Monday 18 May 2015

dhammapada/attavagga/12.4/kumarakassapamother

ತನಗೆ ತಾನೇ ನಾಥ
ತನಗೆ ತಾನೇ ರಕ್ಷಕ, ಬೇರೆಯವರು ಹೇಗೆತಾನೇ ರಕ್ಷಿಸಬಲ್ಲರು? ತನ್ನನ್ನು ಪೂರ್ಣವಾಗಿ ಪಳಗಿಸಿಕೊಂಡಾಗ ದುರ್ಲಭವಾದ ರಕ್ಷಣೆ (ಒಡೆತನ) ದೊರೆಯುವುದು.    (160)
ಗಾಥ ಪ್ರಸಂಗ 12:4
ಕುಮಾರ ಕಸ್ಸಪನ ತಾಯಿಯ ವಾತ್ಸಲ್ಯದ ಅಂತ್ಯ

                ಶ್ರಾವಸ್ತಿಯಲ್ಲಿ ನವವಿವಾಹಿತಳೊಬ್ಬಳು ಕೆಲವಾರಗಳ ನಂತರ ಗಂಡನಲ್ಲಿ ತಾನು ಭಿಕ್ಷುಣಿಯಾಗ ಬಯಸುವುದಾಗಿ ಹೇಳಿದಳು. ಆಕೆಯ ಧಾಮರ್ಿಕ ಮನೋಭಾವ ತಿಳಿದಿದ್ದ ಪತಿಯು ಆಕೆಯು ಭಿಕ್ಷುಣಿಯಾಗುವುದೇ ಸೂಕ್ತ ಎಂದು ಭಾವಿಸಿ, ಹೀಗಾಗಲು ತನ್ನ ಅಪ್ಪಣೆ ನೀಡಿದನು. ಆದರೆ ತಿಳಿಯದೆ ದೇವದತ್ತನ ಶಿಷ್ಯೆಯರಾದ ಭಿಕ್ಷುಣಿಯರಲ್ಲಿ ಆಕೆ ತಿಸರಣದೀಕ್ಷೆ ಪಡೆದಳು. ಆದರೆ ಆಕೆಗೆ ತಾನು ಈ ಹಿಂದೆಯೇ ಗೃಹಸ್ಥೆಯಾಗಿರುವಾಗಲೇ ಗಭರ್ಿಣಿಯಾಗಿರುವುದು ತಿಳಿದಿರಲಿಲ್ಲ. ಕಾಲಕ್ರಮೇಣ ಆಕೆಯು ಗಭರ್ಿಣಿಯಾಗಿರುವುದು ಗೋಚರಕ್ಕೆ ಬಂದಿತು. ಈ ವಿಷಯವನ್ನು ಭಿಕ್ಷುಣಿಯರು ದೇವದತ್ತನಿಗೆ ತಿಳಿಸಿದರು. ದೇವದತ್ತನು ಕೂಡಲೇ ಆಕೆಗೆ ಗೃಹಸ್ಥಳಾಗಲು ಆಜ್ಞಾಪಿಸಿದನು. ಆದರೆ ಆಕೆಗೆ ಗೃಹಸ್ಥಳಾಗಲು ಇಷ್ಟವಿರಲಿಲ್ಲ. ಹೀಗಾಗಿ ಆಕೆಯು ಇತರ ಭಿಕ್ಷುಣಿಯರೊಂದಿಗೆ ಹೀಗೆ ಹೇಳಿದಳು: ನಾನು ದೇವದತ್ತರ ಅಡಿಯಲ್ಲಿ ಭಿಕ್ಷುಣಿಯಾಗುವ ಉದ್ದೇಶವಿರಲಿಲ್ಲ. ನಾನಿಲ್ಲಿ ತಪ್ಪಾಗಿ ಬಂದಿರುವೆ, ದಯವಿಟ್ಟು ನನಗೆ ಬುದ್ಧ ಭಗವಾನರಲ್ಲಿಗೆ ಕರೆದೊಯ್ಯುವಿರಾ? ಹೀಗಾಗಿ ಆಕೆಯು ಬುದ್ಧರ ಬಳಿಗೆ ಬಂದಳು. ಭಗವಾನರಿಗೆ ಆಕೆಯು ಗೃಹಸ್ಥಳಾಗಿರುವಾಗಲೇ ಗಭರ್ಿಣಿಯಾಗಿದ್ದಾಳೆ ಎಂದು ಗೊತ್ತಿತ್ತು. ಆದರೂ ಲೋಕಕ್ಕೆ ಆಕೆಯ ಪರಿಶುದ್ಧತೆ ತಿಳಿಯುವದಕ್ಕೋಸ್ಕರ ರಾಜ ಪಸೇನದಿ, ಅನಾಥಪಿಂಡಿಕ ಮತ್ತು ವಿಶಾಖೆಗೆ ಕರೆಯಿಸಿದರು. ನಂತರ ವಿಶಾಖೆಯು ಆಕೆಯನ್ನು ಏಕಾಂತದಲ್ಲಿ ಪರಿವೀಕ್ಷಿಸಿ, ಆಕೆಯು ಭಿಕ್ಷುಣಿಯಾಗುವ ಮುನ್ನವೇ ಗಭರ್ಿಣಿಯಾಗಿದ್ದಾಳೆ ಎಂದು ನಿಖರವಾಗಿ ಹೇಳಿದಳು. ನಂತರ ಉಪಾಲಿಯು ಜನರಲ್ಲಿ ಆ ಭಿಕ್ಷುಣಿಯು ಪರಿಶುದ್ಧಳೆಂದು, ಮುಗ್ಧೆಯೆಂದು, ಶುದ್ಧಶೀಲವಂತೆಯೆಂದು ಪ್ರಕಟಪಡಿಸಿದರು. ನಂತರ ಕಾಲ ಕೂಡಿದಾಗ ಆಕೆ ಪುತ್ರನಿಗೆ ಜನ್ಮವಿತ್ತಳು ಹಾಗು ಆ ಮಗುವನ್ನು ರಾಜ ಪಸೇನದಿಯೇ ದತ್ತುಸ್ವೀಕಾರ ಮಾಡಿದನು. ಹಾಗು ಆತನಿಗೆ ಕುಮಾರಕಸ್ಸಪನೆಂದು ನಾಮಕರಣ ಮಾಡಿದನು.
                ಆ ಬಾಲಕನಿಗೆ ಏಳನೆಯ ವರ್ಷವಾದಾಗ ತನ್ನ ತಾಯಿಯು ಭಿಕ್ಷುಣಿಯೆಂದು ತಿಳಿಯಿತು. ತಾನು ಸಾಮಣೇರನಾಗಲು ಇಚ್ಛಿಸಿ ಬುದ್ಧರಿಂದಲೇ ಸಂಘಕ್ಕೆ ಸೇರ್ಪಡೆ ಯಾದನು. ನಂತರ ಕಾಲಸಂದಾಗ ಭಿಕ್ಷುವು ಆದನು. ಆತನು ಬುದ್ಧ ಭಗವಾನರಿಂದ ಧ್ಯಾನ ವಿಷಯವನ್ನು ಸ್ವೀಕರಿಸಿ ಕಾಡಿಗೆ ಧ್ಯಾನಿಸಲು ಹೊರಟನು. ಅಲ್ಲಿ ಆತನು ಸ್ಮೃತಿವಂತನಾಗಿ, ದೃಢ ಪರಿಶ್ರಮದಿಂದಾಗಿ, ಧ್ಯಾನಿಸಿ ಅತ್ಯಲ್ಪ ಕಾಲದಲ್ಲೇ ಅರಹಂತನಾದನು. ಆದರೂ ಆತನು ಮತ್ತೆ 12 ವರ್ಷಗಳ ಕಾಲ ಧ್ಯಾನಿಸುತ್ತ ಅಡವಿಯಲ್ಲೇ ಇದ್ದನು.
