ಪಾಪಿಯು ತನಗೆ ತಾನೇ ಶತ್ರು
ತನಗೆ ತಾನೇ
ಅಮಿತ್ರನಾಗಿ ಮೂರ್ಖರು ತಮ್ಮ ದುಮರ್ೆಧಾಮಿ (ಅಲ್ಪ ಜ್ಞಾನದಿಂದ) ತನದಿಂದ ಕಹಿ ಫಲಗಳನ್ನು ನೀಡುವ
ಪಾಪಕರ್ಮಗಳನ್ನು ಮಾಡುತ್ತಾ ಜೀವಿಸುತ್ತಾರೆ. (66)
ಗಾಥ ಪ್ರಸಂಗ 5:7
ತ್ರಿರತ್ನದಲ್ಲಿ ಕುಷ್ಟರೋಗಿಯ ಶ್ರದ್ಧೆ
ಸುಪ್ಪ ಬುದ್ಧನೆಂಬ ಕುಷ್ಟರೋಗಿಯು ಬುದ್ಧರ ಬೋಧನೆಯನ್ನು
ಆಲಿಸುತ್ತ ಸೋತಪತ್ತಿ ಫಲ ಪಡೆದನು. ಗುಂಪು ಚದುರಿದ ನಂತರ ಆತನು ಬುದ್ಧರತ್ತ ತೆವಳುತ್ತ
ಬರತೊಡಗಿದನು. ಆಗ ಇಂದ್ರನಿಗೆ ಕುಷ್ಟರೋಗಿಯನ್ನು ಪರೀಕ್ಷಿಸಬೇಕೆನಿಸಿತು. ಆತ ಕುಷ್ಟರೋಗಿಯ
ಪರೀಕ್ಷಿಸಬೇಕೆನಿಸಿತು. ಆತ ಕುಷ್ಟರೋಗಿಯ ಬಳಿಗೆ ಬಂದು ಈ ರೀತಿ ಹೇಳಿದನು. ಸುಪ್ಪಬುದ್ಧ ನೀನು
ಬಡವನಾಗಿರುವೆ, ಅದು ಅಲ್ಲದೆ
ರೋಗಿಯಾಗಿ ದುಃಖದಲ್ಲಿರುವೆ. ನಾನು ನಿನಗೆ ಅಪರಿಮಿತ ಐಶ್ವರ್ಯ ನೀಡುವೆ, ಕೇವಲ ನೀನು ಬುದ್ಧರು ಬುದ್ಧರೇ ಅಲ್ಲ, ಧಮ್ಮವು ಜ್ಞಾನವೇ ಅಲ್ಲ, ಸಂಘವು ಪವಿತ್ರ ಸಂಘವೇ ಅಲ್ಲ ಎಂದು ಹೇಳಬಲ್ಲೆಯಾ? ಆಗ ಸುಪ್ಪಬುದ್ಧನು ಕೇಳಿದ ಯಾರು ನೀವು?
ನಾನು ಸಕ್ಕ
ನಂತರ ಸುಪ್ಪಬುದ್ಧ ಈ ರೀತಿ ಹೇಳಿದನು ಮೂರ್ಖ, ನಾಚಿಕೆಹೀನನೆ, ನನ್ನೊಂದಿಗೆ ಮಾತನಾಡಲು ನೀನು ತಕ್ಕವನಲ್ಲ. ನೀನು ನನಗೆ ಬಡವ,
ರೋಗಿ ಎಂದು ಹೇಳಿದೆಯಲ್ಲವೆ, ಕೇಳು, ನಾನು ಸುಖವನ್ನು
ಪ್ರಾಪ್ತಿಮಾಡಿದ್ದೇನೆ, ನನ್ನಲ್ಲಿ ಏಳು
ಅಮೂಲ್ಯ ಐಶ್ವರ್ಯವಿದೆ. ಅದೆಂದರೆ: ಶ್ರದ್ಧೆ, ಶೀಲ, ಹಿರಿ (ಪಾಪಲಜ್ಞೆ) ಒತಪ್ಪ
(ಪಾಪಭೀತಿ) ಸುತ (ಕಲಿಯುವಿಕೆ), ತ್ಯಾಗ (ದಾನ)
ಮತ್ತು ಪ್ರಜ್ಞಾ. ಇಂತಹ ಅಮೂಲ್ಯ ಐಶ್ವರ್ಯ ಹೊಂದಿದ ನಾನು ಬಡವನಲ್ಲ.
