Saturday, 18 January 2020

ಧಮ್ಮಪದ ೧೮. ಮಲವಗ್ಗೋ


 ಧಮ್ಮಪದ

೧೮. ಮಲವಗ್ಗೋ


೨೩೫.

ಪಣ್ಡುಪಲಾಸೋವ ದಾನಿಸಿ, ಯಮಪುರಿಸಾಪಿ ತೇ [ತಂ (ಸೀ ಸ್ಯಾ ಕಂ ಪೀ)] ಉಪಟ್ಠಿತಾ
 ಉಯ್ಯೋಗಮುಖೇ ತಿಟ್ಠಸಿ, ಪಾಥೇಯ್ಯಮ್ಪಿ ತೇ ವಿಜ್ಜತಿ

ನೀನು ಈಗ ಶಿಥಿಲವಾದ ಎಲೆಯಂತೆ ಆಗಿರುವೆ,
ಯಮ ಪುರುಷರು ನಿನ್ನ ಹತ್ತಿರವಿರುವರು,
ನೀನು ಬೀಳ್ಗೊಡೆಯ ಅಂತಿಮಾಸ್ಥೆಯಲ್ಲಿ ನಿಂತಿರುವೆ,
ಆದರೂ ನೀನು ಹಾದಿಗೆ ಬೇಕಾದ ಬುತ್ತಿಯನ್ನು ಕಟ್ಟಿಕೊಂಡಿಲ್ಲವಲ್ಲಾ!”    (235)

೨೩೬.

ಸೋ ಕರೋಹಿ ದೀಪಮತ್ತನೋ, ಖಿಪ್ಪಂ ವಾಯಮ ಪಣ್ಡಿತೋ ಭವ
 ನಿದ್ಧನ್ತಮಲೋ ಅನಙ್ಗಣೋ, ದಿಬ್ಬಂ ಅರಿಯಭೂಮಿಂ ಉಪೇಹಿಸಿ [ದಿಬ್ಬಂ ಅರಿಯಭೂಮಿಮೇಹಿಸಿ (ಸೀ ಸ್ಯಾ ಪೀ), ದಿಬ್ಬಮರಿಯಭೂಮಿಂ ಉಪೇಹಿಸಿ (?)]

ನಿನ್ನನ್ನು ನೀನು ದೀಪವನ್ನಾಗಿ ಮಾಡಿಕೋ,
ಶೀಘ್ರವಾಗಿ ಶ್ರಮಿಸು ಮತ್ತು ಪಂಡಿತನಾಗು;
ಮಲಗಳಿಂದ ಶುಭ್ರನಾಗು, ಕ್ಲೇಷ ನೋವುಗಳಿಂದ ಮುಕ್ತನಾಗು
ಆಗ ನೀನು ಆರ್ಯರ ಭೂಮಿಯನ್ನು (ಲೋಕೋತ್ತರ ಫಲಗಳಲ್ಲಿ) ಪ್ರವೇಶಿಸುವೆ                (236)

೨೩೭.

ಉಪನೀತವಯೋ ದಾನಿಸಿ, ಸಮ್ಪಯಾತೋಸಿ ಯಮಸ್ಸ ಸನ್ತಿಕೇ
 ವಾಸೋ [ವಾಸೋಪಿ (ಬಹೂಸು)] ತೇ ನತ್ಥಿ ಅನ್ತರಾ, ಪಾಥೇಯ್ಯಮ್ಪಿ ತೇ ವಿಜ್ಜತಿ

ನಿನ್ನ ಅಂತ್ಯಕಾಲ ಅತಿ ಹತ್ತಿರ ಬಂದಿದೆ
ನೀನು ಯಮನ (ಮರಣದ) ಹತ್ತಿರ ಬಂದಿರುವೆ
ದಾರಿಯಲ್ಲಿ ನಿನಗೆ ವಿಶ್ರಾಂತಿಯೇ ಇಲ್ಲ
ಆದರೂ ನಿನ್ನ ಹಾದಿಗೆ ಬೇಕಾದ ಬುತ್ತಿಯನ್ನು ಕಟ್ಟಿಕೊಂಡಿಲ್ಲವಲ್ಲಾ!”       (237)

೨೩೮.

