Wednesday 27 May 2015

dhammapada/lokavagga/13.10/thegivingceremony

ಮೂರ್ಖರು ದಾನದಲ್ಲಿ ಆನಂದಿಸಲಾರರು
ಜಿಪುಣರು ದೇವಲೋಕವನ್ನು ತಲುಪಲಾರರು, ಮೂರ್ಖರು ದಾನವನ್ನು ಪ್ರಶಂಸಿಸಲಾರರು, ಧೀರರಾದ ಜ್ಞಾನಿಗಳು ಮಾತ್ರ ದಾನದಲ್ಲಿ ಆನಂದಿತರಾಗಿ ಪರಲೋಕದಲ್ಲಿ ಸುಖಿಸುವರು. (177)
ಗಾಥ ಪ್ರಸಂಗ 13:10
ದಾನಗಳ ಸ್ಪಧರ್ೆ

                ಒಮ್ಮೆ ಮಹಾರಾಜ ಪಸೇನದಿಯು ಬುದ್ಧ ಭಗವಾನರಿಗೆ ಮತ್ತು ಭಿಕ್ಷು ಸಂಘಕ್ಕೆ ವಿಜೃಂಭಣೆಯಿಂದ ದಾನ ಮಾಡಿದನು. ಆದರೆ ಅದಕ್ಕೆ ಪ್ರತಿದ್ವಂದಿ ಸ್ಪಧರ್ಿ ಎಂಬಂತೆ ರಾಜನ ಅಧೀನದಲ್ಲಿರುವವನೊಬ್ಬ ಅದಕ್ಕಿಂತಲೂ ಚೆನ್ನಾಗಿ ದಾನವನ್ನು ಏರ್ಪಡಿಸಿದನು. ಇದರಿಂದಾಗಿ ರಾಜನಿಗೆ ಪಶ್ಚಾತ್ತಾಪವುಂಟಾಯಿತು. ಆದರೆ ರಾಣಿ ಮಲ್ಲಿಕಾಳು ಇದಕ್ಕಾಗಿ ಉಪಾಯವೊಂದನ್ನು ರಾಜನಿಗೆ ಹೇಳಿದಳು. ಅದರಂತೆಯೇ ರಾಜನು ಈ ಬಾರಿ ಸರಿಸಾಟಿಯಿಲ್ಲದ ದಾನಕ್ಕೆ ಏಪರ್ಾಟು ಮಾಡಿದನು. ಅದಕ್ಕಾಗಿ ಬೃಹತ್ತಾದ ಗುಡಾರವನ್ನು ಹಾಕಿಸಿದನು. ನಂತರ ಅಲ್ಲಿಗೆ ಬರುವ ಭಿಕ್ಷುಗಳಿಗೆ ಗೌರವ ಸೂಚಿಸಲು 500 ಆನೆಗಳು 500 ಶ್ವೇತ ಛತ್ರಿಗಳನ್ನು ಹಿಡಿದಿದ್ದವು. ಗುಡಾರದ ಮಧ್ಯೆ ಹತ್ತು ದೋಣಿಗಳು ಇದ್ದವು. ಅವುಗಳ ತುಂಬಾ ಸುಗಂಧ ದ್ರವ್ಯಗಳನ್ನು ತುಂಬಿಸಲಾಗಿತ್ತು. ಅಲ್ಲಿ ಬಡಿಸಲು ರಾಜಕುಮಾರಿಯರ ಗುಂಪೇ ಬರುತ್ತಿತ್ತು. ಎಲ್ಲಾ ಸಿದ್ಧತೆಗಳಾದ ಮೇಲೆ ಆಹಾರವನ್ನು ಬಡಿಸಲಾಯಿತು. ನಂತರ ರಾಜ ಉಳಿದ ರೀತಿಯಲ್ಲೂ ದಾನ ಮಾಡಿದನು. ಈ ರೀತಿ ರಾಜನು ಒಂದೇ ದಿನದಲ್ಲಿ 14 ದಶಲಕ್ಷ ಖಚರ್ು ಮಾಡಿ ಮಹಾನ್ ದಾನವನ್ನು ಏಪರ್ಾಟು ಮಾಡಿದ್ದನು.
                ರಾಜನ ಬಳಿಯಲ್ಲಿ ಆಗ ಇಬ್ಬರು ಮಂತ್ರಿಗಳು ಸಹಾ ಇದ್ದರು. ಅವರೇ ಜನ್ಹ ಮತ್ತು ಕಾಲ. ಜನ್ಹನು ಈ ದಾನದಿಂದ ಅತ್ಯಂತ ಸಂಭ್ರಮಪಟ್ಟನು ಮತ್ತು ಆನಂದವೂ ಪಟ್ಟನು. ಆತನು ರಾಜನಿಗೆ ಇದು ಸರಿಸಾಟಿಯಿಲ್ಲದ ದಾನವಾಗಿದೆ ಮಹಾರಾಜ, ಯೋಗ್ಯ ದಾನವಾಗಿದೆ ಎಂದು ಪ್ರಶಂಸಿಸಿದನು. ಆದರೆ ಮಂತ್ರಿ ಕಾಲನಿಗೆ ಇದರಿಂದ ಸಂತೋಷವಾಗಲಿಲ್ಲ, ಆನಂದವೂ ಆಗಲಿಲ್ಲ. ಆತನು ಹೀಗೆ ಯೋಚಿಸಿದನು: ಈ ರಾಜನು ವ್ಯರ್ಥವಾಗಿ ಹಣವನ್ನು ಪೋಲು ಮಾಡುತ್ತಿದ್ದಾನೆ, ಈ ಭಿಕ್ಷುಗಳಿಗೇನು ತಿನ್ನುತ್ತಾರೆ ನಂತರ ವಿಹಾರಕ್ಕೆ ಹೋಗಿ ಮಲಗಿಬಿಡಬಹುದು.
                ಭಗವಾನರು ಆಹಾರ ದಾನದ ನಂತರ ಅನುಮೋದನೆಯನ್ನು ಮಾಡಿ ಕಿರಿದಾದ ಧಮ್ಮೋಪದೇಶವನ್ನು ಮಾಡಿ ಅಲ್ಲಿಂದ ವಿಹಾರಕ್ಕೆ ಮರಳಿದರು.
                ರಾಜನಿಗೆ ಆಶ್ಚರ್ಯವಾಯಿತು. ಇಂತಹ ಸರಿಸಾರಿಯಿಲ್ಲದ ದಾನವನ್ನು ಏಪರ್ಾಟು ಮಾಡಿದ್ದರೂ ಸಹಾ ಭಗವಾನರು ಕಿರಿದಾದ ಧಮ್ಮ ಬೋಧನೆಯನ್ನು ಏಕೆ ಮಾಡಿದರು? ನನ್ನಿಂದ ಏನಾದರೂ ಅಪಚಾರವು ಆಗಿಹೋಯಿತೆ? ಎಂದು ಚಿಂತಿಸುತ್ತಾ ಆತನು ವಿಹಾರಕ್ಕೆ ಪ್ರವೇಶಿಸಿ ಭಗವಾನರನ್ನು ಸಂದಶರ್ಿಸಿದನು. ಆಗ ಭಗವಾನರು ಆತನಿಗೆ ಹೀಗೆ ಹೇಳಿದರು:

                ಓ ಮಹಾರಾಜ, ಸರಿಸಾಟಿಯಿಲ್ಲದ ದಾನವನ್ನು (ಅಸದಿನದಾನ) ಮಾಡಿದ್ದರೂ ಸಹಾ ಏಕೆ ತುಸು ಮಂಕಾಗಿರುವಿರಿ. ಈ ಮಹತ್ತರ ದಾನಕ್ಕಾಗಿ ನೀವು ಅಪಾರ ಆನಂದಪಡಬೇಕಿತ್ತು. ಈ ಬಗೆಯ ದಾನವು ಪ್ರತಿ ಬುದ್ಧರ ಆಗಮನದಲ್ಲಿ ಒಮ್ಮೆ ಮಾತ್ರ ಸಂಭವಿಸುತ್ತದೆ. ನಾನು ಕಿರು ಧಮ್ಮೋಪದೇಶ ನೀಡಿದ್ದಕ್ಕೆ ಕಾರಣವಿದೆ ಮಹಾರಾಜ, ನಿನ್ನ ಮಂತ್ರಿಗಳಲ್ಲಿ ಒಬ್ಬನು ದಾನವನ್ನೇ ವ್ಯರ್ಥವಾದುದು ಮತ್ತು ನಷ್ಟಕಾರಿ ಎಂದು ಭಾವಿಸುತ್ತಾನೆ. ಅದರಿಂದ ನನ್ನ ಬೋಧನೆ ಆಲಿಸುತ್ತಿದ್ದಂತೆ ಅವನಲ್ಲಿ ದ್ವೇಷವು ಹೆಚ್ಚಾಗುತ್ತಿತ್ತು. ಆ ದ್ವೇಷವು ಇನ್ನಷ್ಟು ಹೆಚ್ಚಾದರೆ, ಆ ಕುಕಮ್ಮ ಫಲದಂತೆ ಆತನಿಗೆ ಮುಂದೆ ಅಪಾರ ದುಃಖದ ಸ್ಥಿತಿಯು ಸಿಗುತ್ತಿತ್ತು. ಆದ್ದರಿಂದಾಗಿ ನಾನು ಬೋಧನೆಯನ್ನು ಅಲ್ಪವಾಗಿ ಬೋಧಿಸಿದೆನು. ನಂತರ ಹೀಗೆ ಮುಂದುವರೆಸಿದರು: ಓ ಮಹಾರಾಜ! ಮೂರ್ಖರು ದಾನದಲ್ಲಿ ಆನಂದಿಸುವುದಿಲ್ಲ, ಹೀಗಾಗಿ ದುರ್ಗತಿಗೆ ಹೋಗುವರು. ಆದರೆ ಜ್ಞಾನಿಗಳು ದಾನದಲ್ಲೇ ಆನಂದಿಸುವವರಾಗಿ ಸುಗತಿ ತಲುಪುವರು ಎಂದು ಹೇಳಿ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment