Thursday, 19 February 2015

dhammapada/balavagga/5.14/citta

ಅಧಿಕಾರದ ಲೋಭ
ಮೂರ್ಖನು ಮಾತ್ರ ಅಧಿಕಾರ ಬಯಸುತ್ತಾನೆ, ಭಿಕ್ಷುಗಳಲ್ಲಿ, ವಿಹಾರಗಳ ಮೇಲೆ ಪ್ರಾಬಲ್ಯ ಹಾಗು ಕುಟುಂಬಗಳಲ್ಲಿ ಗೌರವಕ್ಕೆ ಹಾತೊರೆಯುತ್ತಾನೆ.            (73)
ನನ್ನ ಬಗ್ಗೆ ಈ ರೀತಿ ಭಾವಿಸಲಿ, ಗೃಹಸ್ಥ ಮತ್ತು ಪಬ್ಬಜಿತರು ಸಹಾ ಯಾವುದೆಲ್ಲಾ ಕಾರ್ಯವಾಗಲಿ ಅದು ನನ್ನಿಂದಲೆ ಆಯಿತು, ಅದು ದೊಡ್ಡದಿರಲಿ ಅಥವಾ ಸಣ್ಣದಿರಲಿ ಅವರೆಲ್ಲರೂ ನನ್ನನ್ನೇ ಅವಲಂಬಿಸಲಿ ಈ ಬಗೆಯ ಲೋಭದಿಂದ ಮೂರ್ಖನ ಸ್ವಾರ್ಥ ಮತ್ತು ಅಹಂಕಾರಗಳು ಉಬ್ಬುತ್ತದೆ.  (74)
ಗಾಥ ಪ್ರಸಂಗ 5:14
ಗೃಹಸ್ಥ ಚಿತ್ತನ ಘಟನೆ