ಸೋ ಕರೋಹಿ ದೀಪಮತ್ತನೋ, ಖಿಪ್ಪಂ ವಾಯಮ ಪಣ್ಡಿತೋ ಭವ
 ನಿದ್ಧನ್ತಮಲೋ ಅನಙ್ಗಣೋ, ಪುನಂ ಜಾತಿಜರಂ [ ಪುನ ಜಾತಿಜರಂ (ಸೀ ಸ್ಯಾ), ಪುನ ಜಾತಿಜ್ಜರಂ ()] ಉಪೇಹಿಸಿ

ನಿನ್ನನ್ನು ನೀನು ದೀಪವನ್ನಾಗಿ ಮಾಡಿಕೋ,
ಶೀಘ್ರವಾಗಿ ಶ್ರಮಿಸು ಮತ್ತು ಪಂಡಿತನಾಗು
ಮಲಗಳಿಂದ ಶುಭ್ರನಾಗು, ಕ್ಲೇಷ ನೋವುಗಳಿಂದ ಮುಕ್ತನಾಗು
ಆಗ ನೀನು ಮತ್ತೆ ಜನ್ಮ ಜರಾಗಳನ್ನು ಅನುಭವಿಸಲಾರೆ     (238)

೨೩೯.

ಅನುಪುಬ್ಬೇನ ಮೇಧಾವೀ, ಥೋಕಂ ಥೋಕಂ ಖಣೇ ಖಣೇ
 ಕಮ್ಮಾರೋ ರಜತಸ್ಸೇವ, ನಿದ್ಧಮೇ ಮಲಮತ್ತನೋ

ಅನುಕ್ರಮವಾಗಿ ಮೇಧಾವಿಯು
ಸ್ವಲ್ಪಸ್ವಲ್ಪವಾಗಿ ಕ್ಷಣಕ್ಷಣಕ್ಕೂ,
ಅಕ್ಕಸಾಲಿಗನು ಬೆಳ್ಳಿಯಲ್ಲಿನ ರಜವನ್ನು ತೆಗೆಯುವಂತೆ
ತನ್ನಲ್ಲಿನ ಮಲಗಳನ್ನು ತೆಗೆದುಹಾಕಬೇಕು.”           (239)

೨೪೦.

ಅಯಸಾವ ಮಲಂ ಸಮುಟ್ಠಿತಂ [ಸಮುಟ್ಠಾಯ ()], ತತುಟ್ಠಾಯ [ತದುಟ್ಠಾಯ (ಸೀ ಸ್ಯಾ ಪೀ)] ತಮೇವ ಖಾದತಿ
 ಏವಂ ಅತಿಧೋನಚಾರಿನಂ, ಸಾನಿ ಕಮ್ಮಾನಿ [ಸಕಕಮ್ಮಾನಿ (ಸೀ ಪೀ)] ನಯನ್ತಿ ದುಗ್ಗತಿಂ

ಹೇಗೆ ಕಬ್ಬಿಣದಲ್ಲಿ ಹುಟ್ಟಿದ ತುಕ್ಕು,
ಕಬ್ಬಿಣವನ್ನೇ ತಿಂದುಹಾಕುವಂತೆ,
ಹಾಗೆಯೇ ಮಿತಿಮೀರಿದ ಚಾರಿತ್ರ್ಯದವನ
ಕರ್ಮಗಳೇ ಆತನಿಗೆ ದುಗ್ಗತಿಗೆ ಸೇರಿಸುತ್ತವೆ.” (240)

೨೪೧.

