ಧಮ್ಮಪದ. ೧೩. ಲೋಕವಗ್ಗೋ
೧೬೭.
ಹೀನಂ ಧಮ್ಮಂ ನ ಸೇವೇಯ್ಯ,
ಪಮಾದೇನ ನ ಸಂವಸೇ।
“ಹೀನ
ಧಮ್ಮವನ್ನು (ಪಾಪ) ಸೇವಿಸಬೇಡ, ಎಚ್ಚರಹೀನನಾಗಿ
ಜೀವಿಸಬೇಡ,
ಮಿಥ್ಯಾದೃಷ್ಟಿಯನ್ನು ಅನುಸರಿಸಬೇಡ, ಲೌಕಿಕವರ್ಧನೆಯಲ್ಲಿ ಬದುಕಬೇಡ.” (167)
೧೬೮.
ಉತ್ತಿಟ್ಠೇ
ನಪ್ಪಮಜ್ಜೇಯ್ಯ, ಧಮ್ಮಂ ಸುಚರಿತಂ ಚರೇ।
“ಎದ್ದೇಳಿ,
ಅಜಾಗರೂಕನಾಗಬೇಡಿ, ಸುಚಾರಿತ್ರ್ಯದಿಂದ, ಧಮ್ಮದಿಂದ ಜೀವಿಸಿ,
ಧಮ್ಮಾಚಾರಿಯು
ಈ ಲೋಕದಲ್ಲೂ ಪರಲೋಕದಲ್ಲೂ
ಸುಖಿಯಾಗಿ
ಜೀವಿಸುವನು.” (168)
೧೬೯.
ಧಮ್ಮಂ ಚರೇ ಸುಚರಿತಂ, ನ
ನಂ ದುಚ್ಚರಿತಂ ಚರೇ।
“ಸುಚಾರಿತ್ರ್ಯದಿಂದ,
ಧಮ್ಮದಿಂದ ಜೀವಿಸಿ, ಹೊರತು ದುಶ್ಚಾರಿತ್ರ್ಯವಾಗಿ
ಜೀವಿಸಬೇಡಿ.
ಧಮ್ಮಾಚಾರಿಯು
ಈ ಲೋಕದಲ್ಲೂ, ಪರಲೋಕದಲ್ಲೂ
ಸುಖಿಯಾಗಿ ಜೀವಿಸುವನು.” (169)
೧೭೦.
ಯಥಾ ಪುಬ್ಬುಳಕಂ [ಪುಬ್ಬುಳಕಂ (ಸೀ॰
ಪೀ॰)] ಪಸ್ಸೇ,
ಯಥಾ ಪಸ್ಸೇ ಮರೀಚಿಕಂ।
“ಯಾವರೀತಿ
ಒಬ್ಬನು ನೀರಿನ ಗುಳ್ಳೆಯನ್ನು ನೋಡುವರೋ,
ಯಾವರೀತಿ ಒಬ್ಬನು ಮರೀಚಿಕೆಯನ್ನು ಕಾಣುವನೋ
ಅದೇರೀತಿಯಲ್ಲಿಯೇ
ಲೋಕವನ್ನು ವೀಕ್ಷಿಸಿದಾಗ ಅಂತಹವನನ್ನು ಮೃತ್ಯರಾಜನು ಕಾಣಲಾರ.” (170)
೧೭೧.
ಏಥ ಪಸ್ಸಥಿಮಂ ಲೋಕಂ, ಚಿತ್ತಂ
ರಾಜರಥೂಪಮಂ।
“ಬನ್ನಿ,
ಈ ಲೋಕವನ್ನು ವೀಕ್ಷಿಸಿ,
ಅಲಂಕೃತ ರಾಜರಥದಂತಿದೆ,
ಇದರಲ್ಲಿ ಮೂರ್ಖರೇ ಆನಂದಿಸುವರು. ಆದರೆ
ಅರಿತವರು ಅಂಟುವುದಿಲ್ಲ.” (171)
೧೭೨.
ಯೋ ಚ ಪುಬ್ಬೇ
ಪಮಜ್ಜಿತ್ವಾ, ಪಚ್ಛಾ ಸೋ ನಪ್ಪಮಜ್ಜತಿ।
“ಯಾರು
ಹಿಂದೆ ಅಜಾಗರೂಕನಾಗಿದ್ದು, ಆದರೆ ನಂತರ ಜಾಗರೂಕತೆ
ಯಿಂದಿರುವನೋ,
ಅಂತಹವ ಈ ಲೋಕವನ್ನೇ
ಮೋಡ ಮುಕ್ತ ಚಂದಿರನಂತೆ
ಪ್ರಭಾತಗೊಳಿಸುತ್ತಾನೆ.” (172)
೧೭೩.
