ಧಮ್ಮಪದ.
೨೪. ತಣ್ಹಾವಗ್ಗೋ
೩೩೪.
ಮನುಜಸ್ಸ ಪಮತ್ತಚಾರಿನೋ, ತಣ್ಹಾ ವಡ್ಢತಿ ಮಾಲುವಾ
ವಿಯ।
“ಯಾv
ಮನುಷ್ಯ ಎಚ್ಚರಿಕೆಹೀನತೆಯಿಂದಿರುವನೋ,
ಅಂತಹವನ ತೃಷ್ಣೆಯು ಮಾಲುವಾ ಬಳ್ಳಿಯಂತೆ
ವರ್ಧಿಸುವುದು.
ಅಂತಹವನು ವನದಲ್ಲಿರುವ ವಾನರ ಫಲಕ್ಕಾಗಿ
ಮರಗಳನ್ನು
ಹಾರುವಂತೆ, ಆತನು ಜನ್ಮದಿಂದ ಜನ್ಮಕ್ಕೆ
ಜಿಗಿಯುತ್ತಿರುತ್ತಾನೆ.” (334)
೩೩೫.
ಯಂ ಏಸಾ ಸಹತೇ ಜಮ್ಮೀ,
ತಣ್ಹಾ ಲೋಕೇ ವಿಸತ್ತಿಕಾ।
“ಯಾರು
ಈ ಲೋಕದಲ್ಲಿ ಪರಮ
ನೀಚವಾದ
ಹಾಗು ವಿಷಯುತವಾದ ತೃಷ್ಣೆಯಿಂದ
ಆಕ್ರಮಿತರಾಗಿರುವರೋ,
ಅಂತಹವನ ಶೋಕವು
ಮಳೆಯ ನಂತರ ಶೀಘ್ರವಾಗಿ ಬೆಳೆದುಬಿಡುವ
ಬೀರಣ ಹುಲ್ಲಿನಂತೆ ಪ್ರವರ್ಧಿಸುವುದು.” (335)
೩೩೬.
ಯೋ ಚೇತಂ ಸಹತೇ ಜಮ್ಮಿಂ,
ತಣ್ಹಂ ಲೋಕೇ ದುರಚ್ಚಯಂ।
“ಆದರೆ
ಈ ಲೋಕದಲ್ಲಿ ಯಾರು
ಪರಮನಿಂದನಿಯವಾದ
ಹಾಗು ವಿಷಯುತವಾದ ಈ ತೃಷ್ಣೆಯನ್ನು
ಜಯಿಸಿರುವರೋ
ಅಂತಹವನ ಶೋಕಗಳು ಕಮಲದ ಎಲೆಯ
ಮೇಲಿನ
ಬಿಂದುಗಳಂತೆ
ಜಾರಿಹೋಗುವವು.” (336)
೩೩೭.
ತಂ ವೋ ವದಾಮಿ
ಭದ್ದಂ ವೋ, ಯಾವನ್ತೇತ್ಥ ಸಮಾಗತಾ।
“ಯಾರೆಲ್ಲಾ
ಇಲ್ಲಿ ಸೇರಿರುವಿರೋ, ನಿಮಗೆಲ್ಲರಿಗೂ
ಭದ್ರವಾದ ಕ್ಷೇಮವಿರಲಿ, ಆದ್ದರಿಂದಾಗಿ ನಾನು ನಿಮಗೆ
ನೀಡುವ ಬುದ್ಧಿವಾದವೇನೆಂದರೆ, ಯಾರಿಗೆ
ಸುಗಂಧಮಯ ಉಸಿರಾ ಸುಗಂಧದ ಗಡ್ಡೆಗಳು
ಬೇಕಾಗಿವೆಯೋ
ಅವರು ಮೊದಲು ಬೀರಣ
ಹುಲ್ಲಿನ ಬೇರುಗಳನ್ನು ಕಿತ್ತೆಸೆಯಬೇಕು, ಹಾಗೆಯೇ
ನೀವು ತೃಷ್ಣೆಯ ಬೇರುಗಳನ್ನು ನಿರ್ಮೂಲಗೊಳಿಸಿ,
ಹೇಗೆ ಪ್ರವಾಹವು ಜೊಂಡನ್ನು ಅಪ್ಪಳಿಸುವುದೋ
ಹಾಗೇ ನಿಮ್ಮನ್ನು ಮಾರನು ಪುನಃ
ಪುನಃ ನಾಶಗೊಳಿಸದಿರಲಿ.” (337)
೩೩೮.