ಅಸಜ್ಝಾಯಮಲಾ ಮನ್ತಾ, ಅನುಟ್ಠಾನಮಲಾ ಘರಾ
 ಮಲಂ ವಣ್ಣಸ್ಸ ಕೋಸಜ್ಜಂ, ಪಮಾದೋ ರಕ್ಖತೋ ಮಲಂ

ಪುನಃ ಪುನಃ ನೆನಪಿಸಿಕೊಳ್ಳದಿರುವಿಕೆ ಮಂತ್ರಕ್ಕೆ (ವಿದ್ಯೆಯ ಸ್ಮರಣೆಗೆ) ಮಲ,
ನಿರ್ಲಕ್ಷಿಸುವಿಕೆ ಗೃಹಕ್ಕೆ ಮಲ,
ಸೋಮಾರಿತನವೇ ಸೌಂದರ್ಯಕ್ಕೆ ಮಲ,
ಅಜಾಗರೂಕತೆಯೇ ರಕ್ಷಣೆಗೆ ಮಲ.”      (241)

೨೪೨.

ಮಲಿತ್ಥಿಯಾ ದುಚ್ಚರಿತಂ, ಮಚ್ಛೇರಂ ದದತೋ ಮಲಂ
 ಮಲಾ ವೇ ಪಾಪಕಾ ಧಮ್ಮಾ, ಅಸ್ಮಿಂ ಲೋಕೇ ಪರಮ್ಹಿ

ಸ್ತ್ರೀಗೆ ದುಶ್ಚರಿತೆಯೇ ಮಲ
ಸ್ವಾರ್ಥವು ದಾನಿಗೆ ಮಲ
ಪಾಪ ಧಮ್ಮವು ಲೋಕದಲ್ಲಿ ಮತ್ತು
ಪರಲೋಕದಲ್ಲಿ ನಿಜಕ್ಕೂ ಮಲವಾಗಿದೆ.” (242)

೨೪೩.

ತತೋ ಮಲಾ ಮಲತರಂ, ಅವಿಜ್ಜಾ ಪರಮಂ ಮಲಂ
 ಏತಂ ಮಲಂ ಪಹನ್ತ್ವಾನ, ನಿಮ್ಮಲಾ ಹೋಥ ಭಿಕ್ಖವೋ

ಎಲ್ಲಾ ಮಲಗಳಿಂದ ನೀಚವಾದದ್ದು,
ಪರಮ ಮಲವು ಅವಿದ್ಯೆಯಾಗಿದೆ.
ಮಲವನ್ನು ತೊಡೆದುಹಾಕಿ
ನಿರ್ಮಲರಾಗಿರಿ; ಭಿಕ್ಷುಗಳೇ.”            (243)

೨೪೪.

ಸುಜೀವಂ ಅಹಿರಿಕೇನ, ಕಾಕಸೂರೇನ ಧಂಸಿನಾ
 ಪಕ್ಖನ್ದಿನಾ ಪಗಬ್ಭೇನ, ಸಂಕಿಲಿಟ್ಠೇನ ಜೀವಿತಂ

ಲಜ್ಜೆರಹಿತನ ಬಾಳು ಸುಲಭವಾದುದು,
ಕಾಗೆಯಂತೆ ಪಾಪದಲ್ಲಿ ಧೈರ್ಯವಂತನು ಮತ್ತು
ಮೇಲೆ ಹಾಯುವವನು, ಚಾಡಿಕೋರನು, ಜಂಬಕೋರನು
ಪೂರ್ಣವಾಗಿ ಭ್ರಷ್ಟನಾಗಿರುತ್ತಾನೆ.”         (244)

೨೪೫.

