Saturday, 18 January 2020

ಧಮ್ಮಪದ. ೨೩. ನಾಗವಗ್ಗೋ


ಧಮ್ಮಪದ. 

೨೩. ನಾಗವಗ್ಗೋ


೩೨೦.

ಅಹಂ ನಾಗೋವ ಸಙ್ಗಾಮೇ, ಚಾಪತೋ ಪತಿತಂ ಸರಂ
 ಅತಿವಾಕ್ಯಂ ತಿತಿಕ್ಖಿಸ್ಸಂ, ದುಸ್ಸೀಲೋ ಹಿ ಬಹುಜ್ಜನೋ

ನಾನು ಸಂಗ್ರಾಮದಲ್ಲಿರುವ ಆನೆಯು,
ಬಿಲ್ಲಿನಿಂದ ಬಿಡಲ್ಪಟ್ಟ ಶರಗಳನ್ನು ಸಹಿಸುವಂತೆ,
ಸಹಿಸಲು ಕಷ್ಟಕರವಾಗಿರುವಂತಹ ಕೆಟ್ಟ ವಾಕ್ಯಗಳೆಲ್ಲಾ
ಸಹಿಸುತ್ತೇನೆ, ನಿಜಕ್ಕೂ ಬಹುಜನರು ದುಶ್ಶೀಲರಾಗಿದ್ದಾರೆ.”    (320)

೩೨೧.

ದನ್ತಂ ನಯನ್ತಿ ಸಮಿತಿಂ, ದನ್ತಂ ರಾಜಾಭಿರೂಹತಿ
 ದನ್ತೋ ಸೇಟ್ಠೋ ಮನುಸ್ಸೇಸು, ಯೋತಿವಾಕ್ಯಂ ತಿತಿಕ್ಖತಿ

ದಮಿಸಲ್ಪಟ್ಟ ಆನೆಯನ್ನೇ ಜನ ಸಮೂಹದಲ್ಲಿ ಕರೆದೊಯ್ಯುವರು,
ದಮಿಸಲ್ಪಟ್ಟಂತಹದರಲ್ಲೇ ರಾಜನು ಹತ್ತುತ್ತಾನೆ.
ದಮಿಸಲ್ಪಟ್ಟವರೇ ಮನುಷ್ಯರಲ್ಲೂ ಶ್ರೇಷ್ಠರಾಗಿದ್ದಾರೆ,
ಅಂತಹವರು ಕೆಟ್ಟ ವಾಕ್ಯಗಳೆಲ್ಲಾ ಸಹಿಸುತ್ತಾರೆ.”    (321)

೩೨೨.

ವರಮಸ್ಸತರಾ ದನ್ತಾ, ಆಜಾನೀಯಾ [ಆಜಾನೀಯಾವ (ಸ್ಯಾ)] ಸಿನ್ಧವಾ
 ಕುಞ್ಜರಾ [ಕುಞ್ಜರಾವ (ಸ್ಯಾ)] ಮಹಾನಾಗಾ, ಅತ್ತದನ್ತೋ ತತೋ ವರಂ

ಪಳಗಿಸಲ್ಪಟ್ಟಾಗ ಹೆಸರಕತ್ತೆಗಳು ಸಹಾ ಶ್ರೇಷ್ಠವಾಗುತ್ತವೆ,
ಹಾಗೆಯೇ ಉತ್ತಮ ತಳಿಗಳಲ್ಲಿ ಸಿಂಧವಾ ಅಶ್ವಗಳು
ಹಾಗೆಯೇ ಆನೆಗಳಲ್ಲಿ ಮಹಾನಾಗವೂ,
ಅದರಂತೆಯೇ ತನ್ನನ್ನು ದಮಿಸಿದವನು ಇವೆಲ್ಲಕ್ಕಿಂತ ಶ್ರೇಷ್ಠನಾಗುತ್ತಾನೆ.”            (322)

೩೨೩.

