Wednesday, 15 January 2020

ಧಮ್ಮಪದ. ೧೫. ಸುಖವಗ್ಗೋ


 ಧಮ್ಮಪದ. ೧೫. ಸುಖವಗ್ಗೋ


೧೯೭.

ಸುಸುಖಂ ವತ ಜೀವಾಮ, ವೇರಿನೇಸು ಅವೇರಿನೋ
 ವೇರಿನೇಸು ಮನುಸ್ಸೇಸು, ವಿಹರಾಮ ಅವೇರಿನೋ

ಸುಖವಾಗಿ ನಿಜಕ್ಕೂ ಜೀವಿಸೋಣ
ವೈರಿಗಳ ನಡುವೆ ವೈರವಿಲ್ಲದವರಾಗಿಯೇ
ವೈರವುಳ್ಳ ಮನುಷ್ಯರ ನಡುವೆ ವೈರರಹಿತರಾಗಿ ವಿಹರಿಸೋಣ.”                (197)

೧೯೮.

ಸುಸುಖಂ ವತ ಜೀವಾಮ, ಆತುರೇಸು ಅನಾತುರಾ
 ಆತುರೇಸು ಮನುಸ್ಸೇಸು, ವಿಹರಾಮ ಅನಾತುರಾ

ಸುಖವಾಗಿ ನಿಜಕ್ಕೂ ಜೀವಿಸೋಣ, (ಚಿತ್ತ ಕಲ್ಮಶಗಳ
ರೋಗಿಗಳ ನಡುವೆ ಆರೋಗ್ಯವುಳ್ಳವರಾಗಿಯೇ
(ಆಸೆಯ) ರೋಗಿ ಮನುಷ್ಯರ ನಡುವೆ ನಾವು ರೋಗರಹಿತರಾಗಿ ವಿಹರಿಸೋಣ.”             (198)

೧೯೯.

ಸುಸುಖಂ ವತ ಜೀವಾಮ, ಉಸ್ಸುಕೇಸು ಅನುಸ್ಸುಕಾ
 ಉಸ್ಸುಕೇಸು ಮನಸ್ಸೇಸು, ವಿಹರಾಮ ಅನುಸ್ಸುಕಾ

 ಸುಖವಾಗಿ ನಿಜಕ್ಕೂ ಜೀವಿಸೋಣ, (ಸ್ವಾರ್ಥ) ಅಭಿಲಾಷೆವುಳ್ಳವರ ನಡುವೆ
ಅನಾಸಕ್ತರಾಗಿಯೇ (ನಿಸ್ವಾರ್ಥರಾಗಿಯೇ) ಅಭಿಲಾಷೆ ಮನುಷ್ಯರ ನಡುವೆ ನಾವು ಅನಾಸಕ್ತರಾಗಿ ವಿಹರಿಸೋಣ.”   (199)

೨೦೦.

ಸುಸುಖಂ ವತ ಜೀವಾಮ, ಯೇಸಂ ನೋ ನತ್ಥಿ ಕಿಞ್ಚನಂ
 ಪೀತಿಭಕ್ಖಾ ಭವಿಸ್ಸಾಮ, ದೇವಾ ಆಭಸ್ಸರಾ ಯಥಾ

ಸುಖವಾಗಿ ನಿಜಕ್ಕೂ ಜೀವಿಸೋಣ
ಯಾವುದನ್ನು ಹೊಂದಿಲ್ಲದವರಂತೆ,
ಆನಂದವನ್ನೇ ಭಕ್ಷಿಸುತ್ತ ಇರೋಣ
ಅಭಸ್ಸರ ದೇವತೆಗಳಂತೆ.”    (200)

೨೦೧.

ಜಯಂ ವೇರಂ ಪಸವತಿ, ದುಕ್ಖಂ ಸೇತಿ ಪರಾಜಿತೋ
 ಉಪಸನ್ತೋ ಸುಖಂ ಸೇತಿ, ಹಿತ್ವಾ ಜಯಪರಾಜಯಂ

ಜಯವು ವೈರವನ್ನು ವೃದ್ಧಿಸುತ್ತದೆ,
ಪರಾಜಯಿಯು ದುಃಖದಿಂದ ಜೀವಿಸುತ್ತಾನೆ,
ಉಪಶಾಂತನು ಜಯ ಪರಾಜಯಗಳನ್ನು ಲೆಕ್ಕಿಸದೆ
ಮೀರಿ ಹೋಗಿ ಸುಖವಾಗಿ ವಿಹರಿಸುತ್ತಾನೆ.”           (201)

೨೦೨.