ಹಿರೀಮತಾ ದುಜ್ಜೀವಂ, ನಿಚ್ಚಂ ಸುಚಿಗವೇಸಿನಾ
 ಅಲೀನೇನಾಪ್ಪಗಬ್ಭೇನ, ಸುದ್ಧಾಜೀವೇನ ಪಸ್ಸತಾ

ಪಾಪಲಜ್ಜೆಯುಳ್ಳವನ ಜೀವನವು ಕಷ್ಟಕರವಾಗಿರುತ್ತದೆ,
ಅಂತಹವ ನಿತ್ಯವೂ ಶುಚಿತ್ವವನ್ನು ಪರಿಶುದ್ಧತೆಯನ್ನು ಅರಸುತ್ತಾನೆ,
ಅಂತಹವ ವಿರಾಗಿಯೂ ನಮ್ರನು, ಜೀವನದಲ್ಲಿ ಶುದ್ಧನು ಹಾಗು
ಚಿಂತನಾಶೀಲನಾಗಿರುತ್ತಾನೆ.”               (245)

೨೪೬.

ಯೋ ಪಾಣಮತಿಪಾತೇತಿ, ಮುಸಾವಾದಞ್ಚ ಭಾಸತಿ
 ಲೋಕೇ ಅದಿನ್ನಮಾದಿಯತಿ, ಪರದಾರಞ್ಚ ಗಚ್ಛತಿ

ಯಾವ ವ್ಯಕ್ತಿ ಪ್ರಾಣಗಳನ್ನು ತೆಗೆಯುತ್ತಾನೋ,
ಸುಳ್ಳನ್ನು ಹೇಳುತ್ತಾನೋ,
ಕೊಡದದ್ದನ್ನು ತೆಗೆದುಕೊಳ್ಳುತ್ತಾನೋ ಮತ್ತು
ಪರನಾರಿ ಗಮನ ಮಾಡುತ್ತಾನೋ    (246)

೨೪೭.

ಸುರಾಮೇರಯಪಾನಞ್ಚ, ಯೋ ನರೋ ಅನುಯುಞ್ಜತಿ
 ಇಧೇವಮೇಸೋ ಲೋಕಸ್ಮಿಂ, ಮೂಲಂ ಖಣತಿ ಅತ್ತನೋ

ಹಾಗು ಯಾವ ನರನು ಸುರೆ, ಮೆರೆಯದಂತಹ
ಮಾದಕ ಪೇಯಗಳನ್ನು ತೆಗೆದುಕೊಳ್ಳುತ್ತಾನೋ
ಅಂತಹವ ಲೋಕದಿಂದಲೇ ತನ್ನ
ಬೇರುಗಳನ್ನು ಕಿತ್ತುಹಾಕಿಕೊಂಡುಬಿಡುತ್ತಾನೆ
(ದುರ್ಗತಿಗೆ ಹೋಗಲು ಸಿದ್ಧನಾಗಿಬಿಡುತ್ತಾನೆ).”     (247)

೨೪೮.

ಏವಂ ಭೋ ಪುರಿಸ ಜಾನಾಹಿ, ಪಾಪಧಮ್ಮಾ ಅಸಞ್ಞತಾ
 ಮಾ ತಂ ಲೋಭೋ ಅಧಮ್ಮೋ , ಚಿರಂ ದುಕ್ಖಾಯ ರನ್ಧಯುಂ

ಉತ್ತಮ ಪುರುಷನೇ, ಅರಿಯುವಂತಾಗು ಪಾಪಧಮ್ಮವನ್ನು
ನಿಯಂತ್ರಿಸುವುದು ಸುಲಭವಲ್ಲ,
ನಿನ್ನನ್ನು ಲೋಭ ಮತ್ತು ಅಧಮ್ಮವು
ಚಿರದುಃಖದೆಡೆಗೆ ಎಳೆದುಹಾಕದಿರಲಿ.”   (248)

೨೪೯.

