ಶೀಲ ಸುರಭಿಯು ದೇವತೆಗಳವರೆವಿಗೂ ಹಬ್ಬುತ್ತದೆ
ತಿಳಿಯಾಗಿವೆ ಈ
ಸುಗಂಧಗಳಾದ ತಗರ, ಚಂದನಗಳು. ಆದರೆ
ಶೀಲವಂತನ ಸುಗಂಧವಂತು ಉತ್ತಮೋತ್ತಮತೆಯಿಂದ ಕೂಡಿ ದೇವತೆಗಳ ನಡುವೆ ಸಹಾ ಪ್ರಸರಿಸುತ್ತದೆ. (56)
ಗಾಥ ಪ್ರಸಂಗ 4:10
ಮಹಾಕಸ್ಸಪರವರ ಶ್ರೇಷ್ಠಶೀಲತೆ
ಒಮ್ಮೆ ಮಹಾಕಸ್ಸಪರವರು ನಿರೋಧ ಸಮಾಪತ್ತಿಯಿಂದ
ಮೇಲೆದ್ದರು. ಅವರು ರಾಜಗೃಹಕ್ಕೆ ಆಹಾರಕ್ಕಾಗಿ ನಡೆದರು. ಯಾರೇ ಆಗಲಿ ನಿರೋಧ ಸಮಾಪತ್ತಿಯಿಂದ
ಹೊರಬಂದಾಗ ಅಂತಹವರಿಗೆ ನೀಡುವ ದಾನ ಮಹತ್ಫಲವಾಗಿರುತ್ತದೆ. ಇದನ್ನು ಬಲ್ಲ ದೇವೇಂದ್ರನಾದ ಸಕ್ಕ
ಅವರಿಗೆ ದಾನ ನೀಡುವುದಾಗಿ ಸಂಕಲ್ಪಿಸಿದನು. ಆದರೆ ಮಹಾ ಕಸ್ಸಪನವರು ಬಡವರಿಗೆ ದಾನದ ಅವಕಾಶ ನೀಡುವ
ಉದ್ದೇಶದಿಂದ ಹೊರಟಿದ್ದರು. ಇದನ್ನು ಅರಿತ ಸಕ್ಕರವರು ಬಡ ನೇಯ್ಗೆಯವರಂತೆ, ಪತ್ನಿ ಸುಜಾತಳೊಂದಿಗೆ ರಾಜಗೃಹದಲ್ಲಿ ಕಾಣಿಸಿಕೊಂಡು
ಪೂಜ್ಯರೇ, ನಮಗೂ ದಾನದ ಅವಕಾಶ ನೀಡಿ
ಎಂದು ಬೇಡಿಕೊಂಡರು. ಕಸ್ಸಪರವರು ಆಹಾರ ಸ್ವೀಕರಿಸಿದರು. ಅದರ ಪರಿಮಳವು ಅತ್ಯದ್ಭುತವಾಗಿತ್ತು.
ತಕ್ಷಣ ಮಹಾಕಸ್ಸಪರಿಗೆ ಈತ ಇಂದ್ರನೆಂದು ಗೊತ್ತಾಗಿಹೋಯಿತು. ಪುಣ್ಯಕ್ಕಾಗಿ ಇನ್ನೊಮ್ಮೆ ಬಡವರ
ಪಾಲನ್ನು ಕಸಿಯಬೇಡ ಎಂದು ಸಕ್ಕನಿಗೆ ಉಪದೇಶ ನೀಡಿದರು.
ಇಲ್ಲಿ ಭಗವಾನರು ಕಸ್ಸಪನಿಗೆ ಇಂದ್ರ ಮತ್ತು ಪತ್ನಿ
ಸುಜಾತ ದಾನ ನೀಡಿದ್ದನ್ನು ಕಂಡರು. ಅದನ್ನು ಭಿಕ್ಷುಗಳಿಗೆ ಹೇಳಿದರು. ಆಗ ಭಿಕ್ಷುಗಳಿಗೂ ಸಹಾ
ಆಶ್ಚರ್ಯವಾಯಿತು. ಶೀಲದ ನಿರೋಧ ಸಮಾಪತ್ತಿಯ ಮಹತ್ವ ಗೊತ್ತಾಯಿತು. ಶೀಲವಂತನ ಬಗ್ಗೆ ದೇವತೆಗಳಿಗೂ
ಗೊತ್ತಾಗುತ್ತದೆಯೇ? ಎಂದು ಪ್ರಶ್ನಸಿದಾಗ
ಭಗವಾನರು ಈ ಗಾಥೆಯನ್ನು ನುಡಿದರು.
No comments:
Post a Comment