ್ಮದ ಆನಂದವನ್ನು ಸೇವಿಸಿರುವರೋ ಅವರು
ಸುಖಿಯಾಗಿ ಜೀವಿಸುವರು. ಅವರ ಮನಸ್ಸು ಸ್ಪಷ್ಟ
ಹಾಗು ಪ್ರಶಾಂತವಾಗಿರುತ್ತದೆ. ಆದ್ದರಿಂದ ಪಂಡಿತರಾಗಿರುವವರು (ಜ್ಞಾನಿಗಳು)
ಆರ್ಯರಿಂದ (ಬುದ್ಧರಿಂದ)
ಬೋಧಿತವಾದ ಧಮ್ಮದಲ್ಲೇ (ಸತ್ಯದಲ್ಲೆ) ಸದಾ ರಮಿಸುವರು”. (79)
೮೦.
ಉದಕಞ್ಹಿ ನಯನ್ತಿ ನೇತ್ತಿಕಾ, ಉಸುಕಾರಾ
ನಮಯನ್ತಿ [ದಮಯನ್ತಿ (ಕ॰)]
ತೇಜನಂ।
ದಾರುಂ ನಮಯನ್ತಿ ತಚ್ಛಕಾ, ಅತ್ತಾನಂ
ದಮಯನ್ತಿ ಪಣ್ಡಿತಾ॥
“ನೀರು
ಹಾಯಿಸುವವರು ನೀರಿಗೆ ದಾರಿ ಮಾಡುವರು,
ಬಾಣ ನಿರ್ಮಾಣಗಾರರು ಬಾಣವನ್ನು
ಬಾಗಿಸುವರು,
ಬಡಗಿಕಾರರು ಮರವನ್ನು ಮಣಿಸುವರು
ಮತ್ತು ಪಂಡಿತರು ತಮ್ಮನ್ನು ಧಮಿಸುವರು”. (80)
೮೧.
ಸೇಲೋ ಯಥಾ ಏಕಘನೋ [ಏಕಗ್ಘನೋ
(ಕ॰)], ವಾತೇನ
ನ ಸಮೀರತಿ।
ಏವಂ ನಿನ್ದಾಪಸಂಸಾಸು, ನ ಸಮಿಞ್ಜನ್ತಿ
ಪಣ್ಡಿತಾ॥
“ಹೇಗೆ
ಘನ ಶಿಲಾಪರ್ವತವು ವಾತದಿಂದ
(ಗಾಳಿಯಿಂದ) ಅಲುಗಾಡುವುದಿಲ್ಲವೋ
ಹಾಗೆಯೇ ನಿಂದೆ ಪ್ರಶಂಸೆಗಳಿಂದ
ಪಂಡಿತರು ವಿಚಲಿತರಾಗುವುದಿಲ್ಲ”. (81)
೮೨.
ಯಥಾಪಿ ರಹದೋ ಗಮ್ಭೀರೋ, ವಿಪ್ಪಸನ್ನೋ
ಅನಾವಿಲೋ।
ಏವಂ ಧಮ್ಮಾನಿ ಸುತ್ವಾನ, ವಿಪ್ಪಸೀದನ್ತಿ
ಪಣ್ಡಿತಾ॥
“ಹೇಗೆ
ಆಳವಾದ ಸರೋವರವು ಸ್ಪಷ್ಟವಾಗಿ ಮತ್ತು
ಪ್ರಶಾಂತವಾಗಿ ಇರುತ್ತದೆಯೋ
ಹಾಗೆಯೆ ಧಮ್ಮವನ್ನು ಆಲಿಸಿದ ಪಂಡಿತರು
ಅತೀವ ಶಾಂತತೆಯನ್ನು ಅನುಭವಿಸುತ್ತಾರೆ”. (82)
೮೩.
ಸಬ್ಬತ್ಥ ವೇ ಸಪ್ಪುರಿಸಾ
ಚಜನ್ತಿ, ನ ಕಾಮಕಾಮಾ
ಲಪಯನ್ತಿ ಸನ್ತೋ।
ಸುಖೇನ ಫುಟ್ಠಾ ಅಥ ವಾ
ದುಖೇನ, ನ ಉಚ್ಚಾವಚಂ
[ನೋಚ್ಚಾವಚಂ (ಸೀ॰
ಅಟ್ಠ॰)] ಪಣ್ಡಿತಾ
ದಸ್ಸಯನ್ತಿ॥
“ಸತ್ಪುರುಷರು
ಸರ್ವವವನ್ನು ತ್ಯಾಗ ಮಾಡುತ್ತಾರೆ. ಸಂತರು
ಕಾಮಬೋಗಗಳ ಮಾತುಗಳಲ್ಲಿ ತೊಡಗುವುದಿಲ್ಲ.