ಯಥಾಪಿ ಮೂಲೇ ಅನುಪದ್ದವೇ ದಳ್ಹೇ,
ಛಿನ್ನೋಪಿ ರುಕ್ಖೋ ಪುನರೇವ ರೂಹತಿ।
“ಹೇಗೆ
ವೃಕ್ಷವನ್ನು ಕತ್ತರಿಸಿದರೂ ಸಹಾ
ಅದರ ಮೂಲವು ಸುರಕ್ಷಿತವಾಗಿ, ದೃಢವಾಗಿದ್ದರೆ
ಅದರ ರೆಂಬೆಗಳಿಂದ ಪುನಃ ಚಿಗುರುವಂತೆ
ತೃಷ್ಣಾವು
ಆಂತರ್ಯದಲ್ಲಿ ಸುಪ್ತವಾದ ಹಂತದಲ್ಲಿ
ನಾಶವಾಗದಿದ್ದರೆ
ದುಃಖವು ಪುನಃ ಪುನಃ ಬೆಳೆಯುತ್ತಿರುತ್ತದೆ.” (338)
೩೩೯.
ಯಸ್ಸ ಛತ್ತಿಂಸತಿ ಸೋತಾ, ಮನಾಪಸವನಾ
ಭುಸಾ।
“ಯಾರಲ್ಲಿ
36 ರೀತಿ ಪ್ರವಾಹಗಳು
ಬಲಯುತವಾಗಿ
ಹರಿದಾಡುತ್ತಿವೆಯೋ, ರಾಗಯುತ
ಸಂಕಲ್ಪಗಳಿಂದಾಗಿ
ಪುಟಿದಂತಹ, ಸುಂದರವಾಗಿ
ಕಾಣುವಂತಹ
ನೆರೆಯಲ್ಲಿ, ಕೆಟ್ಟದೃಷ್ಟಿಕೋನ
ಹೊಂದಿರುವವನು
ಕೊಚ್ಚಿಹೋಗುತ್ತಾನೆ.” (339)
೩೪೦.
ಸವನ್ತಿ ಸಬ್ಬಧಿ ಸೋತಾ, ಲತಾ
ಉಪ್ಪಜ್ಜ [ಉಬ್ಭಿಜ್ಜ (ಸೀ॰ ಸ್ಯಾ॰ ಕಂ॰ ಪೀ॰)] ತಿಟ್ಠತಿ।
“ಸರ್ವತ್ರವಾಗಿ
ಈ ಪ್ರವಾಹದ ಸುಳಿಗಳು
ಹರಿದಾಡುತ್ತಿವೆ.
ಹೀಗಾಗಿಯೇ
ಲತೆಗಳು (ತೃಷ್ಣೆಯು) ಸಹಾ ಉದಯಿಸಿ
ದೃಢವಾಗಿ ನೆಲೆಸುತ್ತವೆ,
ಉದಯಿಸುತ್ತಿರುವ
ಈ ಲತೆಗಳನ್ನು ಕಂಡೊಡನೆ
ಅವುಗಳ ಮೂಲಗಳನ್ನು ಪ್ರಜ್ಞೆಯಿಂದ ಕತ್ತರಿಸಿಹಾಕಿ. (340)
೩೪೧.