ನತ್ಥಿ ರಾಗಸಮೋ ಅಗ್ಗಿ, ನತ್ಥಿ ದೋಸಸಮೋ ಕಲಿ
 ನತ್ಥಿ ಖನ್ಧಸಮಾ [ಖನ್ಧಾದಿಸಾ (ಸೀ ಸ್ಯಾ ಪೀ ರೂಪಸಿದ್ಧಿಯಾ ಸಮೇತಿ)] ದುಕ್ಖಾ, ನತ್ಥಿ ಸನ್ತಿಪರಂ ಸುಖಂ

ರಾಗಕ್ಕೆ ಸಮನಾದ ಅಗ್ನಿಯಿಲ್ಲ,
ದ್ವೇಷಕ್ಕೆ ಸಮನಾದ ಅಪರಾಧವಿಲ್ಲ,
ಸ್ಕಂಧಗಳಿಗೆ (ದೇಹ ಮತ್ತು ಮನಸ್ಸಿಗೆ) ಸಮನಾದ ದುಃಖವಿಲ್ಲ,
ನಿಬ್ಬಾಣಕ್ಕೆ ಸಮನಾದ (ಪರಮಶಾಂತಿಯ) ಸುಖವಿಲ್ಲ.”        (202)


೨೦೩.

ಜಿಘಚ್ಛಾಪರಮಾ ರೋಗಾ, ಸಙ್ಖಾರಪರಮಾ [ಸಙ್ಕಾರಾ ಪರಮಾ (ಬಹೂಸು)] ದುಖಾ
 ಏತಂ ಞತ್ವಾ ಯಥಾಭೂತಂ, ನಿಬ್ಬಾನಂ ಪರಮಂ ಸುಖಂ

ಹಸಿವು ಪರಮರೋಗ,
ಸಂಖಾರಗಳೇ ಪರಮ ದುಃಖ
ಇವನ್ನು ಯಥಾಭೂತವಾಗಿ ಅರಿತವನೇ
ನಿಬ್ಬಾಣವನ್ನು ಪರಮ ಸುಖವಾಗಿ
ಸ್ಪಷ್ಟವಾಗಿ ಕಾಣುತ್ತಾನೆ.”        (203)

೨೦೪.

ಆರೋಗ್ಯಪರಮಾ ಲಾಭಾ, ಸನ್ತುಟ್ಠಿಪರಮಂ ಧನಂ
 ವಿಸ್ಸಾಸಪರಮಾ ಞಾತಿ [ವಿಸ್ಸಾಸಪರಮೋ ಞಾತಿ ( ಸೀ), ವಿಸ್ಸಾಸಪರಮಾ ಞಾತೀ (ಸೀ ಅಟ್ಠ), ವಿಸ್ಸಾಸಾ ಪರಮಾ ಞಾತಿ ()], ನಿಬ್ಬಾನಂ ಪರಮಂ [ನಿಬ್ಬಾಣಪರಮಂ ( ಸೀ)] ಸುಖಂ


ಆರೋಗ್ಯವು ಲಾಭಗಳಲ್ಲೇ ಶ್ರೇಷ್ಠವಾದುದು,
ಸಂತೃಪ್ತಿಯೇ ಪರಮ ಐಶ್ವರ್ಯವಾಗಿದೆ (ಧನ)
ವಿಶ್ವಾಸಿಯೇ (ನಂಬಿಕೆಗೆ ಅರ್ಹನೇ) ಪರಮಬಂಧು,
ಮತ್ತು ನಿಬ್ಬಾಣವೇ ಪರಮಸುಖವಾಗಿದೆ.”              (204)

೨೦೫.

ಪವಿವೇಕರಸಂ ಪಿತ್ವಾ [ಪೀತ್ವಾ (ಸೀ ಸ್ಯಾ ಕಂ ಪೀ)], ರಸಂ ಉಪಸಮಸ್ಸ
 ನಿದ್ದರೋ ಹೋತಿ ನಿಪ್ಪಾಪೋ, ಧಮ್ಮಪೀತಿರಸಂ ಪಿವಂ

ಯಾರು ಏಕಾಂತತೆಯ ಸವಿರಸವನ್ನು ಮತ್ತು
ನಿಬ್ಬಾಣದ ಪರಮಶಾಂತ ರಸವನ್ನೂ ಆಸ್ವಾಸಿಸಿದ್ದಾರೆಯೋ
ಹಾಗು ಧಮ್ಮದ ಮಧುರ ರಸವನ್ನು ಪಾನ ಮಾಡಿದ್ದಾರೋ
ಅಂತಹವರು ಧೈರ್ಯಶಾಲಿಗಳು ಮತ್ತು ನಿಷ್ಪಾಪಿಗಳಾಗುತ್ತಾರೆ.”     (205)

೨೦೬.