ದದಾತಿ ವೇ ಯಥಾಸದ್ಧಂ, ಯಥಾಪಸಾದನಂ [ಯತ್ಥ ಪಸಾದನಂ (ಕತ್ಥಚಿ)] ಜನೋ
 ತತ್ಥ ಯೋ ಮಙ್ಕು ಭವತಿ [ತತ್ಥ ಚೇ ಮಂಕು ಯೋ ಹೋತಿ (ಸೀ), ತತ್ಥ ಯೋ ಮಙ್ಕುತೋ ಹೋತಿ (ಸ್ಯಾ)], ಪರೇಸಂ ಪಾನಭೋಜನೇ  ಸೋ ದಿವಾ ವಾ ರತ್ತಿಂ ವಾ, ಸಮಾಧಿಮಧಿಗಚ್ಛತಿ

ದಾತರು (ದಾನಿಗಳು) ತಮ್ಮ ಶ್ರದ್ಧಾನುಸಾರ
ಮತ್ತು ಪ್ರಸನ್ನತೆಯನುಸಾರವಾಗಿ ಜನರು
ದಾನ ನಡುವರು. ಯಾರು ಪರರು
ನೀಡುವ ಪಾನ ಹಾಗು ಭೋಜನದಿಂದ
ಅತೃಪ್ತರಾಗುವರೋ, ಪರರಲ್ಲಿ ಅಸೂಯೆ ತಾಳುವರೋ
ಅಂತಹವರು ದಿನದಲ್ಲಿಯಾಗಲಿ ಅಥವಾ
ರಾತ್ರಿಯಲ್ಲಿಯಾಗಲಿ ಸಮಾಧಿಯನ್ನು ಪಡೆಯಲಾರರು.”       (249)

೨೫೦.

ಯಸ್ಸ ಚೇತಂ ಸಮುಚ್ಛಿನ್ನಂ, ಮೂಲಘಚ್ಚಂ [ಮೂಲಘಚ್ಛಂ ()] ಸಮೂಹತಂ
  ವೇ ದಿವಾ ವಾ ರತ್ತಿಂ ವಾ, ಸಮಾಧಿಮಧಿಗಚ್ಛತಿ

ಯಾರಲ್ಲಿ ಅತೃಪ್ತಿಯು (ಅಸೂಯೆಯು)
ಸಂಪೂರ್ಣವಾಗಿ ಬೇರುಸಹಿತ ಕಿತ್ತುಹಾಕಿ ನಾಶಪಡಿಸಲಾಗಿದೆಯೋ
ಅಂತಹವರು ದಿನದಲ್ಲಿಯಾಗಲಿ ಅಥವಾ ರಾತ್ರಿಯಲ್ಲಾಗಲಿ
ಸಮಾಧಿಯನ್ನು ಪಡೆಯುವರು.”             (250)

೨೫೧.

ನತ್ಥಿ ರಾಗಸಮೋ ಅಗ್ಗಿ, ನತ್ಥಿ ದೋಸಸಮೋ ಗಹೋ
 ನತ್ಥಿ ಮೋಹಸಮಂ ಜಾಲಂ, ನತ್ಥಿ ತಣ್ಹಾಸಮಾ ನದೀ

ರಾಗಕ್ಕೆ ಸಮನಾದ ಅಗ್ನಿಯಿಲ್ಲ,
ದ್ವೇಷಕ್ಕೆ ಸಮನಾದ ಹಿಡಿತವಿಲ್ಲ,
ಮೋಹಕ್ಕೆ ಸಮನಾದ ಜಾಲವಿಲ್ಲ,
ತೃಷ್ಣೆಗೆ ಸಮನಾದ ನದಿಯಿಲ್ಲ.”              (251)

೨೫೨.

ಸುದಸ್ಸಂ ವಜ್ಜಮಞ್ಞೇಸಂ, ಅತ್ತನೋ ಪನ ದುದ್ದಸಂ
 ಪರೇಸಂ ಹಿ ಸೋ ವಜ್ಜಾನಿ, ಓಪುನಾತಿ [ಓಫುನಾತಿ ()] ಯಥಾ ಭುಸಂ
ಅತ್ತನೋ ಪನ ಛಾದೇತಿ, ಕಲಿಂವ ಕಿತವಾ ಸಠೋ