ಸರಿತಾನಿ ಸಿನೇಹಿತಾನಿ ಚ, ಸೋಮನಸ್ಸಾನಿ
ಭವನ್ತಿ ಜನ್ತುನೋ।
“ಹರಿಯುವ
ಪ್ರವಾಹದಂತೆ ಜೀವಿಗಳಲ್ಲಿ ತೃಷ್ಣೆಯು
ಉದಯಿಸುವುದು,
ಸುಖಗಳೆಡೆ ಹಾಗು
ಇಂದ್ರಿಯಗಳನ್ನು
ತೃಪ್ತಿಗೊಳಿಸುವಲ್ಲಿ ಇವು ಹರಿಯುವುದು
ಯಾವ ನರರು ಈ ಸುಖಗಳೆಡೆ
ಬಾಗಿರುವವರು
ಖಂಡಿತವಾಗಿ
ಅವರು ಜನ್ಮ ಮುಪ್ಪುಗಳಿಗೆ
ನಿರಂತರ ಬಲಿಯಾಗುವರು.” (341)
೩೪೨.
ತಸಿಣಾಯ ಪುರಕ್ಖತಾ ಪಜಾ, ಪರಿಸಪ್ಪನ್ತಿ
ಸಸೋವ ಬನ್ಧಿತೋ [ಬಾಧಿತೋ (ಬಹೂಸು)]।
“ತೃಷ್ಣೆಯಿಂದ
ಆಕ್ರಮಿತರಾದ ಪ್ರಜೆಗಳು,
ಬಂಧಿತ ಮೊಲವು ಭಯದಿಂದ ಒದ್ದಾಡುವಂತೆ,
ಸಂಯೋಜನಗಳಿಂದ
ಬಂಧಿತರಾದವರು,
ದುಃಖದಿಂದ
ಆವೃತರಾಗಿ ಪುನಃ ಪುನಃ ಚಿರಕಾಲ
ನರಳುವರು.” (342)
೩೪೩.
ತಸಿಣಾಯ ಪುರಕ್ಖತಾ ಪಜಾ, ಪರಿಸಪ್ಪನ್ತಿ
ಸಸೋವ ಬನ್ಧಿತೋ।
“ತೃಷ್ಣೆಯಿಂದ
ಆಕ್ರಮಿತರಾದ ಪ್ರಜೆಗಳು
ಬಂಧಿತ ಮೊಲದಂತೆ ಭಯದಿಂದ ಒದ್ದಾಡುವರು
ಆದ್ದರಿಂದಾಗಿ
ವಿರಾಗದ ಆಕಾಂಕ್ಷೆಯನ್ನೇ ಹೊಂದಿರುವಂತಹ
ಭಿಕ್ಷುವು
ತೃಷ್ಣೆಯನ್ನು ಅಡಗಿಸಬೇಕು.” (343)
೩೪೪.
ಯೋ ನಿಬ್ಬನಥೋ ವನಾಧಿಮುತ್ತೋ, ವನಮುತ್ತೋ
ವನಮೇವ ಧಾವತಿ।
“ಯಾರು
ವನವಿಲ್ಲದವನಾಗಿ (ಆಸೆರಹಿತನಾಗಿ),
ವನದೆಡೆಗೆ
(ಭಿಕ್ಷು ಜೀವನಕ್ಕೆ) ಹೋಗಿದ್ದನೋ
ಅಂತಹವ ಈಗ ವನಮುಕ್ತನಾಗಿಯೂ
ವನದೆಡೆಗೆ
ಧಾವಿಸುತ್ತಿದ್ದಾನೆ
(ಸ್ವತಂತ್ರನಾಗಿಯು ಭೋಗದೆಡೆಗೆ ಧಾವಿಸುತ್ತಿದ್ದಾನೆ).
ಮುಕ್ತನಾಗಿದ್ದರೂ
ಸಹಾ ಬಂಧನದೆಡೆಗೆ
ಧಾವಿಸುತ್ತಿರುವ
ಈತನನ್ನು ನೋಡಿ.” (344)
೩೪೫.