ನಂತರ ಇಂದ್ರನು ಭಗವಾನರ ಬಳಿಗೆ ಬಂದು ಈ ಚಚರ್ೆ
ತಿಳಿಸಿದನು. ಅದನ್ನು ಕೇಳಿದ ಭಗವಾನರು ಹೀಗೆಂದರು. ಸುಪ್ಪಬುದ್ಧನಂತಹ ಸೋತಪನ್ನರಿಗೆ ಲಕ್ಷ
ಇಂದ್ರರು ಬಂದರು ತ್ರಿರತ್ನಗಳಾದ ಬುದ್ಧ, ಧಮ್ಮ ಮತ್ತು
ಸಂಘದಿಂದ ದೂರಮಾಡಲಾರರು.
ಸ್ವಲ್ಪ ಕಾಲದ ನಂತರ ಸುಪ್ಪಬುದ್ಧ ಭಗವಾನರ ಬಳಿಗೆ ಬಂದು
ಅದೇ ಚಚರ್ೆಯನ್ನು ತಿಳಿಸಿದನು. ನಂತರ ಭಗವಾನರು ಶುಭಹಾರೈಕೆ ಪಡೆದು ಆತನು ಜೇತವನದಿಂದ
ಹಿಂತಿರುಗುತ್ತಿದ್ದನು. ಆಗ ಹಿಂದಿನ ಜನ್ಮದಲ್ಲಿ ಸುಪ್ಪಬುದ್ಧನಿಂದ ಕೊಲ್ಲಲ್ಪಟ್ಟ
ವಾರಾಂಗನೆಯೊಬ್ಬಳು ಈ ಜನ್ಮದಲ್ಲಿ ಹಸುವಾಗಿದ್ದಳು. ಆಕೆಗೆ ಸುಪ್ಪಬುದ್ಧನನ್ನು ಕಂಡು ಹಿಂದಿನ
ಜನ್ಮ ನೆನಪಾಗಿ ಕ್ರೋಧವುಕ್ಕಿ ಆತನನ್ನು ಕೊಂಬಿನಿಂದ ತಿವಿದು ಸಾಯಿಸಿತು. ಆತನ ಸಾವಿನ ಸುದ್ದಿ
ಜೇತವನಕ್ಕೆ ಹಬ್ಬಿತು. ಆತನಿಗೆ ಸ್ತೂಪ ನಿಮರ್ಿಸಲಾಯಿತು.
ಆತನ ಬಗ್ಗೆ ಭಗವಾನರಲ್ಲಿ ಭಿಕ್ಷುಗಳು ಕೇಳಿದಾಗ
ಭಗವಾನರು ಹೀಗೆ ತಿಳಿಸಿದರು. ಸುಪ್ಪಬುದ್ಧನು ಹಿಂದಿನ ಜನ್ಮವೊಂದರಲ್ಲಿ ಪವಿತ್ರ ಮಾನವರಿಗೆ
ಉಗಿದಿದ್ದರಿಂದಾಗಿ ಆತನು ಈ ಜನ್ಮದಲ್ಲಿ ಕುಷ್ಟರೋಗಿಯಾಗಿದ್ದನು. ಈ ಜನ್ಮದ ಶೀಲ ಮತ್ತು
ಸೋತಪತ್ತಿಯ ಫಲದಿಂದ ಆತನು ತಾವತಿಂಸ ದೇವಲೋಕದಲ್ಲಿ ಹುಟ್ಟಿರುವನು ಎಂದು ತಿಳಿಸಿದರು. ಆಗ ಈ
ಗಾಥೆಯನ್ನು ನುಡಿದರು.
No comments:
Post a Comment