                ಮಚ್ಚಿಕಾಸಂದ ನಗರದಲ್ಲಿ ಚಿತ್ತನೆಂಬ ಗೃಹಸ್ಥನು ಪಂಚವಗರ್ಿಯ ಭಿಕ್ಷುಗಳಲ್ಲಿ ಒಬ್ಬರಾದ ಮಹಾನಾಮರನ್ನು ಕಂಡು ಭಕ್ತಿಪರವಶನಾಗಿ ಅವರಿಗೆ ಆಹಾರ ದಾನ ನೀಡಿದನು, ನಂತರ ಅವರು ಉಪದೇಶ ಕೇಳಿ ಸೋತಪನ್ನನಾದನು. ನಂತರ ಸಂಘದ ಮೌಲ್ಯ ಅರಿವಾಗಿ ತನ್ನ ಪ್ರಿಯವಾದ ಅಂಬಟ್ಟಕ ತೋಪನ್ನು ಸಂಘಕ್ಕೆ ದಾನವಾಗಿ ನೀಡಿದನು, ಆತನು ಪೂಜ್ಯರಿಗೆ ದಾನ ಅಪರ್ಿಸುವಾಗ ಅವರ ಕೈಗೆ ನೀರು ಸುರಿಸುತ್ತಾ ಬುದ್ಧರ ಸಂಘವು ಸ್ಥಿರವಾಗಿ ಸ್ಥಾಪಿಸಲ್ಪಟ್ಟಿದೆ ಎಂದಾಗ ಭೂಮಿಯೇ ಕಂಪಿಸಿತು. ನಂತರ ಮಹಾಶ್ರೇಷ್ಟಿಯು ಆ ತೋಪಿನ ಉದ್ಯಾನವನದಲ್ಲಿ ವಿಹಾರವನ್ನು ಕಟ್ಟಿಸಿದನು, ಅಲ್ಲಿ ನಾಲ್ಕು ದಿಕ್ಕುಗಳಿಂದ ಭಿಕ್ಷುಗಳು ಬರುತ್ತಿದ್ದರು, ಅದೇ ಊರಿನಲ್ಲಿ ಸುಧಮ್ಮನೆಂಬ ಭಿಕ್ಷುವು ನೆಲೆಸಿದ್ದನು.
                ಇದಾದ ಕೆಲಕಾಲದ ನಂತರ ಪ್ರಧಾನ ಶಿಷ್ಯರವರೆಗೂ ಆತನ ಕೀತರ್ಿಯು ಹಬ್ಬಿತು, ಅವರಿಗೆ ಆಹಾರ ದಾನನೀಡಿ, ಅವರಿಂದ ಉಪದೇಶ ಕೇಳಿ ಸಕಾದಗಾಮಿಯಾದನು. ನಂತರ ಅವರಿಗೆ ಸಾವಿರ ಭಿಕ್ಷುಗಳ ಸಮೇತ ಆಹಾರ ದಾನ ನೀಡಿದನು, ಆದರೆ ಆಚಾತುರ್ಯದಿಂದಾಗಿ ಸುಧಮ್ಮರಿಗೆ ಕೊನೆಯಲ್ಲಿ ಆಹ್ವಾನಿಸಿದ್ದನು. ಇದರಿಂದ ಅಸೂಯೆಗೊಂಡು ಸುಧಮ್ಮ ಆಹಾರಕ್ಕೆ ಬರದೆ ಈ ರೀತಿ ಹೇಳಿದನು ಗೃಹಸ್ಥನೇ, ನೀನು ಆಹಾರವನ್ನು ಚೆನ್ನಾಗಿಯೇ ಸಿದ್ಧಪಡಿಸಿರುವೆ, ಆದರೆ ಒಂದನ್ನು ಬಿಟ್ಟಿರುವೆ. ಏನದು ಭಂತೆ ಎಂದು ಕೇಳಿದಾಗ, ಎಳ್ಳಿನ ರೊಟ್ಟಿ ಎಂದು ಉತ್ತರಿಸಿದಾಗ, ಚಿತ್ತನಿಗೆ ಆತನ ಅಹಂಕಾರ ಗೊತ್ತಾಗಿ ಆತನಿಗೆ ಕಾಗೆ ಎಂದು ನಿಂದಿಸಿದನು. ಇದರಿಂದ ಕ್ರುದ್ಧನಾದ ಸುಧಮ್ಮನು ಬುದ್ಧರಲ್ಲಿಗೆ ಬಂದು ಚಾಡಿ ಹೇಳಿದನು. ಆದರೆ ಬುದ್ಧರಿಗೆ ಸರ್ವವೂ ಅರಿವಾಗಿ ಚಿತ್ತನನ್ನು ಕೊಂಡಾಡಿ, ಸುಧಮ್ಮನಿಗೆ ಖಂಡಿಸಿ ಚಿತ್ತನಲ್ಲಿಗೆ ಕ್ಷಮೆಯಾಚಿಸಲು ಕಳುಹಿಸಿದರು. ಆದರೆ ಚಿತ್ತನು ಕ್ಷಮಿಸಲಿಲ್ಲ.