ನ ತಂ ದಳ್ಹಂ
ಬನ್ಧನಮಾಹು ಧೀರಾ, ಯದಾಯಸಂ ದಾರುಜಪಬ್ಬಜಞ್ಚ
[ದಾರೂಜಂ ಬಬ್ಬಜಞ್ಚ (ಸೀ॰ ಪೀ॰)]।
“ಧೀಮಂತರು
ಕಬ್ಬಿಣದ ಅಥವಾ ಮರದ
ಅಥವಾ ಹಗ್ಗಗಳ ಬಂಧನಗಳನ್ನು ಅತ್ಯಂತ
ಬಲಯುತವಾದವು
ಎಂದು ಒಪ್ಪುವುದಿಲ್ಲ. ಬದಲಾಗಿ ಅವರು
ರತ್ನ ಆಭರಣಗಳ, ಪುತ್ರರ, ಪತ್ನಿಯ
ಬಯಕೆಗಳನ್ನು
ಅತ್ಯಂತ ಬಲಯುತವೆನ್ನುತ್ತಾನೆ.” (345)
೩೪೬.
ಏತಂ ದಳ್ಹಂ ಬನ್ಧನಮಾಹು ಧೀರಾ,
ಓಹಾರಿನಂ ಸಿಥಿಲಂ ದುಪ್ಪಮುಞ್ಚಂ।
“ಈ
ಬಂಧನಗಳನ್ನು ಅತ್ಯಂತ ಬಲಯುತವಾದುದು
ಎಂದು ಧೀಮಂತರು ನುಡಿಯುತ್ತಾರೆ, ಏಕೆಂದರೆ
ಇವು
ಕೆಳಕ್ಕೆ ಎಸೆಯುವಂತಹುದು, ಸುಲಭವಾಗಿ
ಮಣಿಯುವಂತಿದ್ದರೂ,
ಬಿಡಿಸಿಕೊಳ್ಳಲು ಅತ್ಯಂತ
ಕಷ್ಟಕರವಾದುದ್ದಾಗಿದೆ.
ಆದರೆ ಇದನ್ನು ಸಹಾ
ಧೀಮಂತರು ಕತ್ತರಿಸಿಹಾಕುತ್ತಾರೆ, ಯಾವುದೇ
ಲಾಲಸೆಯಿಲ್ಲದೆ,
ಇಂದ್ರೀಯಸುಖಗಳ ಈ
ಲೋಕವನ್ನು
ವರ್ಜಿಸುತ್ತಾರೆ.” (346)
೩೪೭.
ಯೇ ರಾಗರತ್ತಾನುಪತನ್ತಿ ಸೋತಂ, ಸಯಂಕತಂ ಮಕ್ಕಟಕೋವ
ಜಾಲಂ।
“ಯಾರು
ರಾಗದಿಂದ ಉನ್ಮತ್ತರಾಗಿರುವರೋ
ಅವರು ಪ್ರವಾಹದಲ್ಲಿ ಬೀಳುವರು, ಹೇಗೆಂದರೆ
ಜೇಡ ತಾನೇ ಹೆಣೆದ ಬಲೆಯಲ್ಲಿ
ಬಿದ್ದಂತೆ,
ಆದರೆ ಧೀಮಂತರು ಇದನ್ನು ಸಹಾ
ಕತ್ತರಿಸಿ
ಸರ್ವ ದುಃಖಗಳನ್ನು ತ್ಯಜಿಸಿ, ದೃಢವಾಗಿ ಸಾಗುತ್ತಾರೆ.” (347)
೩೪೮.
ಮುಞ್ಚ ಪುರೇ ಮುಞ್ಚ ಪಚ್ಛತೋ,
ಮಜ್ಝೇ ಮುಞ್ಚ ಭವಸ್ಸ ಪಾರಗೂ।
“ಹಿಂದಿನದನ್ನು
(ಭೂತಕಾಲವನ್ನು) ಬಿಟ್ಟುಬಿಡು,
ಮುಂದಿನದನ್ನು
(ಭವಿಷ್ಯ ಕಾಲವನ್ನು) ಬಿಟ್ಟುಬಿಡು,
ಮಧ್ಯದಲ್ಲಿರುವುದನ್ನು
(ವರ್ತಮಾನವನ್ನು) ಬಿಟ್ಟುಬಿಡು.
