ಪುಷ್ಪವಗ್ಗ
ಶ್ರೇಷ್ಠ ಆರ್ಯಶ್ರಾವಕ ತನ್ನನ್ನು ಜಯಿಸುತ್ತಾನೆ
ಯಾರು ತನ್ನಲ್ಲಿ
ತಾನೇ ಈ ಪೃಥ್ವಿಯನ್ನು ಮತ್ತು ಈ ಯಮ (ಸುಗತಿ) ಲೋಕವನ್ನು ಮತ್ತು ಈ ಲೋಕವನ್ನು ಮತ್ತು
ದೇವಲೋಕವನ್ನು ಅರಿಯುವವರಾರು? ಯಾರು
ಸಂಬೋಧಿತಶೀಲರು ಫಥವನ್ನು ಅನ್ವೇಷಿಸುವವರು? ಹೇಗೆ ಪುಷ್ಪಗಳನ್ನು ಕಿತ್ತು, ಹೂಮಾಲೆಯ ಕೌಶಲ್ಯ ಅರಿಯುವ ಮಾಲೆಕಾರನಂತೆ ಅರಿಯುವವರಾರು? (44)
ಸಾಧನೆಯ
ಹಾದಿಯಲ್ಲಿರುವಂತಹ (ಸೇಖ)ನೇ ಈ ಪೃಥ್ವಿಯನ್ನು ಯಮಸಹಿತ ಎಲ್ಲಾ ದೇವಲೋಕಗಳನ್ನು ಅರಿಯುತ್ತಾನೆ.
ಸೇಖನೇ ಸುಬೋಧಿತ ಶೀಲದ ಪಥ ಅನ್ವೇಷಿಸುತ್ತಾನೆ. ಮಾಲಕಾರನು ಹೂಗಳನ್ನು ಕಿತ್ತು ಕೌಶಲ್ಯ
ಅರಿಯುವವನಂತೆ ಅರಿಯುತ್ತಾನೆ. (45)
ಗಾಥ ಪ್ರಸಂಗ 4:1
ಕಾಯದ ಮೇಲೆ ಸಮಾಧಿ ಹರಿಸಿರಿ
500 ಜನ ಭಿಕ್ಷುಗಳು ಭಗವಾನರೊಡನೆ ಕೆಲಕಾಲವಿದ್ದು ನಂತರ
ಜೇತವನ ವಿಹಾರಕ್ಕೆ ಹೊರಟರು. ಸಂಜೆ ತಮ್ಮ ಪ್ರಯಾಣದ ಬಗ್ಗೆ ಚಚರ್ಿಸಲಾರಂಭಿಸಿದರು. ಆ ಭೂಮಿಯು
ಹೇಗಿತ್ತು? ಆದರ ಸಮಕಟ್ಟು ಹೇಗೆ?
ಬೆಟ್ಟಗಳು ಹೇಗಿತ್ತು? ಮಣ್ಣಿನ ಬಣ್ಣ ಹೇಗಿತ್ತು...? ಎಂದು ಚಚರ್ಿಸುತ್ತಿದ್ದರು. ಆಗ ಭಗವಾನರು ಅಲ್ಲಿ ಬಂದರು ಮತ್ತು ಹೀಗೆ
ಹೇಳಿದರು ಭಿಕ್ಷುಗಳೇ, ನೀವು
ಮಾತನಾಡುತ್ತಿರುವ ಪೃಥ್ವಿಯು ಶರೀರದ ಹೊರಗಿನದು. ನೀವು ನಿಮ್ಮ ಕಾಯದಲ್ಲಿರುವ ಪೃಥ್ವಿಯನ್ನು
ಗಮನಿಸಿ, ನಿಮ್ಮ ಶರೀರದ ಯಥಾಭೂತ
ಸ್ಥಿತಿ ಅರಿಯುವವರಾಗಿ ಕಾಯಾನುಪಸ್ಸಿಯಾಗಿ ವಿಹರಿಸಿ ಎಂದು ಹೇಳಿ ಈ ರೀತಿ ಕಾಯಾನುಪಸ್ಸಿಯಾಗಿ ವಿಹರಿಸುವಾಗ
ಆತನು ಎಲ್ಲಾ ಲೋಕವನ್ನು ಅರಿಯುವವನು ಎಂದು ಹೇಳಿ ಮೇಲಿನ ಗಾಥೆಗಳನ್ನು ನುಡಿದರು.
ನಂತರ ಭಿಕ್ಷುಗಳು ಸಾಧನೆ ಮಾಡಿ ಅರಹಂತರಾದರು.
No comments:
Post a Comment