ಪ್ರಜ್ಞಾವಂತನು ಧಮ್ಮವನ್ನು ಅರಿಯುತ್ತಾನೆ
ಪ್ರಜ್ಞಾವಂತರು
ಪಂಡಿತರೊಡನೆ ಕ್ಷಣ ಮುಹೂರ್ತದಷ್ಟು ಕಾಲ ಇದ್ದರೂ ಸಹ ಸೂಪರಸದ ರುಚಿಯನ್ನು ನಾಲಿಗೆಯು ಅರಿಯುವ
ಹಾಗೆ ಕ್ಷಿಪ್ರವಾಗಿ ಧಮ್ಮವನ್ನು ಅರಿಯುವರು. (65)
ಗಾಥ ಪ್ರಸಂಗ 5:6
ಜ್ಞಾನಿಗಳೊಂದಿಗೆ ಲಾಭ ಪಡೆಯುವಿಕೆ
ಒಂದುದಿನ ಪಾವೆಯ್ಯಕದ 30 ಯುವಕರು ಕಾಡಿನಲ್ಲಿ ನರ್ತಕಿಯೊಂದಿಗೆ ಆನಂದವಾಗಿದ್ದರು. ಆದರೆ ಆ
ನರ್ತಕಿಯು ಅವರ ಅಮೂಲ್ಯವಾದ ಆಭರಣಗಳನ್ನು ಅಪಹರಿಸಿ ಪರಾರಿಯಾದಳು. ಆಕೆಯನ್ನು ಹುಡುಕುತ್ತ ಅವರು
ಕಾಡಿನಲ್ಲಿದ್ದ ಬುದ್ಧರನ್ನು ಕಂಡರು. ಆಗ ಅವರು ಆಕೆಯನ್ನು ಹುಡುಕುವ ಬದಲು, ಬುದ್ಧರ ಉಪದೇಶದಲ್ಲಿ ತಲ್ಲೀನರಾದರು. ಉಪದೇಶದ ನಂತರ
ಅವರು ಸಂಘವನ್ನು ಸೇರಿದರು ಮತ್ತು ಬುದ್ಧರೊಂದಿಗೆ ಜೇತವನಕ್ಕೆ ಹೊರಟರು. ಅಲ್ಲಿದ್ದು ಅವರು
ಭಿಕ್ಷು ನಿಯಮಗಳಾದ ಧುತಂಗವನ್ನು ಪಾಲಿಸಿದರು. ನಂತರ ಒಮ್ಮೆ ಬುದ್ಧರು ನೀಡುವ ಅನಮತಗ್ಗ ಸುತ್ತ
ಆಲಿಸಿ ಅವರೆಲ್ಲರೂ ಅರಹಂತರಾದರು.
ಇದು ಭಿಕ್ಷುಗಳಲ್ಲಿ ಚಚರ್ೆಯ ವಿಷಯವಾಯಿತು. ಪಾಪಯ್ಯಕದ
ಭಿಕ್ಷುಗಳು ಎಷ್ಟು ಕ್ಷಿಪ್ರವಾಗಿ ಅರಹಂತರಾದರು? ಅಲ್ಲಿಯೇ ಇದ್ದ ಭಗವಾನರು ಆಗ ಮೇಲಿನ ಗಾಥೆ ನುಡಿದರು.
No comments:
Post a Comment