Friday 8 May 2015

dhammapada/jaravagga/11.8/enlightenment

ಗೃಹನಿಮರ್ಾತನನ್ನು ಗಮನಿಸಿದ್ದೇನೆ
ಅನೇಕ ಜನ್ಮಗಳನ್ನು ಈ ಸಂಸಾರದಲ್ಲಿ ಪಡೆದಿದ್ದೇನೆ. ಅನ್ವೇಷಿಸಿದೆ ಆಪಾರ, ಆದರೆ ಪಡೆಯಲಿಲ್ಲ ಗೃಹ ನಿಮರ್ಾತನನು; ಪುನಃ ಪುನಃ ಜನ್ಮವೆತ್ತುವುದು ನಿಜಕ್ಕೂ ದುಃಖಕರ.’’   (153)
‘’ಓ ಗೃಹ ನಿಮರ್ಾತನೇ ! ನಿನ್ನನ್ನು ನೋಡಿಯಾಯಿತು, ಹೀಗಾಗಿಯೇ ಮತ್ತೆ ನೀನು ಮನೆ ಕಟ್ಟಲಾರೆ, ನಿನ್ನೆಲ್ಲಾ ತೋಲೆ ನಿಲುವುಗಳೆಲ್ಲಾ ಚೂರಾಗಿದೆ. ಗೃಹದ ಆಧಾರ ಕಂಬವು ಮುರಿದಿದೆ, ಸ್ಥಿತಿಗೆ ಅತೀತವಾಗಿದೆ (ಸಂಖಾರತೀತವಾಗಿದೆ) ಚಿತ್ತವು, ತನ್ಹಾ ಕ್ಷಯವನ್ನು ಸಾಧಿಸಿದ್ದಾಗಿದೆ’’.            (154)



ಗಾಥ ಪ್ರಸಂಗ 11:8
ಅನಾತ್ಮಜ್ಞಾನ ಅರಿತ ಬುದ್ಧರಿಂದ ಆನಂದೋದ್ಗಾರ
                ಬೋಧಿಸತ್ವ ಸಿದ್ದಾರ್ಥ ಗೋತಮರು ತಮ್ಮ 29ನೆಯ ವಯಸ್ಸಿನಲ್ಲಿಯೇ ಮಹಾಭಿನಿಷ್ಕ್ರಮಣ ಗೃಹತ್ಯಾಗ ಮಾಡಿ ಸತ್ಯ ಅನ್ವೇಷಣೆ ಆರಂಭಿಸಿದರು. ಸಮಯ ಉಳಿಸಲು ಮೊದಲು ಬಾಹ್ಯ ಗುರುಗಳನ್ನು ಸಂದಶರ್ಿಸಿದರು, ಅಭ್ಯಸಿಸಿದರು, ಚಚರ್ಿಸಿದರು ಮತ್ತು ಕುಶಲವನ್ನು ಸಾಧನೆಯನ್ನು ಮಾಡಿದರು. ಆದರೂ ಆಗ ಅಲ್ಲಿಯವರೆಗೂ ಪ್ರಚಲಿತವಾಗಿದ್ದ ಯಾವೊಂದು ಸಿದ್ಧಾಂತದಲ್ಲೂ ಅವರಿಗೆ ಸಂಬೋಧಿ, ನಿಬ್ಬಾಣ ದೊರೆಯಲಿಲ್ಲ. ನಂತರ ಅವರು ದೇಹದಂಡನೆ ಮತ್ತು ಸುಖ ಭೋಗದ ಅತಿರೇಕದ ಆಜೇಯ ಮಾರ್ಗವಾದ ಮಧ್ಯಮ ಮಾರ್ಗವನ್ನು ತಾವೇ ಅನ್ವೇಷಿಸಿದರು, ಅದರಿಂದಲೇ ಸಮ್ಯಕ್ ಸಂಬೋಧಿಯನ್ನು ಸಾಕ್ಷಾತ್ಕರಿಸಿದರು.
                ಬೋಧಿ ವೃಕ್ಷದ ಅಡಿಯಲ್ಲಿ ಆಗ ಅವರಿಗೆ ನಿತ್ಯವಾದ ಆತ್ಮ ಯಾವುದೂ ಗೋಚರಿಸಲಿಲ್ಲ. ಬದಲಾಗಿ ಸದಾ ಪರಿವರ್ತನಾಶೀಲವಾದ ಮನಸ್ಸು ಕಂಡರು. ಅಜ್ಞಾನದ ಮನಸ್ಸನ್ನು ಬೋಧಿಯೆಡೆಗೆ ಪರಿವತರ್ಿಸಿ ನಂತರ ಸ್ಥಿತಿಗಳಿಗೆ ಅತೀತವಾಗಿ ಚಿತ್ತವನ್ನು ನಿಲ್ಲಿಸಿದರು.
                ನಾಲ್ಕು ಆರ್ಯ ಸತ್ಯಗಳನ್ನು ಸಾಕ್ಷಾತ್ಕರಿಸಿದರು. ಸಮ್ಯಕ್ ಸಂಬೋಧಿ ಹಾಗು ದುಃಖ ನಿರೋಧವನ್ನು ಸಾಧಿಸಿದರು. ಆಗ ಅವರಿಗೆ ತಾವು ಹಿಂದಿನ ಜನ್ಮಗಳಲ್ಲೆಲ್ಲಾ ದೇಹವೆಂಬ ಮನೆ ಕಟ್ಟುವ ಆತ್ಮ ಸಾಕ್ಷಾತ್ಕಾರಕ್ಕಾಗಿ ಅಲೆದ ಆ ಸಮಯವು ವ್ಯರ್ಥವಾಗಿ ಪುನಃ ಸಂಸಾರಕ್ಕೆ ಸಿಲುಕಿಸಿದ್ದನ್ನು ಅರಿತು, ಈಗ ತ್ರಿಲಕ್ಷಣ ಜ್ಞಾನ ಸಾಕ್ಷಾತ್ಕರಿಸಿ, ಪಂಚಸ್ಕಂಧಗಳ ಉದಯವನ್ನು ನಿಲ್ಲಿಸಿರುವ ಬೋಧಿ ಜ್ಞಾನದ ಉತ್ಕೃಷ್ಟತೆ ಅರಿತು ಆನಂದದಿಂದ ಈ ಎರಡು ಆನಂದರ ಗಾಥೆಗಳನ್ನು ಆಗ ಬೋಧಿವೃಕ್ಷದ ಅಡಿಯಲ್ಲಿ ಅರುಹಿದ್ದರು.

                ಕಾಲನಂತರ ಆನಂದರ ಪ್ರಶ್ನೆಗೆ ಉತ್ತರವಾಗಿ ಪಟಿಚ್ಚ ಸಮುಪ್ಪಾದ ಅನುಮೋಮ ವಿಲೋಮವಾಗಿ ವೀಕ್ಷಿಸಿದ ನಂತರ ಉಂಟಾದ ಈ ಗಾಥೆಗಳನ್ನು ಪುನಃ ಉದ್ಗರಿಸಿದರು.

No comments:

Post a Comment