ಪಂಡಿತರು ಸುಖ-ದುಃಖಗಳ
ಸ್ಪರ್ಶಗಳಿಂದ ಸುಖವಾಗಲಿ, ದುಃಖವಾಗಲಿ ವ್ಯಕ್ತಪಡಿಸುವುದಿಲ್ಲ”. (83)
೮೪.
ನ ಅತ್ತಹೇತು ನ ಪರಸ್ಸ
ಹೇತು, ನ ಪುತ್ತಮಿಚ್ಛೇ
ನ ಧನಂ ನ
ರಟ್ಠಂ।
ನ ಇಚ್ಛೇಯ್ಯ [ನಯಿಚ್ಛೇ (ಪೀ॰), ನಿಚ್ಛೇ
(?)] ಅಧಮ್ಮೇನ ಸಮಿದ್ಧಿಮತ್ತನೋ, ಸ ಸೀಲವಾ
ಪಞ್ಞವಾ ಧಮ್ಮಿಕೋ ಸಿಯಾ॥
“ತನಗಾಗಿಯಾಗಲಿ
ಅಥವಾ ಪರರಿಗಾಗಿ ಆಗಲಿ ಆತನು
ಪುತ್ರ ಇಚ್ಛೆಯಾಗಲಿ, ಧನದ ಇಚ್ಛೆಯಾಗಲಿ ಅಥವಾ
ರಾಷ್ಟ್ರವನ್ನೇ ಆಗಲಿ ಇಚ್ಛಿಸದಿರಲಿ, ಅಧರ್ಮದಿಂದ
ತನ್ನ ಯಶಸ್ಸು ಶೋಧಿಸದಿರಲಿ. ಹಾಗೆ
ಆಚರಿಸಿದಾಗ ಮಾತ್ರ ನಿಜಕ್ಕೂ ಆತನು
ಶೀಲವಂತ, ಪ್ರಜ್ಞಾವಂತ ಮತ್ತು ಧಾರ್ಮಿಕನಾಗುತ್ತಾನೆ (84)
೮೫.
ಅಪ್ಪಕಾ ತೇ ಮನುಸ್ಸೇಸು,
ಯೇ ಜನಾ ಪಾರಗಾಮಿನೋ।
ಅಥಾಯಂ ಇತರಾ ಪಜಾ, ತೀರಮೇವಾನುಧಾವತಿ॥
“ಮನುಷ್ಯರಲ್ಲಿ
ಕೆಲವರು ಮಾತ್ರ ಆಚೆಯ ದಡವನ್ನು
ದಾಟಿರುವರು, ಮಿಕ್ಕವರೆಲ್ಲಾ ಈ ದಡದಲ್ಲಿಯೇ
ಅಡ್ಡಾಡುತ್ತಿರುವರು”. (85)
೮೬.
ಯೇ ಚ ಖೋ
ಸಮ್ಮದಕ್ಖಾತೇ, ಧಮ್ಮೇ ಧಮ್ಮಾನುವತ್ತಿನೋ।
ತೇ ಜನಾ ಪಾರಮೇಸ್ಸನ್ತಿ, ಮಚ್ಚುಧೇಯ್ಯಂ
ಸುದುತ್ತರಂ॥
“ಆದರೆ
ಯಾರು ಚೆನ್ನಾಗಿ ವಿವರಿಸಲ್ಪಟ್ಟಿರುವ ಈ
ಧಮ್ಮವನ್ನು ನಿಷ್ಠೆಯಿಂದ ಪಾಲಿಸಿರುವರೋ, ಅವರು ಮಾತ್ರ ಆಚೆಯ
(ನಿಬ್ಬಾಣ) ದಡವನ್ನು ತಲುಪುತ್ತಾರೆ. ಆದರೆ
ಇಂದ್ರೀಯಗಳ ಭಾವೋದ್ರೇಕಗಳ ಕ್ಷೇತ್ರವನ್ನು ಜಯಿಸುವುದು ಅತ್ಯಂತ ಕಷ್ಟಕರ”. (86)
೮೭.
