ಬಾಲವಗ್ಗ
ಸದ್ಧಮ್ಮ ಅರಿಯದವರ ಸಂಸಾರ ದೀರ್ಘವಾಗಿರುತ್ತದೆ
ನಿದ್ರೆ ಬಾರದೆ
ಜಾಗೃತನಾಗಿರುವವನಿಗೆ ರಾತ್ರಿಯು ದೀರ್ಘವಾಗಿರುತ್ತದೆ, ದಣಿದವನಿಗೆ ಯೋಜನ ದೂರವು ದೀರ್ಘವಾಗಿರುತ್ತದೆ. ಸದ್ಧಮ್ಮವನ್ನು ಅರಿಯದ
ಮೂರ್ಖರಿಗೆ ಸಂಸಾರದಲ್ಲಿ ಇರುವಿಕೆ ದೀರ್ಘವಾಗಿರುತ್ತದೆ. (60)
ಗಾಥ ಪ್ರಸಂಗ 5:1
ಪರನಾರಿ ಗಮನದ ಪರಿಣಾಮ
ಒಂದುದಿನ ರಾಜ ಪಸೇನದಿಯು ನಗರವನ್ನು
ವೀಕ್ಷಿಸುತ್ತಿರುವಾಗ ಒಂದು ಮನೆಯ ಕಿಟಕಿಯಲ್ಲಿ ಸುಂದರವಾದ ಸ್ತ್ರೀಯನ್ನು ಕಂಡನು. ಆಕೆಯನ್ನು
ಕಂಡೊಡನೆಯೇ ಆಕೆಯಲ್ಲಿ ಅನುರಕ್ತನಾದನು. ಆಕೆಯ ಬಗ್ಗೆ ತಿಳಿದುಕೊಂಡಾಗ ಆಕೆ ವಿವಾಹಿತೆಯೆಂದು
ತಿಳಿಯಿತು. ಆಕೆಯನ್ನು ಪಡೆಯುವ ಉಪಾಯವೊಂದನ್ನು ಆತನು ರಚಿಸಿದನು. ಆಕೆಯ ಪತಿಯನ್ನು ಕರೆಸಿ
ಆತನನ್ನು ಅರಮನೆಯಲ್ಲಿ ಕೆಲಸದಲ್ಲಿ ನೇಮಿಸಿದನು. ಕೆಲದಿನಗಳ ನಂತರ ರಾಜನು ಆತನಿಗೆ ಅಸಾಧ್ಯವಾದ
ಕಾರ್ಯವೊಂದಕ್ಕೆ ನಿಯಮಿಸಿದನು. ಯುವಕರು ಶ್ರಾವಸ್ತಿಯಿಂದ ಯೋಜನ ದೂರದಲ್ಲಿರುವ ಒಂದು ಪ್ರದೇಶಕ್ಕೆ
ಹೋಗಿ ನಾಗಲೋಕಕ್ಕೆ ಹೋಗಿ ಕುಮುದ ಹೂಗಳನ್ನು ಮತ್ತು ಅಲ್ಲಿನ ಕೆಂಪು ಮಣ್ಣನ್ನು ತರಬೇಕೆಂದು
ಪಸೇನದಿಯು ಕಳುಹಿಸಿದರು. ಅದು ಸಂಜೆಯ ಒಳಗೆ ತರಬೇಕು ಎಂದು ಆಜ್ಞಾಪಿಸಿದನು. ಆತನು ಹಾಗೆ
ಮಾಡದಿದ್ದರೆ ಆತನನ್ನು ಕೊಂದು ಆತನ ಪತ್ನಿಯನ್ನು ಪಡೆಯುವುದು ಆತನ ಉಪಾಯವಾಗಿತ್ತು.