ಹಿ ಏತೇಹಿ ಯಾನೇಹಿ, ಗಚ್ಛೇಯ್ಯ ಅಗತಂ ದಿಸಂ
 ಯಥಾತ್ತನಾ ಸುದನ್ತೇನ, ದನ್ತೋ ದನ್ತೇನ ಗಚ್ಛತಿ

ಇವುಗಳ ಮೇಲೆ ಹತ್ತಿ ಯಾನ ಮಾಡಿದರೂ ಸಹಾ
ಯಾರೂ ಹೋಗಿಲ್ಲದ ಸ್ಥಿತಿಯನ್ನು (ನಿಬ್ಬಾಣ) ತಲುಪಲಾಗುವುದಿಲ್ಲ,
ಯಾರು ಸ್ವಯಂನ್ನು ದಮಿಸಿರುವನೋ,
ಅಂತಹ ಚೆನ್ನಾಗಿ ದಮಿಸಲ್ಪಟ್ಟವನೇ ಸ್ಥಿತಿಯನ್ನು ತಲುಪಬಲ್ಲ.”          (323)

೩೨೪.

ಧನಪಾಲೋ [ಧನಪಾಲಕೋ (ಸೀ ಸ್ಯಾ ಕಂ ಪೀ)] ನಾಮ ಕುಞ್ಜರೋ, ಕಟುಕಭೇದನೋ [ಕಟುಕಪ್ಪಭೇದನೋ (ಸೀ ಸ್ಯಾ ಪೀ)] ದುನ್ನಿವಾರಯೋಬದ್ಧೋ ಕಬಳಂ ಭುಞ್ಜತಿ, ಸುಮರತಿ [ಸುಸರತಿ ()] ನಾಗವನಸ್ಸ ಕುಞ್ಜರೋ

ಧನಪಾಲನಾಮದ ಆನೆಯು ಮದವೇರಿ,
ನಿಯಂತ್ರಣ ತಪ್ಪಿತು, ನಂತರ ಕಷ್ಟಕರವಾಗಿ
ಹಿಡಿದಿಟ್ಟಾಗ ತುತ್ತು ಆಹಾರವೂ ಅದು ಸೇವಿಸಲಿಲ್ಲ,
ಅದು ಕೇವಲ ಅರಣ್ಯದಲ್ಲಿದ್ದ (ತನ್ನ ಪೆÇೀಷಕರನ್ನೇ) ಸ್ಮರಿಸುತ್ತಿತ್ತು.”    (324)


೩೨೫.

ಮಿದ್ಧೀ ಯದಾ ಹೋತಿ ಮಹಗ್ಘಸೋ , ನಿದ್ದಾಯಿತಾ ಸಮ್ಪರಿವತ್ತಸಾಯೀ
 ಮಹಾವರಾಹೋವ ನಿವಾಪಪುಟ್ಠೋ, ಪುನಪ್ಪುನಂ ಗಬ್ಭಮುಪೇತಿ ಮನ್ದೋ

ಯಾವಾಗಲೂ ಸೋಮಾರಿಯಾಗಿ, ತಿಂಡಿಪೆÇೀತನಾಗಿ
ಬಲಿತ ದೊಡ್ಡ ಹಂದಿಯ ಹಾಗೆ, ನಿದ್ದೆಯಲ್ಲಿ
ಹೊರಳಾಡುತ್ತ, ಇರುವಂತಹ ಮಂದಮತಿಯು,
ಪುನಃ ಪುನಃ ಗರ್ಭವನ್ನು ಪ್ರವೇಶಿಸುತ್ತಿರುತ್ತಾನೆ.”    (325)

೩೨೬.

ಇದಂ ಪುರೇ ಚಿತ್ತಮಚಾರಿ ಚಾರಿಕಂ, ಯೇನಿಚ್ಛಕಂ ಯತ್ಥಕಾಮಂ ಯಥಾಸುಖಂ
 ತದಜ್ಜಹಂ ನಿಗ್ಗಹೇಸ್ಸಾಮಿ ಯೋನಿಸೋ, ಹತ್ಥಿಪ್ಪಭಿನ್ನಂ ವಿಯ ಅಙ್ಕುಸಗ್ಗಹೋ

ಹಿಂದೆ ಚಿತ್ತವು (ಮನಸ್ಸು)
ಇಷ್ಟಬಂದಲ್ಲಿಗೆ ಚಲಿಸಿತು, ಎಲ್ಲೆಲ್ಲಿ ಇಷ್ಟವಾಯಿತೋ
ಅಲ್ಲೆಲ್ಲಾ ಸುಖಪೂರ್ವಕವಾಗಿ ಚಲಿಸಿತು,
ಆದರೆ ಇಂದಿನಿಂದ (ಈಗಿನಿಂದ) ನನ್ನ ಚಿತ್ತವನ್ನು
ಮಾವುತನು ಅಂಕುಶದಿಂದ
ಆನೆಯನ್ನು ನಿಗ್ರಹಿಸುವಂತೆ ಪ್ರಾಜ್ಞಯುತವಾಗಿ ನಿಗ್ರಹಿಸುವೆನು.”           (326)

೩೨೭.

