ಮೂರ್ಖನು ಧಮ್ಮವನ್ನು ಅಭಿನಂದಿಸಲಾರ
ಮೂರ್ಖನು ಪಂಡಿತ
(ಜ್ಞಾನಿ)ಯೊಡನೆ ಜೀವನಪೂತರ್ಿ ಅನ್ಯೋನ್ಯವಾಗಿದ್ದರೂ ಸಹ ಸೂಪರಸದ ರುಚಿಯನ್ನು ಅದರಲ್ಲಿರುವ
ಚಮಚೆಯು ಅರಿಯದ ಹಾಗೆ ಆತನು ಧಮ್ಮವನ್ನು ಅರಿಯಲಾರ. (64)
ಗಾಥ ಪ್ರಸಂಗ 5:5
ಮೂರ್ಖನು ಜ್ಞಾನಿಯೊಂದಿಗೆ ಲಾಭ ಪಡೆಯಲಾರ
ಭಿಕ್ಷು ಉದಾಯಿಯು ಆಗಾಗ್ಗೆ ಬಹುಶ್ರುತ ಭಿಕ್ಷುಗಳು
ಪ್ರವಚನ ನೀಡುವ ಸ್ಥಳದಲ್ಲಿನ ಪೀಠದಲ್ಲಿ ಕುಳಿತುಕೊಳ್ಳುತ್ತಿದ್ದನು. ಒಮ್ಮೆ ಹಲವು ಭಿಕ್ಷುಗಳು
ಇವನನ್ನು ಮಹಾ ವಿದ್ವಾಂಸ ಭಿಕ್ಷು ಎಂದು ಬಗೆದು ಆತನಿಗೆ ಪಂಚಖಂಧಗಳ ಬಗ್ಗೆ ಪ್ರಶ್ನಿಸಿದರು. ಆದರೆ
ದಡ್ಡನಾದ ಉದಾಯಿಗೆ ಉತ್ತರ ನೀಡಲು ಬರಲಿಲ್ಲ. ಏಕೆಂದರೆ ಆತನು ಧಮ್ಮವನ್ನು ಅರಿತಿರಲಿಲ್ಲ. ಆಗ
ಬೇಟಿ ಮಾಡಿದ ಭಿಕ್ಷುಗಳಿಗೆ ಆಶ್ಚರ್ಯವಾಯಿತು. ಏಕೆಂದರೆ ಬುದ್ಧರ ವಿಹಾರದಲ್ಲೇ ಇರುವಂತಹ ಭಿಕ್ಷುವು
ಹೀಗೆ ಏಕೆ ಇರುವನು? ಆತನಿಗೆ ಏಕೆ
ಮನಸ್ಸಿನ ಬಗ್ಗೆ ಅಥವಾ ಇಂದ್ರೀಯಗಳ ಬಗ್ಗೆ ತಿಳಿದಿಲ್ಲ?
ನಂತರ ಅವರು ಬುದ್ಧರೊಡನೆ ಈ ವಿಷಯ ತಿಳಿಸಿದರು. ಆಗ
ಭಗವಾನರು ಮೇಲಿನ ಗಾಥೆ ನುಡಿದರು.
No comments:
Post a Comment