ಅರಹಂತರ ಹಾದಿ ಪತ್ತೆಹಚ್ಚಲಾಗದು
ಯಾರು ಶೀಲಸಂಪನ್ನರೊ, ಎಚ್ಚರಿಕೆಯಲ್ಲೇ ವಿಹರಿಸುವರೋ, ಸಮ್ಮಾ
ಪ್ರಜ್ಞೆಯಿಂದಾಗಿ ವಿಮುಕ್ತಿ ಹೊಂದಿರುವರೋ ಅಂತಹವರ ಮಾರ್ಗವನ್ನು ಮಾರನು ಹುಡುಕಲಾರ. (57)
ಗಾಥ ಪ್ರಸಂಗ 4:11
ಗೋಧಿಕನ ಅರಹತ್ವ ಪ್ರಾಪ್ತಿ
ಒಮ್ಮೆ ಪೂಜ್ಯ ಗೋಧಿಕರವರು ಮಗಧದ ಇಸಿಗಿಲಿ ಪರ್ವತದ ಬಳಿ
ಧ್ಯಾನಿಸುತ್ತಿದ್ದರು. ಆದರೆ ಅವರು ಸಮಾಧಿಪ್ರಾಪ್ತಿಯ ವೇಳೆಗೆ ಕಾಯಿಲೆ ಬೀಳುತ್ತಿದ್ದರು. ಹಿಗಾಗಿ
ಅವರ ಪ್ರಯತ್ನ ವ್ಯರ್ಥವಾಯಿತು. ನಂತರ ಆರೋಗ್ಯವಂತರಾದ ಮೇಲೆ ಮತ್ತೆ ಸಮಾಧಿಪ್ರಾಪ್ತಿಯ ವೇಳೆ ಅವರು
ಅಸ್ವಸ್ಥರಾಗುತ್ತಿದ್ದರು. ಇದೇರೀತಿ ಅವರು ಆರುಬಾರಿ ಕಾಯಿಲೆಬಿದ್ದರು. ಕೊನೆಗೆ ಅವರು ಅರಹತ್ವ
ಪ್ರಾಪ್ತಿಮಾಡಬೇಕೆಂದು ದೃಢವಾಗಿ ನಿರ್ಧರಿಸಿದರು. ಹೀಗಾಗಿ ಅವರು ಮತ್ತೆ ಸಾಧನೆಯಲ್ಲಿ
ತಲ್ಲೀನರಾದರು. ಆದರೆ ಫಲ ಸಿಗದಿದ್ದಾಗ ಪಶ್ಚಾತ್ತಾಪಕ್ಕೆ ಗುರಿಯಾಗಿ ತಮ್ಮ ಕತ್ತನ್ನು ಸ್ವಲ್ಪ
ಚಾಕುವಿನಿಂದ ಕತ್ತರಿಸಿಕೊಂಡರು. ತಕ್ಷಣ ಆ ನೋವಿನಲ್ಲಿ ಅವರಿಗೆ ಸಮಾಧಿ ಸಿಕ್ಕಿತು. ಹಾಗೆಯೇ
ವಿಶುದ್ಧಿಹಂತಗಳನ್ನು ಕ್ಷಿಪ್ರವಾಗಿ ಸಾಧಿಸಿ ಗೋತ್ರಭೂಜ್ಞಾನ ಗಳಿಸಿ ಹಾಗೆಯೇ ಅರಹಂತರಾದರು. ನಂತರ
ಪರಿನಿಬ್ಬಾಣ ಪ್ರಾಪ್ತಿಮಾಡಿದರು. ಇವೆಲ್ಲವೂ ನಿಮಿಷಗಳಲ್ಲೇ ಸಾಧಿಸಿದರು.
ಆಗ ಮಾರನೆಂಬ ಜೀವಿಯು ಗೋಧಿಕರ ವಿನ್ಯಾನವನ್ನು
ಹುಡುಕಿದನು. ಎಲ್ಲ್ಲಿ ಗೋಧಿಕರವರು ಹುಟ್ಟಿರಬಹುದೆಂದು ಹುಡುಕಿ ಪ್ರಯೋಜನವಾಗದೆ ಭಗವಾನರಲ್ಲಿ
ಪ್ರಶ್ನಿಸಿದಾಗ, ಭಗವಾನರು ಹೀಗೆ
ಉತ್ತರಿಸಿದರು ಗೋತಿಕಾ, ತನ್ಹಾವನ್ನು
ಕಿತ್ತುಹಾಕಿ ನಿಬ್ಬಾಣ, ಪರಿನಿಬ್ಬಾನ
ಪ್ರಾಪ್ತಿಮಾಡಿದ್ದಾನೆ. ಓ ಮಾರ ನಿನಗೆ ಅದರಿಂದೇನೂ ಪ್ರಯೋಜನವಿಲ್ಲ. ನಿನ್ನಂತಹ ನೂರು ಮಾರರು
ಹುಡುಕಿದರೂ ಆತನು ಕಾಣಲಾರ ಎಂದು ಹೇಳಿ ಮೇಲಿನ ಗಾಥೆ ನುಡಿದರು.
No comments:
Post a Comment