ಮೂರ್ಖರೊಂದಿಗೆ ಒಡನಾಡಿತನ ತಡೆಗಟ್ಟಿರಿ
ಸಾಧನೆಯ
ಹಾದಿಯಲ್ಲಿರುವವನಿಗೆ ತನಗಿಂತ ಉತ್ತಮ ಅಥವಾ ಸಮನಾದವನು ಸಿಗದಿದ್ದರೆ ಒಂಟಿಯಾಗಿಯೇ ದೃಢತೆಯಿಂದ
ಜೀವಿಸಲಿ, ಆದರೆ ಮೂರ್ಖರ
ಒಡನಾಟವಂತು ಕೂಡದು. (61)
ಗಾಥ ಪ್ರಸಂಗ 5:2
ಮೂರ್ಖರ ಸಹವಾಸದಿಂದಾಗುವ ಪರಿಣಾಮ
ಪೂಜ್ಯ ಮಹಾಕಸ್ಸಪರವರು ರಾಜಗೃಹದಲ್ಲಿ ಪಿಪ್ಪಲಿ
ಗುಹೆಯಲ್ಲಿ ವಾಸವಾಗಿದ್ದರು. ಅವರ ಜೊತೆಗೆ ಇಬ್ಬರು ಯುವ ಶಿಷ್ಯರಿದ್ದರು. ಅವರಲ್ಲಿ ಒಬ್ಬ ವಿಧೇಯ,
ನಿಷ್ಠಾವಂತ ಮತ್ತು ಕರ್ತವ್ಯ ಪ್ರಜ್ಞನಾಗಿದ್ದನು ಮತ್ತು
ಮತ್ತೊಬ್ಬನಲ್ಲಿ ಇದ್ಯಾವ ಗುಣಗಳು ಇರಲಿಲ್ಲ. ಆತನು ಒಳ್ಳೆಯ ಶಿಷ್ಯನ ಸೇವೆಗಳೆಲ್ಲ ತನ್ನವೇ ಎಂದು
ಘೋಷಿಸಿಕೊಳ್ಳುತ್ತಿದ್ದನು. ಒಂದುದಿನ ಆತನು ಸಾತ್ವಿಕನಲ್ಲ ಎಂದು ಕಸ್ಸಪರವರಿಗೆ ಗೊತ್ತಾಯಿತು.
ಪೂಜ್ಯ ಕಸ್ಸಪರವರು ಆತನಿಗೆ ಕರ್ತವ್ಯಭ್ರಷ್ಟನಾಗದಿರು ಎಂದು ಬುದ್ಧಿವಾದ ನೀಡಿದರು. ಒಂದುದಿನ
ಕಸ್ಸಪರವರು ಉತ್ತಮ ಶಿಷ್ಯನೊಂದಿಗೆ ಒಂದು ಪ್ರದೇಶಕ್ಕೆ ಹೋಗಿದ್ದಾಗ ಕಪಟಿ ಶಿಷ್ಯನು ಉಪಾಸಕರ
ಬಳಿಗೆ ಬಂದು ಕಸ್ಸಪರವರಿಗೆ ಕಾಯಿಲೆ ಎಂದು ಹೇಳಿ ಅವರಿಗಿಡುವ ಆಹಾರವನ್ನೆಲ್ಲಾ ತಾನೇ
ಭಕ್ಷಿಸಿದನು. ಇದು ಕಸ್ಸಪರವರಿಗೆ ಗೊತ್ತಾಗಿ ಆತನಿಗೆ ಖಂಡಿಸಿದರು. ಆಗ ಕಪಟಿ ಶಿಷ್ಯನಿಗೆ
ಅವರಲ್ಲಿ ಕೋಪ ಉಂಟಾಯಿತು. ಮತ್ತೊಂದು ದಿನ ಆತನು ಇದೇರೀತಿ ಬಟ್ಟೆಯನ್ನು ತನ್ನದಾಗಿಸಿದನು. ಆಗಲು
ಕಸ್ಸಪರವರು ಖಂಡಿಸಿದಾಗ ಮಾರನೆಯದಿನ ಕಸ್ಸಪರವರು ಆಹಾರಕ್ಕೆ ಹೊರಟಿರುವಾಗ, ಕಪಟಿ ಶಿಷ್ಯ ಅಲ್ಲೇ ಇದ್ದು ಪಾತ್ರೆ, ಮಡಿಕೆಗಳನ್ನೆಲ್ಲಾ ಒಡೆದು ಹಾಕಿದನು ಮತ್ತು ಅವರ ಕುಟೀರಕ್ಕೆ
ಬೆಂಕಿ ಇಟ್ಟನು ಮತ್ತು ಓಡಿಹೋದನು. ಆತನು ಸತ್ತಾಗ ಅವೀಚಿ ನರಕದಲ್ಲಿ ಹುಟ್ಟಿದನು.
ಈ ವಿಷಯ ಭಗವಾನರಿಗೆ ತಿಳಿದಾಗ ಭಗವಾನರು ಈ ಮೇಲಿನ ಗಾಥೆ
ನುಡಿದರು
No comments:
Post a Comment