ಅಪ್ಪಮಾದರತಾ ಹೋಥ, ಸಚಿತ್ತಮನುರಕ್ಖಥ
 ದುಗ್ಗಾ ಉದ್ಧರಥತ್ತಾನಂ, ಪಙ್ಕೇ ಸನ್ನೋವ [ಸತ್ತೋವ (ಸೀ ಪೀ)] ಕುಞ್ಜರೋ


ಎಚ್ಚರಿಕೆಯಲ್ಲಿ ಆನಂದಿತನಾಗು,
ಚಿತ್ತವನ್ನು ಚೆನ್ನಾಗಿ ರಕ್ಷಿಸುವಂತಾಗು,
ಹೇಗೆ ಕೆಸರಿನಲ್ಲಿ ಸಿಲುಕಿರುವ ಆನೆಯು
ಹೋರಾಡಿ ಹೊರಬರುವಂತೆ, ನಿನ್ನನ್ನು
ದುರ್ಗಮವಾದ ಪಾಪಹಾದಿಯಿಂದ ಹೊರ ಎಳೆದುಕೋ.”       (327)
೩೨೮.

ಸಚೇ ಲಭೇಥ ನಿಪಕಂ ಸಹಾಯಂ, ಸದ್ಧಿಂ ಚರಂ ಸಾಧುವಿಹಾರಿಧೀರಂ
 ಅಭಿಭುಯ್ಯ ಸಬ್ಬಾನಿ ಪರಿಸ್ಸಯಾನಿ, ಚರೇಯ್ಯ ತೇನತ್ತಮನೋ ಸತೀಮಾ

ಜ್ಞಾನಿಯು, ಶೀಲವಂತನೂ, ದೃಢಪ್ರಾಜ್ಞನು
ಸಾಧನೆಗೆ ಗೆಳೆಯನಾಗಿ ಲಭಿಸುವುದಾದರೆ
ಸರ್ವ ಆತಂಕಗಳನ್ನು ದಾಟಿ,
ಆತನೊಂದಿಗೆ ಆನಂದಯುತ ಮನಸ್ಸಿನಿಂದ
ಸ್ಮೃತಿವಂತನಾಗಿ ಜೀವಿಸು.”  (328)

೩೨೯.

ನೋ ಚೇ ಲಭೇಥ ನಿಪಕಂ ಸಹಾಯಂ, ಸದ್ಧಿಂ ಚರಂ ಸಾಧುವಿಹಾರಿಧೀರಂ
 ರಾಜಾವ ರಟ್ಠಂ ವಿಜಿತಂ ಪಹಾಯ, ಏಕೋ ಚರೇ ಮಾತಙ್ಗರಞ್ಞೇವ ನಾಗೋ

ಆದರೆ ಜ್ಞಾನಿಯು ಶೀಲವಂತನು, ದೃಢಪ್ರಾಜ್ಞನು
ಸಾಧನೆಗೆ ಗೆಳೆಯನಾಗಿ ಲಭಿಸದಿದ್ದರೆ, ಹೇಗೆ
ರಾಜನೋರ್ವನು ಜಯಿಸಿದ ರಾಜ್ಯವನ್ನು
ಹಿಂದೆ ಬಿಟ್ಟು ನಡೆಯುವಂತೆ ಅಥವಾ
ಮಾತಂಗ ಆನೆಯ ರೀತಿಯಲ್ಲಿ ಕಾಡಿನಲ್ಲಿ
ಏಕಾಂಗಿಯಾಗಿ ಜೀವಿಸು.”     (329)

೩೩೦.

