ತನ್ನ ಮೂರ್ಖತ್ವ ತಿಳಿದವ ಮಾತ್ರ ಜ್ಞಾನಿ
ಯಾವ ಮೂರ್ಖನು ತನ್ನ
ಮೂರ್ಖತ್ವವನ್ನು ಸ್ವೀಕರಿಸುವನೋ (ತಿಳಿದಿರುವನೋ) ಅಷ್ಟರಮಟ್ಟಿಗೆ ಆತ ಪಂಡಿತನೇ (ಜ್ಞಾನಿ) ಸರಿ.
ಮೂರ್ಖನು ಒಂದುವೇಳೆ ತನ್ನನ್ನು ಜ್ಞಾನಿಯೇ ಎಂದು ಭಾವಿಸಿದರೆ ಆತನು ಖಂಡಿತವಾಗಿ ಮೂರ್ಖನೇ
ಆಗಿರುತ್ತಾನೆ. (63)
ಗಾಥ ಪ್ರಸಂಗ 5:4
ಇಬ್ಬರು ಕಿಸೆಚೋರರ ಕತೆ
ಈ ಗಾಥೆಯನ್ನು ಭಗವಾನರು ಜೇತವನದಲ್ಲಿ ತಂಗಿದ್ದಾಗ, ಇಬ್ಬರು ಕಿಸೆಗಳ್ಳರಿಗೆ ಸಂಬಂಧದ ವಿಷಯದಲ್ಲಿ ಹೇಳಿದರು. ಕಿಸೆಗಳ್ಳರು ಅದೃಷ್ಟವಶಾತ್ ಬುದ್ಧ ಭಗವಾನರ ಬೋಧನೆ ಕೇಳಲು ಹೋದರೂ ಅವರಲ್ಲಿ ಒಬ್ಬ ಬುದ್ಧರಿಂದ ಧಮ್ಮದ ಸಾರವನ್ನು ಗ್ರಹಿಸುತ್ತಿದ್ದರೆ ಮತ್ತೊಬ್ಬ ಕಳ್ಳತನದ ಅವಕಾಶವನ್ನು ಹುಡುಕುತ್ತಿದ್ದನು. ಧಮ್ಮವನ್ನು ಆಸಕ್ತಿಯಿಂದ ಆಲಿಸುತ್ತಿದ್ದವ ಸೋತಪನ್ನ (ಸಂತತ್ವದ ಪ್ರಥಮ ಹಂತ) ಪಡೆದನು. ಆದರೆ ಮತ್ತೊಬ್ಬ ಕಳ್ಳ ಬೋಧನೆ ಆಲಿಸುತ್ತಿದ್ದ ವ್ಯಕ್ತಿಯೋರ್ವನ 5 ನಾಣ್ಯಗಳನ್ನು ಅಪಹರಿಸಿದನು. ಕಳ್ಳನ ಮನೆಯಲ್ಲಿ ಎಂದಿನಂತೆ ಅಡುಗೆ ಸಿದ್ಧವಾಗುತ್ತಿತ್ತು. ಆದರೆ ಧಮರ್ಾಸಕ್ತ ಕಳ್ಳನ ಮನೆಯಲ್ಲಿ ಅಡುಗೆ ಇರಲಿಲ್ಲ. ಇದನ್ನು ಕಂಡ ಕಳ್ಳ ಹಾಗು ಅವನ ಪತ್ನಿಯ ಒಳ್ಳೆಯ ಕಳ್ಳನಿಗೆ ಈ ರೀತಿ ವ್ಯಂಗ್ಯವಾಗಿ ನುಡಿದರು. ನೀನು ಅಪ್ರತಿಮ ಬುದ್ಧಿವಂತ. ಆದ್ದರಿಂದಲೇ ನಿನಗೆ ಬೇಯಿಸಲು ಆಹಾರ ಸಿಗಲಿಲ್ಲ ಆಗ ಆ ಸೋತಪನ್ನನು ಈ ರೀತಿ ಚಿಂತಿಸುತ್ತಾನೆ. ಈ ಮನುಷ್ಯ ಮುರ್ಖನಾಗಿದ್ದ ಕಾರಣದಿಂದಲೇ ತನ್ನನ್ನು ಮೂರ್ಖ ಎಂದು ಅರಿತಿಲ್ಲ ಮತ್ತು ಅಲ್ಲಿಂದ ಜೇತವನಕ್ಕೆ ತನ್ನ ಬಾಂಧವರ ಸಹಿತ ಹೋಗಿ ಬುದ್ಧರಲ್ಲಿ ಈ ಘಟನೆ ನಿವೇದಿಸಿದಾಗ ಭಗವಾನರು ಮೇಲಿನ ಗಾಥೆ ಹೇಳಿದರು
No comments:
Post a Comment