ಆ ಯುವಕನು ಆತುರದಿಂದ ಪತ್ನಿಯಿಂದ ಆಹಾರ ತೆಗೆದುಕೊಂಡು
ಆ ಸ್ಥಳಕ್ಕೆ ಹೋಗುವಾಗ ದಾರಿಯಲ್ಲಿ ಯಾತ್ರಿಕರಿಗೆ ಆಹಾರ ನೀಡಿದನು ಮತ್ತು ಸ್ವಲ್ಪ ಆಹಾರವನ್ನು
ನೀರಿನಲ್ಲಿ ಹಾಕಿದನು ಮತ್ತು ಜೋರಾಗಿ ಹೀಗೆ ಹೇಳಿದನು ಓ ರಕ್ಷಣಾ ದೇವತೆಗಳಿಗೆ ಮತ್ತು
ನದಿಯಲ್ಲಿರುವ ನಾಗಾಗಳೇ, ರಾಜ ಪಸೇನದಿಯು
ನನಗೆ ಕುಮುದ ಹೂಗಳನ್ನು ಮತ್ತು ಅರುಣವತಿ (ಕೆಂಪು ಮಣ್ಣು) ತರಲು ಆಜ್ಞಾಪಿಸಿದ್ದಾನೆ. ನಾನು ಇಂದು
ನನ್ನ ಆಹಾರವನ್ನು ಯಾತ್ರಿಕರೊಡನೆ ಮತ್ತು ನದಿಯಲ್ಲಿನ ಮೀನುಗಳೊಡನೆ ಹಂಚಿದ್ದೇನೆ. ಇವೆಲ್ಲಾ
ಪುಣ್ಯವನ್ನು ನಾನು ನಿಮಗೆ ನೀಡುತ್ತೇನೆ. ನನಗೆ ದಯವಿಟ್ಟು ನಾಗಾಲೋಕದ ಕುಮುದ ಪುಷ್ಪಗಳನ್ನು
ಮತ್ತು ಕೆಂಪು ಮಣ್ಣನ್ನು ನೀಡಿ ಆಗ ನಾಗರಾಜ ವೃದ್ಧನ ವೇಷಧರಿಸಿ ಆತನಿಗೆ ಕುಮುದ ಪುಷ್ಪ ಮತ್ತು
ಕೆಂಪು ಮಣ್ಣನ್ನು ನೀಡಿದನು.
ರಾಜ ಪಸೇನದಿಗೆ ಯುವಕನು ಬೇಗ ಬರಬಹುದೆಂಬ ಸಂಶಯದಿಂದ
ನಗರದ ಬಾಗಿಲುಗಳು ಮುಚ್ಚಿರುವುದು ಕಂಡನು. ಆತನಿಗೆ ರಾಜನ ಉಪಾಯವು ಅರಿವಾಗಿ ಕೆಂಪು ಮಣ್ಣನ್ನು
ನಗರ ಗೋಡೆಯಲ್ಲಿಟ್ಟು, ಭೂಮಿಯ ಮೇಲೆ ಕಮಲದ
ಪುಷ್ಪವನ್ನಿಟ್ಟು ಈ ರೀತಿ ಜೋರಾಗಿ ಕೂಗಿ ಹೇಳಿದನು.
ಓ ನಾಗರಿಕರೇ, ನಾನು ರಾಜನು ಒಪ್ಪಿಸಿದ್ದ ಸಾಹಸ ಪೂತರ್ಿ ಮಾಡಿದ್ದೇನೆ. ಆದರೆ ರಾಜನು
ಸಮಯಕ್ಕೆ ಮುಂಚೆ ಬಾಗಿಲು ಹಾಕಿಸಿದ್ದಾನೆ. ನ್ಯಾಯಪರತೆಯಿಲ್ಲದೆ ರಾಜನು ನನ್ನನ್ನು ಕೊಲ್ಲಲು
ನಿರ್ಧರಿಸಿದ್ದಾನೆ.