ಏಕಸ್ಸ ಚರಿತಂ ಸೇಯ್ಯೋ, ನತ್ಥಿ ಬಾಲೇ ಸಹಾಯತಾ
 ಏಕೋ ಚರೇ ಪಾಪಾನಿ ಕಯಿರಾ, ಅಪ್ಪೋಸ್ಸುಕ್ಕೋ ಮಾತಙ್ಗರಞ್ಞೇವ ನಾಗೋ

ಏಕಾಂಗಿಯಾಗಿ ಜೀವಿಸುವುದು ಉತ್ತಮ,
ಹೊರತು ಮೂರ್ಖರ ಸಹವಾಸ ಬೇಡ,
ಏಕಾಂಗಿಯಾಗಿಯೇ ಅಲ್ಪ ಅವಶ್ಯಕತೆಗಳಿಂದಲೇ ಜೀವಿಸು,
ಆದರೆ ಪಾಪವನ್ನು ಮಾಡಬೇಡ, ಮಾತಂಗ ಆನೆಯ ರೀತಿಯಲ್ಲಿ
ಕಾಡಿನಲ್ಲಿ ಏಕಾಂಗಿಯಾಗಿ ಜೀವಿಸು.”     (330)

೩೩೧.

ಅತ್ಥಮ್ಹಿ ಜಾತಮ್ಹಿ ಸುಖಾ ಸಹಾಯಾ, ತುಟ್ಠೀ ಸುಖಾ ಯಾ ಇತರೀತರೇನ
 ಪುಞ್ಞಂ ಸುಖಂ ಜೀವಿತಸಙ್ಖಯಮ್ಹಿ, ಸಬ್ಬಸ್ಸ ದುಕ್ಖಸ್ಸ ಸುಖಂ ಪಹಾನಂ

ಅವಶ್ಯಕತೆ ಇದ್ದಾಗ ಸಹಾಯ ಮಾಡುವ ಗೆಳೆತನ ಸುಖಕರ,
ತನ್ನಲ್ಲಿ ಇರುವಷ್ಟರಿಂದಲೇ ತೃಪ್ತಿ ಹೊಂದುವಿಕೆ ಸುಖಕರ,
ಜೀವಿತದ ಅಂತ್ಯಕಾಲದಲ್ಲಿ ಗಳಿಸಿದ ಪುಣ್ಯವೇ ಸುಖಕರ,
ಸರ್ವ ದುಃಖಗಳನ್ನು ನಿರ್ಮೂಲಗೊಳಿಸುವುದೇ ಸುಖಕರ.”    (331)

೩೩೨.

ಸುಖಾ ಮತ್ತೇಯ್ಯತಾ ಲೋಕೇ, ಅಥೋ ಪೇತ್ತೇಯ್ಯತಾ ಸುಖಾ
 ಸುಖಾ ಸಾಮಞ್ಞತಾ ಲೋಕೇ, ಅಥೋ ಬ್ರಹ್ಮಞ್ಞತಾ ಸುಖಾ

ಮಾತೆಗೆ ಸೇವೆ ಸಲ್ಲಿಸುವುದು ಲೋಕದಲ್ಲಿ ಸುಖವು
ಹಾಗೆಯೇ ಪಿತೃವಿಗೂ ಸೇವೆ ಸಲ್ಲಿಸುವುದು ಸುಖವು
ಸುಖವು ಸಮಣರಿಗೆ ಸೇವೆ ಸಲ್ಲಿಸುವುದು ಲೋಕದಲ್ಲಿ
ಹಾಗೆಯೇ ಶ್ರೇಷ್ಠರಿಗೆ ಸೇವೆ ಸಲ್ಲಿಸುವುದು ಸುಖವು.”              (332)

೩೩೩.

ಸುಖಂ ಯಾವ ಜರಾ ಸೀಲಂ, ಸುಖಾ ಸದ್ಧಾ ಪತಿಟ್ಠಿತಾ
 ಸುಖೋ ಪಞ್ಞಾಯ ಪಟಿಲಾಭೋ, ಪಾಪಾನಂ ಅಕರಣಂ ಸುಖಂ

ಜೀವನದುದ್ದಕ್ಕೂ ಶೀಲಪಾಲನೆ ಸುಖ,
ಸುಖವು ಅವಿಚಲ ಶ್ರದ್ಧೆಯನ್ನು ಹೊಂದಿರುವುದು,
ಸುಖವು ಪ್ರಜ್ಞೆಯ ಗಳಿಸಿರುವುದು
ಪಾಪವನ್ನು ಮಾಡದೆ ಇರುವುದೇ ಸುಖವು.”            (333)

ನಾಗವಗ್ಗೋ ತೇವೀಸತಿಮೋ ನಿಟ್ಠಿತೋ
ಇಲ್ಲಿಗೆ ಇಪ್ಪತ್ತುಮೂರನೆಯದಾದ ನಾಗವಗ್ಗವು ಮುಗಿಯಿತು.

No comments:

Post a Comment