                ಇತ್ತ ಆತನ ತಾಯಿಯು ಭಿಕ್ಷುಣಿಯಾಗಿದ್ದರೂ ಆಕೆಯಲ್ಲಿ ಬೇರ್ಯಾವ ಬಂಧನವೂ ಇಲ್ಲದಿದ್ದರೂ ಪುತ್ರವಾತ್ಸಲ್ಯವು ಹೇರಳವಾಗಿತ್ತು. ಆಕೆಗಿದ್ದ ಬಂಧನವು ಅದೊಂದೇ ಆಗಿತ್ತು. ಆಕೆ ಮಗನನ್ನು ಕಾಣದೆ ವಿಚಲಿತಳಾಗಿದ್ದಳು. ಪುತ್ರನನ್ನು ಕಾಣಲು ಹಾತೊರೆದಳು. ಆತನಿಗಾಗಿ ಹುಡುಕುತ್ತಾ ಕಾಡಿಗೂ ಬಂದಳು. ಆತನ ಹೆಸರನ್ನು ಕೂಗುತ್ತಾ ಕಾಡಿನಲ್ಲಿ ಹುಡುಕುತ್ತಿರುವಾಗ ಆಕೆಗೆ ಕೊನೆಗೂ ಕುಮಾರಕಸ್ಸಪ ಕಂಡನು. ಆತನು ತಾಯಿಯ ಭಾವಾವೇಶ ಕಂಡನು. ಆತನು ಬಂಧನಾತೀತ ಅರಹಂತನಾದ್ದರಿಂದ ಆತನಲ್ಲಿ ಭಾವಾವೇಷಗಳು ಉಂಟಾಗಲಾರವು. ಆದರೆ ಕರುಣೆ ಉಂಟಾದರೂ ಅದಕ್ಕೆ ಆಧಾರ ಪ್ರಜ್ಞಾಯಿರುತ್ತದೆ. ಆತನು ತಾಯಿಯಲ್ಲಿ ಜ್ಞಾನೋದಯ ಉಂಟುಮಾಡಲು ಬೇಕೆಂದೇ ತಟಸ್ಥ ಶಾಂತಭಾವದಿಂದ ವತರ್ಿಸಿದನು. ಪ್ರಿಯವಾಗಿ ಮಾತನಾಡಿಸಿದರೆ ತಾಯಿಯ ಈ ಜನ್ಮವೂ ಸಹಾ ಬಂಧನದಲ್ಲೇ ಮುಗಿಯುತ್ತದೆ ಎಂದು ಅತನು ತನ್ನ ತಾಯಿಯನ್ನು ಬೇಕೆಂದೇ ತಟಸ್ಥತೆಯ ಜೊತೆಗೆ ಒರಟಾಗಿ ಮಾತನಾಡಿಸಿದನು: ಅಮ್ಮಾ, ನೀವು ಸಂಘದಲ್ಲಿ ಭಿಕ್ಷುಣಿಯಾಗಿಯೂ ಇಲ್ಲಿಯವರೆಗೂ ವಾತ್ಸಲ್ಯದ ಬಾಂಧವ್ಯವನ್ನು ಕಿತ್ತುಹಾಕಿಲ್ಲವೇ? ಕತ್ತರಿಸಿಹಾಕಿಲ್ಲವೇ? ಅಳಿಸಿಹಾಕಿಲ್ಲವೇ? ಎಂದನು.

