ಉಪವಾಸಕ್ಕಿಂತ ಪರಮೋತ್ತರ ಸಾಕ್ಷಾತ್ಕಾರ ಶ್ರೇಷ್ಠಕರ
ಮಾಸ ಮಾಸದಲ್ಲೂ
ಕುಶಾಗ್ರದಷ್ಟು ಭೋಜನವನ್ನು ಮೂರ್ಖನು ಸೇವಿಸಬಹುದು. ಆದರೆ, ಆತನು ಸಂಚಿತಧಮ್ಮ (ಆರ್ಯಸತ್ಯಸಾಕ್ಷಾತ್ಕಾರ) ಅರಿತವರ ಹದಿನಾರರ ಒಂದು
ಭಾಗದಷ್ಟು ಅರ್ಹತೆಗಳಿಸಲಾರ. (70)
ಗಾಥ ಪ್ರಸಂಗ 5:11
ಜಂಬುಕನ ಘಟನೆ
ಜಂಬುಕನು ಶ್ರಾವಸ್ತಿಯ ಶ್ರೀಮಂತ ಮಗನಾಗಿದ್ದನು. ಆದರೆ
ತನ್ನ ಪಾಪಕೃತ್ಯಗಳ ಫಲದಿಂದ ಆತನು ಈ ಜನ್ಮದಲ್ಲಿ ವಿಚಿತ್ರವಾದ ಚಟಗಳನ್ನು ಹೊಂದಿದ್ದನು. ಆತನು
ಮಗುವಾಗಿದ್ದ ಕಾಲದಿಂದ ನೆಲದಲ್ಲೇ ಮಲಗುತ್ತಿದ್ದನು. ಮತ್ತು ಬೇರೆ ಆಹಾರ ಸೇವಿಸದೆ ತನ್ನ ಮಲವನ್ನೇ
ಸೇವಿಸುತ್ತಿದ್ದನು. ಆತನು ದೊಡ್ಡವನಾಗುತ್ತಿದ್ದಂತೆ ಆತನಿಗೆ ಆತನ ತಂದೆ-ತಾಯಿಗಳು ನಗ್ನ ಅಜೀವಕ
ತಪಸ್ವಿಗಳ ಬಳಿ ಕಳುಹಿಸಿದ್ದರು. ಆದರೆ ಆ ಅಜೀವಕರು ಸಹಾ ಈತನ ಆಹಾರ ಪದ್ಧತಿ ಕಂಡು ಅಸಹ್ಯಪಟ್ಟು
ಆತನನ್ನು ಹೊರದೂಡಿದರು. ಆತನು ರಾತ್ರಿಯಲ್ಲಿ ಮಾನವರ ಮಲ ತಿಂದು, ಹಗಲಿನಲ್ಲಿ ಒಂಟಿಕಾಲಿನಲ್ಲಿ ನಿಂತು ಬಾಯಿ ತೆಗೆದುಕೊಂಡು
ಇರುತ್ತಿದ್ದನು. ಕಾರಣ ಕೇಳಿದರೆ ಭೂಮಿಗೆ ಭಾರವಾಗದಿರಲಿ ಎಂದು ಒಂಟಿಕಾಲಿನಲ್ಲಿ ನಿಂತಿದ್ದೆನೆ
ಮತ್ತು ಗಾಳಿಯನ್ನೇ ಆಹಾರವಾಗಿ ಸೇವಿಸುವುದ ರಿಂದಾಗಿ ಬಾಯಿ ತೆರೆದಿದ್ದಾನೆ ಎಂದು
ಉತ್ತರಿಸುತ್ತಿದ್ದನು. ಅಷ್ಟೇ ಅಲ್ಲದೆ ನಾನು ಎಂದಿಗೂ ಕುಳಿತುಕೊಳ್ಳುವುದಿಲ್ಲ, ನಾನು ಎಂದಿಗೂ ನಿದ್ರಿಸುವುದಿಲ್ಲ ಎಂದು ಜಂಬ
ಕೊಚ್ಚಿದ್ದರಿಂದ ಆತನಿಗೆ ಜಂಬುಕ (ನರಿ) ಎಂದು ಹೆಸರಿಸಿದರು.