ಕಣ್ಹಂ ಧಮ್ಮಂ ವಿಪ್ಪಹಾಯ, ಸುಕ್ಕಂ
ಭಾವೇಥ ಪಣ್ಡಿತೋ।
ಓಕಾ ಅನೋಕಮಾಗಮ್ಮ, ವಿವೇಕೇ ಯತ್ಥ ದೂರಮಂ॥
“ಮಿಥ್ಯಾದೃಷ್ಟಿಯ
ಕಪ್ಪು ಧಮ್ಮವನ್ನು ವಿಸರ್ಜಿಸು, ಸುಪರಿಶುದ್ದಿಯ
ಬೆಳಗುವಂತಹದನ್ನು ಅಭಿವೃದ್ಧಿಸು,
ಗೃಹತನದಿಂದ
ದೂರಾಗಿ, ಅನಿಕೇತನಾಗಿ, ಸಿದ್ಧಿಸಲು ಕಷ್ಟಕರವಾದ ಏಕಾಂತತೆಯಲ್ಲಿ
ನೆಲಸಲಿ”. (87)
೮೮.
ತತ್ರಾಭಿರತಿಮಿಚ್ಛೇಯ್ಯ,
ಹಿತ್ವಾ ಕಾಮೇ ಅಕಿಞ್ಚನೋ।
ಪರಿಯೋದಪೇಯ್ಯ
[ಪರಿಯೋದಾಪೇಯ್ಯ (?)] ಅತ್ತಾನಂ, ಚಿತ್ತಕ್ಲೇಸೇಹಿ ಪಣ್ಡಿತೋ॥
“ಅಂತಹ
ವಿಮುಕ್ತಿಯ ಇಚ್ಛೆಗಳಲ್ಲಿ ಸ್ಥಿರನಾಗಿ, ಇಂದ್ರೀಯ ಕಾಮಗಳನ್ನು ತೊರೆದು,
ಏನೂ ಇಲ್ಲದವನಾಗಲಿ (ಅಕಿಂಚನ) ಹೀಗೆ ಪಂಡಿತನು
ತನ್ನನ್ನು ಚಿತ್ತಕ್ಲೇಷಗಳಿಂದ ಶುದ್ಧೀಕರಿಸಲಿ” (88)
೮೯.
ಯೇಸಂ ಸಮ್ಬೋಧಿಯಙ್ಗೇಸು, ಸಮ್ಮಾ ಚಿತ್ತಂ ಸುಭಾವಿತಂ।
ಆದಾನಪಟಿನಿಸ್ಸಗ್ಗೇ,
ಅನುಪಾದಾಯ ಯೇ ರತಾ।
ಖೀಣಾಸವಾ ಜುತಿಮನ್ತೋ, ತೇ ಲೋಕೇ
ಪರಿನಿಬ್ಬುತಾ॥
“ಯಾರ
ಚಿತ್ತವು ಸಂಬೋಧಿ ಅಂಗಗಳಲ್ಲಿ ಸುಅಭಿವೃದ್ಧಿ
ಹೊಂದಿದೆಯೋ, ಯಾರು ಹಿಡಿಯುವುದನ್ನು ಬಿಟ್ಟಿರುವವರೋ,
ಅಂಟುವಿಕೆಯಿಂದ ರಹಿತರಾಗಲು ಆನಂದಿಸುವರೋ, ಅಂತಹ
ಕ್ಷೀಣಾ ಅಸವರಾದ ಪ್ರಜ್ಞಾ-ಜ್ಯೋತಿ
ಸ್ವರೂಪವಂತರು ಈ ಲೋಕದಲ್ಲಿಯೇ
ಪರಿನಿಬ್ಬಾಣ ಪಡೆಯುತ್ತಾರೆ”. (89)
ಪಣ್ಡಿತವಗ್ಗೋ
ಛಟ್ಠೋ ನಿಟ್ಠಿತೋ।
ಇಲ್ಲಿಗೆ ಪಣ್ಡಿತ ವಗ್ಗವು ಮುಗಿಯಿತು
No comments:
Post a Comment