ಭವಕ್ಕೆ ಅತೀತವಾಗಿ ಹೋಗು, ಸರ್ವತ್ರವಾಗಿ
ಎಲ್ಲಾ ರೀತಿಯಿಂದಲೂ ಮನಸ್ಸನ್ನು ವಿಮುಕ್ತಗೊಳಿಸು.
ಆಗ ನಿನಗೆ ಜನ್ಮ ಜರಾಗಳು
ಪುನಃ ಬರಲಾರವು.” (348)
೩೪೯.
ವಿತಕ್ಕಮಥಿತಸ್ಸ
ಜನ್ತುನೋ, ತಿಬ್ಬರಾಗಸ್ಸ ಸುಭಾನುಪಸ್ಸಿನೋ।
“ಯಾರ
ಮನಸ್ಸು ಉದ್ವಿಗ್ನವಾಗಿ ಸಂಶಯಗಳ
ತರ್ಕದಲ್ಲಿ
ಸಿಲುಕಿದೆಯೋ, ಯಾರು ರಾಗಾಸಕ್ತನೋ,
ಯಾರು (ಶರೀರವನ್ನು) ಶುಭವೆಂದು (ಸುಂದರವೆಂದು)
ಸ್ಮೃತಿಸುತ್ತಿರುವನೋ,
ಅಂತಹವನಲ್ಲಿ ತೃಷ್ಣೆಯು ವರ್ಧಿಸುತ್ತಲೇ ಇರುವುದು
ಆತನು ತನ್ನ ಬಂಧನಗಳನ್ನು ಬಲಿಷ್ಠಗೊಳಿಸುತ್ತಿರುವನು.” (349)
೩೫೦.
ವಿತಕ್ಕೂಪಸಮೇ
ಚ [ವಿತಕ್ಕೂಪಸಮೇವ (ಕ॰)] ಯೋ
ರತೋ, ಅಸುಭಂ ಭಾವಯತೇ ಸದಾ
ಸತೋ।
“ಯಾರು
ಸಂಶಯಗಳನ್ನು ಪರಿಹರಿಸುವತ್ತಲೇ ಆನಂದಿಸುವನೋ
ಅಶುಭ ಧ್ಯಾನ (ಶರೀರವು ಅಸಹ್ಯಕರ,
ಕುರೂಪ)ದಲ್ಲೇ ಸದಾ ಸ್ಮೃತನೋ
ಅಂತಹವನೇ ತೃಷ್ಣೆಯನ್ನು ಅಂತ್ಯಗೊಳಿಸುತ್ತಾನೆ,
ಅಂತಹವನೇ ಮಾರಬಂಧನಗಳನ್ನು ಕತ್ತರಿಸಿಹಾಕುತ್ತಾನೆ.” (350)
೩೫೧.
ನಿಟ್ಠಙ್ಗತೋ
ಅಸನ್ತಾಸೀ, ವೀತತಣ್ಹೋ ಅನಙ್ಗಣೋ।
“ಯಾರು
ಗುರಿಯನ್ನು ತಲುಪಿದವರೋ, ಅವರು ಭಯರಹಿರಾಗಿತ್ತಾರೆ,
ಅಂತಹವರು ತೃಷ್ಣರಹಿತರಾಗಿ, ಕಲ್ಮಶಗಳಿಗೆ ಅಂಟದವರಾಗಿ,
ಭವದ ಮುಳ್ಳುಗಳನ್ನು ಕಿತ್ತು ಎಸೆದಿರುತ್ತಾರೆ,
ಅಂತಹವನಿಗೆ
ಅದೇ ಕೊನೆಯ ಶರೀರ
(ಜನ್ಮ)ವಾಗಿದೆ.” (351)
೩೫೨.