                ಇದರಿಂದಾಗಿ ಆತನು ಬುದ್ಧರಲ್ಲಿಗೆ ಹೋಗಿ ವಿಷಯ ತಿಳಿಸಿದನು, ಬುದ್ಧರಿಗೆ ಚಿತ್ತನು ಕ್ಷಮಿಸಿದ್ದಾನೆ, ಆದರೂ ಸುಧಮ್ಮನ ಅಹಂಕಾರ ತಗ್ಗಿಸಲು ಈ ರೀತಿ ನಟಿಸಿದ್ದಾನೆ ಎಂದು ಅರಿವಾಯಿತು. ಆಗ ಬುದ್ಧರು ಓ ಭಿಕ್ಷುವೆ, ಈ ಒಬ್ಬ ಸಹಭಿಕ್ಷುವಿನ ಸಹಿತ ಹೋಗಿ ಗೃಹಸ್ಥನ ಬಳಿ ಕ್ಷಮೆ ಯಾಚಿಸಿಕೊ, ಯಾವ ಭಿಕ್ಷುವು ಈ ವಾಸಸ್ಥಳ ನನ್ನದು, ಈ ಉಪಾಸಕ ನನ್ನವ, ನನ್ನ ಹಿತೈಷಿ ಎಂದು ಯಾರು ಯೋಚಿಸುವರೊ ಆತನ ಅಹಂ ಮತ್ತು ದ್ವೇಷವು ವೃದ್ಧಿಯಾಗುತ್ತದೆ, ಹೊರತು ಕ್ಷೀಣಿಸುವುದಿಲ್ಲ ಎಂದು ಭಗವಾನರು ನುಡಿದರು.
                ಇದಾದನಂತರ ಸುಧಮ್ಮ ಬುದ್ಧರಿಗೆ ವಂದಿಸಿ, ಪ್ರದಕ್ಷಿಣೆ ಮಾಡಿ ಚಿತ್ತನಲ್ಲಿಗೆ ಕ್ಷಮೆ ಯಾಚಿಸಿದಾಗ ನಾನು ಕ್ಷಮಿಸಿರುವೆ, ಪೂಜ್ಯರೇ, ನೀವು ಸಹಾ ನನ್ನ ತಪ್ಪುಗಳನ್ನು ಕ್ಷಮಿಸಿ ಎಂದರು. ನಂತರ ಸುಧಮ್ಮ ಜಾಗೃತನಾಗಿ ಸ್ವಪರಿಶ್ರಮಯುತನಾಗಿ ಅಭಿಜ್ಞ ಸಹಿತ ಅರ್ಹಂತನಾದನು.
                ಚಿತ್ತನ ಮನಸ್ಸಿನಲ್ಲಿ ಈ ಯೋಚನೆಯುಂಟಾಯಿತು ಬುದ್ಧರನ್ನು ಕಾಣದೆಯೇ ನಾನು ಸೋತಪನ್ನನಾದೆ, ಸಕಾದಗಾಮಿಯಾದೆ, ಇನ್ನು ನಾನು ತಡಮಾಡದೆ ಅವರನ್ನು ದಶರ್ಿಸಲೇಬೇಕು ಎಂದು ಯೋಚಿಸಿ 500 ಬಂಡಿಗಳ ತುಂಬಾ ಅಕ್ಕಿ, ಎಳ್ಳು, ಸಕ್ಕರೆ, ವಸ್ತ್ರಗಳು ಇತ್ಯಾದಿಗಳ ಸಹಿತ ಬುದ್ಧರನ್ನು ಭೇಟಿಮಾಡಿ ಬುದ್ಧ ಮತ್ತು ಸಂಘಕ್ಕೆ ಒಂದು ತಿಂಗಳು ದಾನ ಮಾಡಿದನು. ಆನಂದರವರು ಭಗವಾನರಿಗೆ ಕೇಳಿದರು ಪೂಜ್ಯರೇ, ಆತನು ನಿಮ್ಮನ್ನು ದಶರ್ಿಸಿದರಿಂದಲೆ ಈ ಎಲ್ಲಾ ಗೌರವ ಪಡೆದನೆ? ಆಗ ಬುದ್ಧರು ಈ ರೀತಿ ಉತ್ತರಿಸಿದರು ಆನಂದ ಯೋಗ್ಯ ವ್ಯಕ್ತಿ ಎಲ್ಲೇ ಇರಲಿ, ಆತನು ಗೌರವ ಆದರಗಳನ್ನು ಪಡೆಯುತ್ತಾನೆ.
                ಬುದ್ಧ ಭಗವಾನರು ಜೇತವನದಲ್ಲಿ ತಂಗಿದ್ದಾಗ ಈ ಗಾಥೆಗಳನ್ನು ಪೂಜ್ಯ ಸುಧಮ್ಮ ಮತ್ತು ಗೃಹಸ್ಥ ಚಿತ್ತನ ಬಗ್ಗೆ ಹೇಳಿದರು

No comments:

Post a Comment