Thursday, 19 February 2015

dhammapada/balavagga/5.9/sumana

ಸುಖವು ಸುಕರ್ಮಗಳಿಂದಲೇ ಬರುತ್ತದೆ
ಅಂತಹ ಕಮ್ಮವನ್ನು ಮಾಡುವುದು ಸಾಧುಕರ, ಯಾವುದೆಂದರೆ ಪಶ್ಚಾತ್ತಾಪ ತರದಂತಹುದು. ಅಂತಹ ಕರ್ಮದಿಂದ ಪ್ರಪುಲ್ಲತೆ ಹಾಗೂ ಸುಮನದಂತಹ ಫಲ (ವಿಪಾಕ) ಅನುಭವಿಸುತ್ತಾರೆ.        (68)
ಗಾಥ ಪ್ರಸಂಗ 5:9
ಸುಮನ ಹೂಗಾರನ ಸುಶ್ರದ್ಧೆ

                ಸುಮನನೆಂಬ ಹೂಗಾರನು ರಾಜಗೃಹದ ರಾಜ ಬಿಂಬಸಾರನಿಗೆ ಪ್ರತಿ ಮುಂಜಾನೆ ಮಲ್ಲಿಗೆಯ ಹೂಗಳನ್ನು ತಲುಪಿಸುತ್ತಿದ್ದನು. ಒಮ್ಮೆ ಆತನು ರಾಜನ ಅರಮನೆಯ ಬಳಿ ಹೋಗುತ್ತಿದ್ದಾಗ ಆತನು ಬುದ್ಧಭಗವಾನರನ್ನು ಕಂಡನು. ಬುದ್ಧರಂತು ದಿವ್ಯಪ್ರಭೆಯಿಂದ ಕಿರಣಗಳನ್ನು ಹೊರಸೂಸುತ್ತಾ ಭಿಕ್ಷುಗಳೊಡನೆ ಆಹಾರಕ್ಕಾಗಿ ಹೋಗುತ್ತಿದ್ದರು. ಬುದ್ಧರ ವೈಭವಯುತ ಪ್ರಕಾಶವನ್ನು ಕಂಡು ಸುಮನನು ಹೂಗಳನ್ನು ಬುದ್ಧರಿಗೆ ಸಮಪರ್ಿಸುವ ಇಚ್ಛೆ ಪ್ರಬಲವಾಗಿ ಉಂಟಾಯಿತು. ಆದರೆ ರಾಜನಿಗೆ ಒಂದುದಿನ ತಪ್ಪಿಸಿದರೆ ಆಗುವ ದುಷ್ಪರಿಣಾಮಗಳು ಮನಕ್ಕೆ ಗೋಚರವಾದರೂ ಆತನು ಈ ರೀತಿ ದೃಢನಿಧರ್ಾರ ಮಾಡಿದನು. ನನಗೆ ರಾಜನು ಗಡಿಪಾರು ಬೇಕಾದರೆ ಮಾಡಲಿ ಅಥವಾ ನನಗೆ ಕೊಲ್ಲಿಸಲಿ ಆದರೆ ನಾನು ಮಾತ್ರ ರಾಜನಿಗೆ ಬದಲಾಗಿ ಬುದ್ಧರಿಗೆ ಹೂಗಳನ್ನು ಸಮಪರ್ಿಸುವೆನು ಎಂದು ನಿರ್ಧರಿಸಿ ಆತನು ಬುದ್ಧರ ಮೇಲೆ, ಹಿಂದೆ, ಹೂಗಳನ್ನು ಹಾರಿಸಿದನು. ಅದ್ಭುತ! ಆ ಹೂಗಳು ನೆಲದ ಮೇಲೆ ಬೀಳಲಿಲ್ಲ, ಗಾಳಿಯಲ್ಲೇ ಇದ್ದವು. ತಲೆಯ ಮೇಲಿನ ಹೂಗಳು ಛತ್ರಿಯಂತೆ ಆಕಾಶದಲ್ಲೇ ನಿಂತಿತು ಮತ್ತು ಪಕ್ಕದಲ್ಲಿ ಹಾಗು ಹಿಂದೆ ಬಿದ್ದ ಹೂಗಳು ಹೂಗೋಡೆಯಮತೆ ಮಾಪರ್ಾಟಾಯಿತು. ಈ ಹೂಗಳ ರಚನೆಯು ಬುದ್ಧರು ನಡೆದರೆ ಅವು ಜೊತೆಯಲ್ಲಿ ಸಾಗುತ್ತಿತ್ತು. ಬುದ್ಧರು ನಿಂತರೆ ಅವು ನಿಶ್ಚಲವಾಗುತ್ತಿತ್ತು. ಜೊತೆಗೆ ಬುದ್ಧರ ಭವ್ಯಪ್ರಭೆಯು ಆರು ಬಣ್ಣಗಳಿಂದ ಪ್ರಕಾಶಿಸಿ ರಾಜಗೃಹದ ವಾಸಿಗಳು ಆನಂದಿತರಾಗಿ ಸಾವಿರಾರು ಜನರು ಗೌರವ ಅಪರ್ಿಸಿದರು. ಇದನ್ನು ಕಂಡ ಸುಮನನ ಮನವು ಸುಮನವಾಗಿ ಆನಂದದಿಂದ ತುಂಬಿದವನಾಗಿ ಇಡೀ ಶರೀರ ಸುಖದಿಂದ ಆವೃತವಾಯಿತು. ಸಮಾಧಿಯ ಅನುಭೂತಿಯನ್ನು ಅನುಭವಿಸಿದನು.