ವೀತತಣ್ಹೋ
ಅನಾದಾನೋ, ನಿರುತ್ತಿಪದಕೋವಿದೋ।
“ಯಾರು
ತೃಷ್ಣರಹಿತರಾಗಿ, ಕಲ್ಮಶಗಳಿಗೆ ಅಂಟದವರೋ,
ಯಾರು ಜ್ಞಾನದ ಹಾದಿಯಲ್ಲಿ ಕುಶಲರೋ,
ಭಾಷೆಯಲ್ಲಿ ನುರಿತರೋ,
ಅಕ್ಷರಗಳ ಅನುಕ್ರಮತೆಯಲ್ಲಿ ನಿಪುಣರೋ, ಯಾವುದು
ಮೊದಲು, ನಂತರ ಯಾವುದೆಂದು ಸ್ಪಷ್ಟವಾಗಿ
ತಿಳಿದಿರುವರೋ
ಅಂತಹವರೇ ಅಂತಿಮ ಶರೀರವುಳ್ಳವರಾಗಿರುತ್ತಾರೆ,
ಅಂತಹವರನ್ನು
ಮಹಾ ಪ್ರಾಜ್ಞರೂ ಮತ್ತು
ಮಹಾಪುರುಷರು ಎನ್ನುತ್ತೇನೆ.” (352)
೩೫೩.
ಸಬ್ಬಾಭಿಭೂ
ಸಬ್ಬವಿದೂಹಮಸ್ಮಿ, ಸಬ್ಬೇಸು ಧಮ್ಮೇಸು ಅನೂಪಲಿತ್ತೋ।
“ಎಲ್ಲವನ್ನು
ಜಯಿಸಿದ್ದೇನೆ, ಎಲ್ಲವನ್ನು ಅರಿತಿದ್ದೇನೆ,
ಆದರೂ ಎಲ್ಲದರಿಂದಲೂ ವಿಮುಖನಾಗಿದ್ದೇನೆ, (ಅಲಿಪ್ತನಾಗಿದ್ದೇನೆ)
ಯಾವುದೇ ಧಮ್ಮಕ್ಕೂ ಅಂಟದೆ, ಎಲ್ಲನ್ನು
ತ್ಯಜಿಸಿ,
ತೃಷ್ಣೆಯೆಲ್ಲಾ
ಕ್ಷಯಿಸಿ ವಿಮುಕ್ತನಾಗಿದ್ದೇನೆ,
ಸ್ವಯಂನಿಂದಲೇ
ಸತ್ಯಗಳನ್ನು ಅರಿತವನಾಗಿ (ಅಭಿಜ್ಞಾ ಪ್ರಾಪ್ತಿಮಾಡಿ)
ಯಾರಿಗೆ ಗುರುವೆನ್ನಲಿ.” (353)
೩೫೪.
ಸಬ್ಬದಾನಂ
ಧಮ್ಮದಾನಂ ಜಿನಾತಿ, ಸಬ್ಬರಸಂ ಧಮ್ಮರಸೋ
ಜಿನಾತಿ।
“ಧಮ್ಮದಾನವು
ಸರ್ವದಾನಗಳನ್ನು ಮೀರಿಸಿಬಿಡುತ್ತದೆ,
ಧಮ್ಮದಾನವು
ಸರ್ವರಸಗಳನ್ನು ಮೀರಿಸಿಬಿಡುತ್ತದೆ,
ಧಮ್ಮದಾನವು
ಸರ್ವ ಆನಂದಗಳನ್ನು ಮೀರಿಸಿಬಿಡುತ್ತದೆ,
ತೃಷ್ಣೆಯನ್ನು
ಪೂರ್ಣವಾಗಿ ಕ್ಷೀಣಿಸಿದವನು
ಸರ್ವ ದುಃಖಗಳನ್ನು ಜಯಿಸುತ್ತಾನೆ.” (354)
೩೫೫.