ಕೆಲವರು ಅವನನ್ನು ಕಂಡು ಭಕ್ತಿಯಿಂದ ಶ್ರೇಷ್ಠರೀತಿಯ
ಆಹಾರಗಳನ್ನು ತಂದರೆ, ಅದನ್ನು
ತಿರಸ್ಕರಿಸಿ ನಾನು ಗಾಳಿಯನ್ನಲ್ಲದೆ ಬೇರೇನೂ ಸೇವಿಸಲಾರೆ ಎಂದು ಸ್ವಪ್ರಶಂಸೆ
ಮಾಡಿಕೊಳ್ಳುತ್ತಿದ್ದನು. ಬಹಳ ಬಲವಂತ ಮಾಡಿದರೆ, ಕುಶಹುಲ್ಲಿನ ತುದಿಯಷ್ಟು ಮಾತ್ರ ಆಹಾರ ಸೇವಿಸಿ ಈ ರೀತಿ ಹೇಳುತ್ತಿದ್ದ ಈಗ ಹೋಗಿ, ಈ ಅಲ್ಪಾಹಾರದಿಂದ ನಿಮಗೆ ಸಾಕಷ್ಟು ಪುಣ್ಯ ಸಿಗುವುದು ಈ
ರೀತಿಯಾಗಿ ಆತನು 55 ವರ್ಷ ಮಲದಿಂದಲೇ
ಜೀವಿಸಿದನು.
ಒಂದುದಿನ ಭಗವಾನರು ಜಂಬುಕನು ಅರಹಂತನಾಗುವ
ಪ್ರಚನ್ನತೆಯಿರುವುದು ಅರಿತು ಅತನಲ್ಲಿಗೆ ಹೋಗಿ ಅತನ ವಾಸಸ್ಥಳದಲ್ಲಿ ಒಂದು ರಾತ್ರಿ ಕಳೆಯಲು
ಕೇಳಿದರು. ಆತನು ಸಮೀಪದ ಪರ್ವತದ ಗವಿಯನ್ನು ತೋರಿಸಿದನು. ಆ ರಾತ್ರಿಯ ಮೂರು ಜಾವಗಳಲ್ಲಿ
ಭಗವಾನರನ್ನು ಭೇಟಿಮಾಡಲು ಚತುಮ್ಮಹಾರಾಜಿಕ ದೇವ, ಸಕ್ಕ ಮತ್ತು ಮಹಾಬ್ರಹ್ಮರು ಬಂದು ಹೋದರು. ಹಾಗೆ ಅವರು ಬಂದಾಗ ಅವರ ಪ್ರಭೆಯಿಂದ ಸುತ್ತಲಿನ
ಅರಣ್ಯವೇ ಪ್ರಕಾಶಿಸಿತು. ಆ ಬೆಳಕನ್ನು ಜಂಬುಕನು ಸಹಾ ಮೂರುಬಾರಿ ಕಂಡನು. ಮಾರನೆಯದಿನ ಬೆಳಿಗ್ಗೆ
ಅತನು ಭಗವಾನರಲ್ಲಿಗೆ ಹೋಗಿ ಇದರ ಕುರಿತು ಪ್ರಶ್ನಿಸಿದನು.