ಸಾಹು ದಸ್ಸನಮರಿಯಾನಂ, ಸನ್ನಿವಾಸೋ ಸದಾ ಸುಖೋ
 ಅದಸ್ಸನೇನ ಬಾಲಾನಂ, ನಿಚ್ಚಮೇವ ಸುಖೀ ಸಿಯಾ

ಆರ್ಯರ (ಅರಹಂತರ) ದರ್ಶನವು ಮಂಗಳಕರವಾದುದು,
ಅವರ ಸಾನಿಹ್ಯ ಸದಾ ಸುಖಕರ,
ಮೂರ್ಖರನ್ನು ದರ್ಶಿಸದಿರುವುದು
ನಿತ್ಯವೂ ಸುಖಕಾರಿಯಾದುದು.”            (206)

೨೦೭.

ಬಾಲಸಙ್ಗತಚಾರೀ [ಬಾಲಸಙ್ಗತಿಚಾರೀ ()] ಹಿ, ದೀಘಮದ್ಧಾನ ಸೋಚತಿ
 ದುಕ್ಖೋ ಬಾಲೇಹಿ ಸಂವಾಸೋ, ಅಮಿತ್ತೇನೇವ ಸಬ್ಬದಾ
 ಧೀರೋ ಸುಖಸಂವಾಸೋ, ಞಾತೀನಂವ ಸಮಾಗಮೋ

ಮೂರ್ಖ ಸಂಗದಲ್ಲಿರುವಿಕೆಯಿಂದ
ದೀರ್ಘಕಾಲದ ದುಃಖ ಒದಗುತ್ತದೆ.
ಮೂರ್ಖರ ಸಹವಾಸವು ಶತ್ರುವಿನಂತೆ ದುಃಖಕರ
ಆದರೆ ಧೀಮಂತರ ಸಹವಾಸ
ಬಂಧುಗಳ ಸಮಾಗಮದಂತೆಯೇ ಸುಖಕಾರಿಯಾಗಿದೆ.”       (207)

೨೦೮.

ತಸ್ಮಾ ಹಿ
 ಧೀರಞ್ಚ ಪಞ್ಞಞ್ಚ ಬಹುಸ್ಸುತಞ್ಚ, ಧೋರಯ್ಹಸೀಲಂ ವತವನ್ತಮರಿಯಂ
 ತಂ ತಾದಿಸಂ ಸಪ್ಪುರಿಸಂ ಸುಮೇಧಂ, ಭಜೇಥ ನಕ್ಖತ್ತಪಥಂವ ಚನ್ದಿಮಾ [ತಸ್ಮಾ ಹಿ ಧೀರಂ ಪಞ್ಞಞ್ಚ, ಬಹುಸ್ಸುತಞ್ಚ ಧೋರಯ್ಹಂ ಸೀಲಂ ಧುತವತಮರಿಯಂ, ತಂ ತಾದಿಸಂ ಸಪ್ಪುರಿಸಂ ಸುಮೇಧಂ ಭಜೇಥ ನಕ್ಖತ್ತಪಥಂವ ಚನ್ದಿಮಾ ()]

ಆದ್ದರಿಂದ ಧೀಮಂತನು ಮತ್ತು ಪ್ರಜ್ಞಾವಂತನು
ಬಹುಶ್ರೂತರ (ಜ್ಞಾನಿಗಳ) ಧಮ್ಮ ಪಾಲಿಸುವಂತ ಸುಶೀಲರ,
ಧಮ್ಮಪಾಲನೆಯಲ್ಲಿ ಕರ್ತವ್ಯನಿಷ್ಠನು ಮತ್ತು ಆರ್ಯರ
(ಲೋಕೋತ್ತರ ದಾರಿಯಲ್ಲಿ ಹೋಗುವವನು)
ಹಾಗು ಅಂತಹ ಸತ್ಪುರುಷರ, ಸುಮೇಧಾವಿಗಳ ಜೊತೆಯಲ್ಲಿಯೇ
ನಕ್ಷತ್ರಗಳು ಚಂದಿರನನ್ನು ಹಿಂಬಾಲಿಸುವವನಂತೆ ಬೆರೆಯಬೇಕು.”        (208)

ಸುಖವಗ್ಗೋ ಪನ್ನರಸಮೋ ನಿಟ್ಠಿತೋ




 ಇಲ್ಲಿಗೆ ಹದಿನ್ನೈದರ ಸುಖವಗ್ಗವು ಮುಗಿಯಿತು. 

No comments:

Post a Comment