ಹನನ್ತಿ ಭೋಗಾ ದುಮ್ಮೇಧಂ, ನೋ
ಚ ಪಾರಗವೇಸಿನೋ।
“ಐಶ್ವರ್ಯವು ದುರ್ಮೇಧನಿಗೆ (ಮೂರ್ಖನಿಗೆ)
ಹಾನಿಮಾಡುತ್ತದೆ,
ಹೊರತು ಆಚೆಯ ದಡವನ್ನು (ನಿಬ್ಬಾಣವನ್ನು)
ಅನ್ವೇಷಿಸುವವನಿಗಲ್ಲ,
ಐಶ್ವರ್ಯ ತೃಷ್ಣೆಯಿಂದ
ಮೂರ್ಖನು ಪರರನ್ನು
ಹಾನಿಗೊಳಿಸುವಂತೆ
ತನ್ನನ್ನು ಹಾಳು ಮಾಡಿಕೊಳ್ಳುತ್ತಾನೆ.” (355)
೩೫೬.
ತಿಣದೋಸಾನಿ
ಖೇತ್ತಾನಿ, ರಾಗದೋಸಾ ಅಯಂ ಪಜಾ।
“ಕಳೆಗಳು
ಹೊಲಕ್ಕೆ ಕೆಡುಕು,
ರಾಗವು ಮಾನವತೆಗೆ ಕೇಡು,
ಆದ್ದರಿಂದ
ವಿತರಾಗರಿಗೆ (ರಾಗಮುಕ್ತರಿಗೆ) ನೀಡಿದ್ದು
ಮಹತ್ಫಲ ತರುತ್ತದೆ.” (356)
೩೫೭.
ತಿಣದೋಸಾನಿ
ಖೇತ್ತಾನಿ, ದೋಸದೋಸಾ ಅಯಂ ಪಜಾ।
“ಕಳೆಗಳು
ಹೊಲಕ್ಕೆ ಕೆಡುಕು
ದ್ವೇಷವು ಮಾನವತೆಗೆ ಕೇಡು
ಆದ್ದರಿಂದ
ದ್ವೇಷರಹಿತರಿಗೆ ನೀಡಿದ್ದು
ಮಹತ್ಫಲ ತರುತ್ತದೆ.” (357)
೩೫೮.
ತಿಣದೋಸಾನಿ
ಖೇತ್ತಾನಿ, ಮೋಹದೋಸಾ ಅಯಂ ಪಜಾ।
“ಕಳೆಗಳು
ಹೊಲಕ್ಕೆ ಕೆಡಕು
ಮೋಹವು ಮಾನವತೆಗೆ ಕೇಡು,
ಆದ್ದರಿಂದ
ಮೋಹರಹಿತರಿಗೆ ನೀಡಿದ್ದು
ಮಹತ್ಫಲ ತರುತ್ತದೆ.” (358)
೩೫೯.
(ತಿಣದೋಸಾನಿ
ಖೇತ್ತಾನಿ, ಇಚ್ಛಾದೋಸಾ ಅಯಂ ಪಜಾ।
“ಕಳೆಗಳು
ಹೊಲಕ್ಕೆ ಕೆಡಕು
ಇಚ್ಛೆಯು ಮಾನವತೆಗೆ ಕೇಡು,
ಆದ್ದರಿಂದ
ಇಚ್ಛಾರಹಿತರಿಗೆ ನೀಡಿದ್ದು
ಮಹತ್ಫಲ ತರುತ್ತದೆ.” (359)
ತಣ್ಹಾವಗ್ಗೋ
ಚತುವೀಸತಿಮೋ ನಿಟ್ಠಿತೋ।
ಇಲ್ಲಿಗೆ ಇಪ್ಪತ್ತಾಲ್ಕನೆಯ ತಣ್ಹಾವಗ್ಗವು ಮುಗಿಯಿತು.
No comments:
Post a Comment