ಪರರ ತಪ್ಪುಗಳು ಸುಲಭವಾಗಿ ದರ್ಶನವಾಗುತ್ತದೆ,
ಆದರೆ ತನ್ನ ತಪ್ಪುಗಳು ಅತಿಕಷ್ಟಕರವಾಗಿ ದರ್ಶನವಾಗುತ್ತದೆ
ಪರರ ತಪ್ಪುಗಳನ್ನು ಹೊಟ್ಟಿನಂತೆ ತೂರುವರು, ಆದರೆ
ತನ್ನ ತಪ್ಪುಗಳನ್ನು ಚಾಲಾಕಿನ ಪಕ್ಷಿ ಬೇಟೆಗಾರನು ಎಲೆ ಮತ್ತು
ಕೊಂಬೆಗಳಲ್ಲಿ ಅಡಗುವಂತೆ ಮರೆಯಾಗುವನು.”   (252)

೨೫೩.

ಪರವಜ್ಜಾನುಪಸ್ಸಿಸ್ಸ , ನಿಚ್ಚಂ ಉಜ್ಝಾನಸಞ್ಞಿನೋ
 ಆಸವಾ ತಸ್ಸ ವಡ್ಢನ್ತಿ, ಆರಾ ಸೋ ಆಸವಕ್ಖಯಾ

ಯಾರು ಪರರ ದೋಷಗಳನ್ನೇ ಕಾಣುತ್ತಿರುವನೋ,
ನಿತ್ಯ ರೇಗುತ್ತಾ ಪರರಲ್ಲಿ ಅಪಹಾಸ್ಯ ಮಾಡುವನೋ,
ಅಂತಹವನ ಆಸವಗಳು (ಕಲ್ಮಶಗಳು) ವರ್ಧಿಸುತ್ತವೆ,
ಆತನು ಆಸವ ಕ್ಷಯದಿಂದ (ಕಲ್ಮಶ ಕ್ಷಯಕ್ಕೆ) ದೂರವೇ ಇರುತ್ತಾನೆ.”     (253)

೨೫೪.

ಆಕಾಸೇವ ಪದಂ ನತ್ಥಿ, ಸಮಣೋ ನತ್ಥಿ ಬಾಹಿರೇ
 ಪಪಞ್ಚಾಭಿರತಾ ಪಜಾ, ನಿಪ್ಪಪಞ್ಚಾ ತಥಾಗತಾ

 ಆಕಾಶದಲ್ಲಿ ಫಥವಿಲ್ಲ,
ಬಾಹ್ಯದಲ್ಲಿ ಸಮಣನಿಲ್ಲ,
ಪ್ರಜೆಗಳು ಪ್ರಾಪಂಚಿಕತೆಯಲ್ಲಿ ರತರಾಗಿರುವರು,
ತಥಾಗತರು ನಿಷ್ಪಾಪಂಚಿಕರಾಗಿದ್ದಾರೆ.” (254)

೨೫೫.

ಆಕಾಸೇವ ಪದಂ ನತ್ಥಿ, ಸಮಣೋ ನತ್ಥಿ ಬಾಹಿರೇ
 ಸಙ್ಖಾರಾ ಸಸ್ಸತಾ ನತ್ಥಿ, ನತ್ಥಿ ಬುದ್ಧಾನಮಿಞ್ಜಿತಂ

ಆಕಾಶದಲ್ಲಿ ಫಥವಿಲ್ಲ,
ಬಾಹ್ಯದಲ್ಲಿ ಸಮಣನಿಲ್ಲ,
ಸಂಖಾರಗಳು ಶಾಶ್ವತವಲ್ಲ,
ಬುದ್ಧರಲ್ಲಿ ಅಸ್ಥಿರತೆಯಿಲ್ಲ.”       (255)

ಮಲವಗ್ಗೋ ಅಟ್ಠಾರಸಮೋ ನಿಟ್ಠಿತೋ
ಇಲ್ಲಿಗೆ ಹದಿನೆಂಟನೆಯದಾದ ಮಲವಗ್ಗವು ಮುಗಿಯಿತು

No comments:

Post a Comment