                ಆಗ ತಾಯಿಗೆ ತನ್ನ ಮಗನು ಕ್ರೂರವಾಗಿ ವತರ್ಿಸುತ್ತಿದ್ದಾನೆಯೇ ಎಂದೆನಿಸಿತು. ಆಗ ಆಕೆಯು ಆತನ ವರ್ತನೆ ಮತ್ತು ಮಾತಿನ ಅರ್ಥವೇನೆಂದು ಕೇಳಿದಳು. ಆದರೆ ಕುಮಾರನು ಈ ಹಿಂದೆ ನುಡಿದುದನ್ನೇ ಪುನರುಚ್ಚರಿಸಿದನು. ಆಗ ಆ ತಾಯಿಯು ಹೀಗೆ ಚಿಂತನೆ ಮಾಡಿದಳು. ಓಹ್, ನನ್ನ ಮಗುವಿಗಾಗಿ ನಾನು 12 ವರ್ಷಗಳವರೆಗೆ ಕಣ್ಣೀರನ್ನು ಹಾಕಿದ್ದೇನೆ. ಆದರೂ ಆತನು ನನ್ನೊಂದಿಗೆ ಕಟುವಾಗಿ ಮಾತನಾಡಿಸಿದ್ದಾನೆ, ಈತನೊಂದಿಗೆ ವಾತ್ಸಲ್ಯವೇಕೆ ಇಡಲಿ. ಭಗವಾನರು ಸರಿಯಾಗಿಯೇ ನುಡಿದಿದ್ದಾರೆ; ಪ್ರಿಯರ ಅಗಲಿಕೆ ದುಃಖಕರವೆಂದು. ಅಪ್ರಿಯ ಸನ್ನಿವೇಶಗಳು ದುಃಖಕರವೆಂದು. ನಾನು ಈತನನ್ನು ನನ್ನ ಮಗ, ನನ್ನ ಭಾಗ, ನನ್ನ ಪ್ರಾಣ ಎಂದು ಭಾವಿಸುವುದಾದರೆ ಈ ದುಃಖ ತಪ್ಪಿದ್ದಲ್ಲ. ಆದ್ದರಿಂದ ಈ ಬಾಂಧವ್ಯವನ್ನು ಪೂರ್ಣವಾಗಿ ಕಿತ್ತುಹಾಕುವೆ, ಆಳಿಸಿಹಾಕುವೆ, ಎಂದೆಂದಿಗೂ ಉದಯಿಸದಂತೆ ಮಾಡುವೆ ಎಂದು ಚಿಂತಿಸುತ್ತಾ ಆಕೆಯು ತೀವ್ರ ಬಯಕೆ, ಅಂಟುವಿಕೆಯಿಂದ ಪೂರ್ಣವಾಗಿ ಆಚೆಗೆ ಸರಿಯುತ್ತ ಯೋಗ್ಯ ಚಿಂತನ, ಯೋಗ್ಯ ವ್ಯಾಯಾಮ, ಯೋಗ್ಯ ಸ್ಮೃತಿ ಮತ್ತು ವಿಪಶ್ಶನ ಧ್ಯಾನದಲ್ಲಿ ತೊಡಗಿ ಅದೇದಿನ ಅರಹಂತೆಯಾದಳು. ಆಕೆಯ ಬಗ್ಗೆ ಭಿಕ್ಷುಗಳು ಭಗವಾನರೊಂದಿಗೆ ಹೀಗೆ ಕೇಳಿದರು: ಭಗವಾನ್ ತಮ್ಮ ಶರಣಿಗೆ ಬಂದಿದ್ದರಿಂದಾಗಿ ಅವರಿಬ್ಬರೂ ಅರಹಂತರಾದರು. ಅವರು ದೇವದತ್ತನ ಸಲಹೆ ಪಾಲಿಸಿದ್ದರೆ ಹೀಗಾಗುತ್ತಿದ್ದರೇ? ಎಂದಾಗ, ಆಕೆಯ ಸಾಧನೆ ಕಂಡು ಭಗವಾನರು ಹೀಗೆ ಹೇಳಿದರು: ಭಿಕ್ಷುಗಳೇ, ದೇವತ್ವ ಪ್ರಾಪ್ತಿಗಾಗಲಿ ಅಥವಾ ಅರಹತ್ವ ಪ್ರಾಪ್ತಿಗಾಗಲಿ, ನೀವು ಪರರನ್ನು ಅವಲಂಬನೆ ಮಾಡಲಾಗುವುದಿಲ್ಲ, ಸ್ವತಃ ನೀವೇ ಪರಿಶ್ರಮಪಡಬೇಕಾಗಿದೆ ಎಂದು ನುಡಿದು ಈ ಗಾಥೆ ನುಡಿದರು.

No comments:

Post a Comment