                ಸುಮನನ ಪತ್ನಿಗೆ ಈ ವಿಷಯ ಅರಿವಾಗಿ ರಾಜನ ಹತ್ತಿರ ಕ್ಷಮೆ ಯಾಚಿಸಲು ಹೊರಟಳು. ರಾಜ ಬಿಂಬಸಾರನು ಸಹಾ ಸೋತಪನ್ನನಾಗಿದ್ದನು. ಆತನಿಗೆ ಹೂಗಳ ಬಗ್ಗೆ ಸಂತೋಷದಿಂದಿದ್ದ ಆತನು ಬುದ್ಧರನ್ನು ಕಾಣಲು ಹೊರಬಂದು ಗೌರವವನ್ನು ಅಪರ್ಿಸಿದನು ಹಾಗೂ ಆತನು ಬುದ್ಧರಿಗೆ ಮತ್ತು ಭಿಕ್ಷು ಸಂಘಕ್ಕೆ ಆಹಾರವನ್ನು ಏರ್ಪಡಿಸಿ ಬಡಿಸಿದನು. ನಂತರ ಬುದ್ಧರು ವಿಹಾರಕ್ಕೆ ಹಿಂತಿರುಗಿದರು. ಆಗಲು ಸಹಾ ಆ ಹೂಗಳು ಹಾಗೆಯೇ ಗಾಳಿಯಲ್ಲಿಯೇ ಇದ್ದು ಬುದ್ಧರೊಡನೆ ಚಲಿಸುತ್ತಿತ್ತು. ಜನರು ಸಂಭ್ರಮದ ಜಯಕಾರ ಹಾಕುತ್ತಿದ್ದರು.
                ರಾಜನು ಬುದ್ಧರ ಸಂಗಡ ಸ್ವಲ್ಪದೂರ ಹೊರಟು ನಂತರ ಹಿಂತಿರುಗಿದನು. ಅನಂತರ ಅತನು ಹೂಗಾರನನ್ನು ಕರೆಸಿದನು ಹಾಗೂ ಈ ರೀತಿ ಪ್ರಶ್ನಿಸಿದನು. ಬುದ್ಧರಿಗೆ ಗೌರವಿಸುವಾಗ ನೀನು ಏನೆಂದು ಹೇಳಿಕೊಂಡೆ? ಅದಕ್ಕೆ ಹೂಗಾರನು ಈ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸಿದನು. ಮಹಾಪ್ರಭು ನನ್ನ ಜೀವನವನ್ನು ಸಮಪರ್ಿಸಿ ಗೌರವಿಸಿದೆ ಹಾಗೂ ಈ ರೀತಿ ಹೇಳಿಕೊಂಡೆ ರಾಜನು ಬೇಕಾದರೆ ಗಡಿಪಾರು ಮಾಡಲಿ ಅಥವಾ ಕೊಲ್ಲಿಸಲಿ ಆಗ ರಾಜನು ಆತನಿಗೆ ಈ ರೀತಿ ಹೇಳಿದನು ನೀನು ನಿಜಕ್ಕೂ ಶ್ರೇಷ್ಠ ಮನುಷ್ಯ ಹಾಗೂ ಆತನಿಗೆ ನಾಲ್ಕು ಆನೆಗಳು, ಎಂಟು ಕುದುರೆಗಳು, ಎಂಟು ದಾಸರು, ಎಂಟು ದಾಸಿಯರು, ಅಷ್ಟ ಐಶ್ವರ್ಯಗಳನ್ನು, ಅಷ್ಟರತ್ನಗಳು, ಅಷ್ಟ ಸಹಸ್ರಧನವನ್ನು, ಅಷ್ಟ ಸ್ತ್ರೀಯರನ್ನು, ಅಷ್ಟ ಆಭರಣಗಳನ್ನು, ಅಷ್ಟ ಹಳ್ಳಿಗಳನ್ನು ದಾನವಾಗಿ ನೀಡಿದನು.
                ಪೂಜ್ಯ ಆನಂದರು ತಮ್ಮಲ್ಲಿ ಈ ರೀತಿ ಚಿಂತಿಸಿದರು ಮುಂಜಾನೆಯಿಂದ ಸಂಜೆಯವರೆಗೆ ಸಂಭ್ರಮ ಮತ್ತು ಜಯಕಾರವು ಇತ್ತು ಇದಕ್ಕೆ ಕಾರಣನಾದ ಹೂಗಾರನ ಪುಣ್ಯಫಲ ಯಾವ ರೀತಿಯದು ಆಗಬಹುದು.

                ಆನಂದನ ಮನವನ್ನು ಓದಿದ ಬುದ್ಧರು ಈ ರೀತಿಯ ಭವಿಷ್ಯವಾಣಿ ನೀಡಿದರು. ಆನಂದ, ಆತನು ನನಗೆ ಜೀವಕ್ಕೆ ಹೆದರದೆ ಪೂಜ್ಯಭಾವ ತೋರಿಸಿದ, ಏಕೆಂದರೆ ನನ್ನಲ್ಲಿ ದೃಢಗಾಢ ಭಕ್ತಿ ಇರುವುದರಿಂದಾಗಿ ಈ ಫಲದಿಂದ ಆತನು ದುರ್ಗತಿ ಪಡೆಯಲಾರ. ಹಾಗೂ ಮನುಷ್ಯರ ಮತ್ತು ದೇವತೆಗಳ ಲೋಕಗಳಲ್ಲಿ ಅವರ ಸುಫಲವನ್ನು ಪಡೆಯುತ್ತಾನೆ. ಮುಂದೆ ಭವಿಷ್ಯದಲ್ಲಿ ಆತನು ಪಚ್ಚೇಕ ಬುದ್ಧನಾಗುತ್ತಾನೆ.

No comments:

Post a Comment