ನಂತರ ಆತನು ಅಲ್ಲಿಂದ ಪ್ರಾಣ ಭಯದಿಂದ ಜೇತವನಕ್ಕೆ
ಬಂದನು. ಅದೇವೇಳೆಯಲ್ಲಿ ರಾಜ ಪಸೇನದಿಗೆ ಬಯಕೆಗಳಿಂದಾಗಿ ನಿದ್ದೆ ಬರಲಿಲ್ಲ. ಆತ ರಾತ್ರಿಯಿಡಿ ಆ
ಯುವಕನನ್ನು ದೂರಮಾಡಿ ಆತನ ಪತ್ನಿಯನ್ನು ಪಡೆಯುವ ಯೋಚನೆ ಮಾಡುತ್ತಿದ್ದನು. ಆದರೆ ಆತನು
ಮಧ್ಯರಾತ್ರಿಯ ವೇಳೆ ಅತ್ಯಂತ ಭಯಾನಕ ಶಬ್ದಗಳನ್ನು ಕೇಳಿದನು. ಆತನಿಗೆ ಇನ್ನೂ ನಿದ್ರೆ
ಬಾರದಂತಾಯಿತು. ಪತ್ನಿ ಮಲ್ಲಿಕಾಳ ಸಲಹೆಯಂತೆ ರಾಜನು ಭಗವಾನರನ್ನು ಭೇಟಿ ಮಾಡಿ ಆ ಭೀಕರ ಶಬ್ದಗಳ
ಬಗ್ಗೆ ಕೇಳಿದನು. ಆಗ ಭಗವಾನರು ಆ ಭೀಕರ ಶಬ್ದಗಳು ಲೋಹಕುಂಭಿ ನಿರಯದಲ್ಲಿ ದುಃಖಿಸುತ್ತಿರುವ
ನಾಲ್ವರ ಧ್ವನಿಯಾಗಿತ್ತೆಂದು, ಅವರು ಕಸ್ಸಪ
ಬುದ್ಧರ ಕಾಲದಲ್ಲಿ ಶ್ರೀಮಂತರ ಮಕ್ಕಳಾಗಿದ್ದು ಅವರು ಪರನಾರಿ ಗಮನ ಮಾಡಿದ್ದರಿಂದಾಗಿ ಅವರಿಗೆ ಈ
ಗತಿ ಬಂದಿತೆಂದು ಹೇಳಿದರು. ಆಗ ರಾಜನಿಗೆ ಪರನಾರಿ ಗಮನದ ಪರಿಣಾಮ ಅರಿವಾಗಿ ಆತನು ಮತ್ತೆ
ಪರಸ್ತ್ರಿಯ ಬಗ್ಗೆ ಮನದಲ್ಲಿಯೂ ಚಿಂತಿಸಲಾರೆ ಎಂದು ಮನಸ್ಸಿನಲ್ಲೇ ಸಂಕಲ್ಪಿಸಿದನು. ಆ ಲೋಭದಿಂದಲೇ
ಅಲ್ಲವೇ ನಾನು ರಾತ್ರಿಯಿಡಿ ನಿದ್ರಿಸಲಿಲ್ಲ ಎಂದು ಚಿಂತಿಸಿ ಆತನು ಭಗವಾನರೊಂದಿಗೆ ಭಗವಾನ್
ನಿದ್ರೆ ಬಾರದವನಿಗೆ ರಾತ್ರಿಯು ದೀರ್ಘವಾಗಿರುತ್ತದೆ ಎಂದನು. ಅಲ್ಲಿಯೇ ಇದ್ದ ಯುವಕನು ಭಗವಾನ್
ದಣಿದಿರುವಾಗ ಯೋಜನ ದೂರವು ಸಹ ದೀರ್ಘವಾಗಿರುತ್ತದೆ ಎಂದರು. ಆಗ ಭಗವಾನರು ಮೇಲಿನ ಗಾಥೆಯನ್ನು
ನುಡಿದರು. ನಂತರ ಎಲ್ಲವೂ ಸುಖಾಂತವಾಯಿತು.
No comments:
Post a Comment