ಪಾಪವು ಬೂದಿಮುಚ್ಚಿದ ಕೆಂಡದಂತೆ ಫಲನೀಡಲು ಅವಕಾಶ
ಕಾಯುತ್ತದೆ
ಪಾಪಕರ್ಮವು ತಕ್ಷಣ
ಫಲ ನೀಡಲಾರದು, ಹಾಲು ತಕ್ಷಣ
ಹುಳಿಯಾಗದಂತೆ, ಮೂರ್ಖನಿಗೆ
ಬೂದಿಮರೆಯ ಕೆಂಡದಂತೆ, ಮೆಲ್ಲನೆ
ಉರಿಯುತ್ತಾ ಸುಡುವುದು (71)
ಗಾಥ ಪ್ರಸಂಗ 5:12
ಸಪರ್ಾಕೃತಿಯ ಪ್ರೇತದ ಘಟನೆ
ಒಮ್ಮೆ ಮಹಾಮೊಗ್ಗಲಾನ ಮತ್ತು ಪೂಜ್ಯ ಲಕ್ಕಣ್ಣನವರು
ಒಂದು ಸಾವಿರ ಜಟಾಧಾರಿ ಸನ್ಯಾಸಿಗಳ ಸಮೇತ ರಾಜಗೃಹದಲ್ಲಿ ಭಿಕ್ಷಾಟನೆಗೆ ಹೊರಟರು. ಪೂಜ್ಯ
ಮೊಗ್ಗಲಾನರವರು ಸರ್ಪಪ್ರೇತವನ್ನು ನೋಡಿ ಮುಗುಳ್ನಗೆ ಬೀರಿದರು. ಇದರ ಬಗ್ಗೆ ಲಕ್ಕಣ್ಣನವರು
ವಿಚಾರಿಸಿದಾಗ ಸಹೋದರ ಪ್ರಶ್ನೆ ಕೇಳಲು ಇದು ಸಕಾಲವಲ್ಲ. ಬುದ್ಧರ ಬಳಿ ಹೋಗುವವರೆಗೂ ಸುಮ್ಮನಿದ್ದು
ನಂತರ ಕೇಳು ಎಂದರು ಮೊಗ್ಗಲಾನರವರು. ಹಾಗೆಯೇ ಬುದ್ಧರ ಬಳಿಗೆ ಬಂದು ನಮಸ್ಕರಿಸಿ ಕುಳಿತರು. ಆಗ
ಲಕ್ಕಣ್ಣನವರು ಮುಗುಳ್ನಗೆಗೆ ಕಾರಣವನ್ನು ಕೇಳಿದಾಗ ಅದಕ್ಕೆ ಮೊಗ್ಗಲಾನರವರು ಈ ರೀತಿ
ಉತ್ತರಿಸಿದರು: ಸೋದರ ನನ್ನ ನಗೆಯ ಕಾರಣವೇನೆಂದರೆ ನಾನು ಒಂದು ಸರ್ಪಪ್ರೇತವನ್ನು ಕಂಡೆನು. ಅದರ
ತಲೆಯು ಮಾನವನಂತೆ ಇತ್ತು. ಆದರೆ ಮುಂಡವು ಸರ್ಪದಂತೆ ಇತ್ತು. ಅದು 25 ಯೋಜನ ಉದ್ದವಿತ್ತು. ಅದರ ತಲೆಯಿಂದ ಹೊರಟ ಜ್ವಾಲೆಗಳು ಅದರ ಬಾಲವನ್ನು
ಮುಟ್ಟುತ್ತಿತ್ತು. ಅದರ ಬಾಲದಿಂದ ಹೊರಟ ಜ್ವಾಲೆಗಳು ಅದರ ತಲೆಯನ್ನು ಮುಟ್ಟುತ್ತಿತ್ತು. ಈ ರೀತಿ
ಅದು ಜ್ವಾಲೆಯಿಂದ ಆವೃತವಾಗಿತ್ತು. ಅಲ್ಲಿಯೇ ಇನ್ನೊಂದು ಕಾಗೆಯ ಪ್ರೇತವಿತ್ತು. ಅದೂ ಸಹಾ ಅಷ್ಟೇ
ಉದ್ದವಿತ್ತು.