ಆತನಿಗೆ ದೇವತೆಗಳು, ಸಕ್ಕ ಮತ್ತು ಮಹಾಬ್ರಹ್ಮರ ವಿಷಯ ತಿಳಿಸಿದಾಗ ಜಂಬುಕನು ಅತಿ
ಸ್ಫೂತರ್ಿಗೊಂಡು ಬುದ್ಧರಿಗೆ ವಂದಿಸಿ ಈ ರೀತಿ ಹೇಳಿದನು ನೀವು ನಿಜವಾಗಿ ದೇವ, ಸಕ್ಕ ಮತ್ತು ಮಹಾಬ್ರಹ್ಮರಿಗೆ ಸದಾ ಅದ್ಭುತವಾಗಿ
ಕಾಣಿಸುವಿರಿ. ಆದ್ದರಿಂದಲೇ ಅವರು ನಿಮಗೆ ವಂದಿಸುವರು. ನಾನು 55 ವರ್ಷದಿಂದ ಒಂಟಿಕಾಲಿನಲ್ಲಿ ತಪಸ್ಸು ಆಚರಿಸುತ್ತಾ, ಗಾಳಿಯಲ್ಲೇ ಜೀವಿಸುತ್ತಿದ್ದರೂ ನನಗೆ ಯಾವ ದೇವ,
ಬ್ರಹ್ಮರೂ ಕಾಣಿಸಲಿಲ್ಲ. ಆಗ ಬುದ್ಧರು ಈ ರೀತಿ
ಉತ್ತರಿಸುತ್ತಾರೆ ಓ ಜಂಜುಕೇ, ನೀನು ಪರರಿಗೆ
ಮೋಸಗೊಳಿಸಬಹುದು, ಆದರೆ ನನಗೆ ನೀನು
ವಂಚಿಸಲಾರೆ. ನನಗೆ ಗೊತ್ತಿದೆ ನೀನು 55 ವರ್ಷಗಳಿಂದ
ವಿಸರ್ಜನೆಯನ್ನು ತಿಂದು ನೆಲದ ಮೇಲೆ ಮಲಗುವೆ.
ಇದನ್ನು ಕೇಳಿದ ಜಂಬುಕ ಹೆದರಿದ ಮತ್ತು ಭಯಗೊಮಡು
ಪರರಿಗೆ ತಾನು ಮಾಡಿದ ಮೋಸ ನೆನೆದು ಪರಿತಾಪಪಟ್ಟನು. ಬುದ್ಧಭಗವಾನರ ಪಾದದ ಮೇಲೆ ಬಿದ್ದನು. ಆಗ
ಭಗವಾನರು ಆತನಿಗೆ ಹಾಕಿಕೊಳ್ಳಲು ವಸ್ತ್ರವನ್ನು ನೀಡಿದರು. ನಂತರ ಉಪದೇಶವನ್ನು ನೀಡಿದರು.
ಪ್ರವಚನದ ಅಂತ್ಯದಲ್ಲಿ ಆತನು ಅರಹಂತನಾದನು ಮತ್ತು ಸಂಘವನ್ನು ಸೇರಿದನು.
ನಂತರ ಜಂಬುಕನ ಶಿಷ್ಯರಾದ ಅಂಗ ಮತ್ತು ಮಗಧರಿಗೆ ಜಂಬುಕ
ಬುದ್ಧಶಿಷ್ಯರಾದುದನ್ನು ಕಂಡು ಆಶ್ಚರ್ಯವಾಯಿತು. ಆಗ ಜಂಬುಕನು ವಿಷಯ ತಿಳಿಸಿ ತಾನು ಕೇವಲ ಬುದ್ಧರ
ಶಿಷ್ಯನೆಂದು ಹೇಳಿದಾಗ ಭಗವಾನರು ಜಂಬುಕನ ಹಿಂದಿನ ತಪಸ್ಸು ಉಪವಾಸ ಅರಹತ್ವದ 16ನೇಯ ಒಂದು ಭಾಗಕ್ಕೂ ಸಮವಲ್ಲ ಎಂದು ಹೇಳುತ್ತಾರೆ.
ಈ ಗಾಥೆಯನ್ನು ಭಗವಾನರು ಜೇತವನದಲ್ಲಿ ತಂಗಿದ್ದಾಗ
ಪೂಜ್ಯ ಜಂಬುಕನ ಬಗ್ಗೆ ಹೇಳಿದ್ದರು.
No comments:
Post a Comment