ಯಸ್ಸ ಪಾಪಂ ಕತಂ ಕಮ್ಮಂ,
ಕುಸಲೇನ ಪಿಧೀಯತಿ [ಪಿತೀಯತಿ (ಸೀ॰ ಸ್ಯಾ॰ ಪೀ॰)]।
“ಯಾರು
ತನ್ನ ಕುಶಲ ಕರ್ಮಗಳಿಂದ,
ಪಾಪ ಕಮ್ಮಗಳೆಲ್ಲಾ ಮುಚ್ಚಿಬಿಡುವರೋ,
ಅಂತಹವರು ಈ ಲೋಕವನ್ನು
ಮೋಡಮುಕ್ತ ಚಂದಿರನಂತೆ ಬೆಳಗುವರು.” (173)
೧೭೪.
ಅನ್ಧಭೂತೋ
[ಅನ್ಧೀಭೂತೋ (ಕ॰)]
ಅಯಂ ಲೋಕೋ, ತನುಕೇತ್ಥ
ವಿಪಸ್ಸತಿ।
“ಈ
ಲೋಕವು ಅಂಧಮಯವಾಗಿದೆ, ಕೆಲವರು ಮಾತ್ರ ಸ್ಪಷ್ಟವಾಗಿ
ಆಂತರ್ಯವನ್ನು ನೋಡಬಲ್ಲವರಾಗಿದ್ದಾರೆ.
ಹೇಗೆ ಕೆಲವು ಪಕ್ಷಿಗಳು
ಮಾತ್ರವೇ ಜಾಲದಿಂದ ಪಾರಾಗುವುದೋ ಹಾಗೆಯೇ
ಕೆಲವರು ಮಾತ್ರವೇ ಸ್ವರ್ಗಕ್ಕೆ ಹೋಗುವರು.” (174)
೧೭೫.
ಹಂಸಾದಿಚ್ಚಪಥೇ
ಯನ್ತಿ, ಆಕಾಸೇ ಯನ್ತಿ ಇದ್ಧಿಯಾ।
“ಹಂಸಗಳು
ಸೂರ್ಯನ ಪಥದಲ್ಲಿ
ಸಾಗುವುವು, ಇದ್ಧಿಶಕ್ತಿವುಳ್ಳವರು ಆಕಾಶಗಾಮಿಗಳಾಗಿ ವಿಹರಿಸುವರು.
ಆದರೆ ಧೀರರು ಮಾರನ ಮತ್ತು
ಆತನ ಸೈನ್ಯವನ್ನು ಸೋಲಿಸಿ
ಲೋಕಕ್ಕೆ ಅತೀತರಾಗುವರು.” (175)
೧೭೬.
ಏಕಂ ಧಮ್ಮಂ ಅತೀತಸ್ಸ, ಮುಸಾವಾದಿಸ್ಸ
ಜನ್ತುನೋ।
“ಸುಳ್ಳಾಡುವವನು
ಸತ್ಯ ಹೇಳದಿರುವ ಒಂದು ಧಮ್ಮವನ್ನು
ಅತಿಕ್ರಮಿಸಿದ್ದಾನೆ,
ಹಾಗೆಯೇ ಪರಲೋಕವನ್ನು ಧಿಕ್ಕರಿಸುವ ಆತನು ಮಾಡದ ಪಾಪವೇ
ಇಲ್ಲ.” (176)
೧೭೭.
ನ ವೇ ಕದರಿಯಾ
ದೇವಲೋಕಂ ವಜನ್ತಿ, ಬಾಲಾ ಹವೇ
ನಪ್ಪಸಂಸನ್ತಿ ದಾನಂ।
“ಜಿಪುಣರು
ದೇವಲೋಕವನ್ನು ತಲುಪಲಾರರು, ಮೂರ್ಖರು ದಾನವನ್ನು ಪ್ರಶಂಸಿಸಲಾರರು,
ಧೀರರಾದ ಜ್ಞಾನಿಗಳು ಮಾತ್ರ ದಾನದಲ್ಲಿ
ಆನಂದಿತರಾಗಿ ಪರಲೋಕದಲ್ಲಿ ಸುಖಿಸುವರು.” (177
೧೭೮.
ಪಥಬ್ಯಾ ಏಕರಜ್ಜೇನ, ಸಗ್ಗಸ್ಸ ಗಮನೇನ
ವಾ।
“ಇಡೀ
ಪೃಥ್ವಿಗೆ ಚಕ್ರವರ್ತಿಯಾಗುವುದಕ್ಕಿಂತ ಸ್ವರ್ಗಕ್ಕೆ ಹೋಗುವುದಕ್ಕಿಂತಲೂ
ಸರ್ವಲೋಕಾಧಿಪತಿಯಾಗುವುದಕ್ಕಿಂತಲೂ ಸೋತಪತ್ತಿಫಲ ಶ್ರೇಷ್ಠವಾದದ್ದು. (178)
ಲೋಕವಗ್ಗೋ
ತೇರಸಮೋ ನಿಟ್ಠಿತೋ।
ಹದಿಮೂರನೆಯ ಲೋಕವರ್ಗವು ಇಲ್ಲಿಗೆ ಮುಗಿಯಿತು.
No comments:
Post a Comment