ಕಾಗೆಯ ಆಕೃತಿಯ ಪ್ರೇತವನ್ನು ಮೊಗ್ಗಲಾನರವರು
ಮಾತನಾಡಿಸಿ ಅದರ ಸ್ಥಿತಿ ಕಾರಣ ಕೇಳಿದಾಗ ಆ ಪ್ರೇತವು ಈ ರೀತಿ ಉತ್ತರಿಸಿತ್ತು:
ನಾನು ಹಿಂದಿನ ಜನ್ಮದಲ್ಲಿ ಪೂಜ್ಯರ ಆಹಾರವನ್ನು
ಕದ್ದುತಿಂದು ಅವರಿಗೆ ಉಪಾವಾಸ ನೀಡಿದ ಫಲದಿಂದಾಗಿ ಸತ್ತು ಅವೀಚಿ ನರಕದಲ್ಲಿ ಹುಟ್ಟಿ ನಂತರ ಹೀಗೆ
ಫಲವನ್ನು ಈಗ ಈ ರೀತಿ ಅನುಭವಿಸುತ್ತಿರುವೆ ಎಂದಿತು.
ಪ್ರೇತಸರ್ಪದ ಕತೆಯೂ ಹಾಗೆಯೇ ಇತ್ತು. ಅದು ಹಿಂದಿನ
ಜನ್ಮದಲ್ಲಿ ಬನಾರಸ್ನ ವಾಸಿಯಾಗಿದ್ದನು. ಆತನು ವಾಸವಾಗಿರುವ ಕಡೆಯಲ್ಲೇ ಪಚ್ಚೇಕ ಬುದ್ಧರು
ವಾಸವಾಗಿದ್ದರು. ಅವರನ್ನು ಕಾಣಲು ಜನರು ಈತನ ಹೊಲವನ್ನು ತುಳಿದು ಹಾದು ಹೋಗುತ್ತಿದ್ದರು. ಈ
ರೈತನು ಇದನ್ನು ತಡೆಯಲು ಪ್ರಯತ್ನಿಸಿ ವಿಫಲನಾದನು. ಕೊನೆಗೆ ಆಕ್ರೋಶಗೊಂಡು ಅವರು ಆಹಾರವನ್ನು
ಹುಡುಕುತ್ತಾ ನಗರಕ್ಕೆ ಹೋಗಿರುವಾಗ ಪಾತ್ರೆಗಳನ್ನು ಒಡೆದು ವಾಸಸ್ಥಳಕ್ಕೆ ಅಗ್ನಿಯಿಟ್ಟನು. ಆಗ
ಜನಗಳಿಗೆ ಅತಿ ಕ್ರೋಧವುಂಟಾಗಿ ಆತನನ್ನು ಕೊಂದರು. ಮರಣದ ನಂತರ ಅವೀಚಿ ನರಕದಲ್ಲಿ ಹುಟ್ಟಿ ನಂತರ
ಗೃದಕೂಟ ಪ್ರರ್ವತದಲ್ಲಿ ಪ್ರೇತಸರ್ಪವಾದನು. ಇದಕ್ಕಾಗಿಯೇ ನಾನು ನಗೆ ಬೀರಿದೆ ಎಂದು ಹೇಳಿದರು.
ಆಗ ಭಗವಾನರು ಈ ರೀತಿ ಹೇಳಿದರು : ಭಿಕ್ಷುಗಳೇ,
ಮೊಗ್ಗಲಾನರವರು ಹೇಳಿದ್ದು ನಿಜವಾಗಿದೆ. ನಾನು ಸಹಾ
ಅದನ್ನು ಸಂಬೋಧಿಪ್ರಾಪ್ತಿಯ ನಂತರ ನೋಡಿರುವೆ, ಆದರೆ ಬಹುಜನ ಹಿತಕ್ಕಾಗಿ ನಾನು ಹೇಳಿಲ್ಲ. ಏಕೆಂದರೆ ನನ್ನ ಮಾತನ್ನು ನಂಬದವರಿಗೆ ಅದು
ಲಾಭಕಾರಿಯಾಗಿಲ್ಲ.
ಬುದ್ಧ ಭಗವಾನರು ಜೇತವನದಲ್ಲಿ ತಂಗಿದ್ದಾಗ ಈ ಗಾಥೆಯನ್ನು
ನುಡಿದರು.
No comments:
Post a Comment